ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ವಿಶ್ವಕಪ್ 2019 ಸಮಗ್ರ ಮಾಹಿತಿ, ಫ್ಯಾನ್ಸಿಗೆ ಸಂಪೂರ್ಣ ಗೈಡ್

All you need to know about ICC World Cup 2019

ಅಂತಾರಾಷ್ಟ್ರೀಯ ಕ್ರಿಕೆಟ್ ಕೌನ್ಸಿಲ್ (ಐಸಿಸಿ) ಆಯೋಜನೆಯ 12ನೇ ಆವೃತ್ತಿಯ ಕ್ರಿಕೆಟ್ ವಿಶ್ವಕಪ್ ಟೂರ್ನಮೆಂಟಿಗೆ ಇಂದು(ಮೇ 30) ಚಾಲನೆ ಸಿಕ್ಕಿದೆ. 50 ಓವರ್ ಗಳ ಈ ಪಂದ್ಯವಾಳಿಯಲ್ಲಿ 10 ತಂಡಗಳು ಜುಲೈ 14ರಂದು ಲಾರ್ಡ್ಸ್ ಮೈದಾನದಲ್ಲಿ ನಡೆಯುವ ಫೈನಲ್ ನಲ್ಲಿ ಆಡಿ ಕಪ್ ಗೆಲ್ಲಲು ಸೆಣಸಾಟ ನಡೆಸಲಿವೆ.

ಇಂಗ್ಲೆಂಡ್ ಹಾಗೂ ವೇಲ್ಸ್ ಕ್ರಿಕೆಟ್ ಮಂಡಳಿ ಅತಿಥೇಯ ರಾಷ್ಟ್ರಗಳಾಗಿದ್ದು, 11 ಮೈದಾನಗಳಲ್ಲಿ 46 ದಿನಗಳ ಕಾಲ 48 ಪಂದ್ಯಗಳನ್ನು ಆಯೋಜಿಸುವ ಹೊಣೆ ಹೊತ್ತಿವೆ.

ವಿಶ್ವಕಪ್ 2019 : ಟೀಂ ಇಂಡಿಯಾ ಪಂದ್ಯಗಳ ಸಮಗ್ರ ವೇಳಾಪಟ್ಟಿ ವಿಶ್ವಕಪ್ 2019 : ಟೀಂ ಇಂಡಿಯಾ ಪಂದ್ಯಗಳ ಸಮಗ್ರ ವೇಳಾಪಟ್ಟಿ

ಪ್ರಮುಖ ದಿನಾಂಕಗಳು
ಮೇ 30(ಗುರುವಾರ) : ಐಸಿಸಿ ವಿಶ್ವಕಪ್ 2019ರ ಆರಂಭಿಕ ಪಂದ್ಯ
ಜುಲೈ 9 (ಮಂಗಳವಾರ): ಮೊದಲ ಸೆಮಿಫೈನಲ್
ಜುಲೈ 11 (ಗುರುವಾರ) : ಎರಡನೇ ಸೆಮಿಫೈನಲ್
ಜುಲೈ 14 (ಭಾನುವಾರ) : ಫೈನಲ್

* ವಿಶ್ವಕಪ್ 2019 ಕಣದಲ್ಲಿರುವ ತಂಡಗಳು
-ಇಂಗ್ಲೆಂಡ್, ಭಾರತ, ಪಾಕಿಸ್ತಾನ, ಬಾಂಗ್ಲಾದೇಶ, ಆಸ್ಟ್ರೇಲಿಯಾ, ನ್ಯೂಜಿಲೆಂಡ್, ಅಫ್ಘಾನಿಸ್ತಾನ, ದಕ್ಷಿಣ ಆಫ್ರಿಕಾ, ಶ್ರೀಲಂಕಾ ಹಾಗೂ ವೆಸ್ಟ್ ಇಂಡೀಸ್.

