ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಮ್ಯಾಥ್ಯೂಸ್, ಮುಶ್ಫಿಕರ್ ಸೇರಿ 3 ಜನ ಮೇ ತಿಂಗಳ ಐಸಿಸಿ ಪುರುಷ ಆಟಗಾರರಾಗಿ ನಾಮನಿರ್ದೇಶನ

Angelo Mathews and Mushfiqur Rahim Including 3 People Nominated for ICC Mens Players of the May Month

ಶ್ರೀಲಂಕಾದ ಆಲ್‌ರೌಂಡರ್ ಏಂಜೆಲೋ ಮ್ಯಾಥ್ಯೂಸ್ ಮತ್ತು ಬಾಂಗ್ಲಾದೇಶದ ವಿಕೆಟ್‌ಕೀಪರ್-ಬ್ಯಾಟರ್ ಮುಶ್ಫಿಕರ್ ರಹೀಮ್ ಸೇರಿದಂತೆ ಮೂರು ಜನ ಮೇ 2022ರ ಐಸಿಸಿ ಪುರುಷ ಆಟಗಾರರಾಗಿ ನಾಮನಿರ್ದೇಶಿತಗೊಂಡಿದ್ದಾರೆ.

ಏಂಜೆಲೋ ಮ್ಯಾಥ್ಯೂಸ್ ಮತ್ತು ಮುಶ್ಫಿಕರ್ ರಹೀಮ್ ಜೊತೆಗೆ ಇನ್ನೊಬ್ಬ ಶ್ರೀಲಂಕಾದ ವೇಗಿ ಅಸಿತಾ ಫೆರ್ನಾಂಡೋ ಅವರನ್ನೂ ಮೇ ತಿಂಗಳ ಐಸಿಸಿ ಪುರುಷ ಆಟಗಾರ ಗೌರವಕ್ಕೆ ಹೆಸರಿಸಲಾಗಿದೆ.

ಬಾಂಗ್ಲಾದೇಶದ ವಿರುದ್ಧ ಶ್ರೀಲಂಕಾ ತಂಡವು ವಿದೇಶ ಸರಣಿ ಗೆಲುವಿನ ಸಂದರ್ಭದಲ್ಲಿ ಏಂಜೆಲೋ ಮ್ಯಾಥ್ಯೂಸ್ ನಿರ್ಣಾಯಕ ಪಾತ್ರ ವಹಿಸಿದ್ದರು. ಅವರು ಎರಡು ಟೆಸ್ಟ್‌ಗಳಲ್ಲಿ ಎರಡು ಶತಕಗಳು ಸೇರಿದಂತೆ 344 ರನ್‌ಗಳೊಂದಿಗೆ ಅತಿ ಹೆಚ್ಚು ರನ್ ಗಳಿಸಿದ ಆಟಗಾರರಾದರು. ಬಲಗೈ ಆಟಗಾರ ತನ್ನ ಎರಡನೇ ದ್ವಿಶತಕದ ಸಮೀಪಕ್ಕೆ ಬಂದಿದ್ದರು. ಆದರೆ ಮೊದಲ ಟೆಸ್ಟ್‌ನಲ್ಲಿ ಅವರು 199 ರನ್‌ಗಳಿಗೆ ಔಟಾದರು. ಎರಡನೇ ಟೆಸ್ಟ್‌ನಲ್ಲಿ ಮ್ಯಾಥ್ಯೂಸ್ ಮತ್ತೊಂದು ಶತಕ ದಾಖಲಿಸಿ 145 ರನ್ ಗಳಿಸಿ ಅಜೇಯರಾಗಿ ಉಳಿದರು.

Angelo Mathews and Mushfiqur Rahim Including 3 People Nominated for ICC Mens Players of the May Month

ಈ ಮಧ್ಯೆ ಮುಶ್ಫಿಕರ್ ರಹೀಮ್ ಶ್ರೀಲಂಕಾ ವಿರುದ್ಧದ ಟೆಸ್ಟ್ ಸರಣಿಯ ಸಮಯದಲ್ಲಿ 303 ರನ್‌ ಗಳಿಸುವುದರೊಂದಿಗೆ ಎರಡನೇ ಅತಿ ಹೆಚ್ಚು ರನ್ ಗಳಿಸಿದ ಆಟಗಾರನಾದರು. ಏಂಜೆಲೋ ಮ್ಯಾಥ್ಯೂಸ್ ಅವರಂತೆಯೇ ಮುಶ್ಫಿಕರ್ ರಹೀಮ್ ಕೂಡ ಶ್ರೀಲಂಕಾ ವಿರುದ್ಧ ಎರಡು ಶತಕಗಳನ್ನು ಗಳಿಸಿದರು. ಇದೇ ವೇಳೆ 5000 ಟೆಸ್ಟ್ ರನ್ ಗಳಿಸಿದ ಬಾಂಗ್ಲಾದೇಶದ ಮೊದಲ ಆಟಗಾರ ಎಂಬ ಹೆಗ್ಗಳಿಕೆಗೂ ಪಾತ್ರರಾದರು. ಮೊದಲ ಟೆಸ್ಟ್‌ನಲ್ಲಿ ರಹೀಮ್ ಈ ಸಾಧನೆ ಮಾಡಿದರು.

ಏನ್ ಗುರೂ.... Hardik Pandya, ಬಗ್ಗೆ ಎಂಥಾ‌ ಮಾತು ಹೇಳ್ಬಿಟ್ರು Ravi Shastri | *Cricket | OneIndia Kannada

ಶ್ರೀಲಂಕಾದ ಅಸಿತಾ ಫರ್ನಾಂಡೊ ಅವರು ಮೇ ತಿಂಗಳ ಐಸಿಸಿ ಆಟಗಾರರಾಗಿ ನಾಮನಿರ್ದೇಶನಗೊಂಡ ಮತ್ತೊಬ್ಬ ಆಟಗಾರ. ಶ್ರೀಲಂಕಾದ ಈ ವೇಗಿ ಬಾಂಗ್ಲಾದೇಶ ವಿರುದ್ಧದ ಟೆಸ್ಟ್ ಸರಣಿಯಲ್ಲಿ ಅತಿ ಹೆಚ್ಚು ವಿಕೆಟ್ ಪಡೆದ ಬೌಲರ್ ಎಂಬ ಹೆಗ್ಗಳಿಕೆಗೆ ಪಾತ್ರರಾದರು. ಅಸಿತಾ ಫರ್ನಾಂಡೊ ಮೊದಲ ಟೆಸ್ಟ್‌ನಲ್ಲಿ ಮೂರು ವಿಕೆಟ್ ಪಡೆದರೆ, ಎರಡನೇ ಟೆಸ್ಟ್‌ನಲ್ಲಿ ಎರಡೂ ಇನ್ನಿಂಗ್ಸ್ ಸೇರಿ 10 ವಿಕೆಟ್‌ಗಳನ್ನು ಕಬಳಿಸಿದರು.

Story first published: Monday, June 6, 2022, 20:59 [IST]
Other articles published on Jun 6, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X