ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಆ್ಯಂಡ್ರ್ಯೂ ಟೈ, ಮಿಚೆಲ್ ಸ್ವೆಪ್ಸನ್ ಮಾರಕ ಬೌಲಿಂಗ್, ಬಾಂಗ್ಲಾ ವಿರುದ್ಧ ಆಸ್ಟ್ರೇಲಿಯಾಕ್ಕೆ ಜಯ

Andrew Tye and Mitchell Swepson bowling helps to Australias first win against Bangladesh in T20I series

ಧಾಕಾ: ಧಾಕಾದ ಶೇರ್ ಇ ಬಾಂಗ್ಲಾ ಸ್ಟೇಡಿಯಂನಲ್ಲಿ ಶನಿವಾರ (ಆಗಸ್ಟ್ 7) ನಡೆದ ಬಾಂಗ್ಲಾದೇಶ ಮತ್ತು ಆಸ್ಟ್ರೇಲಿಯಾ ನಡುವಿನ ನಾಲ್ಕನೇ ಟಿ20ಐ ಪಂದ್ಯದಲ್ಲಿ ಪ್ರವಾಸಿ ಆಸ್ಟ್ರೇಲಿಯಾ 3 ವಿಕೆಟ್ ಜಯ ಗಳಿಸಿದೆ. ಇದರೊಂದಿಗೆ ಆಸ್ಟ್ರೇಲಿಯಾ ತಂಡ ಐದು ಪಂದ್ಯಗಳ ಈ ಟಿ20ಐ ಸರಣಿಯಲ್ಲಿ ಕ್ಲೀನ್ ಸ್ವೀಪ್ ಮುಖಭಂಗದಿಂದ ಪಾರಾಗಿದೆ. ಇತ್ತಂಡಗಳ ಸರಣಿಯೀಗ 3-1ರಿಂದ ಬಾಂಗ್ಲಾ ವಶವಾಗಿದೆ.

ಒಲಿಂಪಿಕ್ಸ್‌ನಲ್ಲಿ ಪದಕ ಗೆದ್ದ ಭಾರತ ಕ್ರೀಡಾಪಟುಗಳಿಗೆ ವಿವಿಧ ನಗದು ಪುರಸ್ಕಾರ ಘೋಷಿಸಿದ ಬಿಸಿಸಿಐಒಲಿಂಪಿಕ್ಸ್‌ನಲ್ಲಿ ಪದಕ ಗೆದ್ದ ಭಾರತ ಕ್ರೀಡಾಪಟುಗಳಿಗೆ ವಿವಿಧ ನಗದು ಪುರಸ್ಕಾರ ಘೋಷಿಸಿದ ಬಿಸಿಸಿಐ

ವೇಗಿ ಆ್ಯಂಡ್ರ್ಯೂ ಟೈ ಮತ್ತು ಸ್ಪಿನ್ನರ್ ಮಿಚೆಲ್ ಸ್ವೆಪ್ಸನ್ ಮಾರಕ ಬೌಲಿಂಗ್ ದಾಳಿಯಿಂದಾಗಿ ಬಾಂಗ್ಲಾದೇಶ ವಿರುದ್ಧ ಆಸ್ಟ್ರೇಲಿಯಾ ವೈಟ್ ವಾಷ್ ಭೀತಿಯಿಂದ ಪಾರಾಗಿದೆ. ಐದನೇ ಮತ್ತು ಕೊನೇಯ ಟಿ20ಐ ಪಂದ್ಯ ಆಗಸ್ಟ್ 9ರ ಸೋಮವಾರ ಶೇರ್ ಇ ಬಾಂಗ್ಲಾ ಸ್ಟೇಡಿಯಂನಲ್ಲೇ ನಡೆಯಲಿದೆ.

