ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

'ಪಿಎಸ್‌ಎಲ್ ಬಿಡುವ ಮೊದಲೇ ಅಲೆಕ್ಸ್ ಹೇಲ್ಸ್‌ಗೆ ಕೋವಿಡ್-19 ಇದ್ದಿರಬಹುದು!'

Alex Hales might have shown COVID-19 symptoms before leaving PSL: Ramiz Raja
MS Dhoni leaves Chennai after IPL 2020 postponed till April 15 | IPL2020 | Dhoni Return to Home

ಕರಾಚಿ, ಮಾರ್ಚ್ 17: ಪಾಕಿಸ್ತಾನ್ ಸೂಪರ್ ಲೀಗ್ (ಪಿಎಸ್‌ಎಲ್)ನಿಂದ ಹೊರಹೋಗುವ ಮುನ್ನವೇ ಇಂಗ್ಲೆಂಡ್ ಆಟಗಾರ ಅಲೆಕ್ಸ್ ಹೇಲ್ಸ್‌ಗೆ ಕೊರೊನಾ ವೈರಸ್ (ಕೋವಿಡ್ 19) ಲಕ್ಷಣಗಳು ಇದ್ದಿರಬಹುದು ಎಂದು ಪಾಕಿಸ್ತಾನ ಕ್ರಿಕೆಟ್ ತಂಡದ ಮಾಜಿ ನಾಯಕ ರಮೀಝ್ ರಾಜ ಹೇಳಿದ್ದಾರೆ.

ಭಾರತದ ನಾಯಕ ವಿರಾಟ್ ಕೊಹ್ಲಿಗೆ ಸವಾಲೆಸೆದ ಪಿವಿ ಸಿಂಧು: ವೀಡಿಯೋಭಾರತದ ನಾಯಕ ವಿರಾಟ್ ಕೊಹ್ಲಿಗೆ ಸವಾಲೆಸೆದ ಪಿವಿ ಸಿಂಧು: ವೀಡಿಯೋ

ಮಂಗಳವಾರ (ಮಾರ್ಚ್ 17) ಪಾಕ್ ಕ್ರಿಕೆಟಿಗ ರಮೀಝ್ ರಾಜ, ಆಂಗ್ಲ ಕ್ರಿಕೆಟಿಗನ ಬಗ್ಗೆ ಈ ಹೇಳಿಕೆ ನೀಡಿದ್ದಾರೆ. ಕೊರೊನಾವೈರಸ್ ವಿಶ್ವದಗಲ ವ್ಯಾಪಿಸಿ ಆತಂಕ ಸೃಷ್ಟಿಸುತ್ತಿದ್ದರಿಂದ ಅಲೆಕ್ಸ್ ಹೇಲ್ಸ್ ಅರ್ಧದಿಂದಲೇ ಪಿಎಸ್‌ಎಲ್ ಟೂರ್ನಿ ತೊರೆದು ತವರಿಗೆ ತೆರಳಿದ್ದರು. ಆ ಬಳಿಕ ಪಿಎಸ್‌ಎಲ್ ಟೂರ್ನಿಯೇ ಮುಂದೂಡಲ್ಪಟ್ಟಿತ್ತು.

ಪಿಎಸ್‌ಎಲ್ ರದ್ದಾದ ಬೆನ್ನಲ್ಲೇ ರಾಜ, ಲಾಹೋರ್‌ನ ಮಾಧ್ಯಮವೊಂದಕ್ಕೆ ಹೇಳಿಕೆ ನೀಡುತ್ತ ಹೇಲ್ಸ್ ಮೇಲೆ ಅನುಮಾನ ವ್ಯಕ್ತಪಡಿಸಿದ್ದಾರೆ. ಪಿಎಸ್‌ಎಲ್‌ನಲ್ಲಿ ಅಲೆಕ್ಸ್ ಹೇಲ್ಸ್ ಕರಾಚಿ ಕಿಂಗ್ಸ್ ಪರ ಆಡುತ್ತಿದ್ದರು. ಸೆಮಿಫೈನಲ್ ಪಂದ್ಯದ ದಿನವೇ ಪಿಎಸ್‌ಎಲ್ ಟೂರ್ನಿ ಮುಂದೂಡಲ್ಪಟ್ಟಿತ್ತು.

