ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಮೂರು ಸ್ವರೂಪಗಳನ್ನು ಆಡುವುದು ಕಷ್ಟ; ನಿವೃತ್ತಿಯ ಸುಳಿವು ನೀಡಿದ ಮತ್ತೊಬ್ಬ ಸ್ಟಾರ್ ಕ್ರಿಕೆಟಿಗ?

All Three Cricket Formats Are Difficult To Play; South Africa Star Cricketer Who Hinted At Retirement

ವಿಶ್ರಾಂತಿರಹಿತ ಕ್ರೀಡಾ ವೇಳಾಪಟ್ಟಿಯನ್ನು ಉಲ್ಲೇಖಿಸಿ ಇಂಗ್ಲೆಂಡ್‌ನ ಸ್ಟಾರ್ ಆಟಗಾರ ಬೆನ್ ಸ್ಟೋಕ್ಸ್ ಇತ್ತೀಚಿಗೆ ಅಂತಾರಾಷ್ಟ್ರೀಯ ಏಕದಿನ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿದ್ದು, ಇದು ಅಂತಾರಾಷ್ಟ್ರೀಯ ಕ್ರಿಕೆಟ್ ಲೋಕದ ಗಮನ ಸೆಳೆದಿದೆ.

ಅನೇಕರು ಬೆನ್ ಸ್ಟೋಕ್ಸ್ ನಿರ್ಧಾರವನ್ನು ಬೆಂಬಲಿಸಿದ್ದರೆ, ಪಾಕಿಸ್ತಾನ ಮಾಜಿ ಆಟಗಾರ ವಾಸಿಂ ಅಕ್ರಂ ಅವರಂತಹವರು ಏಕದಿನ ಸ್ವರೂಪವನ್ನು ರದ್ದುಗೊಳಿಸಬೇಕೆಂದು ಸಲಹೆ ನೀಡಿದ್ದಾರೆ.

IND vs WI: 2ನೇ ಏಕದಿನ ಪಂದ್ಯದಲ್ಲಿ ಈ ಅವಕಾಶ ತಪ್ಪಿದ್ದಕ್ಕೆ ಬೇಸರಗೊಂಡ ಶ್ರೇಯಸ್ ಅಯ್ಯರ್IND vs WI: 2ನೇ ಏಕದಿನ ಪಂದ್ಯದಲ್ಲಿ ಈ ಅವಕಾಶ ತಪ್ಪಿದ್ದಕ್ಕೆ ಬೇಸರಗೊಂಡ ಶ್ರೇಯಸ್ ಅಯ್ಯರ್

ಇದೇ ವೇಳೆ ದಕ್ಷಿಣ ಆಫ್ರಿಕಾದ ವಿಕೆಟ್‌ಕೀಪರ್-ಬ್ಯಾಟರ್ ಕ್ವಿಂಟನ್ ಡಿ ಕಾಕ್ ಅವರು ಕ್ರಿಕೆಟ್‌ನ ಎಲ್ಲಾ ಮೂರು ಸ್ವರೂಪಗಳಲ್ಲಿ (ಟಿ20, ಏಕದಿನ, ಟೆಸ್ಟ್) ಆಡಲು ಆಟಗಾರರಿಗೆ ಕಷ್ಟವಾಗುತ್ತದೆ ಎಂದು ಹೇಳಿರುವುದು, ಯಾವುದಾದರೂ ಮಾದರಿಗೆ ನಿವೃತ್ತಿಯ ಸುಳಿವು ನೀಡಿದ್ದಾರೆಯೇ ಎಂಬ ಅನುಮಾನ ಮೂಡಿದೆ.

ಇಂಗ್ಲೆಂಡ್ ವಿರುದ್ಧ 76 ಎಸೆತಗಳಲ್ಲಿ 92 ರನ್

ಇಂಗ್ಲೆಂಡ್ ವಿರುದ್ಧ 76 ಎಸೆತಗಳಲ್ಲಿ 92 ರನ್

ಕ್ವಿಂಟನ್ ಡಿ ಕಾಕ್ ಭಾನುವಾರದಂದು ಇಂಗ್ಲೆಂಡ್ ವಿರುದ್ಧದ ಪಂದ್ಯದಲ್ಲಿ ಬ್ಯಾಟ್‌ನೊಂದಿಗೆ ಮಿಂಚಿದ್ದು, ಅವರು ಸರಣಿಯ ನಿರ್ಣಾಯಕ ಪಂದ್ಯದಲ್ಲಿ ಇಂಗ್ಲೆಂಡ್ ವಿರುದ್ಧ 76 ಎಸೆತಗಳಲ್ಲಿ 92 ರನ್ ಗಳಿಸಿದರು. ಆದರೆ, ಮಳೆಯು ಅಡ್ಡಿಪಡಿಸಿತು ಮತ್ತು ಪಂದ್ಯವನ್ನು ಕೇವಲ 27.4 ಓವರ್‌ಗಳಲ್ಲಿ ರದ್ದುಗೊಳಿಸಲಾಯಿತು.

