ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಎಟಿಕೆ ಜಯಕ್ಕೆ ಕಡಿವಾಣ ಹಾಕಲು ಜೆಮ್ಷೆಡ್ಪುರ ಸಜ್ಜು

By Isl Media
amshedpur revival hopes meet ATKs aim for top spot

ಜೆಮ್ಷೆಡ್ಪುರ, ಫೆಬ್ರವರಿ 1: ಜೆಆರ್ ಡಿ ಟಾಟಾ ಅಂಗಣದಲ್ಲಿ ಭಾನುವಾರ ನಡೆಯಲಿರುವ ಹೀರೋ ಇಂಡಿಯನ್ ಸೂಪರ್ ಲೀಗ್ ಪಂದ್ಯದಲ್ಲಿ ಜೆಮ್ಷೆಡ್ಪುರ ಎಫ್ ಸಿ ಬಲಿಷ್ಠ ಎಟಿಕೆ ತಂಡದ ಅಗ್ರ ಸ್ಥಾನದ ಗುರಿಗೆ ತಡೆಯೊಡ್ಡುವ ಯೋಜನೆ ಹಾಕಿ ಕೊಂಡಿದೆ. ಕಳೆದ ಐದು ಪಂದ್ಯಗಳಲ್ಲಿ ನಾಲ್ಕು ಸೋಲು ಅನುಭವಿಸಿರುವ ಜೆಮ್ಷೆಡ್ಪುರ ತಂಡ ಉಳಿದಿರುವ ಐದು ಪಂದ್ಯಗಳಲ್ಲಿ ಸಾಧ್ಯವಾದಷ್ಟು ಜಯ ಗಳಿಸಿ ಪ್ನೇ ಆಫ್ ಆಸೆಯನ್ನು ಜೀವಂತವಾಗಿರಿಸಿಕೊಳ್ಳುವ ಗುರಿ ಹೊಂದಿದೆ.

ಐಎಸ್‌ಎಲ್ 2019-20: ಮುಂಬೈ ಸಿಟಿ ತಂಡಕ್ಕೆ ಅಮೂಲ್ಯ ಜಯಐಎಸ್‌ಎಲ್ 2019-20: ಮುಂಬೈ ಸಿಟಿ ತಂಡಕ್ಕೆ ಅಮೂಲ್ಯ ಜಯ

''ಹೌದು, ನಾವು ಈಗಲೂ ಪ್ನೇ ಆಫ್ ಹಂತವನ್ನು ತಲಪುವ ಗುರಿ ಹೊಂದಿದ್ದೇವೆ. ನಾಳೆಯ ಪಂದ್ಯ ಋತುವಿನಲ್ಲೇ ಅತ್ಯಂತ ಪ್ರಮುಖ ಪಂದ್ಯವೆನಿಸಲಿದೆ. ಏಕೆಂದರೆ ನಾವು ಲೀಗ್ ನ ಬಲಿಷ್ಠ ತಂಡದ ವಿರುದ್ಧ ಆಡಲಿದ್ದೇವೆ. ಇದೊಂದು ದೊಡ್ಡ ಸವಾಲು. ಬಹುಶಃ ಇದು ನಾಲ್ಕನೇ ಸ್ಥಾನಕ್ಕೆ ನಡೆಸುವ ನಮ್ಮ ಅಂತಿಮ ಹೋರಾಟವಾಗಿರಬಹುದು ಎಂದೆನಿಸುತ್ತಿದೆ,'' ಎಂದು ಕೋಚ್ ಇರಿಯಾಂಡೋ ಹೇಳಿದ್ದಾರೆ.
ಗಾಯದಿಂದ ಚೇತರಿಸಿಕೊಂಡು ಬಂದ ಸರ್ಇಗೋ ಕ್ಯಾಸ್ಟಲ್ ಆಡಿರುವ ಎರಡು ಪಂದ್ಯಗಳಲ್ಲಿ ಎರಡು ಗೋಲು ಗಳಿಸಿರುತ್ತಾರೆ.

