ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಕುಕ್ ವಿಶಿಷ್ಟ ಸಾಧನೆ : ಮೊದಲ -ಕೊನೆ ಪಂದ್ಯ ಎರಡರಲ್ಲೂ ಶತಕ

By Malenadiga
Alastair Cook achieves rare feat : Centuries in debut and farewell tests


ಬೆಂಗಳೂರು, ಸೆಪ್ಟೆಂಬರ್ 10: ಇಂಗ್ಲೆಂಡಿನ ಕ್ರಿಕೆಟ್ ದಿಗ್ಗಜ, ಮಾಜಿ ನಾಯಕ ಅಲೆಸ್ಟರ್ ಕುಕ್ ಅವರು ಸೋಮವಾರ (ಸೆಪ್ಟೆಂಬರ್ 10) ದಂದು ತಮ್ಮ ಟೆಸ್ಟ್ ವೃತ್ತಿ ಬದುಕಿನಲ್ಲಿ ಮತ್ತೊಂದು ಮೈಲಿಗಲ್ಲು ದಾಟಿದರು.

ಕೆಎಲ್ ರಾಹುಲ್ -ರಿಷಬ್ ಪಂತ್ ಜೊತೆಯಾಟ, ದಾಖಲೆಗಳು ಧೂಳಿಪಟ!ಕೆಎಲ್ ರಾಹುಲ್ -ರಿಷಬ್ ಪಂತ್ ಜೊತೆಯಾಟ, ದಾಖಲೆಗಳು ಧೂಳಿಪಟ!

ಭಾರತ ವಿರುದ್ಧದ ಐದನೆ ಹಾಗೂ ಅಂತಿಮ ಟೆಸ್ಟ್ ಪಂದ್ಯದಲ್ಲಿ ಕುಕ್ ಶತಕ ಬಾರಿಸಿದ್ದಾರೆ. ಕಾಕತಾಳೀಯವೆಂಬಂತೆ, ಕುಕ್ ಅವರು ತಮ್ಮ ಚೊಚ್ಚಲ ಪಂದ್ಯದಲ್ಲಿ 2006ರಲ್ಲಿ ನಾಗ್ಪುರದಲ್ಲಿ ಭಾರತ ವಿರುದ್ಧವೇ ಮೊದಲ ಟೆಸ್ಟ್ ಶತಕ ಬಾರಿಸಿದ್ದರು.

1
42378

ವೃತ್ತಿ ಬದುಕಿನಲ್ಲಿ 33ನೇ ಶತಕ ಬಾರಿಸಿದ ಕುಕ್ ಅವರು, ಟೆಸ್ಟ್ ಇತಿಹಾಸದಲ್ಲಿ ಅತಿ ಹೆಚ್ಚು ರನ್ ಗಳಿಕೆ ಪಟ್ಟಿಯಲ್ಲಿ ಐದನೇ ಸ್ಥಾನಕ್ಕೇರಿದ್ದಾರೆ.

ಕೆಎಲ್ ರಾಹುಲ್ 5ನೇ ಶತಕ, ದಾಖಲೆ ಬಗ್ಗೆ ಐದಾರು ಟ್ವೀಟ್ಸ್

ಈ ಪಂದ್ಯದಲ್ಲಿ ಮೊದಲ ಇನ್ನಿಂಗ್ಸ್ ನಲ್ಲಿ ಶತಕ ವಂಚಿತರಾಗಿದ್ದ ಕುಕ್ ಅವರು, 71ರನ್ ಗಳಿಸಿ, ಬೂಮ್ರಾ ಎಸೆತದಲ್ಲಿ ಬೋಲ್ಡ್ ಆಗಿದ್ದರು. ಆದರೆ, ಎರಡನೇ ಇನ್ನಿಂಗ್ಸ್ ನಲ್ಲಿ 210 ಎಸೆತಗಳಲ್ಲಿ 8 ಬೌಂಡರಿ ಯುಳ್ಳ 103ರನ್ ಗಳಿಸಿದ್ದಾರೆ.



ಮೊದಲ ಹಾಗೂ ಕೊನೆ ಪಂದ್ಯಗಳಲ್ಲಿ ಅರ್ಧಶತಕ ಹಾಗೂ ಶತಕ ಗಳಿಸಿದ ಸಾಧನೆ ಮಾಡಿದ ಆಟಗಾರರ ಪೈಕಿ ದಕ್ಷಿಣ ಆಫ್ರಿಕಾದ ಬ್ರೂಸ್ ಮಿಶೆಲ್ ಬಿಟ್ಟರೆ, ಇಂಗ್ಲೆಂಡಿನ ಕುಕ್ ಮಾತ್ರ ಇಂಥ ಸಾಧನೆ ಮಾಡಿದ್ದಾರೆ.