ಫಾಕ್ಸ್ ಸ್ಪೋರ್ಟ್ಸ್ ಉಲ್ಲೇಖಿಸಿದಂತೆ ಆಟದ ನಂತರ ಮಾತನಾಡಿದ ವಿಕೆಟ್ ಕೀಪರ್-ಬ್ಯಾಟ್ಸ್‌ಮನ್ ಕ್ವಿಂಟನ್ ಡಿ ಕಾಕ್, ಕ್ರಿಕೆಟಿಗರಿಗೆ ಎಲ್ಲಾ ಮೂರು ಸ್ವರೂಪಗಳನ್ನು ಆಡುವುದು ಕಠಿಣವಾಗುವುದರಿಂದ, ಮುಂದೆ ಹೋಗುವುದು ಕಷ್ಟಕರವಾಗಿರುತ್ತದೆ ಎಂದು ಹೇಳಿದರು. ಕಳೆದ ವರ್ಷ ಟೆಸ್ಟ್ ಕ್ರಿಕೆಟ್‌ನಿಂದ ನಿವೃತ್ತರಾದ ಕ್ವಿಂಟನ್ ಡಿ ಕಾಕ್, ಆಟಗಾರರು ವೈಯಕ್ತಿಕವಾಗಿ ನಿರ್ಧಾರಗಳನ್ನು ತೆಗೆದುಕೊಳ್ಳಬೇಕಾಗುತ್ತದೆ ಎಂದು ತಿಳಿಸಿದರು.

ಮೂರು ಸ್ವರೂಪದ ಕ್ರಿಕೆಟ್ ಕಠಿಣವಾಗಲು ಪ್ರಾರಂಭಿಸಿದೆ

ಮೂರು ಸ್ವರೂಪದ ಕ್ರಿಕೆಟ್ ಕಠಿಣವಾಗಲು ಪ್ರಾರಂಭಿಸಿದೆ

"ಎಲ್ಲ ದೇಶದ ಆಟಗಾರರಿಗೆ ಮೂರು ಸ್ವರೂಪದ ಕ್ರಿಕೆಟ್ ಕಠಿಣವಾಗಲು ಪ್ರಾರಂಭಿಸಿದೆ ಮತ್ತು ಕ್ಯಾಲೆಂಡರ್‌ನಲ್ಲಿ ಬಿಡುವಿಲ್ಲದ ಹೆಚ್ಚಿನ ಆಟಗಳು ನಡೆಯುತ್ತಿರುವಂತೆ ತೋರುತ್ತಿದೆ. ಆಟಗಾರರು ಪ್ರತ್ಯೇಕವಾಗಿ ನಿರ್ಧಾರಗಳನ್ನು ತೆಗೆದುಕೊಳ್ಳಬೇಕು ಮತ್ತು ಅವರು ಅದನ್ನು ಆಡಬಹುದು ಎಂದು ಅವರು ಭಾವಿಸಿದರೆ (ಟೆಸ್ಟ್‌ಗಳು, ಏಕದಿನ ಪಂದ್ಯಗಳು ಮತ್ತು ಟ್ವೆಂಟಿ 20 ಅಂತಾರಾಷ್ಟ್ರೀಯ ಪಂದ್ಯಗಳನ್ನು ಆಡಲು), ನಾನು ಅವರಿಗೆ ಅಭಿನಂದಿಸುತ್ತೇನೆ. ಆದರೆ ಹುಡುಗರು ತಮ್ಮ ಕೈಯಲ್ಲಿ ನಿರ್ಧಾರಗಳನ್ನು ತೆಗೆದುಕೊಳ್ಳಬೇಕು. ನನಗೆ, ನಾನು ಎಲ್ಲಿದ್ದೇನೆ ಎಂದು ನೋಡಿದರೆ ನನಗೆ ಸಂತೋಷವಾಗುತ್ತದೆ," ಎಂದು ದಕ್ಷಿಣ ಆಫ್ರಿಕಾ ಸ್ಟಾರ್ ಆಟಗಾರ ಕ್ವಿಂಟನ್ ಡಿ ಕಾಕ್ ಅಭಿಪ್ರಾಯಪಟ್ಟರು.

