ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಆಮಿರ್‌ಗೆ ಸ್ಪಾಟ್‌ ಫಿಕ್ಸಿಂಗ್‌ ಒಪ್ಪಿಕೊಳ್ಳುವಂತೆ ಮಾಡಿದ್ದು ಯಾರು ಗೊತ್ತಾ?

Amir confessed to spot-fixing after Afridi slapped him: Abdul Razzaq

ಕರಾಚಿ, ಜೂನ್‌ 12: 2010ರಲ್ಲಿ ಪಾಕಿಸ್ತಾನ ತಂಡದ ಇಂಗ್ಲೆಂಡ್‌ ಪ್ರವಾಸದ ವೇಳೆ ಬೆಳೆಕಿಗೆ ಬಂದ ಸ್ಪಾಟ್‌ ಫಿಕ್ಸಿಂಗ್‌ ಹಗರಣ ಕ್ರಿಕೆಟ್‌ ಜಗತ್ತಿಗೇ ಶಾಕ್‌ ನೀಡಿತ್ತು. ಆಗ ತಂಡದ ಯುವ ವೇಗದ ಬೌಲರ್‌ 19 ವರ್ಷದವನಿದ್ದ ಮೊಹಮ್ಮದ್‌ ಆಮಿರ್‌ ಕೂಡ ಈ ಫಿಕ್ಸಿಂಗ್‌ ಸುಳಿಗೆ ಸಿಲುಕಿದ್ದರು.

ವಿಶ್ವಕಪ್‌ ವೇಳಾಪಟ್ಟಿ / ಮುಖಾಮುಖಿ ದಾಖಲೆಗಳು / ಅಂಕಪಟ್ಟಿ

ಅಂದಿನ ಪಾಕಿಸ್ತಾನ ಏಕದಿನ ಕ್ರಿಕೆಟ್‌ ತಂಡದ ನಾಯಕ ಶಾಹಿದ್‌ ಅಫ್ರಿದಿ ಕಾಪಾಳಮೋಕ್ಷ ಮಾಡಿದ ಬಳಿಕವಷ್ಟೇ ಮೊಹಮ್ಮದ್‌ ಆಮಿರ್‌ ಸ್ಪಾಟ್‌ ಫಿಕ್ಸಿಂಗ್‌ ಕುರಿತಾಗಿ ತಪ್ಪೊಪ್ಪಿಗೆ ನೀಡಿದ್ದರು. ಆದರೆ, ಈದಕ್ಕೂ ಮುಂಚಿನಿಂದಲೂ ಸಲ್ಮಾನ್‌ ಬಟ್‌ ಸ್ಪಾಟ್‌ ಫಿಕ್ಸಿಂಗ್‌ನಲ್ಲಿ ಭಾಗಿಯಾಗಿದ್ದರು ಎಂದು ಪಾಕಿಸ್ತಾನ ತಂಡದ ಮಾಜಿ ಆಲ್‌ರೌಂಡರ್‌ ಅಬ್ದುಲ್‌ ರಝಾಕ್‌ ಬಾಯ್ಬಿಟ್ಟಿದ್ದಾರೆ.

ವಿಶ್ವಕಪ್‌: ಶಿಖರ್‌ ಧವನ್‌ ಇಂಜುರಿ ಬಗ್ಗೆ ಬಿಸಿಸಿಐ ಹೇಳೋದೇನು?ವಿಶ್ವಕಪ್‌: ಶಿಖರ್‌ ಧವನ್‌ ಇಂಜುರಿ ಬಗ್ಗೆ ಬಿಸಿಸಿಐ ಹೇಳೋದೇನು?

ಪಾಕಿಸ್ತಾನ ಕ್ರಿಕೆಟ್‌ಗೆ ಕಪ್ಪು ಚುಕ್ಕೆ ತಂದ ಸ್ಪಾಟ್‌ ಫಿಕ್ಸಿಂಗ್‌ ಹಗರಣ ಕುರಿತಾಗಿ ಟಿ.ವಿ ಚಾನಲ್‌ ಒಂದರ ಸಂದರ್ಶನದಲ್ಲಿ ಮಾತನಾಡುವಾದ ರಝಾಕ್‌ ಈ ವಿಚಾರ ಬಹಿರಂಗ ಪಡಿಸಿದ್ದಾರೆ.

