ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಹನುಮ ವಿಹಾರಿ ಶತಕದ ಸೊಬಗು: ಉತ್ತಮ ಮೊತ್ತದತ್ತ ಭಾರತ ಎ

Alur india a south africa a unofficial 2nd test 1st day

ಬೆಂಗಳೂರು, ಆಗಸ್ಟ್ 10: ಬೆಂಗಳೂರಿನ ಆಲೂರು ಮೈದಾನದಲ್ಲಿ ನಡೆಯುತ್ತಿರುವ ದಕ್ಷಿಣ ಆಫ್ರಿಕಾ ಎ ವಿರುದ್ಧದ ಎರಡನೆಯ ಅನಧಿಕೃತ ಟೆಸ್ಟ್ ಪಂದ್ಯದಲ್ಲಿ ಹನುಮ ವಿಹಾರಿ ಅವರ ಆಕರ್ಷಕ ಶತಕದ ನೆರವಿನಿಂದ ಭಾರತ ಉತ್ತಮ ಮೊತ್ತದತ್ತ ದಾಪುಗಾಲು ಇರಿಸಿದೆ.

ಬಿಸಿಸಿಐ ಸಂವಿಧಾನ: ಸುಪ್ರೀಂಕೋರ್ಟ್ ನಿರ್ಧಾರಕ್ಕೆ ನ್ಯಾ. ಲೋಧಾ ಅತೃಪ್ತಿ ಬಿಸಿಸಿಐ ಸಂವಿಧಾನ: ಸುಪ್ರೀಂಕೋರ್ಟ್ ನಿರ್ಧಾರಕ್ಕೆ ನ್ಯಾ. ಲೋಧಾ ಅತೃಪ್ತಿ

ಮೊದಲ ಪಂದ್ಯದಲ್ಲಿ ಭರ್ಜರಿ ಶತಕಗಳನ್ನು ದಾಖಲಿಸಿ ಅಬ್ಬರಿಸಿದ್ದ ಆರಂಭಿಕರಾದ ಮಯಂಕ್ ಅಗರ್ವಾಲ್ ಮತ್ತು ಪೃಥ್ವಿ ಶಾ, ಎರಡನೆಯ ಟೆಸ್ಟ್‌ನ ಮೊದಲ ಇನ್ನಿಂಗ್ಸ್‌ನಲ್ಲಿ ವಿಫಲರಾದರು.

ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಅಬ್ಬರದ ದ್ವಿಶತಕ ಬಾರಿಸಿದ್ದ ಮಯಂಕ್, ಈ ಬಾರಿ ಎದುರಿಸಿದ್ದು ಕೇವಲ ಎರಡೇ ಎಸೆತಗಳನ್ನು. ಮೊದಲನೆಯ ಓವರ್‌ನಲ್ಲಿಯೇ ಮಯಂಕ್ ಶೂನ್ಯಕ್ಕೆ ಔಟಾದರು.

ತಂಡದ ಮೊತ್ತ 18 ಆಗಿದ್ದಾಗ ಪೃಥ್ವಿ ಶಾ (16) ಕೂಡ ಪೆವಿಲಿಯನ್ ಹಾದಿ ಹಿಡಿದರು. ಸಂಕಷ್ಟದಲ್ಲಿದ್ದ ತಂಡಕ್ಕೆ ಹನುಮ ವಿಹಾರಿ ಮತ್ತು ನಾಯಕ ಶ್ರೇಯಸ್ ಅಯ್ಯರ್ ಆಸರೆಯಾದರು. ಅರ್ಧಶತಕದ ಜತೆಯಾಟ ನೀಡಿದ ಬಳಿಕ ಶ್ರೇಯಸ್ ಅಯ್ಯರ್ (39) ಔಟಾದರು.

'ಲಾರ್ಡ್ಸ್'ನಲ್ಲಿನ ಭಾರತ v ಇಂಗ್ಲೆಂಡ್ ಕುತೂಹಲಕಾರಿ ಹೆಜ್ಜೆ ಗುರುತುಗಳು!'ಲಾರ್ಡ್ಸ್'ನಲ್ಲಿನ ಭಾರತ v ಇಂಗ್ಲೆಂಡ್ ಕುತೂಹಲಕಾರಿ ಹೆಜ್ಜೆ ಗುರುತುಗಳು!

ನಂತರ ಕನ್ನಡಿಗ ಆರ್. ಸಮರ್ಥ್ ಬದಲು ಅವಕಾಶ ಪಡೆದಿದ್ದ ಅಂಕಿತ್ ಭಾವ್ನೆ, ವಿಹಾರಿಗೆ ಸಾಥ್ ನೀಡಿದರು. ವಿಹಾರಿ ಹೆಚ್ಚು ತಾಳ್ಮೆಯ ಆಟಕ್ಕೆ ಮೊರೆ ಹೋದರು. ಭಾ'ಲಾರ್ಡ್ಸ್'ನಲ್ಲಿನ ಭಾರತ v ಇಂಗ್ಲೆಂಡ್ ಕುತೂಹಲಕಾರಿ ಹೆಜ್ಜೆ ಗುರುತುಗಳು!ವ್ನೆ ವಿಕೆಟ್ ಒಪ್ಪಿಸಿದ ಬಳಿಕ ಮತ್ತೆ ಯಾವುದೇ ತೊಂದರೆ ಆಗದಂತೆ ವಿಕೆಟ್ ಕೀಪರ್ ಶ್ರೀಕರ್ ಭರತ್ ಎಚ್ಚರ ವಹಿಸಿದರು.

ಸಂಕ್ಷಿಪ್ತ ಸ್ಕೋರ್
ಭಾರತ: 322/4 (90 ಓವರ್) ಹನುಮ ವಿಹಾರಿ 138*, ಶ್ರೇಯಸ್ ಅಯ್ಯರ್ 39, ಅಂಕಿತ್ ಭಾವ್ನೆ 80, ಶ್ರೀಕರ್ ಭರತ್ 30*, ಡೇನ್ ಪೀಡ್ತ್ 46/1, ಸೆನುರಮ್ ಮುತ್ತುಸ್ವಾಮಿ 51/1.

Story first published: Saturday, August 11, 2018, 10:50 [IST]
Other articles published on Aug 11, 2018
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X