ಆ್ಯಂಡ್ರ್ಯೂ ಟೈ, ಮಿಚೆಲ್ ಸ್ವೆಪ್ಸನ್ ಮಾರಕ ಬೌಲಿಂಗ್

ಆ್ಯಂಡ್ರ್ಯೂ ಟೈ, ಮಿಚೆಲ್ ಸ್ವೆಪ್ಸನ್ ಮಾರಕ ಬೌಲಿಂಗ್

ಟಾಸ್ ಗೆದ್ದು ಬ್ಯಾಟಿಂಗ್‌ ಆಯ್ದುಕೊಂಡಿದ್ದ ಬಾಂಗ್ಲಾ ದೇಶದಿಂದ ಅದ್ಭುತ ಬ್ಯಾಟಿಂಗ್‌ ಏನೂ ಕಾಣಿಸಲಿಲ್ಲ. ಮೊಹಮ್ಮದ್ ನೈಮ್ 28, ಸೌಮ್ಯ ಸರ್ಕಾರ್ 8, ಶಕೀಬ್ ಅಲ್ ಹಸನ್ 15, ಮಹ್ಮದುಲ್ಲಾ 0, ಅಫೀಫ್ ಹೊಸೇನ್ 20, ಶಮೀಮ್ ಹೊಸೈನ್ 3, ನೂರುಲ್ ಹಸನ್ 0, ಮಹೇದಿ ಹಸನ್ 23, ಮುಸ್ತಫಿಜುರ್ ರಹಮಾನ್ , ಶೋರಿಫುಲ್ ಇಸ್ಲಾಂ 0, ನಸುಮ್ ಅಹ್ಮದ್ 2 ರನ್‌ನೊಂದಿಗೆ 20 ಓವರ್‌ ಮುಕ್ತಾಯಕ್ಕೆ 9 ವಿಕೆಟ್ ಕಳೆದು 104 ರನ್ ಗಳಿಸಿತು. ಬಾಂಗ್ಲಾದೇಶ ಇನ್ನಿಂಗ್ಸ್‌ನಲ್ಲಿ ಆಸ್ಟ್ರೇಲಿಯಾದ ಜೋಶ್ ಹ್ಯಾಝಲ್ವುಡ್ 2, ಆ್ಯಷ್ಟನ್ ಅಗರ್ 1, ಆ್ಯಂಡ್ರ್ಯೂ ಟೈ 18 ರನ್ ಗೆ 3, ಮಿಚೆಲ್ ಸ್ವೆಪ್ಸನ್ 12 ರನ್‌ಗೆ 3 ವಿಕೆಟ್‌ನೊಂದಿಗೆ ಆತಿಥೇಯ ಬಾಂಗ್ಲಾವನ್ನು ಕಟ್ಟಿ ಹಾಕಿದರು.

ಮಿಚೆಲ್ ಸ್ವೆಪ್ಸನ್‌ಗೆ ಪಂದ್ಯಶ್ರೇಷ್ಠ ಪ್ರಶಸ್ತಿ

ಮಿಚೆಲ್ ಸ್ವೆಪ್ಸನ್‌ಗೆ ಪಂದ್ಯಶ್ರೇಷ್ಠ ಪ್ರಶಸ್ತಿ

ಗುರಿ ಬೆನ್ನಟ್ಟಿದ ಆಸ್ಟ್ರೇಲಿಯಾದಿಂದ ಬೆನ್ ಮ್ಯಾಕ್‌ಡರ್ಮೊಟ್ 5, ಮ್ಯಾಥ್ಯೂ ವೇಡ್ 2, ಮಿಚೆಲ್ ಮಾರ್ಷ್ 2, ಮೊಯಿಸಸ್ ಹೆನ್ರಿಕ್ಸ್ 4, ಅಲೆಕ್ಸ್ ಕ್ಯಾರಿ 1, ಆಷ್ಟನ್ ಟರ್ನರ್ 9, ಡೇನಿಯಲ್ ಕ್ರಿಶ್ಚಿಯನ್ 39, ಆಷ್ಟನ್ ಅಗರ್ 27, ಆಂಡ್ರ್ಯೂ ಟೈ 4 ರನ್ ಬಾರಿಸಿದರು. ಆಸೀಸ್ 19 ಓವರ್‌ಗೆ 7 ವಿಕೆಟ್ ಕಳೆದು 105 ರನ್ ಬಾರಿಸಿ ವಿಜಯದ ನಗು ಬೀರಿತು. ಆಸ್ಟ್ರೇಲಿಯಾ ಇನ್ನಿಂಗ್ಸ್‌ನಲ್ಲಿ ಬಾಂಗ್ಲಾದೇಶದ ಮೆಹಿದಿ ಹಸನ್ 2, ನಸುಮ್ ಅಹ್ಮದ್ 1, ಮುಷ್ಫಿಕರ್ ರಹ್ಮಾನ್ 2, ಶೋರಿಫುಲ್ ಇಸ್ಲಾಮ್ 1 ವಿಕೆಟ್‌ನಿಂದ ಗಮನ ಸೆಳೆದರು. ಮಿಚೆಲ್ ಸ್ವೆಪ್ಸನ್ ಪಂದ್ಯಶ್ರೇಷ್ಠರೆನಿಸಿದರು.