ತುಂಬಿದ ವೇಳಾಪಟ್ಟಿಯನ್ನು ಹೊಂದಿರುವ ಕ್ವಿಂಟನ್ ಡಿ ಕಾಕ್

ತುಂಬಿದ ವೇಳಾಪಟ್ಟಿಯನ್ನು ಹೊಂದಿರುವ ಕ್ವಿಂಟನ್ ಡಿ ಕಾಕ್

ಟೆಸ್ಟ್‌ನಿಂದ ನಿವೃತ್ತಿ ಹೊಂದಿದ್ದರೂ, ಐಪಿಎಲ್ ಸೇರಿದಂತೆ ಕೆಲವು ಟಿ20 ಲೀಗ್‌ಗಳಲ್ಲಿ ಆಡುವುದರಿಂದ ತಾವು ಇನ್ನೂ ತುಂಬಿದ ವೇಳಾಪಟ್ಟಿಯನ್ನು ಹೊಂದಿದ್ದೇನೆ ಎಂದು ದಕ್ಷಿಣ ಆಫ್ರಿಕಾ ವಿಕೆಟ್ ಕೀಪರ್ ಕ್ವಿಂಟನ್ ಡಿ ಕಾಕ್ ಹೇಳಿದರು.

"ನಾನು ಒಂದೆರಡು ಲೀಗ್‌ಗಳನ್ನು ಆಡಲು ತೊಡಗಿಸಿಕೊಂಡಿದ್ದೇನೆ, ಆದರೆ ಅದು ನನ್ನ ಸ್ವಂತ ಪರಿಣಾಮವಾಗಿದೆ. ಅವುಗಳಲ್ಲಿ ಆಡಲು ನನಗೆ ಸಂತೋಷವಾಗಿದೆ. ಇದು ಇನ್ನೂ ಒಂದು ತ್ಯಾಗ, ಆದರೆ ನಾನು ನಿಧಾನವಾಗಿ ನನ್ನ ವೃತ್ತಿಜೀವನದಲ್ಲಿ ಎಲ್ಲಿ ಇರಬೇಕೆಂದು ಯೋಚಿಸಬೇಕಾದ ವಯಸ್ಸಿಗೆ ಬರುತ್ತಿದ್ದೇನೆ," ಎಂದು ಕ್ವಿಂಟನ್ ಡಿ ಕಾಕ್ ತಿಳಿಸಿದರು.

ಎಲ್ಲರಿಗೂ 50 ಓವರ್‌ಗಳ ವಿಶ್ವಕಪ್ ಗೆಲ್ಲುವ ಕನಸು

ಎಲ್ಲರಿಗೂ 50 ಓವರ್‌ಗಳ ವಿಶ್ವಕಪ್ ಗೆಲ್ಲುವ ಕನಸು

ವಿಕೆಟ್‌ಕೀಪರ್-ಬ್ಯಾಟರ್ ಕ್ವಿಂಟನ್ ಡಿ ಕಾಕ್ ಅವರು ಏಕದಿನ ಕ್ರಿಕೆಟ್‌ಗೆ ಒಂದು ವೈಶಿಷ್ಟ್ಯವಿದೆ ಎಂದು ಹೇಳಿದ್ದಾರೆ, ಏಕೆಂದರೆ ನಮ್ಮಂತಹ ಅನೇಕ ಆಟಗಾರರು ಇನ್ನೂ 50 ಓವರ್‌ಗಳ ವಿಶ್ವಕಪ್ ಗೆಲ್ಲುವ ಕನಸು ಕಾಣುತ್ತಿದ್ದಾರೆ ಎಂದರು.

"50-ಓವರ್ ಆಟವು ಆಟಗಾರರು ಅದರ ಬಗ್ಗೆ ಹೋಗುತ್ತಿರುವ ರೀತಿ ಮತ್ತು ಬ್ಯಾಟಿಂಗ್ ಮತ್ತು ಬೌಲಿಂಗ್ ಸ್ಪರ್ಧಾತ್ಮಕತೆಯಿಂದ ಉತ್ತಮವಾಗಿ ಕಾರ್ಯನಿರ್ವಹಿಸುತ್ತಿದೆ. ಅದಕ್ಕೆ ಭವಿಷ್ಯವಿದೆ ಮತ್ತು ನಮ್ಮಲ್ಲಿ ಬಹಳಷ್ಟು ಜನರು ಇನ್ನೂ 50 ಓವರ್‌ಗಳ ವಿಶ್ವಕಪ್‌ಗಳನ್ನು ಗೆಲ್ಲಲು ಬಯಸುತ್ತೇವೆ," ಎಂದು ದಕ್ಷಿಣ ಆಫ್ರಿಕಾ ವಿಕೆಟ್ ಕೀಪರ್- ಬ್ಯಾಟ್ಸ್‌ಮನ್ ಕ್ವಿಂಟನ್ ಡಿ ಕಾಕ್ ಹೇಳಿದ್ದಾರೆ.

Story first published: Tuesday, July 26, 2022, 10:09 [IST]
Other articles published on Jul 26, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X