ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಎಲ್‌ಪಿಎಲ್‌ನಲ್ಲಿ ಆ್ಯಂಡ್ರೆ ರಸೆಲ್ ಬ್ಯಾಟಿಂಗ್ ಅಬ್ಬರಕ್ಕೆ ಬಾಲ್‌ ಬಿರುಕು

Andre Russell damaged the ball with his power hitting in LPL 2020

ಕೊಲಂಬೋ: ವೆಸ್ಟ್ ಇಂಡೀಸ್ ಸ್ಫೋಟಕ ಬ್ಯಾಟ್ಸ್‌ಮನ್ ಆ್ಯಂಡ್ರೆ ರಸೆಲ್ ಬ್ಯಾಟಿಂಗ್ ಅಬ್ಬರಕ್ಕೆ ಬಾಲ್ ಛಿದ್ರವಾಗಿರುವ ಘಟನೆ ಲಂಕಾ ಪ್ರೀಮಿಯರ್ ಲೀಗ್‌ನಲ್ಲಿ ನಡೆದಿದೆ. ಡಿಸೆಂಬರ್‌ 4ರ ಶುಕ್ರವಾರ ನಡೆದ ಎಲ್‌ಪಿಎಲ್ 11ನೇ ಪಂದ್ಯದಲ್ಲಿ ರಸೆಲ್‌ ಬ್ಯಾಟಿಂಗ್‌ಗೆ ಬಾಲ್ ಬಲಿಯಾಗಿದೆ.

ಭಾರತ vs ಆಸ್ಟ್ರೇಲಿಯಾ: 2 ತಾಣ, 2 ತಂಡಗಳ ಕುತೂಹಲಕಾರಿ ಕದನಭಾರತ vs ಆಸ್ಟ್ರೇಲಿಯಾ: 2 ತಾಣ, 2 ತಂಡಗಳ ಕುತೂಹಲಕಾರಿ ಕದನ

ಹಂಬಂಟೋಟದ ಮಹಿಂದ ರಾಜಪಕ್ಸೆ ಇಂಟರ್ ನ್ಯಾಷನಲ್ ಸ್ಟೇಡಿಯಂನಲ್ಲಿ ನಡೆದ ಪಂದ್ಯದಲ್ಲಿ ಜಾಫ್ನಾ ಸ್ಟಾಲಿಯನ್ಸ್ ಮತ್ತು ಕೊಲಂಬೋ ಕಿಂಗ್ಸ್ ತಂಡಗಳು ಮುಖಾಮುಖಿಯಾಗಿದ್ದವು. ಈ ವೇಳೆ ಕೊಲಂಬೋ ಕಿಂಗ್ಸ್‌ನ ದಾಂಡಿಗ ರಸೆಲ್‌ ಬ್ಯಾಟಿಂಗ್‌ಗೆ ಚೆಂಡು ಹಾನಿಗೀಡಾಗಿದೆ. ಹಾನಿಗೀಡಾದ ಚೆಂಡಿಗೆ ಬದಲಾಗಿ ಬೇರೆ ಚೆಂಡು ನೀಡಿ ಪಂದ್ಯ ಮುಂದುವರೆಸಲಾಗಿತ್ತು.

ಟಾಸ್ ಸೋತು ಬ್ಯಾಟಿಂಗ್‌ಗೆ ಇಳಿಸಲ್ಪಟ್ಟ ಜಾಫ್ನಾ ಸ್ಟಾಲಿಯನ್ಸ್, ಆವಿಷ್ಕಾ ಫೆರ್ನಾಂಡೋ 26, ಮಿನೋದ್ ಭಾನುಕಾ 21, ತಿಸರ ಪೆರೆರಾ 18, ವನಿಂದು ಹಸರಂಗ 41, ಬಿನುರಾ ಫೆರ್ನಾಂಡೋ 11 ರನ್ ಕೊಡುಗೆಯೊಂದಿಗೆ 20 ಓವರ್‌ಗೆ 9 ವಿಕೆಟ್ ಕಳೆದು 148 ರನ್ ಗಳಿಸಿತು.

ಭಾರತ vs ಆಸ್ಟ್ರೇಲಿಯಾ: ಪಂದ್ಯದ ಬಳಿಕದ ತಮಾಷೆಯ ಟ್ವೀಟ್‌ಗಳುಭಾರತ vs ಆಸ್ಟ್ರೇಲಿಯಾ: ಪಂದ್ಯದ ಬಳಿಕದ ತಮಾಷೆಯ ಟ್ವೀಟ್‌ಗಳು

ಗುರಿ ಬೆನ್ನಟ್ಟಿದ ಕೊಲಂಬೋ ಕಿಂಗ್ಸ್, ದಿನೇಶ್ ಚಾಂಡಿಮಾಲ್ 68, ಲಾರಿ ಇವಾನ್ಸ್ 14, ಏಂಜಲೋ ಮ್ಯಾಥ್ಯೂಸ್ 22, ಆ್ಯಂಡ್ರೆ ರಸೆಲ್ 32 (20 ಎಸೆತ) ರನ್‌ನೊಂದಿಗೆ 19.2 ಓವರ್‌ಗೆ 4 ವಿಕೆಟ್ ನಷ್ಟದಲ್ಲಿ 151 ರನ್ ಗಳಿಸಿತು. ಅಂದ್ಹಾಗೆ, ಜಾಫ್ನಾ ಸ್ಟಾಲಿಯನ್ಸ್ ತಂಡಕ್ಕೆ ಟೂರ್ನಿಯಲ್ಲಿ ಲಭಿಸಿದ ಮೊದಲ ಸೋಲಿದು. ಇದಕ್ಕೂ ಮುನ್ನ ಜಾಫ್ನಾ ತಂಡ ಸತತ 4 ಪಂದ್ಯಗಳನ್ನು ಗೆದ್ದಿತ್ತು.

Story first published: Saturday, December 5, 2020, 13:41 [IST]
Other articles published on Dec 5, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X