ಟೀಮ್ ಇಂಡಿಯಾದ 6 ಆಟಗಾರರಿಗೆ ಆನಂದ್ ಮಹೀಂದ್ರರಿಂದ ಭರ್ಜರಿ ಗಿಫ್ಟ್!

ನವದೆಹಲಿ: ಟೀಮ್ ಇಂಡಿಯಾದ ಆರು ಯುವ ಆಟಗಾರರಿಗೆ ಭಾರತದ ಉದ್ಯಮಿ, ಮಹೀಂದ್ರ ಗ್ರೂಪ್‌ನ ಅಧ್ಯಕ್ಷ ಆನಂದ್ ಮಹೀಂದ್ರ ಅವರು ಭರ್ಜರಿ ಗಿಫ್ಟ್‌ ಘೋಷಿಸಿದ್ದಾರೆ. ಇತ್ತೀಚೆಗಷ್ಟೇ ಮುಕ್ತಾಯಗೊಂಡ ಭಾರತ vs ಆಸ್ಟ್ರೇಲಿಯಾ ಸರಣಿಯಲ್ಲಿ ಅದ್ಭುತ ಪ್ರದರ್ಶನ ನೀಡಿದ ಭಾರತೀಯ ಆಟಗಾರರಿಗೆ ಪ್ರೋತ್ಸಾಹಿಸುವ ಸಲುವಾಗಿ ಆನಂದ್ ದುಬಾರಿ ಗಿಫ್ಟ್ ಘೋಷಿಸಿದ್ದಾರೆ.

ಭಾರತ vs ಆಸೀಸ್: ಕಾಕತಾಳೀಯ, ಕುತೂಹಲಕಾರಿ ಅಂಕಿ-ಅಂಶಗಳು!

ಆಸ್ಟ್ರೇಲಿಯಾ ವಿರುದ್ಧದ ನಾಲ್ಕು ಪಂದ್ಯಗಳ ಟೆಸ್ಟ್‌ ಸರಣಿಯಲ್ಲಿ ಭಾರತ 2-1ರ ಜಯ ಗಳಿಸಿ ದಾಖಲೆ ನಿರ್ಮಿಸಿತ್ತು. ಭಾರತದ ಅಪರೂಪದ ಗೆಲುವಿಗೆ ಯುವ ಆಟಗಾರರು ಕಾರಣರಾಗಿದ್ದರು. ಅವರನ್ನು ಉಡುಗೊರೆಗಾಗಿ ಆನಂದ್ ಮಹೀಂದ್ರ ಹೆಸರಿಸಿದ್ದಾರೆ.

ಯುವರಾಜ್ ಸಿಂಗ್ ಕೋಚಿಂಗ್ ಬಹಳ ಉಪಯೋಗಕ್ಕೆ ಬಂತು: ಗಿಲ್

ಆರು ಯುವ ಆಟಗಾರರನ್ನು ಹೆಸರಿಸಿರುವ ಆನಂದ್, ಈ ಆಟಗಾರರಿಗೆಲ್ಲ ಮಹೀಂದ್ರ ಕಂಪನಿಯ ನೂತನ ಥಾರ್ ಎಸ್‌ಯುವಿಯನ್ನು ಉಡುಗೊರೆಯಾಗಿ ನೀಡುವುದಾಗಿ ಘೋಷಿಸಿದ್ದಾರೆ.

ದುಬಾರಿ ಜೀಪ್ ಕೊಡುಗೆ ಯಾಕೆ?

ದುಬಾರಿ ಜೀಪ್ ಕೊಡುಗೆ ಯಾಕೆ?

ಆಸ್ಟ್ರೇಲಿಯಾಕ್ಕೆ ಪ್ರವಾಸ ಹೋಗಿದ್ದ ಭಾರತ ತಂಡ 2018-2019ರಲ್ಲೂ ಐತಿಹಾಸಿಕ ಬಾರ್ಡರ್ ಗವಾಸ್ಕರ್ ಟ್ರೋಫಿ ಗೆದ್ದು ಮಿನುಗಿತ್ತು. ಆದರೆ ಆಗ ಆಸ್ಟ್ರೇಲಿಯಾ ತಂಡದಲ್ಲಿ ಸ್ವೀವ್ ಸ್ಮಿತ್ ಮತ್ತು ಡೇವಿಡ್ ವಾರ್ನರ್ ಇರಲಿಲ್ಲ. ಚೆಂಡು ವಿರೂಪ ಪ್ರಕರಣದಲ್ಲಿ ನಿಷೇಧಕ್ಕೀಡಾಗಿದ್ದರು. ಈ ಬಾರಿ ಸ್ಮಿತ್-ವಾರ್ನರ್ ಇದ್ದೂ ಭಾರತ ಅದೇ ಟೆಸ್ಟ್ ಸರಣಿ ಮತ್ತೆ ಗೆದ್ದಿರುವುದಷ್ಟೇ ಅಲ್ಲ, ಈ ಐತಿಹಾಸಿಕ ಗೆಲುವು ತಂದಿದ್ದು ಭಾರತೀಯ ಯುವ ಆಟಗಾರರು ಅನ್ನೋದು ವಿಶೇಷ. ಅದರಲ್ಲೂ ಗಬ್ಬಾ ಸ್ಟೇಡಿಯಂನಲ್ಲಿ ಭಾರತ ಗೆದ್ದಿದ್ದು 32 ವರ್ಷಗಳ ನಂತರ. ಈ ಹಿರಿಮೆ ಕಾರಣರಾದ ಆಟಗಾರರಿಗೆ ಆನಂದ್ ಮಹೀಂದ್ರ ಅವರು ಉಡುಗೊರೆ ಘೋಷಿಸಿದ್ದಾರೆ.

