ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ತುಂಬಿದ ಕ್ರೀಡಾಂಗಣದಲ್ಲಿ ಇಬ್ಬರು ಮಹಾನ್ ಕ್ರಿಕೆಟಿಗರನ್ನು ಉಲ್ಲೇಖಿಸಿದ ಟ್ರಂಪ್

ಈಗ ಸದ್ಯ ದೇಶದಲ್ಲೆಲ್ಲಾ ಎರಡೇ ಸುದ್ದಿ. ಒಂದು ಅಮೆರಿಕಾದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಭಾರತ ಭೇಟಿ, ಇನ್ನೊಂದು ರಾಷ್ಟ್ರ ರಾಜಧಾನಿಯ ಭಾಗದಲ್ಲಿ ನಡೆಯುತ್ತಿರುವ ಪೌರತ್ವ ತಿದ್ದುಪಡಿ ಮಸೂದೆ ಪರ/ವಿರೋಧ ನಡೆಯುತ್ತಿರುವ ಹಿಂಸಾಚಾರದ ಪ್ರತಿಭಟನೆ.

ವಿಶ್ವದಲ್ಲಿರುವ ಕ್ರಿಕೆಟ್ ಕ್ರೀಡಾಂಗಣದ ಪೈಕಿ ಅತಿದೊಡ್ದ ಕ್ರೀಡಾಂಗಣ ಎನ್ನುವ ಗೌರವಕ್ಕೆ ಅಹಮದಾಬಾದ್ ನಗರದ ಮೊಟೆರೋದಲ್ಲಿರುವ ಸರ್ದಾರ್ ಪಟೇಲ್ ಗ್ರೌಂಡ್ ಪಾತ್ರವಾಗಿದೆ.

ಆಸ್ಟ್ರೇಲಿಯಾದ ಮೆಲ್ಬೋರ್ನ್ ನಲ್ಲಿರುವ ಎಂ.ಸಿ.ಜಿ ಮೈದಾನ ಇದುವರೆಗಿನ ದೊಡ್ಡ ಕ್ರೀಡಾಂಗಣ ಎನ್ನುವ ಖ್ಯಾತಿಯನ್ನು ಹೊಂದಿತ್ತು. ಇಂದು (ಫೆ 24) ಡೊನಾಲ್ಡ್ ಟ್ರಂಪ್, ಅಹಮದಾಬಾದ್ ನ ಗ್ರೌಂಡ್ ಅನ್ನು ಲೋಕಾರ್ಪಣೆ ಮಾಡಿದ್ದಾರೆ.

ಡೊನಾಲ್ಡ್ ಟ್ರಂಪ್‌ಗೆ ಸಂಕಷ್ಟ ತಂದಿಟ್ಟ ಸಚಿನ್ ತೆಂಡೂಲ್ಕರ್: ವಿಡಿಯೋಡೊನಾಲ್ಡ್ ಟ್ರಂಪ್‌ಗೆ ಸಂಕಷ್ಟ ತಂದಿಟ್ಟ ಸಚಿನ್ ತೆಂಡೂಲ್ಕರ್: ವಿಡಿಯೋ

ತಮ್ಮ ಭಾಷಣದಲ್ಲಿ 'ಮೈ ಫ್ರೆಂಡ್ ಮೋದಿ' ಎಂದು ಹಲವು ಬಾರಿ ಹೇಳಿದ ಟ್ರಂಪ್, ಭಾರತದ ಇಬ್ಬರು ಆಟಗಾರರನ್ನು ಈ ಸಮಯದಲ್ಲಿ ಉಲ್ಲೇಖಿಸಿದರು. ಅದಕ್ಕೆ, ನೆರೆದಿದ್ದ ಪ್ರೇಕ್ಷಕರಿಂದ ಭಾರೀ ಕರತಾಡನ ವ್ಯಕ್ತವಾಯಿತು. ಟ್ರಂಪ್ ಉಲ್ಲೇಖಿಸಿದ ಇಬ್ಬರು ಕ್ರಿಕೆಟಿಗರು, ಮುಂದೆ ಓದಿ..

ಸಚಿನ್ ತಂಡೂಲ್ಕರ್ ಮತ್ತು ಹಾಲೀ ನಾಯಕ ವಿರಾಟ್ ಕೊಹ್ಲಿ

ಸಚಿನ್ ತಂಡೂಲ್ಕರ್ ಮತ್ತು ಹಾಲೀ ನಾಯಕ ವಿರಾಟ್ ಕೊಹ್ಲಿ

ಅಮೆರಿಕಾದ ಅಧ್ಯಕ್ಷರು ಭಾರತೀಯ ಕ್ರಿಕೆಟ್ ತಂಡದ ಮಾಜಿ ನಾಯಕ, ಭಾರತರತ್ನ ಸಚಿನ್ ತಂಡೂಲ್ಕರ್ ಮತ್ತು ಹಾಲೀ ನಾಯಕ ವಿರಾಟ್ ಕೊಹ್ಲಿಯನ್ನು ತಮ್ಮ ಭಾಷಣದಲ್ಲಿ ಉಲ್ಲೇಖಿಸಿದರು. ತುಂಬಿದ ಪ್ರೇಕ್ಷಕರಿಂದ ಇದಕ್ಕೆ ಭಾರೀ ಮೆಚ್ಚುಗೆ ವ್ಯಕ್ತವಾಯಿತು.