ಆಸ್ಟ್ರೇಲಿಯಾ ಪ್ಲೇಯಿಂಗ್ XI

ಆಸ್ಟ್ರೇಲಿಯಾ ಪ್ಲೇಯಿಂಗ್ XI

ಬೆನ್ ಮ್ಯಾಕ್‌ಡರ್ಮೊಟ್, ಮ್ಯಾಥ್ಯೂ ವೇಡ್ (ನಾಯಕ, ವಿಕೆಟ್ ಕೀಪರ್), ಮಿಚೆಲ್ ಮಾರ್ಷ್, ಮೊಯಿಸಸ್ ಹೆನ್ರಿಕ್ಸ್, ಅಲೆಕ್ಸ್ ಕ್ಯಾರಿ, ಆಷ್ಟನ್ ಟರ್ನರ್, ಡೇನಿಯಲ್ ಕ್ರಿಶ್ಚಿಯನ್, ಆಷ್ಟನ್ ಅಗರ್, ಆಂಡ್ರ್ಯೂ ಟೈ, ಮಿಚೆಲ್ ಸ್ವೇಪ್ಸನ್, ಜೋಶ್ ಹ್ಯಾಝಲ್ವುಡ್.
ಬೆಂಚ್: ನಾಥನ್ ಎಲ್ಲಿಸ್, ಆಡಮ್ ಜಂಪಾ, ಜೋಶ್ ಫಿಲಿಪ್, ಮಿಚೆಲ್ ಸ್ಟಾರ್ಕ್, ಜೇಸನ್ ಬೆಹ್ರೆಂಡೋರ್ಫ್, ವೆಸ್ ಅಗರ್, ರಿಲೆ ಮೆರೆಡಿತ್.

ನೀರಜ್ ಚೋಪ್ರಾ ಮತ್ತು ಅದಿತಿ ಅಶೋಕ್ ಗೆ KSRTC ಇಂದ ಬಂಪರ್ ಗಿಫ್ಟ್ | Oneindia Kannada
ಬಾಂಗ್ಲಾದೇಶ ಪ್ಲೇಯಿಂಗ್ XI

ಬಾಂಗ್ಲಾದೇಶ ಪ್ಲೇಯಿಂಗ್ XI

ಮೊಹಮ್ಮದ್ ನೈಮ್, ಸೌಮ್ಯ ಸರ್ಕಾರ್, ಶಕೀಬ್ ಅಲ್ ಹಸನ್, ಮಹ್ಮದುಲ್ಲಾ (ಸಿ), ಅಫೀಫ್ ಹೊಸೇನ್, ಶಮೀಮ್ ಹೊಸೈನ್, ನೂರುಲ್ ಹಸನ್ (wk), ಮಹಿದಿ ಹಸನ್, ಮುಸ್ತಫಿಜುರ್ ರಹಮಾನ್, ಶೋರಿಫುಲ್ ಇಸ್ಲಾಂ, ನಸುಮ್ ಅಹ್ಮದ್.
ಬೆಂಚ್: ರುಬೆಲ್ ಹೊಸೇನ್, ಮೊಹಮ್ಮದ್ ಮಿಥುನ್, ತೈಜುಲ್ ಇಸ್ಲಾಂ, ಮೊಸದ್ದೆಕ್ ಹೊಸೇನ್, ತಸ್ಕಿನ್ ಅಹ್ಮದ್, ಮೊಹಮ್ಮದ್ ಸೈಫುದ್ದೀನ್.

Story first published: Sunday, August 8, 2021, 10:00 [IST]
Other articles published on Aug 8, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X