ಮೊದಲ -ಕೊನೆ ಪಂದ್ಯದಲ್ಲಿ ಶತಕ

ಮೊದಲ -ಕೊನೆ ಪಂದ್ಯದಲ್ಲಿ ಶತಕ

ಮೊದಲ ಪಂದ್ಯದಲ್ಲಿ ಶತಕ (100 ಪ್ಲಸ್) ಹಾಗೂ ಕೊನೆ ಪಂದ್ಯದಲ್ಲಿ ಶತಕ(20 ಪ್ಲಸ್) ಬಾರಿಸಿದ ಆಟಗಾರರನ್ನು ಮಾತ್ರ ಲೆಕ್ಕಕ್ಕೆ ತೆಗೆದುಕೊಂಡರೆ ಅನೇಕ ಆಟಗಾರರು ಸಿಗುತ್ತಾರೆ. ಆದರೆ, ಎರಡೂ ಪಂದ್ಯದಲ್ಲಿ ಶತಕ ಬಾರಿಸಿದವರು ಐವರು ಮಾತ್ರ

* ರೆಗಿನಾಲ್ಡ್ ಡುಫ್ (ಆಸ್ಟ್ರೇಲಿಯಾ)
ಮೊದಲ ಪಂದ್ಯ : 104 ವಿರುದ್ಧ ಇಂಗ್ಲೆಂಡ್ 1902 ಹಾಗೂ ಕೊನೆ ಪಂದ್ಯ: 146 ವಿರುದ್ಧ ಇಂಗ್ಲೆಂಡ್ 1905

* ವಿಲಿಯಂ ಪೊನ್ಸ್ ಫರ್ಡ್ (ಆಸ್ಟ್ರೇಲಿಯಾ)
ಮೊದಲ ಪಂದ್ಯ : 110 ವಿರುದ್ಧ ಇಂಗ್ಲೆಂಡ್ 1924 ಹಾಗೂ ಕೊನೆ ಪಂದ್ಯ: 266 ವಿರುದ್ಧ ಇಂಗ್ಲೆಂಡ್ 1934

* ಗ್ರೆಗ್ ಚಾಪೆಲ್ (ಆಸ್ಟ್ರೇಲಿಯಾ)
ಮೊದಲ ಪಂದ್ಯ : 108 ವಿರುದ್ಧ ಇಂಗ್ಲೆಂಡ್ 1970 ಹಾಗೂ ಕೊನೆ ಪಂದ್ಯ: 182 ವಿರುದ್ಧ ಪಾಕಿಸ್ತಾನ 1984

* ಮೊಹಮ್ಮದ್ ಅಜರುದ್ದೀನ್ (ಭಾರತ)
ಮೊದಲ ಪಂದ್ಯ : 110 ವಿರುದ್ಧ ಇಂಗ್ಲೆಂಡ್ 1984 ಹಾಗೂ ಕೊನೆ ಪಂದ್ಯ: 102 ವಿರುದ್ಧ ದಕ್ಷಿಣ ಆಫ್ರಿಕಾ 2000

* ಅಲೆಸ್ಟರ್ ಕುಕ್ (ಇಂಗ್ಲೆಂಡ್)
ಮೊದಲ ಪಂದ್ಯ : 104 ವಿರುದ್ಧ ಭಾರತ 2006 ಹಾಗೂ ಕೊನೆ ಪಂದ್ಯ: 117* ವಿರುದ್ಧ ಭಾರತ 2018

ಅತಿ ಹೆಚ್ಚು ಶತಕ ಜೊತೆಯಾಟ

ಟೆಸ್ಟ್ ಕ್ರಿಕೆಟ್ ನಲ್ಲಿ ಅತಿ ಹೆಚ್ಚು ಶತಕಗಳ ಜೊತೆಯಾಟ ಸಾಧಿಸಿದ ಆಟಗಾರರ ಪೈಕಿ ಭಾರತದ ದಿಗ್ಗಜ ರಾಹುಲ್ ದ್ರಾವಿಡ್ ಅವರು ಅಗ್ರಸ್ಥಾನದಲ್ಲಿದ್ದಾರೆ. ದ್ರಾವಿಡ್ ಅವರು 88 ಬಾರಿ ಶತಕ ಜೊತೆಯಾಟ ಸಾಧಿಸಿದ್ದಾರೆ. ಮಿಕ್ಕಂತೆ ಈ ಪಟ್ಟಿಯಲ್ಲಿ