ದಾದಾ, ತೆಂಡೂಲ್ಕರ್‌ ಸಾಲಿಗೆ ಸೇರಿದ ಶತಕ ವೀರ ಶಿಖರ್‌ ಧವನ್‌!ದಾದಾ, ತೆಂಡೂಲ್ಕರ್‌ ಸಾಲಿಗೆ ಸೇರಿದ ಶತಕ ವೀರ ಶಿಖರ್‌ ಧವನ್‌!

"ಅಫ್ರಿದಿ ನನ್ನು ಕೊಠಡಿಯಿಂದ ಆಚೆ ಹೋಗಲು ಹೇಳಿದರು. ಬಳಿಕ ಕಪಾಳಕ್ಕೆ ಬಿಗಿದ ಶಬ್ದವಾಯಿತು. ಇದಾದ ನಂತರ ಆಮಿರ್‌ ಎಲ್ಲಾ ಸತ್ಯಾಂಶವನ್ನು ಬಾಯ್ಬಿಟ್ಟಿದ್ದರು,'' ಎಂದು ರಝಾಕ್‌ ಹೇಳಿದ್ದಾರೆ. ಇದೇ ವೇಳೆ ಸ್ಪಾಟ್‌ ಫಿಕ್ಸಿಂಗ್‌ ಹಗರಣದಲ್ಲಿ ಪಾಕಿಸ್ತಾನ ಕ್ರಿಕೆಟ್‌ನ ಹೆಸರು ಹಾಳಾಗಲು ಪಾಕಿಸ್ತಾನ ಕ್ರಿಕೆಟ್‌ ಸಂಸ್ಥೆಯೇ ಕಾರಣ ಎಂದು ರಝಾಕ್‌ ಆರೋಪಿಸಿದ್ದಾರೆ.

 ವಿಶ್ವಕಪ್‌: ಇಂಡೊ-ಪಾಕ್‌ ಕದನಕ್ಕೂ ಮುನ್ನ ಭಾರತವನ್ನು ಕೆಣಕಿದ ಪಾಕಿಸ್ತಾನ! ವಿಶ್ವಕಪ್‌: ಇಂಡೊ-ಪಾಕ್‌ ಕದನಕ್ಕೂ ಮುನ್ನ ಭಾರತವನ್ನು ಕೆಣಕಿದ ಪಾಕಿಸ್ತಾನ!

"ತನ್ನ ಕಾರ್ಯಕ್ಷಮತೆಯನ್ನು ಸಾಬೀತು ಪಡಿಸಲು ಐಸಿಸಿ ಮೊರೆ ಹೋಗುವ ಬದಲಾಗಿ ಪಿಸಿಬಿ ಮೂವರು ಆಟಗಾರರನ್ನು ತನ್ನ ತೆಕ್ಕೆಗೆ ತೆಗೆದುಕೊಂಡು ವಿಚಾರಣೆ ನಡೆಸಿ, ತಪ್ಪಿತಸ್ಥರ ವಿರುದ್ಧ ನಿಷೇಧ ಶಿಕ್ಷೆ ಜಾರಿಗೊಳಿಸಬಹುದಿತ್ತು. ಈ ರೀತಿ ಮಾಡದೇ ಹೋದ ಕಾರಣ ಪಾಕಿಸ್ತಾನ ಕ್ರಿಕೆಟ್‌ನ ಮರ್ಯಾದೆ ವಿಶ್ವವ್ಯಾಪಿ ಹರಾಜಾಗುವಂತಾಯಿತು,'' ಎಂದಿದ್ದಾರೆ.