ತಿರಿ ಅವರ ಅನುಪಸ್ಥಿತಿಯಲ್ಲಿ ತಂಡಕ್ಕೆ ಮಿಡ್ ಫೀಲ್ಡ್ ವಿಭಾಗದಲ್ಲಿ ಸಮರ್ಥ ಆಟಗಾರರಿಲ್ಲದಿರುವುದು ಚಿಂತೆಯ ವಿಚಾರವಾಗಿದೆ. ಚೆನ್ನೈ ವಿರುದ್ಧ 4-1 ಅಂತರದಲ್ಲಿ ಸೋತ ಬಳಿಕ ಟಾಟಾ ಪಡೆ ಮನೆಯಂಗಣದಲ್ಲಿ ಉತ್ತಮ ಪ್ರದರ್ಶನ ತೋರುವ ಗುರಿ ಹೊಂದಿದೆ. ಉತ್ತಮ ರೀತಿಯ ಆರಂಭ ಕಂಡಿದ್ದ ಜೆಮ್ಷೆಡ್ಪುರ ಪರ ಫಾರೂಕ್ ಚೌಧರಿ ಸ್ಥಿರ ಪ್ರದರ್ಶನ ತೋರುವಲ್ಲಿ ವಿಫಲರಾಗಿದ್ದು, ಇದುವರೆಗೂ ತಮ್ಮ ಹೆಸರಿನ ಮುಂದೆ ಕೇವಲ ಒಂದು ಗೋಲನ್ನು ದಾಖಲಿಸಿದ್ದಾರೆ.
ಈಗಾಲೇ ಗೋವಾ ಮತ್ತು ಬೆಂಗಳುರು ಜತೆಯಲ್ಲಿ ಟಾಪ್ ನಾಲ್ಕರಲ್ಲಿ ಸ್ಥಾನ ಪಡೆದಿರುವ ಎಟಿಕೆ ಇಲ್ಲಿ ಜಯ ಗಳಿಸುವ ಮೂಲಕ ಅಗ್ರ ಸ್ಥಾನಕ್ಕೇರಿ ಎಎಫ್ ಸಿ ಚಾಂಪಿಯನ್ಸ್ ಲೀಗ್ ಗೆ ಅರ್ಹತೆ ಪಡೆಯುವ ಗುರಿ ಹೊಂದಿದೆ.

''ಚಾಂಪಿಯನ್ಷಿಪ್ ನಲ್ಲಿ ಕೊನೆಯ ಪಂದ್ಯಗಳಲ್ಲಿ ಸೀಮಿತವಾದ ಒತ್ತಡ ಇರುವುದರಿಂದ ಪಂದ್ಯ ಆಡುವುದು ಕಠಿಣವೆನಿಸುತ್ತದೆ. ಕೆಲವು ಸಂದರ್ಭಗಳಲ್ಲಿ ಒತ್ತಡ ಫುಟ್ಯಾಲ್ ಗೆ ಉತ್ತಮವಾದುದಲ್ಲ. ನಮಗೆ ಚಾಂಪಿಯನ್ಷಿಪ್ ನಲ್ಲಿ ಕೇವಲ ನಾಲ್ಕು ಪಂದ್ಯಗಳು ಉಳಿದಿವೆ. ನಾವು ನಮ್ಮ ಗಗಿರಿಯ ಕಡೆಗೆ ಹೆಚ್ಚಿನ ಗಮನ ಹರಿಸಲಿದ್ದೇವೆ, '' ಎಂದು ಎಟಿಕೆ ಕೋಚ್ ಆ್ಯಂಟೋನಿಯೊ ಹಬ್ಬಾಸ್ ಹೇಳಿದ್ದಾರೆ.
ಪ್ರವಾಸಿ ತಂಡಕ್ಕೆ ಸಂತಸ ವಿಚಾರವೆಂದರೆ ಗಾಯಗೊಂಡಿದ್ದ ಡೇವಿಎ್ ವಿಲಿಯಮ್ಸ್ ಮತ್ತೆ ತಂಡವನ್ನು ಸೇರಿಕೊಳ್ಳಲಿದ್ದಾರೆ. ಹಬ್ಬಾಸ್ ಪಡೆ ಖುಷಿ ಪಡಬೇಕಾದ ಸಂಗತಿಯೆಂದರೆ ಇದುವರೆಗೂ ಎದುರಾಳಿ ತಂಡಕ್ಕೆ ನೀಡಿದ್ದು ಕೇವಲ 10 ಗೋಲುಗಳ, ಇದು ತಂಡವೊಂದು ನೀಡಿದ ಎರಡನೇ ಕಡಿಮೆ ಗೋಲು ಎನಿಸಿದೆ. ಇದರಲ್ಲಿ ಪ್ರೀತಂ ಕೊತಾಲ್, ಆಗಸ್ ಮತ್ತು ಸುಮಿತ್ ರತಿ ಅವರ ಪಾತ್ರ ಪ್ರಮುಖವಾಗಿದೆ. ಗೋವಾ ತಂಡ 32 ಗೋಲುಗಳನ್ನು ಗಳಿಸಿ ಅಗ್ರ ಸ್ಥಾನದಲ್ಲಿದ್ದರೆ 24 ಗೋಲುಗಳನ್ನು ಗಳಿಸಿರುವ ಗೋವಾ ಎರಡನೇ ಸ್ಥಾನದಲ್ಲಿದೆ.

Story first published: Saturday, February 1, 2020, 21:34 [IST]
Other articles published on Feb 1, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X