ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಐಪಿಎಲ್ ಬಳಿಕ ವಿಶ್ವಕಪ್‌ನಲ್ಲಿ ಮೈದಾನಕ್ಕಿಳಿಯಲಿದ್ದಾರಾ ಸ್ಮಿತ್, ವಾರ್ನರ್!?

All to prove: Steve Smith, David Warner face World Cup test in IPL 2019

ಬೆಂಗಳೂರು, ಮಾರ್ಚ್ 21: ಶನಿವಾರ (ಮಾರ್ಚ್ 23) ಭಾರತದ ಅದ್ದೂರಿ ಕ್ರಿಕೆಟ್ ಹಬ್ಬ ಐಪಿಎಲ್ ಆರಂಭಗೊಳ್ಳಲಿದೆ. ಅವಮಾನಕ್ಕೀಡಾಗಿರುವ ಆಸ್ಟ್ರೇಲಿಯಾದ ಸ್ಟೀವ್ ಸ್ಮಿತ್ ಮತ್ತು ಡೇವಿಡ್ ವಾರ್ನರ್ ಕೂಡ ಟೂರ್ನಿಯಲ್ಲಿ ಪಾಲ್ಗೊಳ್ಳುತ್ತಿದ್ದಾರೆ. ಆಸ್ಟ್ರೇಲಿಯಾ ವಿಶ್ವಕಪ್‌ ತಂಡದಲ್ಲಿ ಅವಕಾಶ ಗಿಟ್ಟಿಸಿಕೊಳ್ಳಲು ಇಬ್ಬರಿಗೂ ಐಪಿಎಲ್ ವರದಾನವಾಗಲಿದೆ.

ಐಪಿಎಲ್ ಪಂದ್ಯದ ಹಣವನ್ನು ಯೋಧರ ಕುಟುಂಬಗಳಿಗೆ ನೀಡಲಿದೆ ಸಿಎಸ್‌ಕೆಐಪಿಎಲ್ ಪಂದ್ಯದ ಹಣವನ್ನು ಯೋಧರ ಕುಟುಂಬಗಳಿಗೆ ನೀಡಲಿದೆ ಸಿಎಸ್‌ಕೆ

ಐಪಿಎಲ್ 12ನೇ ಆವೃತ್ತಿಯ ಫೈನಲ್ ಪಂದ್ಯ ಮೇ 12ರಂದು ನಡೆಯಲಿದೆ. ಐಪಿಎಲ್ ತೆರೆಕಂಡು ಕೇವಲ ಮೂರು ವಾರಗಳ ಬಳಿಕ 50 ಓವರ್‌ಗಳ ವಿಶ್ವಕಪ್ ಟೂರ್ನಿ ಇಂಗ್ಲೆಂಡ್‌ನಲ್ಲಿ ಮೇ 30ರಂದು ಶುರುವಾಗುವುದರಲ್ಲಿದೆ. ಹೀಗಾಗಿ ವಿಶ್ವಕಪ್ ಅವಕಾಶ ಗಿಟ್ಟಿಸಿಕೊಳ್ಳಲು ಸ್ಮಿತ್-ವಾರ್ನರ್‌ಗೆ ಐಪಿಎಲ್ ಪ್ರಮುಖ ಟೂರ್ನಿಯಾಗಲಿದೆ.

ರಾಜಸ್ಥಾನ್ ರಾಯಲ್ಸ್‌ಗೆ ಆನೆಬಲ ತಂದ ಜಾಸ್ ಬಟ್ಲರ್, ಬೆನ್ ಸ್ಟೋಕ್ಸ್ರಾಜಸ್ಥಾನ್ ರಾಯಲ್ಸ್‌ಗೆ ಆನೆಬಲ ತಂದ ಜಾಸ್ ಬಟ್ಲರ್, ಬೆನ್ ಸ್ಟೋಕ್ಸ್

ರಾಜಸ್ಥಾನ ರಾಯಲ್ಸ್ ಪ್ರತಿನಿಧಿಸುವ ಸ್ಟೀವ್ ಸ್ಮಿತ್ ಮತ್ತು ಸನ್ ರೈಸರ್ಸ್ ಹೈದರಾಬಾದ್ ಪ್ರತಿನಿಧಿಸುವ ಡೇವಿಡ್ ವಾರ್ನರ್ ಈ ಬಾರಿ ಐಪಿಎಲ್‌ನಲ್ಲಿ ಬಿರುಸಿನ ಬ್ಯಾಟಿಂಗ್ ತೋರಿಸುತ್ತಾರಾ?

ಮಾರ್ಚ್ 28ಕ್ಕೆ ನಿಷೇಧ ಅಂತ್ಯ

ಮಾರ್ಚ್ 28ಕ್ಕೆ ನಿಷೇಧ ಅಂತ್ಯ

ಕಳೆದ ವರ್ಷ ಮಾರ್ಚ್ 28ರಂದು ಆಸ್ಟ್ರೇಲಿಯಾ ನಾಯಕರಾಗಿದ್ದ ಸ್ಟೀವ್ ಸ್ಮಿತ್ ಮತ್ತು ಉಪನಾಯಕ ಡೇವಿಡ್ ವಾರ್ನರ್ ಕ್ರಿಕೆಟ್ ಆಸ್ಟ್ರೇಲಿಯಾದಿಂದ 12 ತಿಂಗಳ ನಿಷೇಧಕ್ಕೆ ಗುರಿಯಾಗಿದ್ದರು. ದಕ್ಷಿಣ ಆಪ್ರಿಕಾ ವಿರುದ್ಧದ ಟೆಸ್ಟ್ ವೇಳೆ ಬಾಲ್ ಟ್ಯಾಂಪರಿಂಗ್‌ನಲ್ಲಿ ಪಾಲ್ಗೊಂಡಿದ್ದರಿಂದ ಈ ಜೋಡಿ ಶಿಕ್ಷೆಗೆ ಒಳಗಾಗಿತ್ತು. ಆದರೆ ಇದೇ ಮಾರ್ಚ್ 28ಕ್ಕೆ ಇಬ್ಬರ ಮೇಲಿನ ನಿಷೇಧ ಕೊನೆಗೊಳ್ಳಲಿದೆ.