ಸಲ್ಮಾನ್‌ ಮೊದಲಿನಿಂದಲೂ ಭಾಗಿಯಾಗಿದ್ದರು

ಸಲ್ಮಾನ್‌ ಮೊದಲಿನಿಂದಲೂ ಭಾಗಿಯಾಗಿದ್ದರು

ಇದೇ ವೇಳೆ 2010ರಲ್ಲಿ ಸ್ಪಾಟ್‌ ಫಿಕ್ಸಿಂಗ್‌ ಬೆಳಕಿಗೆ ಬರುವ ಮೊದಲೇ ಹಲವು ಸಮಯದಿಂದ ಸಲ್ಮಾನ್‌ ಬಟ್‌ ಬೇಕೆಂದಲೇ ಔಟ್‌ ಆಗುವುದು ಮತ್ತು ಬೇಕೆಂದೇ ಡಾಟ್‌ ಬಾಲ್‌ಗಳನ್ನು ಆಡುವ ಕಳ್ಳಾಟ ಆಡುತ್ತಿದ್ದರು ಎಂದು ರಝಾಕ್‌ ವಿವರಿಸಿದ್ದಾರೆ. "ಈ ವಿಚಾರವಾಗಿ ನಾನು ನಾಯಕ ಅಫ್ರಿದಿ ಬಳಿ ಕಳವಳ ವ್ಯಕ್ತ ಪಡಿಸಿದ್ದೆ, ಆದರೆ ಇದು ನಿನ್ನ ಭ್ರಮೆ ಎಲ್ಲವೂ ಸರಿ ಇದೆ ಎಂದು ಅಫ್ರಿದಿ ನಿರ್ಲಕ್ಷಿಸಿದ್ದರು. ವೆಸ್ಟ್‌ ಇಂಡೀಸ್‌ನಲ್ಲಿ ನಡೆದ ಟಿ20 ವಿಶ್ವಕಪ್‌ ಟೂರ್ನಿ ವೇಳೆ ಸಲ್ಮಾನ್‌ ಬಟ್‌ ಜೊತೆಗೆ ಬ್ಯಾಟಿಂಗ್‌ ಮಾಡುವಾಗ ಅವರು ಬೇಕೆಂದೇ ತಂಡವನ್ನು ಸೋಲುವಂತೆ ಮಾಡುತ್ತಿದ್ದಾರೆಂದು ನನಗೆ ಖಾತ್ರಿಯಾಗಿತ್ತು,'' ಎಂದು ರಝಾಕ್‌ ಬಟ್‌ ಅವರ ಕಳ್ಳಾಟವನ್ನು ಬಿಚ್ಚಿಟ್ಟಿದ್ದಾರೆ.

ಸ್ಟ್ರೈಕ್‌ ನೀಡುತ್ತಿರಲಿಲ್ಲ

ಸ್ಟ್ರೈಕ್‌ ನೀಡುತ್ತಿರಲಿಲ್ಲ

ಟಿ20 ವಿಶ್ವಕಪ್‌ ಪಂದ್ಯ ವೇಳೆ ಸ್ಟ್ರೈಕ್‌ ಬದಲಾಯಿಸಲು ಒಂದು ರನ್‌ ತೆಗೆದುಕೊಳ್ಳುವಂತೆ ಹೇಳಿದರೂ ಸಲ್ಮಾನ್‌ ಬಟ್‌ ಸಿಂಗಲ್‌ ತೆಗೆದುಕೊಳ್ಳುತ್ತಿರಲಿಲ್ಲ ತಮ್ಮ ಯಾವುದೇ ಸಲಹೆಗೆ ಅವರು ಕಿವಿ ಕೊಡುತ್ತಿರಲಿಲ್ಲ ಎಂದು ರಝಾಕ್‌ ಹೇಳಿದ್ದಾರೆ. "ಸ್ಟ್ರೈಕ್‌ ಬದಲಾಯಿಸುವಂತೆ ಹೇಳಿದಾಗ ಅದನ್ನು ಅವರು ನಿರಾಕರಿಸಿದಾಗ ನನಗೆ ಆಶ್ಚರ್ಯವಾಗಿತ್ತು. ಅವರ ಒಳಮರ್ಮವೇನೆಂಬುದು ನನಗೆ ಅರ್ಥವಾದ ಬಳಿಕ ಸ್ಟ್ರೈಕ್‌ ನೀಡುವಂತೆ ಗಟ್ಟಿಯಾಗಿ ಹೇಳಿದ್ದೆ. ಆದರೂ ಪ್ರತಿ ಓವರ್‌ನಲ್ಲಿ 2ರಿಂದ 3 ಎಸೆತಗಳಲ್ಲಿ ಉದ್ದೇಶಪೂರ್ವಕವಾಗಿ ಡಾಟ್‌ ಬಾಲ್‌ ಆಡಿ ಬಳಿಕ ಸ್ಟ್ರೈಕ್‌ ನೀಡುತ್ತಿದ್ದರು. ಇದರಿಂದ ಬೇಸತ್ತು ನನ್ನ ಏಕಾಗ್ರತೆ ಭಂಗವಾಗಿ ವಿಕೆಟ್‌ ಒಪ್ಪಿಸಿದ್ದೆ,'' ಎಂದು ರಝಾಕ್‌ ಹೇಳಿಕೊಂಡಿದ್ದಾರೆ.