86: ತೆಂಡೂಲ್ಕರ್
85: ರಿಕಿ ಪಾಂಟಿಂಗ್
77 : ಅಲೆಸ್ಟರ್ ಕುಕ್
76: ಮಹೇಲ ಜಯವರ್ಧನೆ

ಎಡಗೈ ಬ್ಯಾಟ್ಸ್ ಮನ್ ಪೈಕಿ ನಂ.1

ಟೆಸ್ಟ್ ಕ್ರಿಕೆಟ್ ನಲ್ಲಿ ಅತಿ ಹೆಚ್ಚು ರನ್ ಗಳಿಸಿರುವ ಆಟಗಾರರ ಪೈಕಿ 5ನೇ ಸ್ಥಾನಕೇರಿರುವ ಕುಕ್ ಅವರು ಎಡಗೈ ಬ್ಯಾಟ್ಸ್ ಮನ್ ಗಳ ಪೈಕಿ ಅಗ್ರಸ್ಥಾನಕ್ಕೇರಿದ್ದಾರೆ.

ಕುಕ್ : 12401 +
ಸಂಗಕ್ಕಾರ: 12400
ಲಾರಾ: 11953
ಚಂದ್ರಪಾಲ್ : 11867
ಬಾರ್ಡರ್ : 11174

3ನೇ ಇನ್ನಿಂಗ್ಸ್ ನಲ್ಲಿ ಶತಕ

ಟೆಸ್ಟ್ ಕ್ರಿಕೆಟ್ ನಲ್ಲಿ ಮೊದಲ ಇನ್ನಿಂಗ್ಸ್ ನಲ್ಲಿ 50ಪ್ಲಸ್ ರನ್ ಗಳಿಸಿ ಎರಡನೇ ಇನ್ನಿಂಗ್ಸ್ ನಲ್ಲಿ ಶತಕ ಗಳಿಸಿದ ಆಟಗಾರರ ಪೈಕಿ ಕುಕ್ ಅವರು ವಿಶಿಷ್ಟವಾಗಿ ನಿಲ್ಲುತ್ತಾರೆ. ಕುಕ್ ಅವರು ಈ ಸಾಧನೆ( 50 ಹಾಗೂ 100)ಯನ್ನು ತಮ್ಮ ಮೊದಲ ಹಾಗೂ ಕೊನೆ ಪಂದ್ಯದಲ್ಲಿ ಪುನಾರಾವರ್ತನೆ ಮಾಡಿದ್ದಾರೆ. ಅದರಲ್ಲೂ ಎರಡೂ ಕೂಡಾ ಭಾರತ ವಿರುದ್ಧವೇ ಬಂದಿದೆ.

ಟೆಸ್ಟ್ ಪಂದ್ಯದ ಮೂರನೇ ಇನ್ನಿಂಗ್ಸ್ ನಲ್ಲಿ ಶತಕ ಗಳಿಸಿದವರ ಪೈಕಿ
13 ಬಾರಿ ಕುಕ್
12 ಸಂಗಕ್ಕಾರ
10 ಹೇಡನ್, ಕಾಲಿಸ್, ತೆಂಡೂಲ್ಕರ್
9 ಆಮ್ಲಾ ಬಾರ್ಡರ್

ಆರಂಭಿಕ ಅಟಗಾರನಾಗಿ ಶತಕ ಗಳಿಕೆ

ಆರಂಭಿಕ ಅಟಗಾರನಾಗಿ ಶತಕ ಗಳಿಸಿದವರ ಪೈಕಿ ಕುಕ್ ಎರಡನೇ ಸ್ಥಾನಕ್ಕೇರಿದ್ದಾರೆ.
33- ಸುನೀಲ್ ಗವಾಸ್ಕರ್, 203 ಇನ್ನಿಂಗ್ಸ್ (ಭಾರತ)
31- ಅಲೆಸ್ಟರ್ ಕುಕ್, 278 ಇನ್ನಿಂಗ್ಸ್ (ಇಂಗ್ಲೆಂಡ್)
30 - ಮ್ಯಾಥ್ಯೂ ಹೇಡನ್, 184 ಇನ್ನಿಂಗ್ಸ್ (ಆಸ್ಟ್ರೇಲಿಯಾ)
27- ಗ್ರಹಾಂ ಸ್ಮಿತ್, 196 ಇನ್ನಿಂಗ್ಸ್ (ದಕ್ಷಿಣ ಆಫ್ರಿಕಾ)

Story first published: Thursday, September 13, 2018, 12:08 [IST]
Other articles published on Sep 13, 2018
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X