ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಅಕಿಲ ಧನಂಜಯಗೆ ಬೌಲಿಂಗ್‌ಗೆ ಅನುಮತಿ

Akila Dananjaya allowed to resume bowling in international cricket

ಕೊಲಂಬೋ: ಶ್ರೀಲಂಕಾದ ಸ್ಪಿನ್ನರ್ ಅಕಿಲ ಧನಂಜಯಗೆ ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಬೌಲಿಂಗ್‌ಗೆ ಅನುಮತಿ ನೀಡಲಾಗಿದೆ. ಧನಂಜಯ ಬೌಲಿಂಗ್ ಆ್ಯಕ್ಷನ್ ಮರು ಪರೀಕ್ಷಿಸಿದ ಬಳಿಕ ಇಂಟರ್ ನ್ಯಾಷನಲ್ ಕ್ರಿಕೆಟ್ ಕೌನ್ಸಿಲ್ (ಐಸಿಸಿ) ಶುಕ್ರವಾರ ಮತ್ತೆ ಬೌಲಿಂಗ್‌ಗೆ ಅವಕಾಶ ನೀಡಿದೆ.

ಭಾರತ vs ಆಸ್ಟ್ರೇಲಿಯಾ: ವಿಶೇಷ ದಾಖಲೆ ಪಟ್ಟಿ ಸೇರಿದ ಶುಬ್ಮನ್ ಗಿಲ್ಭಾರತ vs ಆಸ್ಟ್ರೇಲಿಯಾ: ವಿಶೇಷ ದಾಖಲೆ ಪಟ್ಟಿ ಸೇರಿದ ಶುಬ್ಮನ್ ಗಿಲ್

2019ರಲ್ಲಿ ಆಗಸ್ಟ್‌ 14-18ರ ವರೆಗೆ ಗ್ಯಾಲೆಯಲ್ಲಿ ನಡೆದಿದ್ದ ನ್ಯೂಜಿಲೆಂಡ್ ವಿರುದ್ಧದ ಟೆಸ್ಟ್‌ ಪಂದ್ಯದ ವೇಳೆ ಅಕಿಲ ಧನಂಜಯ ಅವರ ಬೌಲಿಂಗ್‌ ಅನುಮಾನಕ್ಕೀಡಾಗಿತ್ತು. ಅಂಪೈರ್‌, ಧನಂಜಯ ಬೌಲಿಂಗ್ ಅಕ್ರಮ ರೀತಿಯಲ್ಲಿದೆ ಎಂದು ದೂರಿತ್ತಿದ್ದರು. ಹೀಗಾಗಿ ಧನಂಜಯ ಅವರನ್ನು ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಬೌಲಿಂಗ್ ಮಾಡದಂತೆ ಒಂದು ವರ್ಷದ ನಿಷೇಧ ಹೇರಲಾಗಿತ್ತು.

'ಪರಿಣಿತರ ತಂಡ ಶ್ರೀಲಂಕಾ ಕ್ರಿಕೆಟ್ ನೀಡಿದ ಧನಂಜಯ ಅವರ ಬೌಲಿಂಗ್ ಆ್ಯಕ್ಷನ್‌ನ ವೀಡಿಯೋವನ್ನು ಅಧ್ಯಯನ ಮಾಡಿದೆ. ಕೋವಿಡ್ -19ರ ಪರಿಣಾಮವಾಗಿ ವಿವಿಧ ನಿರ್ಬಂಧಗಳಿಂದಾಗಿ ಐಸಿಸಿ ಮಾನ್ಯತೆ ಪಡೆದ ಕೇಂದ್ರದಲ್ಲಿ ಹಾಜರಾತಿ ಮತ್ತು ಮೌಲ್ಯಮಾಪನ ಸಾಧ್ಯವಾಗಲಿಲ್ಲ,' ಎಂದು ಐಸಿಸಿ ಪ್ರಕಟಣೆ ಮೂಲಕ ತಿಳಿಸಿದೆ.

ಸೈಯದ್ ಮುಷ್ತಾಕ್ ಅಲಿ ಟ್ರೋಫಿ 2021 ಪೂರ್ಣ ವೇಳಾಪಟ್ಟಿಸೈಯದ್ ಮುಷ್ತಾಕ್ ಅಲಿ ಟ್ರೋಫಿ 2021 ಪೂರ್ಣ ವೇಳಾಪಟ್ಟಿ

27ರ ಹರೆಯದ ಅಕಿಲ ಧನಂಜಯ 6 ಟೆಸ್ಟ್ ಪಂದ್ಯಗಳಲ್ಲಿ 33 ವಿಕೆಟ್, 36 ಏಕದಿನ ಪಂದ್ಯಗಳಲ್ಲಿ 51 ವಿಕೆಟ್‌, 22 ಟಿ20ಐ ಪಂದ್ಯಗಳಲ್ಲಿ 22 ವಿಕೆಟ್ ಪಡೆದಿದ್ದಾರೆ. ಬಲಗೈ ಆಫ್‌ ಬ್ರೇಕ್ ಬೌಲಿಂಗ್ ಮಾಡುವ ಅಕಿಲ ಅವರು ಐಪಿಎಲ್‌ನಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಪರ ಆಡಿದ್ದರು.

Story first published: Saturday, January 9, 2021, 0:13 [IST]
Other articles published on Jan 9, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X