ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

'ಆತ ಅದ್ಭುತ ಬ್ಯಾಟ್ಸ್‌ಮನ್': ತನ್ನ ನೆಚ್ಚಿನ ಕ್ರಿಕೆಟಿಗನ ಹೆಸರಿಸಿದ ಡೇಲ್ ಸ್ಟೇನ್

‘An incredible batter’: Dale Steyn names his favourite cricketer

ಕೇಪ್‌ಟೌನ್, ಮಾರ್ಚ್ 20: ದಕ್ಷಿಣ ಆಫ್ರಿಕಾ ಕ್ರಿಕೆಟ್‌ ತಂಡದ ಮಾರಕ ವೇಗಿ ಡೇಲ್ ಸ್ಟೇನ್ ವಿಶ್ವದ ಅತ್ಯುತ್ತಮ ಬೌಲರ್‌ಗಳಲ್ಲಿ ಗುರುತಿಸಿಕೊಂಡವರು. ಗಾಯದ ಸಮಸ್ಯೆಯಿಂದ ದೀರ್ಘಕಾಲ ಅನಿವಾರ್ಯವಾಗಿ ದಕ್ಷಿಣ ಆಫ್ರಿಕಾ ರಾಷ್ಟ್ರೀಯ ತಂಡದಿಂದ ಉಳಿದಿದ್ದ ಸ್ಟೇನ್ ಇದೀಗ ಮತ್ತೆ ಚೇತರಿಸಿಕೊಂಡು ಮೈದಾನಕ್ಕಿಳಿದಿದ್ದಾರೆ. 2004ರಲ್ಲಿ ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಪಂದ್ಯದ ಮೂಲಕ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಪಾದಾರ್ಪಣೆ ಮಾಡಿದ್ದ ಡೇಲ್ ಸ್ಟೇನ್, ಕಳೆದ ವರ್ಷ ಟೆಸ್ಟ್‌ಗೆ ನಿವೃತ್ತಿ ಘೋಷಿಸಿದ್ದರು.

ಏಕದಿನದಲ್ಲಿ 264 : ರೋಹಿತ್ ಶರ್ಮಾ ದಾಖಲೆ ಮುರಿಯುವ ಸಾಧ್ಯತೆಯಿರುವ 5 ಆಟಗಾರರುಏಕದಿನದಲ್ಲಿ 264 : ರೋಹಿತ್ ಶರ್ಮಾ ದಾಖಲೆ ಮುರಿಯುವ ಸಾಧ್ಯತೆಯಿರುವ 5 ಆಟಗಾರರು

ಕಳೆದ ವರ್ಷ (2019ರಲ್ಲಿ) ಶ್ರೀಲಂಕಾ ವಿರುದ್ಧ ಕಡೇಯ ಟೆಸ್ಟ್ ಪಂದ್ಯವನ್ನಾಡಿ, ಟೆಸ್ಟ್‌ ಕ್ರಿಕೆಟ್‌ಗೆ ವಿದಾಯ ಘೋಷಿಸಿರುವ ಬಲಗೈ ವೇಗಿ ಡೇಲ್ ಸ್ಟೇನ್ 171 ಟೆಸ್ಟ್ ಇನ್ನಿಂಗ್ಸ್‌ಗಳಲ್ಲಿ 439 ವಿಕೆಟ್‌ ದಾಖಲೆ ಹೊಂದಿದ್ದಾರೆ.

ಅತಿಯಾಳ ಕಾಲೆಳೆದ ಕೆಎಲ್ ರಾಹುಲ್, ಡೇಟಿಂಗ್ ಗುಸುಗುಸುಗೆ ರೆಕ್ಕೆಪುಕ್ಕ!ಅತಿಯಾಳ ಕಾಲೆಳೆದ ಕೆಎಲ್ ರಾಹುಲ್, ಡೇಟಿಂಗ್ ಗುಸುಗುಸುಗೆ ರೆಕ್ಕೆಪುಕ್ಕ!

ಅದ್ಭುತ ಬೌಲಿಂಗ್‌ಗಾಗಿ ಗಮನ ಸೆಳೆಯುವ ಡೇಲ್‌ ಸ್ಟೇನ್, ತನ್ನ ನೆಚ್ಚಿನ ಸಾರ್ವಕಾಲಿಕ ಕ್ರಿಕೆಟರ್ ಯಾರೆಂದು ಹೆಸರಿಸಿದ್ದಾರೆ.

