ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಕ್ರಿಕೆಟ್: ಬಂದೋರೆಲ್ಲ ಸೊನ್ನೆ ಸುತ್ತಿದ್ರು, ನಾಲ್ಕೇ ರನ್ನಿಗೆ ಆಲ್ ಔಟ್ ಆದ್ರು!

All out for four, every batter out bowled for zero

ಕೊಚ್ಚಿ, ಮೇ 16: ಬ್ಯಾಟ್‌ ಬೀಸಿಕೊಂಡು ಬಂದ 10 ಬ್ಯಾಟ್ಸ್ಮನ್‌ಗಳೂ ಸೊನ್ನೆ ಸುತ್ತಿ ನಿರ್ಗಮಿಸಿದ ಸುದ್ದಿ ಕೇಳಿದ್ದೀರಾ? ಕೇಳಿದ್ದರೂ/ನೋಡಿದ್ದರೂ ತೀರಾ ಅಪರೂಪ ಅನ್ನಿಸುವಂತ ಕ್ರಿಕೆಟ್ ಪಂದ್ಯವೊಂದು ಕೇರಳದ ಮಳಪ್ಪುರಂ ಜಿಲ್ಲೆಯಲ್ಲಿ ಬುಧವಾರ (ಮೇ 15) ಕಾಣಸಿಕ್ಕಿತು.

ಸಿಎಸ್‌ಕೆ ಅಭಿಮಾನಿಗಳಿಗೆ ಆಸ್ಟ್ರೇಲಿಯಾದಿಂದ ಸಂದೇಶ ರವಾನಿಸಿದ ವ್ಯಾಟ್ಸನ್‌!ಸಿಎಸ್‌ಕೆ ಅಭಿಮಾನಿಗಳಿಗೆ ಆಸ್ಟ್ರೇಲಿಯಾದಿಂದ ಸಂದೇಶ ರವಾನಿಸಿದ ವ್ಯಾಟ್ಸನ್‌!

ಕಾಸರಗೋಡು ಅಂಡರ್ 19 ಮಹಿಳಾ ತಂಡ ಇಂಥದ್ದೊಂದು ಅಪರೂಪದ ಮತ್ತು ತುಟಿಯಂಚಲಿ ನಗು ಮಿನುಗಿಸುವ ಪಂದ್ಯಕ್ಕೆ ಸಾಕ್ಷಿಯಾಗಿದೆ. ಮಳಪ್ಪುರಂನಲ್ಲಿ ನಡೆದ ಅಂತರ್ ಜಿಲ್ಲಾ ಪಂದ್ಯದಲ್ಲಿ ಕಾಸರಗೋಡು ತಂಡ ವಯನಾಡ್ ತಂಡದೆದುರು ಹೀಗೆ ಹೀನಾಯ ಸೋಲನುಭವಿಸಿದೆ.

ಧೋನಿಯ ವಿವಾದಾತ್ಮಕ ರನ್‌ ಔಟ್: ಟ್ವೀಟ್‌ ಡಿಲೀಟ್‌ಗೆ ಕಾರಣ ಕೊಟ್ಟ ನೀಶಮ್ಧೋನಿಯ ವಿವಾದಾತ್ಮಕ ರನ್‌ ಔಟ್: ಟ್ವೀಟ್‌ ಡಿಲೀಟ್‌ಗೆ ಕಾರಣ ಕೊಟ್ಟ ನೀಶಮ್

ಕಾಸರಗೋಡು ತಂಡದಲ್ಲಿ ಬ್ಯಾಟ್ ಬೀಸಿ ಬಂದೋರೆಲ್ಲ ಸೊನ್ನೆಗೆ ಔಟಾದರೆ ಇನ್ನು ಈ ನಾಲ್ಕು ರನ್ನು ಎಲ್ಲಿಂದ ಬಂತು ಅಂತ ಕೇಳಬೇಡಿ. ಸೊನ್ನೆ ರನ್ನಿಗೆ ಪಂದ್ಯ ಮುಗಿಯಕೂಡದು ಅಂತ ಬಹುಶಃ ಆ ದೇವರೇ ವೈಯನಾಡು ಬೌಲರ್‌ಗಳಿಂದ ಎಕ್ಸ್ಟ್ರಾ ರನ್ ಕೊಡಿಸಿದರು ಅನ್ನಿಸುತ್ತೆ. ಕಾಸರಗೋಡು ಖಾತೆಯಲ್ಲಿದ್ದ ಈ ನಾಲ್ಕೂ ರನ್‌ಗಳು ಎದುರಾಳಿ ತಂಡದಿಂದ ಬಿಟ್ಟಿಯಾಗಿ ಲಭಿಸಿದಂತವು.