ಕೊರೊನಾ: ಪುರುಷರ 'ಟಿ20 ವಿಶ್ವಕಪ್‌' ಬಗ್ಗೆ ನಿರ್ಧಾರ ಪ್ರಕಟಿಸಿದ ಆಸ್ಟ್ರೇಲಿಯಾಕೊರೊನಾ: ಪುರುಷರ 'ಟಿ20 ವಿಶ್ವಕಪ್‌' ಬಗ್ಗೆ ನಿರ್ಧಾರ ಪ್ರಕಟಿಸಿದ ಆಸ್ಟ್ರೇಲಿಯಾ

'ನನಗೆ ಗೊತ್ತಿರುವ ಪ್ರಕಾರ ಅಲೆಕ್ಸ್ ಹೇಲ್ಸ್‌ಗೆ ಇನ್ನಷ್ಟೇ ಪರೀಕ್ಷೆ ನಡೆಯಬೇಕಿದೆ. ಹಾಗಂತ ಅದು ಕೊರೊನಾವೊ ಅಲ್ಲವೊ ಅನ್ನೋದು ನಮಗೆ ಗೊತ್ತಿಲ್ಲ. ಆದರೆ ನಾವೀಗ ಬಹಳ ಎಚ್ಚರಿಕೆ ವಹಿಸಬೇಕಿದೆ ಮತ್ತು ಇಂಥ ಸಮಸ್ಯೆಗಳು ಎದುರಿರುವಾಗ ಸಾಮಾನ್ಯ ಜ್ಞಾನ ಬಳಸಿ ಮುಂದಡಿಯಿಡಬೇಕಿದೆ,' ಎಂದು ರಾಜ ಮಾಧ್ಯಮದೊಂದಿಗೆ ಮಾತನಾಡುತ್ತಾ ಹೇಳಿದ್ದಾರೆ.

ಐಪಿಎಲ್ ರದ್ದಾದರೆ ಧೋನಿಯ ಅಂತಾರಾಷ್ಟ್ರೀಯ ಕ್ರಿಕೆಟ್‌ನ ಭವಿಷ್ಯವೇನು?ಐಪಿಎಲ್ ರದ್ದಾದರೆ ಧೋನಿಯ ಅಂತಾರಾಷ್ಟ್ರೀಯ ಕ್ರಿಕೆಟ್‌ನ ಭವಿಷ್ಯವೇನು?

ಇಂಗ್ಲೆಂಡ್ ತಲುಪಿದ ಕೂಡಲೇ 31ರ ಹರೆಯದ ಹೇಲ್ಸ್, ಸ್ವತಃ ತಾನೇ ಪ್ರತ್ಯೇಕವಾಗಿರಲು ಬಯಸಿದ್ದರು ಎಂದು ಹೇಳಲಾಗುತ್ತಿದೆ. ಕೊರೊನಾವೈರಸ್‌ನಿಂದ ಪ್ರಮುಖ ಕ್ರಿಕೆಟ್‌ ಟೂರ್ನಿಗಳು ರದ್ದಾಗಿದ್ದರೂ ಪಿಎಸ್‌ಎಲ್ ಮಾತ್ರ ನಡೆಯುತ್ತಿತ್ತು. ಆದರೆ ಈಗ ಪಿಎಲ್‌ಎಲ್ ಕೂಡ ಟೂರ್ನಿಯ ಕೊನೇ ಕ್ಷಣದಲ್ಲಿ ಮುಂದೂಡಲ್ಪಟ್ಟಿದೆ.

Story first published: Tuesday, March 17, 2020, 17:41 [IST]
Other articles published on Mar 17, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X