5 ವರ್ಷ ನಿಷೇಧ ಶಿಕ್ಷೆ

5 ವರ್ಷ ನಿಷೇಧ ಶಿಕ್ಷೆ

ಸ್ಪಾಟ್‌ ಫಿಕ್ಸಿಂಗ್‌ನಲ್ಲಿ ಭಾಗಿಯಾಗಿದ್ದ ಸಲ್ಮಾನ್‌ ಬಟ್‌, ಮೊಹಮ್ಮದ್‌ ಆಮಿರ್‌ ಮತ್ತು ಮೊಹಮ್ಮದ್‌ ಆಸಿಫ್‌ ಮೂವರನ್ನು 2010ರಲ್ಲಿ ಮೊದಲಿಗೆ ಅಮಾನತ್ತು ಗೊಳಿಸಲಾಗಿತ್ತು. ಬಳಿಕ ಐಸಿಸಿಯ ಭ್ರಷ್ಟಾಚಾರ ವಿರೋಧಿ ನ್ಯಾಯಮಂಡಳಿ ಮೂವರ ವಿರುದ್ಧ 2011ರಲ್ಲಿ 5 ವರ್ಷಗಳ ನಿಷೇಧದ ಕಠಿಣ ಶಿಕ್ಷೆ ಜಾರಿಗೊಳಿಸಿತ್ತು. ಶಿಕ್ಷೆ ಪೂರೈಸಿ ಈ ಮೂವರು ಆಟಗಾರರು ಇದೀಗ ಕ್ರಿಕೆಟ್‌ ವೃತ್ತಿಗೆ ಮರಳಿದ್ದಾರೆ. ಆದರೆ, ಕೇವಲ ಮೊಹಮ್ಮದ್‌ ಆಮಿರ್‌ಗೆ ಮಾತ್ರವೇ ಪಾಕಿಸ್ತಾನ ಕ್ರಿಕೆಟ್‌ ತಂಡಲ್ಲಿ ಮರಳಿ ಆಡಲು ಅವಕಾಶ ಮಾಡಿಕೊಡಲಾಗಿದ್ದು, ಪ್ರಸಕ್ತ ಚಾಲ್ತಿಯಲ್ಲಿರುವ ಏಕದಿನ ಕ್ರಿಕೆಟ್‌ ವಿಶ್ವಕಪ್‌ನಲ್ಲಿ ಆಡುತ್ತಿದ್ದಾರೆ.

ಮೊಹಮ್ಮದ್‌ ಆಮಿರ್‌ ಒಡಿಐ ಸಾಧನೆ

ಮೊಹಮ್ಮದ್‌ ಆಮಿರ್‌ ಒಡಿಐ ಸಾಧನೆ

53 ಪಂದ್ಯ
65 ವಿಕೆಟ್‌
4/28 ಶ್ರೇಷ್ಠ ಬೌಲಿಂಗ್‌
31.75 ಸರಾಸರಿ
4.82 ಎಕಾನಮಿ

Story first published: Wednesday, June 12, 2019, 17:41 [IST]
Other articles published on Jun 12, 2019
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X