* ವಿಶ್ವಕಪ್ 2015 ಫೈನಲ್ ಫಲಿತಾಂಶ
-2015ರ ವಿಶ್ವಕಪ್ ಆಸ್ಟ್ರೇಲಿಯಾ, ನ್ಯೂಜಿಲೆಂಡ್ ಆಯೋಜನೆ ಮಾಡಿತ್ತು, ಮೆಲ್ಬೋರ್ನ್ ನಲ್ಲಿ ನಡೆದ ಅಂತಿಮ ಹಣಾಹಣಿಯಲ್ಲಿ ನ್ಯೂಜಿಲೆಂಡ್ ತಂಡವನ್ನು 7 ವಿಕೆಟ್ ಗಳಿಂದ ಸೋಲಿಸಿದ ಮೈಕಲ್ ಕ್ಲಾರ್ಕ್ ನೇತೃತ್ವದ ಆಸ್ಟ್ರೇಲಿಯಾಕ್ಕೆ ಕಪ್ ಸಿಕ್ಕಿತ್ತು.

* 2019ರ ವಿಶ್ವಕಪ್ ಮೈದಾನಗಳು ಯಾವುವು?
11 ತಾಣಗಳಿದ್ದು,
1. ಎಜ್ ಬಾಸ್ಟನ್ (ಬರ್ಮಿಂಗ್ ಹ್ಯಾಮ್)
2. ಬ್ರಿಸ್ಟೋಲ್ ಕೌಂಟಿ ಕ್ರಿಕೆಟ್ ಮೈದಾನ (ಬ್ರಿಸ್ಟೋಲ್)
3. ಸೋಫಿಯಾ ಗಾರ್ಡನ್ (ಕಾರ್ಡಿಫ್, ವೇಲ್ಸ್)
4. ರಿವರ್ ಸೈಡ್ ಮೈದಾನ ( ಚೆಸ್ಟರ್ ಲಿ ಸ್ಟ್ರೀಟ್)
5. ಹೆಡಿಂಗ್ಲೆ (ಲೀಡ್ಸ್)
6. ಲಾರ್ಡ್ಸ್ (ಲಂಡನ್)
7. ದಿ ಒವಲ್ (ಲಂಡನ್)
8. ಓಲ್ಡ್ ಟ್ರಾಫರ್ಡ್(ಮ್ಯಾಂಚೆಸ್ಟರ್)
9. ಟ್ರೆಂಟ್ ಬ್ರಿಜ್ (ನ್ಯಾಟಿಂಗ್ ಹ್ಯಾಮ್)
10. ರೋಸ್ ಬೌಲ್ (ಸೌಥಾಂಪ್ಟನ್)
11. ಕೌಂಟಿ ಮೈದಾನ (ಟಾಂಟಾನ್)

ವಿಶ್ವಕಪ್ ನ ಅಧಿಕೃತ ಸಾಮಾಜಿಕ ಖಾತೆ

ವಿಶ್ವಕಪ್ ನ ಅಧಿಕೃತ ಸಾಮಾಜಿಕ ಖಾತೆ

* ಐಸಿಸಿ ವಿಶ್ವಕಪ್ ನ ಅಧಿಕೃತ ಸಾಮಾಜಿಕ ಜಾಲ ತಾಣ ಖಾತೆಗಳು
ಅಧಿಕೃತ ವೆಬ್ ಸೈಟ್: www.cricketworldcup.com

ಟ್ವಿಟ್ಟರ್: @ICC @cricketworldcup

Instagram: cricketworldcup

ಫೇಸ್ ಬುಕ್: cricketworldcup (ICC Cricket World Cup)

CWC 19 ಅಧಿಕೃತ app: ICC Cricket World Cup 2019; CWC19 Lite

ಯೂಟ್ಯೂಬ್: CricketICC

ಅಧಿಕೃತ hashtag: #CWC19

ಯಾವ ಮಾದರಿ ಟೂರ್ನಮೆಂಟ್ ನಡೆಯಲಿದೆ?

ಯಾವ ಮಾದರಿ ಟೂರ್ನಮೆಂಟ್ ನಡೆಯಲಿದೆ?