ವಿರಾಟ್‌ ಕೊಹ್ಲಿ ಅಚ್ಚುಮೆಚ್ಚು

ವಿರಾಟ್‌ ಕೊಹ್ಲಿ ಅಚ್ಚುಮೆಚ್ಚು

ಇಂಡಿಯನ್ ಪ್ರೀಮಿಯರ್ ಲೀಗ್‌ (ಐಪಿಎಲ್‌)ನಲ್ಲಿ ವಿರಾಟ್ ಕೊಹ್ಲಿ ನಾಯಕತ್ವದ ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ತಂಡದಲ್ಲಿ ಆಡುವ ಡೇಲ್ ಸ್ಟೇನ್‌ಗೆ ಟೀಮ್ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಅಂದರೆ ಅಚ್ಚುಮೆಚ್ಚು. ಆದರೆ ಸುದ್ದಿಗಾರ ಪ್ರಶ್ನೆಗೆ, ಕೊಹ್ಲಿ ತನ್ನ ನೆಚ್ಚಿನ ಆಟಗಾರನೆಂದು ಕೊಹ್ಲಿಯನ್ನು ಹೆಸರಿಸಿಲ್ಲ.

ಆತನೊಬ್ಬ ಅದ್ಭುತ ಬ್ಯಾಟ್ಸ್‌ಮನ್

ಆತನೊಬ್ಬ ಅದ್ಭುತ ಬ್ಯಾಟ್ಸ್‌ಮನ್

ನಿಮ್ಮ ನೆಚ್ಚಿನ ಸಾರ್ವಕಾಲಿಕ ಬ್ಯಾಟ್ಸ್‌ಮನ್ ಯಾರು? ಎಂಬ ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದ ಡೇಲ್‌ ಸ್ಟೇನ್, 'ಬಹುಶಃ ಎಬಿ ಡಿವಿಲಿಯರ್ಸ್ ನನ್ನ ಫೇವರಿಟ್ ಕ್ರಿಕೆಟರ್, ಆತನೊಬ್ಬ ಅದ್ಭುತ ಬ್ಯಾಟ್ಸ್‌ಮನ್ ಮತ್ತು ಒಬ್ಬ ಒಳ್ಳೆಯ ಗೆಳೆಯ,' ಎಂದು ಉತ್ತರಿಸಿದ್ದಾರೆ.

ಐಪಿಎಲ್‌ನಲ್ಲಿ ಇಬ್ಬರೂ ಆರ್‌ಸಿಬಿ

ಐಪಿಎಲ್‌ನಲ್ಲಿ ಇಬ್ಬರೂ ಆರ್‌ಸಿಬಿ

ದಕ್ಷಿಣ ಆಫ್ರಿಕಾ ತಂಡದ ಅನುಭವಿ, ಸ್ಫೋಟಕ ಬ್ಯಾಟ್ಸ್‌ಮನ್ ಎಬಿ ಡಿವಿಲಿಯರ್ಸ್ ಮತ್ತು ಅನುಭವಿ ವೇಗಿ ಡೇಲ್ ಸ್ಟೇನ್ ಇಬ್ಬರೂ ಐಪಿಎಲ್‌ನಲ್ಲಿ ಆರ್‌ಸಿಬಿ ತಂಡದಲ್ಲೇ ಆಡುತ್ತಿರುವುದು ವಿಶೇಷ. ಮಾರ್ಚ್ 29ರಿಂದ ನಡೆಬೇಕಿದ್ದ ಈ ಬಾರಿಯ ಐಪಿಎಲ್‌ ಟೂರ್ನಿ ಏಪ್ರಿಲ್ 15ರ ಬಳಿಕ ಮುಂದೂಡಲ್ಪಟ್ಟಿದೆ.

ಕ್ವಿಂಟನ್ ಡಿ ಕಾಕ್ ಬಗ್ಗೆ ಮೆಚ್ಚುಗೆ

ಕ್ವಿಂಟನ್ ಡಿ ಕಾಕ್ ಬಗ್ಗೆ ಮೆಚ್ಚುಗೆ

ಇಎಸ್‌ಪಿಎನ್ ಕ್ರಿಕ್ ಇನ್ಫೋ ಜೊತೆ ಮಾತನಾಡಿರುವ ಸ್ಟೇನ್, 'ಕ್ವಿಂಟನ್ ಡಿ ಕಾಕ್ ಅವರಂತಹ ವ್ಯಕ್ತಿಯೊಂದಿಗೆ ಸಂಪರ್ಕದಲ್ಲಿರಲು ನಾನು ಇಷ್ಟಪಡುತ್ತೇನೆ,' ಎಂದು ದಕ್ಷಿಣ ಆಫ್ರಿಕಾ ತಂಡದ ಈಗಿನ ನಾಯಕ ಡಿ ಕಾಕ್ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಸ್ಟೇನ್ ಏಕದಿನದಲ್ಲಿ 124 ಇನ್ನಿಂಗ್ಸ್‌ಗಳಲ್ಲಿ 196 ವಿಕೆಟ್‌ಗಳು, 47 ಟಿ20ಐ ಇನ್ನಿಂಗ್ಸ್‌ಗಳಲ್ಲಿ 64 ವಿಕೆಟ್‌ಗಳನ್ನು ಪಡೆದಿದ್ದಾರೆ.

Story first published: Friday, March 20, 2020, 19:32 [IST]
Other articles published on Mar 20, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X