ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಸ್ಮಿತ್, ರೂಟ್, ಕೊಹ್ಲಿ, ವಿಲಿಯಮ್ಸನ್‌ರಲ್ಲಿ ಸ್ಥಿರ ಬ್ಯಾಟ್ಸ್‌ಮನ್ ಹೆಕ್ಕಿದ ಮ್ಯಾಥ್ಯೂಸ್

Angelo Mathews picks most consistent between Kohli, Smith, Root, Williamson

ಕೊಲಂಬೋ: 2014ರಲ್ಲಿ ಶ್ರೀಲಂಕಾ ಕ್ರಿಕೆಟ್ ತಂಡ ಟಿ20 ವಿಶ್ವಕಪ್ ಗೆದ್ದಾಗ, 2011ರ ವಿಶ್ವಕಪ್‌ನಲ್ಲಿ ಶ್ರೀಲಂಕಾ ಫೈನಲ್‌ಗೆ ಪ್ರವೇಶಿಸಿದ್ದಾಗ, 2009ರ ಐಸಿಸಿ ವಿಶ್ವ ಟಿ20 ಮತ್ತು 2012ರ ಐಸಿಸಿ ವಿಶ್ವ ಟಿ20ಯಲ್ಲಿ ಶ್ರೀಲಂಕಾ ತಂಡ ಪ್ರಶಸ್ತಿ ಸುತ್ತಿನಲ್ಲಿ ಕಾಣಿಸಿಕೊಳ್ಳಲು ಪ್ರಮುಖ ಪಾತ್ರ ವಹಿಸಿದ್ದವರು ಮಾಜಿ ನಾಯಕ ಏಂಜಲೋ ಮ್ಯಾಥ್ಯೂಸ್. ಲಂಕಾ ಆಲ್ ರೌಂಡರ್ ಏಂಜಲೋ ಮ್ಯಾಥ್ಯೂಸ್, ವಿಶ್ವ ಕ್ರಿಕೆಟ್‌ನಲ್ಲಿ ಈಗ ಹೆಚ್ಚು ಸ್ಥಿರ ಫಾರ್ಮ್ ಕಾಯ್ದುಕೊಳ್ಳುವ ಬ್ಯಾಟ್ಸ್‌ಮನ್ ಯಾರೆಂದು ಹೇಳಿದ್ದಾರೆ.

ಬಿಸಿಸಿಐ, ಕ್ರಿಕೆಟ್ ಆಸ್ಟ್ರೇಲಿಯಾ ವಿರುದ್ಧ ಕಿಡಿ ಕಾರಿದ ಶೋಯೆಬ್ ಅಖ್ತರ್!ಬಿಸಿಸಿಐ, ಕ್ರಿಕೆಟ್ ಆಸ್ಟ್ರೇಲಿಯಾ ವಿರುದ್ಧ ಕಿಡಿ ಕಾರಿದ ಶೋಯೆಬ್ ಅಖ್ತರ್!

ಕ್ರಿಕ್ ಟ್ರ್ಯಾಕರ್ ಸಂದರ್ಶನದ ವೇಳೆ ಏಂಜಲೋ ಮ್ಯಾಥ್ಯೂಸ್ ಅವರಲ್ಲಿ, ಕುಮಾರ ಸಂಗಕ್ಕಾರ ಬಳಿಕ ಹೆಚ್ಚು ಸ್ಥಿರ ಆಟಗಾರ ಯಾರು ಎಂದು ಪ್ರಶ್ನಿಸಲಾಗಿತ್ತು. ಅವರ ಮುಂದೆ ಆಸ್ಟ್ರೇಲಿಯಾದ ಮಾಜಿ ನಾಯಕ ಸ್ಟೀವ್ ಸ್ಮಿತ್, ಇಂಗ್ಲೆಂಡ್ ಟೆಸ್ಟ್ ನಾಯಕ ಜೋ ರೂಟ್, ಭಾರತದ ನಾಯಕ ವಿರಾಟ್ ಕೊಹ್ಲಿ ಮತ್ತು ನ್ಯೂಜಿಲೆಂಡ್ ನಾಯಕ ಕೇನ್ ವಿಲಿಯಮ್ಸನ್ ಆಯ್ಕೆಗಳನ್ನು ನೀಡಲಾಗಿತ್ತು.

ಏಕದಿನ ಅತ್ಯಧಿಕ ಸಿಕ್ಸ್‌ ದಾಖಲೆ: ಟಾಪ್ 10 ಪಟ್ಟಿಯಲ್ಲಿ ಭಾರತೀಯರೇ ಹೆಚ್ಚು!ಏಕದಿನ ಅತ್ಯಧಿಕ ಸಿಕ್ಸ್‌ ದಾಖಲೆ: ಟಾಪ್ 10 ಪಟ್ಟಿಯಲ್ಲಿ ಭಾರತೀಯರೇ ಹೆಚ್ಚು!

ಸ್ಟೀವ್ ಸ್ಮಿತ್, ಜೋ ರೂಟ್, ವಿರಾಟ್ ಕೊಹ್ಲಿ ಮತ್ತು ಕೇನ್ ವಿಲಿಯಮ್ಸನ್ ಇವರೆಲ್ಲರೂ ಒಳ್ಳೆಯ ಆಟಗಾರರೆ. ಹಾಗಾದರೆ ಹೆಚ್ಚು ಸ್ಥಿರ ಆಟಗಾರ ಎಂದು ಏಂಜಲೋ ಮ್ಯಾಥ್ಯೂಸ್ ಯಾರನ್ನು ಹೆಸರಿಸಿರಬಹುದು?

