ಸ್ಫೋಟಕ ಬ್ಯಾಟ್ಸ್‌ಮನ್‌ ಆ್ಯಂಡ್ರೆ ರಸೆಲ್‌ಗೆ ಗಾಯ, ಆಸ್ಪತ್ರೆಗೆ ದಾಖಲು

ಅಬುಧಾಬಿ: ವೆಸ್ಟ್‌ ಇಂಡೀಸ್‌ನ ಸ್ಫೋಟಕ ಬ್ಯಾಟ್ಸ್‌ಮನ್‌ ಆ್ಯಂಡ್ರೆ ರಸೆಲ್‌ ಗಾಯಗೊಂಡಿದ್ದಾರೆ. ಪಾಕಿಸ್ತಾನ್ ಸೂಪರ್ ಲೀಗ್‌ (ಪಿಎಸ್‌ಎಲ್) ಪಂದ್ಯವೊಂದರ ವೇಳೆ ಗಾಯಕ್ಕೀಡಾಗಿರುವ ರಸೆಲ್ ಅವರನ್ನು ಸ್ಕ್ಯಾನಿಂಗ್‌ಗಾಗಿ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ತಿಳಿದು ಬಂದಿದೆ.

ಇಂಟ್ರಾ ಸ್ಕ್ವಾಡ್ ಅಭ್ಯಾಸ ಪಂದ್ಯದಲ್ಲಿ ಅರ್ಧ ಶತಕ ಬಾರಿಸಿದ ರಿಷಭ್ ಪಂತ್ಇಂಟ್ರಾ ಸ್ಕ್ವಾಡ್ ಅಭ್ಯಾಸ ಪಂದ್ಯದಲ್ಲಿ ಅರ್ಧ ಶತಕ ಬಾರಿಸಿದ ರಿಷಭ್ ಪಂತ್

ವಿಂಡೀಸ್ ಆಲ್ ರೌಂಡರ್ ಆಗಿರುವ ಆ್ಯಂಡ್ರೆ ರಸೆಲ್ ಪಿಎಸ್‌ಎಲ್‌ನಲ್ಲಿ ಶುಕ್ರವಾರ (ಜೂನ್ 11) ಕ್ವೆಟ್ಟ ಗ್ಲಾಡಿಯೇಟರ್ಸ್ ಪರ ಇಸ್ಲಮಾಬಾದ್ ಯುನೈಡೆಡ್ ವಿರುದ್ಧ ಬ್ಯಾಟಿಂಗ್‌ ಮಾಡುತ್ತಿದ್ದರು. ಗ್ಲಾಡಿಯೇಟರ್ಸ್ ಪರ 2 ಸಿಕ್ಸರ್ ಬಾರಿಸಿದ್ದರು. 13.4ನೇ ಓವರ್‌ನಲ್ಲಿ ಮೊಹಮ್ಮದ್ ಮೂಸ ಎಸೆದ ಬೌನ್ಸರ್ ರಸೆಲ್ ಹೆಲ್ಮೆಟ್‌ಗೆ ಬಡಿಯಿತು. ರಸೆಲ್ ಬ್ಯಾಟಿಂಗ್‌ ನಿಲ್ಲಿಸಿ ಕೆಳ ಕುಸಿದರು.

ಆ ಬಳಿಕ ಮೈದಾನದಲ್ಲೇ ಪ್ರಾರ್ಥಮಿಕ ಚಿಕಿತ್ಸೆ ನೀಡಿದ ಬಳಿಕ ರಸೆಲ್ ಮತ್ತೆ ಬ್ಯಾಟಿಂಗ್‌ ಮುಂದುವರೆಸಿದರು. ಆದರೆ ಮೂಸಾ ಮುಂದಿನ ಎಸೆತಕ್ಕೆ ರಸೆಲ್, ಮೊಹಮ್ಮದ್ ವಾಸಿಮ್‌ಗೆ ಕ್ಯಾಚಿತ್ತು 13 ರನ್‌ಗೆ ನಿರ್ಗಮಿಸಿದರು. ಚೆಂಡು ಬಿದ್ದ ಭಾಗದಲ್ಲಿ ರಸೆಲ್‌ಗೆ ನೋವಿದ್ದ ಕಾರಣ ಅವರನ್ನು ಆಸ್ಪತ್ರೆಗೆ ಸಾಗಿಸಲಾಗಿದೆ.

ಶ್ರೀಲಂಕಾ ಸರಣಿಗೂ ಮುನ್ನ 3 ಇಂಟ್ರಾ ಸ್ಕ್ವಾಡ್ ಪಂದ್ಯಗಳನ್ನಾಡಲಿದೆ ಭಾರತಶ್ರೀಲಂಕಾ ಸರಣಿಗೂ ಮುನ್ನ 3 ಇಂಟ್ರಾ ಸ್ಕ್ವಾಡ್ ಪಂದ್ಯಗಳನ್ನಾಡಲಿದೆ ಭಾರತ

ರಸೆಲ್ ತಂಡದಿಂದ ಹೊರ ಬಿದ್ದ ಬಳಿಕ ಕ್ವೆಟ್ಟಾ ಗ್ಲಾಡಿಯೇಟರ್ಸ್ ಲೈಕ್ ಫಾರ್ ಲೈಕ್ ಆಯ್ಕೆಯಂತೆ ವೇಗಿ ನಸೀಮ್ ಶಾಗೆ ಅವಕಾಶ ನೀಡಿತು. ದ್ವಿತೀಯ ಇನ್ನಿಂಗ್ಸ್‌ನಲ್ಲಿ ರಸೆಲ್ ಬದಲಾಗಿ ಆಡಿದ್ದ ನಸೀಮ್‌ಗೆ ವಿಕೆಟ್ ಲಭಿಸಿಲಿಲ್ಲ. ಪಂದ್ಯದಲ್ಲಿ ಇಸ್ಲಮಾಬಾದ್ ಯುನೈಟೆಡ್ 10 ವಿಕೆಟ್‌ನಿಂದ ಗೆದ್ದಿದೆ.

For Quick Alerts
Subscribe Now
For Quick Alerts
ALLOW NOTIFICATIONS
For Daily Alerts
Story first published: Saturday, June 12, 2021, 15:38 [IST]
Other articles published on Jun 12, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X