ಯಾರಿಗೆಲ್ಲ ಈ ಭರ್ಜರಿ ಗಿಫ್ಟ್‌

ಮಹೀಂದ್ರ ಥಾರ್ ಎಸ್‌ಯುವಿಯನ್ನು ಉಡುಗೊರೆಯಾಗಿ ನೀಡುವುದಾಗಿ ಟ್ವೀಟ್ ಮಾಡಿರುವ ಆನಂದ್ ಮಹೀಂದ್ರ, ಭಾರತ ಯುವ ಆಟಗಾರರಾದ ಟಿ ನಟರಾಜನ್, ಮೊಹಮ್ಮದ್ ಸಿರಾಜ್, ಶಾರ್ದೂಲ್ ಠಾಕೂರ್, ವಾಷಿಂಗ್ಟನ್ ಸುಂದರ್, ಶುಬ್ಮನ್ ಗಿಲ್ ಮತ್ತು ನವದೀಪ್ ಸೈನಿಯನ್ನು ಹೆಸರಿಸಿದ್ದಾರೆ. ಟ್ವಿಟರ್‌ನಲ್ಲಿ ಕೆಲವರು ರಿಷಭ್ ಪಂತ್‌ಗೂ ಗಿಫ್ಟ್‌ ನೀಡಬೇಕಿತ್ತು ಎಂದು ಬರೆದುಕೊಂಡಿದ್ದಾರೆ. ಅಂದ್ಹಾಗೆ ಈ ಥಾರ್ ಎಸ್‌ಯುವಿ ಜೀಪ್‌ನ ಬೆಲೆ 12.10 - 14.15 ಲಕ್ಷ ರೂ.

ಸ್ವಂತ ಖರ್ಚಿನಲ್ಲಿ ದುಬಾರಿ ಗಿಫ್ಟ್‌

ಸ್ವಂತ ಖರ್ಚಿನಲ್ಲಿ ದುಬಾರಿ ಗಿಫ್ಟ್‌

ಟ್ವೀಟ್ ಮಾಡಿರುವ ಆನಂದ್ ಮಹೀಂದ್ರ, 'ಆರು ಯುವ ಆಟಗಾರರು ಇತ್ತೀಚಿನ ಐತಿಹಾಸಿಕ ಭಾರತ-ಆಸ್ಟ್ರೇಲಿಯಾ ಸರಣಿಯಲ್ಲಿ ಪಾದಾರ್ಪಣೆ ಮಾಡಿದ್ದರು (ಶಾರ್ದೂಲ್ ಠಾಕೂರ್ ಮೊದಲೇ ಆಡಿ ಮತ್ತೆ ಗಾಯಕ್ಕೀಡಾದರು). ಇವರೆಲ್ಲ ಭಾರತದ ಭವಿಷ್ಯದ ಕನಸು ಮತ್ತು ಅಸಾಧ್ಯವನ್ನು ಸಾಧ್ಯ ಅನ್ನಿಸುವವರು. ಪಾದಾರ್ಪಣೆ ಮಾಡಿದ ಎಲ್ಲಾ ಆರು ಆಟಗಾರರಿಗೆ ಕಂಪನಿಯ ವೆಚ್ಚವಲ್ಲದೆ ಸ್ವತಃ ನನ್ನ ಹಣದಿಂದ ಥಾರ್ ಎಸ್‌ಯುವಿ ಗಿಫ್ಟ್‌ ನೀಡಲಿದ್ದೇನೆ' ಎಂದು ಬರೆದುಕೊಂಡಿದ್ದಾರೆ.

For Quick Alerts
ALLOW NOTIFICATIONS
For Daily Alerts
 

ಕ್ರಿಕೆಟನ್ನು ಪ್ರೀತಿಸುತ್ತೀರಾ? ಋಜುವಾತುಪಡಿಸಿ! ಮೈಖೇಲ್ ಫ್ಯಾಂಟಸಿ ಕ್ರಿಕೆಟ್ ಆಟವಾಡಿ

Story first published: Saturday, January 23, 2021, 15:54 [IST]
Other articles published on Jan 23, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X