ಐಪಿಎಲ್ 11ನೇ ಸೀಸನ್‌ನಿಂದ ಹೊರಕ್ಕೆ

ಐಪಿಎಲ್ 11ನೇ ಸೀಸನ್‌ನಿಂದ ಹೊರಕ್ಕೆ

ಸ್ಮಿತ್-ವಾರ್ನರ್ ಮೇಲಿನ ನಿಷೇಧ ಕ್ಲಬ್ ಪಂದ್ಯಗಳನ್ನು ಒಳಗೊಂಡಿರಲಿಲ್ಲ. ಆದರೂ ಐಪಿಎಲ್ ಆಡಳಿತ ಸಮಿತಿ ಇಬ್ಬರೂ ಆಟಗಾರರನ್ನು ಐಪಿಎಲ್ 11ನೇ ಆವೃತ್ತಿಯಿಂದ ಹೊರಗಿಟ್ಟಿತ್ತು. ಆಟಗಾರರನ್ನು ಆಡಿಸಿ ವಿವಾದ ಸೃಷ್ಟಿಯಾಗುವುದನ್ನು ತಪ್ಪಿಸಲು ಬಿಸಿಸಿಐ ಸ್ಮಿತ್-ವಾರ್ನರ್ ಅವರನ್ನು ಕಳೆದ ವರ್ಷ ಐಪಿಎಲ್‌ನಲ್ಲಿ ಆಡಿಸಿರಲಿಲ್ಲ.

ಗಾಯದಿಂದ ಚೇತರಿಕೆ

ಗಾಯದಿಂದ ಚೇತರಿಕೆ

ಇಬ್ಬರೂ ಕ್ರಿಕೆಟಿಗರು ಇತ್ತೀಚೆಗೆ ಬಾಂಗ್ಲಾದೇಶ ಪ್ರೀಮಿಯರ್ ಲೀಗ್ (ಬಿಪಿಎಲ್‌)ನಲ್ಲಿ ಪಾಲ್ಗೊಂಡಿದ್ದರು. ಆದರೆ ಮೊಣ ಕೈ ಗಾಯಕ್ಕೀಡಾಗಿ ಟೂರ್ನಿಯಿಂದ ಹೊರಬಿದ್ದಿದ್ದರು. ಈಗ ಗಾಯದಿಂದ ಚೇತರಿಸಿಕೊಂಡಾಗಿದೆ. ಐಪಿಎಲ್ ಗೆ ಸಜ್ಜಾಗಿಯೂ ಆಗಿದೆ. ಇನ್ನೇನಿದ್ದರೂ ಐಪಿಎಲ್ ನಲ್ಲಿ ಉತ್ತಮ ಪ್ರದರ್ಶನ ನೀಡಿ ವಿಶ್ವಕಪ್‌ಗಾಗಿ ಅಸೀಸ್ ಆಯ್ಕೆ ಸಮಿತಿಯ ಗಮನ ಸೆಳೆಯುವ ಯೋಜನೆ ಇಬ್ಬರದ್ದೂ!

ವಿಶ್ವಕಪ್ ಅದೃಷ್ಟ ಪರೀಕ್ಷೆ

ವಿಶ್ವಕಪ್ ಅದೃಷ್ಟ ಪರೀಕ್ಷೆ

ಐಪಿಎಲ್‌ನಲ್ಲಿ ಸ್ಮಿತ್-ವಾರ್ನರ್ ಇಬ್ಬರೂ ಆಕರ್ಷಕ ಬ್ಯಾಟಿಂಗ್‌ಗಾಗಿ ಗಮನ ಸೆಳೆದವರೆ. ಈ ಬಾರಿ ಸ್ಟೀವ್ ಸ್ಮಿತ್ ರಾಜಸ್ಥಾನ್ ರಾಯಲ್ಸ್‌ಗೆ ಬಲ ತುಂಬಿದರೆ, ಡೇವಿಡ್ ವಾರ್ನರ್ ಸನ್ ರೈಸರ್ಸ್ ಹೈದರಾಬಾದ್‌ಗೆ ಪರ ಮಿಂಚಲಿದ್ದಾರೆ. ಒಟ್ಟಿನಲ್ಲಿ ಇಬ್ಬರೂ ಆಟಗಾರರು ಐಪಿಎಲ್‌ನಲ್ಲಿ ಉತ್ತಮ ಬ್ಯಾಟಿಂಗ್ ತೋರಿಸಿದರೆ ವಿಶ್ವಕಪ್‌ನಲ್ಲಿ ಆಸೀಸ್ ತಂಡದಲ್ಲಿ ಕಾಣಿಸಿಕೊಳ್ಳುವ ಸಾಧ್ಯತೆ ಹೆಚ್ಚಿದೆ.

Story first published: Thursday, March 21, 2019, 13:47 [IST]
Other articles published on Mar 21, 2019
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X