ಟ್ರಂಪ್ ಭಾಷಣ

ಟ್ರಂಪ್ ಭಾಷಣ

ಟ್ರಂಪ್ ತಮ್ಮ ಭಾಷಣದಲ್ಲಿ ಹೇಳಿದ್ದಿಷ್ಟು, "ನೀವು ಭಾರತೀಯರು ವಿಶ್ವದ ಅತ್ಯುತ್ತಮ ಕ್ರಿಕೆಟ್ ಆಟಗಾರರಿಗೆ ಸಚಿನ್ ತೆಂಡೂಲ್ಕರ್ ಅವರಿಂದ ಹಿಡಿದು ವಿರಾಟ್ ಕೊಹ್ಲಿಯವರೆಗೆ ಎಲ್ಲರನ್ನೂ ಹುರಿದುಂಬಿಸುತ್ತೀರಿ" ಎಂದು ಹೇಳಿದರು. ಇಲ್ಲಿ ಸಚಿನ್ ಎನ್ನುವ ಬದಲು ಸುಚಿನ್ ಎಂದು ತಪ್ಪಾಗಿ ಟ್ರಂಪ್ ಹೇಳಿದರು.

ಸಚಿನ್ ದಾಖಲೆ: ಏಕದಿನ ಕ್ರಿಕೆಟ್ ಇತಿಹಾಸದ ಮೊದಲ ದ್ವಿಶತಕಕ್ಕೆ ದಶಕದ ಸಂಭ್ರಮ

ಸಚಿನ್ ಮತ್ತು ಟ್ರಂಪ್

ಸಚಿನ್ ಮತ್ತು ಟ್ರಂಪ್

ತೆಂಡೂಲ್ಕರ್ ನನ್ನು ಸುಚಿನ್ ತಂಡೂಲ್ಕರ್ ಎಂದು ಟ್ರಂಪ್ ಉಲ್ಲೇಖಿಸಿದ್ದು, ಸಾಮಾಜಿಕ ತಾಣದಲ್ಲಿ ಈಗ ಆಹಾರದ ವಸ್ತುವಾಗಿದೆ. ಸಚಿನ್ ಹೆಸರನ್ನು ತಪ್ಪಾಗಿ ಹೇಳಿದ ಕಾರಣಕ್ಕೆ ನಾನಾ ರೀತಿಯಲ್ಲಿ ಟ್ವಿಟ್ಟರ್‌ನಲ್ಲಿ ತಮಾಷೆಯಾಡಲಾಗುತ್ತಿದೆ.

ಡಿ ಡಿ ಎಲ್ ಜೆ ಹಾಗೂ ಶೋಲೆ ಅಂತಹ ಕ್ಲಾಸಿಕ್ ಚಿತ್ರ

ಡಿ ಡಿ ಎಲ್ ಜೆ ಹಾಗೂ ಶೋಲೆ ಅಂತಹ ಕ್ಲಾಸಿಕ್ ಚಿತ್ರ

''ವರ್ಷಕ್ಕೆ 2000 ಸಿನಿಮಾಗಳನ್ನು ನಿರ್ಮಿಸುವ ದೇಶ ಭಾರತ. ಮ್ಯೂಸಿಕ್, ಡ್ಯಾನ್ಸ್, ರೋಮ್ಯಾನ್ಸ್ ಹೀಗೆ ಎಲ್ಲ ರೀತಿಯ ಖುಷಿ ಸಿನಿಮಾಗಳಿಂದ ಸಿಗುತ್ತೆ. ಡಿ ಡಿ ಎಲ್ ಜೆ ಹಾಗೂ ಶೋಲೆ ಅಂತಹ ಕ್ಲಾಸಿಕ್ ಚಿತ್ರಗಳನ್ನು ಎಲ್ಲ ಜನರು ಇಷ್ಟ ಪಡುತ್ತಾರೆ.'' ಎಂದು ಭಾರತೀಯ ಸಿನಿಮಾವನ್ನು ಟ್ರಂಪ್ ತಮ್ಮ ಭಾಷಣದಲ್ಲಿ ಉಲ್ಲೇಖಿಸಿದರು.

Story first published: Monday, February 24, 2020, 21:34 [IST]
Other articles published on Feb 24, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X