ಎಲ್ಲರೂ ಬೆಸ್ಟ್ ಬ್ಯಾಟ್ಸ್‌ಮನ್‌ಗಳು

ಎಲ್ಲರೂ ಬೆಸ್ಟ್ ಬ್ಯಾಟ್ಸ್‌ಮನ್‌ಗಳು

ಸ್ಟೀವ್ ಸ್ಮಿತ್, ಜೋ ರೂಟ್, ವಿರಾಟ್ ಕೊಹ್ಲಿ, ಕೇನ್ ವಿಲಿಯಮ್ಸನ್, ರೋಹಿತ್ ಶರ್ಮಾ ಮತ್ತು ಕ್ವಿಂಟನ್ ಡಿ ಕಾಕ್ ಕೂಡ ಸೇರಿಸಿ ಇವರೆಲ್ಲರೂ ವಿಶ್ವದ ಬೆಸ್ಟ್ ಬ್ಯಾಟ್ಸ್‌ಮನ್‌ಗಳ ಸಾಲಿನಲ್ಲಿ ಗುರುತಿಸಿಕೊಂಡವರು. ಈ ಎಲ್ಲಾ ಬ್ಯಾಟ್ಸ್‌ಮನ್‌ಗಳು ತಂಡದ ನಾಯಕರಾಗಿ ಜವಾಬ್ದಾರಿ ಹೊತ್ತಿದ್ದಾರೆ. ಇದರಲ್ಲಿ ಸ್ಟೀವ್ ಸ್ಮಿತ್ ಮಾತ್ರ ಒಂದು ವರ್ಷದ ಬ್ಯಾನ್‌ನಿಂದಾಗಿ ನಾಯಕತ್ವದಿಂದ ಕೆಳಗಿಳಿದಿದ್ದರು.

ಏಂಜಲೋ ಮ್ಯಾಥ್ಯೂಸ್ ಉತ್ತರ

ಏಂಜಲೋ ಮ್ಯಾಥ್ಯೂಸ್ ಉತ್ತರ

'ಸ್ಟೀವ್ ಸ್ಮಿತ್, ಜೋ ರೂಟ್, ವಿರಾಟ್ ಕೊಹ್ಲಿ ಮತ್ತು ಕೇನ್ ವಿಲಿಯಮ್ಸನ್ ಇವರಲ್ಲಿ ಯಾರು ಸ್ಥಿರ ಆಟಗಾರರೆಂದು ಪ್ರಶ್ನಿಸಿದರೆ, ನಾನು ಸಂಗಕ್ಕಾರ ಬಳಿಕ ವಿರಾಟ್ ಕೊಹ್ಲಿ ಹೆಚ್ಚು ಸ್ಥಿರ ಆಟಗಾರ ಎನ್ನುತ್ತೇನೆ,' ಎಂದು ಏಂಜಲೋ ಮ್ಯಾಥ್ಯೂಸ್ ಪ್ರತಿಕ್ರಿಯಿಸಿದ್ದಾರೆ.

2011ರಲ್ಲಿ ಗಮನಾರ್ಹ ಬ್ಯಾಟಿಂಗ್

2011ರಲ್ಲಿ ಗಮನಾರ್ಹ ಬ್ಯಾಟಿಂಗ್

ಮುಂಬೈನಲ್ಲಿ ನಡೆದಿದ್ದ 2011ರ ವಿಶ್ವಕಪ್ ಫೈನಲ್‌ನಲ್ಲಿ ಭಾರತದ ಗೆಲುವಿನಲ್ಲಿ ಗೌತಮ್ ಗಂಭೀರ್, ಎಂಎಸ್ ಧೋನಿ, ವಿರಾಟ್ ಕೊಹ್ಲಿ ಗಣನೀಯ ಪಾತ್ರ ವಹಿಸಿದ್ದರು. ಗಂಭೀರ್ 97, ಕೊಹ್ಲಿ 35, ಧೋನಿ ಅಜೇಯ 91, ಯುವರಾಜ್ ಸಿಂಗ್ ಅಜೇಯ 21ರನ್‌ನೊಂದಿಗೆ ಭಾರತ ಶ್ರೀಲಂಕಾ ನೀಡಿದ್ದ 275 ರನ್ ಗುರಿ (277 ಒಟ್ಟು ರನ್) ತಲುಪಿ ಎರಡನೇ ಬಾರಿಗೆ ವಿಶ್ವಕಪ್ ಜಯಿಸಿತ್ತು.

ರೋಚಕ ಪಂದ್ಯ ನೆನೆದ ಮ್ಯಾಥ್ಯೂಸ್

ರೋಚಕ ಪಂದ್ಯ ನೆನೆದ ಮ್ಯಾಥ್ಯೂಸ್

2011ರ ವಿಶ್ವಕಪ್ ಫೈನಲ್ ನೆನೆದ ಮ್ಯಾಥ್ಯೂಸ್, 'ಆವತ್ತು ನಾವು 20-30 ರನ್ ಕಡಿಮೆ ಗಳಿಸಿದ್ದೆವು. ಇಲ್ಲದಿದ್ದರೆ ಗೆಲ್ಲುವ ಅವಕಾಶವಿತ್ತು. ಆದರೆ ಗೌತಮ್ (ಗಂಭೀರ್) ಮತ್ತು ವಿರಾಟ್ (ಕೊಹ್ಲಿ) ಉತ್ತಮ ಬ್ಯಾಟಿಂಗ್ ಮಾಡಿದರು. ಆಮೇಲೆ ಧೋನಿ ಸೇರಿಕೊಂಡು ಪಂದ್ಯವನ್ನು ಮುಗಿಸಿಕೊಟ್ಟರು. ಅದು ಒಳ್ಳೆಯ ಆಟವಾಗಿತ್ತು,' ಎಂದರು.

Story first published: Saturday, July 25, 2020, 9:29 [IST]
Other articles published on Jul 25, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X