ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಆಸ್ಟ್ರೇಲಿಯಾದ ಸೋಲಿಗೆ ಕಾರಣ ಏನೆಂದು ಹೇಳಿದ ಗ್ಲೆನ್ ಮ್ಯಾಕ್ಸ್‌ವೆಲ್

Alex Carey run out was 100 per cent my fault, says Glenn Maxwell

ಟೀಮ್ ಇಂಡಿಯಾ ವಿರುದ್ಧದ ಮೂರನೇ ಏಕದಿನ ಪಂದ್ಯದಲ್ಲಿ ಆಸ್ಟ್ರೇಲಿಯಾ 13 ರನ್‌ಗಳ ಅಂತರದ ಸೋಲನ್ನು ಕಂಡಿದೆ. ಈ ಸೋಲಿನ ಬಳಿಕ ಮಾತನಾಡಿದ ಆಸ್ಟ್ರೇಲಿಯಾದ ಆಲ್‌ರೌಂಡರ್ ಗ್ಲೆನ್ ಮ್ಯಾಕ್ಸ್‌ವೆಲ್ ಪಂದ್ಯಕ್ಕೆ ತಿರುವು ನೀಡಿದ ಘಟನೆಯನ್ನು ಹೇಳಿದ್ದಾರೆ. ಈ ಮೂಲಕ ಆಸ್ಟ್ರೇಲಿಯಾದ ಸೋಲಿಗೆ ಅದು ಕಾರಣವಾಯಿತು ಎಂದಿದ್ದಾರೆ.

ಆಲ್‌ರೌಂಡರ್ ಗ್ಲೆನ್ ಮ್ಯಾಕ್ಸ್‌ವೆಲ್ ಹಾಗೂ ಆಲೆಕ್ಸ್‌ ಕ್ಯಾರಿ ಆಸ್ಟ್ರೇಲಿಯಾ ಪರವಾಗಿ ಉತ್ತಮ ಜೊತೆಯಾಟ ನೀಡುತ್ತಾ ಸಾಗಿದ್ದರು. ಈ ಸಂದರ್ಭದಲ್ಲಿ ಅಲೆಕ್ಸ್ ಕ್ಯಾರಿ ರನ್‌ಔಟ್ ಆಗಿ ವಿಕೆಟ್ ಒಪ್ಪಿಸಿದರು. ಆಸ್ಟ್ರೇಲಿಯಾದ ಸೋಲಿಗೆ ಇದುವೇ ಕಾರಣವಾಯಿತು. ನನ್ನ ತಪ್ಪಿನಿಂದಾಗಿ ಅಲೆಕ್ಸ್ ಕ್ಯಾರಿ ರನ್ ಔಟ್ ಆದರು. ಆ ಮೂಲಕ ಆಸ್ಟ್ರೇಲಿಯಾ ಸೋಲಿಗೆ ಅದು ಕಾರಣವಾಗಿದೆ ಎಂದು ಮ್ಯಾಕ್ಸ್‌ವೆಲ್ ಮಾಧ್ಯಮಗಳ ಜೊತೆಗೆ ಮಾತನಾಡುತ್ತಾ ವಿವರಿಸಿದ್ದಾರೆ. ಎಂದು ಗ್ಲೆನ್ ಮ್ಯಾಕ್ಸ್‌ವೆಲ್ ಹೇಳಿದ್ದಾರೆ. ಮ್ಯಾಕ್ಸ್‌ವೆಲ್ ಈ ಸಂದರ್ಭದಲ್ಲಿ ನಾನ್‌ಸ್ಟ್ರೈಕರ್ ಎಂಡ್‌ನಲ್ಲಿದ್ದರು.

ಜಡೇಜಾ ಅರ್ಧಶತಕ ಬಾರಿಸುತ್ತಲೇ ಸಂಜಯ್ ಮಂಜ್ರೇಕರ್ ಟ್ರೋಲ್ಜಡೇಜಾ ಅರ್ಧಶತಕ ಬಾರಿಸುತ್ತಲೇ ಸಂಜಯ್ ಮಂಜ್ರೇಕರ್ ಟ್ರೋಲ್

ಇನ್ನು ಇದೇ ಸಂದರ್ಭದಲ್ಲಿ ಮ್ಯಾಕ್ಸ್‌ವೆಲ್ ಸ್ವಿಚ್ ಹಿಟ್ ಬಗ್ಗೆ ಎದ್ದಿರುವ ವಿವಾದಕ್ಕೂ ಪ್ರತಿಕ್ರಿಯಿಸಿದರು. ಸ್ವಿಚ್ ಹಿಟ್ ಆಸ್ಟ್ರೇಲಿಯಾದ ಮಾಜಿ ನಾಯಕ ಇಯಾನ್ ಚಾಪೆಲ್ ಮಾತನಾಡುತ್ತಾ ಅದು "ನ್ಯಾಯಯುತವಲ್ಲದ" ಶಾಟ್ ಎಂದಿದ್ದರು. ಆದರೆ ಇದನ್ನು ಮ್ಯಾಕ್ಸ್‌ವೆಲ್ ಆಟದ ವಿಕಾಸದ ವಿಭಿನ್ನವಾದ ಭಾಗ ಎಂದು ಕರೆದಿದ್ದಾರೆ.

"ಇದು ಆಟದ ನಿಯಮದ ಒಳಗೆಯೇ ಬರುತ್ತದೆ. ನನಗೆ ಅನಿಸುತ್ತದ ಬ್ಯಾಟಿಂಗ್ ಇದೇ ರೀತಿಯಲ್ಲಿ ವಿಕಸನ ಹೊಂದುತ್ತಾ ಬಂದಿದೆ. ವರ್ಷದಿಂದ ವರ್ಷಕ್ಕೆ ಅದು ಮತ್ತಷ್ಟು ಉತ್ತಮವಾಗುತ್ತಾ ಹೋಗುತ್ತಿದೆ. ಅದಕ್ಕಾಗಿಯೇ ನಾವು ಬೇಹತ್ ಸ್ಕೋರ್‌ಗಳನ್ನು ನೋಡುತ್ತಿದ್ದೇವೆ. ಬೃಹತ್ ರನ್‌ಗಳನ್ನು ಬೆನ್ನಟ್ಟುವುದಕ್ಕೆ ಸಾಕ್ಷಿಯಾಗುತ್ತಿದ್ದೇವೆ ಎಂದು ಮ್ಯಾಕ್ಸ್‌ವೆಲ್ ಹೇಳಿದ್ದಾರೆ.

Story first published: Thursday, December 3, 2020, 13:58 [IST]
Other articles published on Dec 3, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X