ರೌಂಡ್ ರಾಬಿನ್ ಲೀಗ್ ಮಾದರಿ ಟೂರ್ನಮೆಂಟ್ ಪಂದ್ಯಗಳು ನಡೆಯಲಿದ್ದು, ಎಲ್ಲಾ 10 ತಂಡಗಳು ಪರಸ್ಪರ ಲೀಗ್ ಹಂತದಲ್ಲಿ ಸೆಣಸಾಡಲಿವೆ. ಟಾಪ್ 4 ತಂಡಗಳು ಸೆಮಿಫೈನಲ್ ತಲುಪಲಿವೆ. ಅಗ್ರಸ್ಥಾನ ತಂಡದ ವಿರುದ್ಧ ನಾಲ್ಕನೇ ಸ್ಥಾನದ ತಂಡ, ಎರಡನೇ ಸ್ಥಾನದ ತಂಡದ ವಿರುದ್ಧ 3ನೇ ಸ್ಥಾನದ ತಂಡ ಆಡಿ ಫೈನಲ್ ತಲುಪಲಿವೆ.
**
* ಲೀಗ್ ಹಂತದ ನಂತರ ಎರಡು ತಂಡಗಳು ಸಮ ಅಂಕ ಪಡೆದರೆ?
-ಹೆಚ್ಚು ಗೆಲುವು ಸಾಧಿಸಿದ ತಂಡ ಮುಂದಕ್ಕೆ ಹೋಗಲಿದೆ
-ನೆಟ್ ರನ್ ರೇಟ್ ಪರಿಶೀಲಿಸಲಾಗುತ್ತದೆ
-ಲೀಗ್ ಹಂತದಲ್ಲಿ ಯಾವ ತಂಡ ಗೆದ್ದಿದೆ ಎಂಬುದನ್ನು ಪರಿಶೀಲಿಸಲಾಗುತ್ತದೆ. ಇಷ್ಟಾದರೂ ಸಮಬಲ ಕಂಡು ಬಂದರೆ ಸೀಡಿಂಗ್ ಪ್ರಕಾರ ಮುಂದಿನ ಹಂತಕ್ಕೆ ಆಯ್ಕೆ ಮಾಡಲಾಗುತ್ತದೆ.
* ಲೀಗ್ ಹಂತದಲ್ಲಿ ಪಂದ್ಯ ಟೈ/ ಫಲಿತಾಂಶ ಬರದಿದ್ದರೆ?
ರೌಂಡ್ ರಾಬಿನ್ ಲೀಗ್ ಹಂತದಲ್ಲಿ ಪಂದ್ಯ ಟೈ ಅಥವಾ ರದ್ದಾಗಿ ಫಲಿತಾಂಶ ಬರದಿದ್ದರೆ ಉಭಯ ತಂಡಗಳಿಗೆ ತಲಾ 1 ಅಂಕ ಹಂಚಲಾಗುತ್ತದೆ. ಗೆಲುವು 2 ಅಂಕ, ಟೈ/ಫಲಿತಾಂಶ ಇಲ್ಲ-1, ಸೋಲು -0.
ಸೆಮಿಫೈನಲ್ ಪಂದ್ಯ ಟೈಯಾದರೆ ಸೂಪರ್ ಓವರ್ ಹಾಗೂ ಫೈನಲ್ ನಲ್ಲೂ ಟೈಯಾದರೆ ಸೂಪರ್ ಓವರ್ ಆಡಿಸಲಾಗುವುದು, ಆಗಲೂ ಫಲಿತಾಂಶ ಬರದಿದ್ದರೆ ಜಂಟಿ ವಿಜೇತರೆಂದು ಘೋಷಿಸಲಾಗುವುದು.

