ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಹೈದರಾಬಾದ್‌ನಲ್ಲಿ ಕ್ರಿಕೆಟ್ ಅಕಾಡೆಮಿ ಉದ್ಭಾಟನೆ ಮಾಡಿದ ಯೂಸುಫ್ ಪಠಾಣ್

All rounder Yusuf Pathan inaugurate cricket academy in Hyderabad

ಭಾರತೀಯ ಕ್ರಿಕೆಟ್‌ನ ಮಾಜಿ ಆಲ್‌ರೌಂಡರ್ ಯೂಸುಫ್ ಪಠಾಣ್ ಮಂಗಳವಾರ 'ಕ್ರಿಕೆಟ್ ಅಕಾಡೆಮಿ ಆಫ್ ಪಠಾಣ್ಸ್‌'ನ(ಸಿಎಪಿ) 26ನೇ ಕೇಂದ್ರವನ್ನು ಉದ್ಘಾಟನೆ ಮಾಡಿದ್ದಾರೆ. ಹೈದರಾಬಾದ್‌ನಲ್ಲಿ ವಿಶ್ವದರ್ಜೆಯ ಕ್ರಿಕೆಟ್ ತರಬೇತಿ ದೊರೆಯಬೇಕು ಎಂಬ ದೃಷ್ಟಿಕೋನದಿಂದ ಈ ತರಬೇತಿ ಕೇಂದ್ರಗಳನ್ನು ಸ್ಥಾಪಿಸಲಾಗಿದೆ.

ಈ ತರಬೇತಿ ಕೇಂದ್ರದ ಉದ್ಘಾಟನೆಯ ಸಂದರ್ಭದಲ್ಲಿ ಯೂಸುಫ್ ಪಠಾಣ್ ಟ್ರೈನೀಗಳ ಜೊತೆಗೆ ಸಂವಾದದಲ್ಲಿ ಯೂಸುಫ್ ಪಠಾಣ್ ಪಾಲ್ಗೊಂಡಿದ್ದರು. ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿನ ತಮ್ಮ ಅನುಭವವನ್ನು ಪಠಾಣ್ ಹಂಚಿಕೊಂಡರು ಎಂದು ಸಿಎಪಿ ಮಾಧ್ಯಮ ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ಆನ್‌ಫೀಲ್ಡ್ ಪ್ರದರ್ಶನ ಹೊರತು ಕ್ರೀಡೆ ಮತ್ತೇನೂ ಗುರುತಿಸಲಾರದು: ಸಚಿನ್ಆನ್‌ಫೀಲ್ಡ್ ಪ್ರದರ್ಶನ ಹೊರತು ಕ್ರೀಡೆ ಮತ್ತೇನೂ ಗುರುತಿಸಲಾರದು: ಸಚಿನ್

"ಕ್ರಿಕೆಟ್ ಅಕಾಡೆಮಿ ಆಫ್ ಪಠಾಣ್‌ಸ್‌ನ ಉದ್ದೇಶ ವಿಶ್ವದರ್ಜೆಯ ಕ್ರಿಕೆಟ್ ತರಬೇತಿಯನ್ನು ನೀಡುವುದು ಮತ್ತು ಸಾಧ್ಯವಾದಷ್ಟು ಅತ್ಯುತ್ತಮ ಮೂಲಸೌಕರ್ಯಗಳನ್ನು ಯುವ ಆಟಗಾರರಿಗೆ ನೀಡುವುದು ಆಗಿದೆ. ಈ ಮೂಲಕ ಯುವ ಆಟಗಾರರಿಗೆ ಬೆಂಬಲವನ್ನು ನೀಡುವ ಗುರಿ ಹೊಂದಲಾಗಿದೆ" ಎಂದು ಸಿಎಪಿಯ ನಿರ್ದೇಶಕರಾಗಿರುವ ಯೂಸುಫ್ ಪಠಾಣ್ ಹೇಳಿದ್ದಾರೆ.

ಈ ವರ್ಷಾಂತ್ಯಕ್ಕೆ ಮುನ್ನ 25 ನಗರಗಳಲ್ಲಿ ಸಿಎಪಿಯ ಹೊಸ ತರಬೇತಿ ಕೇಂದ್ರಗಳನ್ನು ತೆರೆಯುವ ಗುರಿಯನ್ನು ಹೊಂದಲಾಗಿದೆ ಎಂದು ಸಿಎಪಿಯ ಎಂಡಿ ಹರ್ಮೀತ್ ವಾಸುದೇವ್ ಹೇಳಿದ್ದಾರೆ. ಸಿಎಪಿ ಪಿಚ್ ವಿಶನ್ ಜೊತೆಗೆ ಪಾಲುದಾರಿಕೆಯನ್ನು ಹೊಂದಿದ್ದು ಸಾಕಷ್ಟು ಆಧುನಿಕ ತಂತ್ರಾಂಶಗಳ ಮೂಲಕ ಆಟಗಾರರಿಗೆ ತರವೇತಿಯನ್ನು ನೀಡುವ ವ್ಯವಸ್ಥೆಯನ್ನು ಹೊಂದಿದೆ ಎಂದು ಅವರು ಮಾಹಿತಿಯನ್ನು ನೀಡಿದ್ದಾರೆ.

Story first published: Wednesday, February 24, 2021, 8:06 [IST]
Other articles published on Feb 24, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X