ವಿಶ್ವಕಪ್‌ನಲ್ಲಿ ಬ್ಯಾಟ್ಸ್‌ಮನ್‌ಗಳ ನಿದ್ರೆ ಕೆಡಿಸಬಲ್ಲ ಬೌಲರ್‌ಗಳಿವರು!ವಿಶ್ವಕಪ್‌ನಲ್ಲಿ ಬ್ಯಾಟ್ಸ್‌ಮನ್‌ಗಳ ನಿದ್ರೆ ಕೆಡಿಸಬಲ್ಲ ಬೌಲರ್‌ಗಳಿವರು!

ಟಾಸ್ ಗೆದ್ದ ಕಾಸರಗೋಡು ತಂಡದ ನಾಯಕಿ ಎಸ್ ಅಕ್ಷತಾ ನಾವು ಬ್ಯಾಟಿಂಗ್ ಮಾಡ್ತೇವೆ ಅಂದ್ರು. ಜೈ ಅಂತ ವಯನಾಡಿನೋಡು ಫೀಲ್ಡಿಂಗ್‌ಗೆ ಇಳಿದರು. ಇನ್ನಿಂಗ್ ಶುರುವಾಯ್ತು. ವಯನಾಡಿನೋರು ಮಾರಕ ಬೌಲಿಂಗ್ ನಡೆಸಿದರೋ ಇಲ್ಲ ಕಾಸರಗೋಡಿನೋರು ಡಮ್ಮಿ ಬ್ಯಾಟಿಂಗ್ ಮಾಡಿದರೋ ಗೊತ್ತಿಲ್ಲ. ಅಂತೂ ಕಾಸರಗೋಡು ದಾಂಡಿಗೆಯರೆಲ್ಲ ಬಂದವರೆಲ್ಲಾ ಸೊನ್ನೆ ಸುತ್ತಿ ರೈಟ್ ಅಂದ್ರು!

ಕೊಹ್ಲಿ-ಧೋನಿ ನಾಯಕತ್ವದ ನಡುವಿನ ವ್ಯತ್ಯಾಸ ಬಿಚ್ಚಿಟ್ಟ ಜಾಂಟಿ ರೋಡ್ಸ್ಕೊಹ್ಲಿ-ಧೋನಿ ನಾಯಕತ್ವದ ನಡುವಿನ ವ್ಯತ್ಯಾಸ ಬಿಚ್ಚಿಟ್ಟ ಜಾಂಟಿ ರೋಡ್ಸ್

ಕಾಸರಗೋಡು ಆರಂಭಿಕ ಆಟಗಾರ್ತಿಯರಾದ ಕೆ ವೀಕ್ಷಿತಾ ಮತ್ತು ಚೈತ್ರಾ ಮೊದಲೆರಡು ಓವರ್‌ಗಳನ್ನು ಕೊಂಚ ಸುಧಾರಿಸಿದ್ರು. ಆದರೆ ಮೂರನೇ ಓವರ್‌ ಶುರುವಾಯ್ತು ನೋಡಿ; ವಿಕೆಟ್‌ಗಳು ಉರುಳಿದ್ದೇ ಉರುಳಿದ್ದು. ಅಂದ್ಹಾಗೆ ಪಂದ್ಯದಲ್ಲಿ ವೈಯನಾಡು ತಂಡ 10 ವಿಕೆಟ್‌ ಭರ್ಜರಿ ಗೆಲುವನ್ನಾಚರಿಸಿತು. ವಯನಾಡು ಆರಂಭಿಕ ಆಟಗಾರ್ತಿಯರು ಮೊದಲ ಓವರ್‌ನಲ್ಲೇ ಬೇಕಿದ್ದ 5 ರನ್ ಗಳಿಸಿದರು. ಬಹುಶಃ ಇದು ಟಿ20 ಪಂದ್ಯವಿರಬಹುದು.

Story first published: Thursday, May 16, 2019, 17:05 [IST]
Other articles published on May 16, 2019
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X