ಪಂದ್ಯ ವೀಕ್ಷಣೆ ಸಮಯ

ಪಂದ್ಯ ವೀಕ್ಷಣೆ ಸಮಯ

-ಭಾರತೀಯ ಕಾಲ ಮಾನ ಪ್ರಕಾರ ಮಧ್ಯಾಹ್ನ 3 ಗಂಟೆ ಹಾಗೂ ಹಗಲು ಮತ್ತು ರಾತ್ರಿ ಪಂದ್ಯ ಸಂಜೆ 6 ಗಂಟೆಗೆ ಆರಂಭ.
* ಭಾರತದ ಎಲ್ಲಾ ಪಂದ್ಯಗಳು ಮಧ್ಯಾಹ್ನ 3 ಗಂಟೆಗೆ ಆರಂಭ
**
* ಭಾರತ- ಪಾಕಿಸ್ತಾನ ಪಂದ್ಯ ಯಾವಾಗ?
- ಜೂನ್ 05ರಂದು ದಕ್ಷಿಣ ಆಫ್ರಿಕಾ ವಿರುದ್ಧ ಮೊದಲ ಪಂದ್ಯವಾಡಲಿರುವ ಭಾರತ ಜೂನ್ 16(ಭಾನುವಾರ)ದಂದು ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನವನ್ನು ಮ್ಯಾಂಚೆಸ್ಟರ್ ನ ಓಲ್ಡ್ ಟ್ರಾಫರ್ಡ್ ಮೈದಾನದಲ್ಲಿ ಎದುರಿಸಲಿದೆ.
-ಎಲ್ಲಾ ಪಂದ್ಯಗಳು ಸ್ಟಾರ್ ಸ್ಪೋರ್ಟ್ಸ್ ನೆಟ್ವರ್ಕ್, ಹಾಟ್ ಸ್ಟಾರ್ ನಲ್ಲಿ ಲಭ್ಯ.

 2019ರ ಬಹುಮಾನದ ಮೊತ್ತ

2019ರ ಬಹುಮಾನದ ಮೊತ್ತ

ಐಸಿಸಿ ವಿಶ್ವಕಪ್ ಕ್ರಿಕೆಟ್ ಚಾಂಪಿಯನ್ ತಂಡಕ್ಕೆ 28 ಕೋಟಿ ರು, ರನ್ನರ್ ಅಪ್ ತಂಡಕ್ಕೆ 14 ಕೋಟಿ ರು ಸಿಗಲಿದೆ. ಒಟ್ಟಾರೆ ಪ್ರಶಸ್ತಿ ಮೊತ್ತ 70 ಕೋಟಿ ರು.
***
ಮುಂದಿನ ವಿಶ್ವಕಪ್ ಎಲ್ಲಿ ನಡೆಯಲಿದೆ?
* 2023ರಲ್ಲಿ ಭಾರತದಲ್ಲಿ ಆಯೋಜನೆ
***
2019ರ 10 ತಂಡಗಳ ನಾಯಕರು, ಕೋಚ್?
* ವಿರಾಟ್ ಕೊಹ್ಲಿ, ರವಿಶಾಸ್ತ್ರಿ (ಭಾರತ)
* ಇಯಾನ್ ಮಾರ್ಗನ್, ಟ್ರೆವರ್ ಬೇಲಿಸ್ (ಇಂಗ್ಲೆಂಡ್)
* ಅರೋನ್ ಫಿಂಚ್, ಜಸ್ಟೀನ್ ಲ್ಯಾಂಗರ್ (ಆಸ್ಟ್ರೇಲಿಯಾ)
* ಫಾಫ್ ಡು ಪ್ಲೇಸಿಸ್, ಒಟ್ಟಿಸ್ ಗಿಬ್ಸನ್ (ದಕ್ಷಿಣ ಆಫ್ರಿಕಾ)
* ಸರ್ಫರಾಜ್ ಅಹ್ಮದ್, ಮಿಕ್ಕ್ ಆರ್ಥರ್ (ಪಾಕಿಸ್ತಾನ)
* ದಿಮುತ್ ಕರುಣರತ್ನೆ, ಚಂಡಿಕಾ ಹಥುರಾಸಿಂಘ(ಶ್ರೀಲಂಕಾ)
* ಜಾಸನ್ ಹೋಲ್ಡರ್, ಫ್ಲಾಯ್ಡ್ ರೀಫರ್ (ವೆಸ್ಟ್ ಇಂಡೀಸ್)

Story first published: Thursday, May 30, 2019, 19:13 [IST]
Other articles published on May 30, 2019
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X