ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಭಾರತ ಸರ್ಕಾರ, ಐಪಿಎಲ್ ಫ್ರಾಂಚೈಸಿ ಪ್ರಶ್ನಿಸಿದ ಆ್ಯಂಡ್ರ್ಯೂ ಟೈ

Andrew Tye questions IPL tournament amidst COVID-19 emergency in India

ನವದೆಹಲಿ: ಭಾರತದಲ್ಲಿ ಕೋವಿಡ್-19 ಪ್ರಕರಣಗಳು ಹೆಚ್ಚುತ್ತಿರುವುದರಿಂದ ವಿದೇಶಿ ಸಾಕಷ್ಟು ಆಟಗಾರರು ಇಂಡಿಯನ್ ಪ್ರೀಮಿಯರ್ ಲೀಗ್‌ (ಐಪಿಎಲ್) 14ನೇ ಆವೃತ್ತಿಯಿಂದ ಹೊರ ನಡೆಯುತ್ತಿದ್ದಾರೆ. ಐಪಿಎಲ್‌ನಲ್ಲಿ ರಾಜಸ್ಥಾನ್ ರಾಯಲ್ಸ್‌ ಪರ ಆಡುವ ಆಸ್ಟ್ರೇಲಿಯಾ ಆಟಗಾರ ಆ್ಯಂಡ್ರ್ಯೂ ಟೈ ಕೂಡ ಫ್ರಾಂಚೈಸಿಗಳು ಮತ್ತು ಭಾರತ ಸರ್ಕಾರದ ನಡೆಯನ್ನು ಪ್ರಶ್ನಿಸಿದ್ದಾರೆ.

ಪ್ರಮುಖ ಕ್ರಿಕೆಟಿಗರು ಐಪಿಎಲ್ ತೊರೆಯುತ್ತಿರುವುದಕ್ಕೆ ಅಸಲಿ ಕಾರಣಗಳಿವು!ಪ್ರಮುಖ ಕ್ರಿಕೆಟಿಗರು ಐಪಿಎಲ್ ತೊರೆಯುತ್ತಿರುವುದಕ್ಕೆ ಅಸಲಿ ಕಾರಣಗಳಿವು!

ಭಾರತದಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿದ್ದರೂ ಐಪಿಎಲ್‌ ನಡೆಸುತ್ತಿರುವ ಬೋರ್ಡ್ ಆಫ್ ಕಂಟ್ರೋಲ್ ಫಾರ್ ಕ್ರಿಕೆಟ್ ಇನ್ ಇಂಡಿಯಾ(ಬಿಸಿಸಿಐ) ನಿಲುವನ್ನು ಅನೇಕರು ಟೀಕಿಸತೊಡಗಿದ್ದಾರೆ. ಭಾರತದಲ್ಲಿ ಕಳೆದ ಕೆಲವೇ ದಿನಗಳಲ್ಲಿ ಸೋಂಕಿತರ ಸಂಖ್ಯೆ 3 ಲಕ್ಷಕ್ಕೂ ದಾಟಿದೆ.

ಐಪಿಎಲ್‌ನಿಂದ ಈಗಾಲೇ ಆಸ್ಟ್ರೇಲಿಯಾದ ಆ್ಯಡಂ ಜಂಪಾ ಮತ್ತು ಕೇನ್ ರಿಚರ್ಡ್ಸನ್ (ಇಬ್ಬರೂ ರಾಯಲ್ ಚಾಲೆಂಜರ್ಸ್ ಬೆಂಗಳೂರು) ಹಿಂದೆ ಸರಿದಿದ್ದಾರೆ. ಭಾರತದ ಸ್ಪಿನ್ನರ್ ಆರ್‌ ಅಶ್ವಿನ್‌ (ಡೆಲ್ಲಿ ಕ್ಯಾಪಿಟಲ್ಸ್) ಸಹ ಐಪಿಎಲ್ ತ್ಯಜಿಸಿದ್ದಾರೆ. ಆಸೀಸ್ ವೇಗಿ ಆ್ಯಂಡ್ರ್ಯೂ ಟೈ ಕೂಡ ನಗದು ಶ್ರೀಮಂತ ಟೂರ್ನಿಯಿಂದ ಹೊರ ನಡೆಯುವ ನಿರ್ಧಾರ ಪ್ರಕಟಿಸಿದ್ದಾರೆ.

ಐಪಿಎಲ್‌ನಿಂದ ಹೊರ ಬೀಳುತ್ತಿದ್ದಾರೆ ಆಟಗಾರರು, ಟೂರ್ನಿ ನಿಲ್ಲುತ್ತಾ?!ಐಪಿಎಲ್‌ನಿಂದ ಹೊರ ಬೀಳುತ್ತಿದ್ದಾರೆ ಆಟಗಾರರು, ಟೂರ್ನಿ ನಿಲ್ಲುತ್ತಾ?!

ಐಪಿಎಲ್ ತೊರೆಯುವಾಗ ಟೈ ಭಾರತ ಸರ್ಕಾರ ಮತ್ತು ಫ್ರಾಂಚೈಸಿಗಳ ನಿಲುವನ್ನು ಪ್ರಶ್ನಿಸಿದ್ದಾರೆ. 'ಭಾರತದಲ್ಲಿ ಆಸ್ಪತ್ರೆಗಳಿಲ್ಲದೆ ಜನ ಪರದಾಡುತ್ತಿದ್ದಾರೆ. ಇಂಥ ಸಂಕಷ್ಟದ ಸಮಯದಲ್ಲಿ ಫ್ರಾಂಚೈಸಿಗಳು ಮತ್ತು ಸರ್ಕಾರ ಹೇಗೆ ಐಪಿಎಲ್‌ಗೆ ಹಣ ವ್ಯಯಿಸುತ್ತದೆ? ಅದಕ್ಕೆ ಮನಸ್ಸಾದರೂ ಹೇಗೆ ಬರುತ್ತದೆ,' ಎಂದು ಟೈ ಕೇಳಿದ್ದಾರೆ.

Story first published: Monday, April 26, 2021, 20:34 [IST]
Other articles published on Apr 26, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X