ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಕನ್ಕಶನ್ ಸಬ್‌ಸ್ಟಿಟ್ಯೂಟ್‌ಅನ್ನು ಭಾರತ ಸರಿಯಾಗಿಯೇ ಬಳಸಿಕೊಂಡಿದೆ: ಅನಿಲ್ ಕುಂಬ್ಳೆ

Anil Kumble on Chahal as substitute: Dont see any issue with concussion replacement

ಆಸ್ಟ್ರೇಲಿಯಾ ವಿರುದ್ಧದ ಮೊದಲ ಟಿ20 ಪಂದ್ಯದಲ್ಲಿ ಭಾರತ ಭರ್ಜರಿಯಾಗಿ ಗೆದ್ದುಕೊಂಡಿತು. ಆದರೆ ಆಲ್‌ರೌಂಡರ್ ಬ್ಯಾಟಿಂಗ್‌ನ ಅಂತಿಮ ಹಂತದಲ್ಲಿ ತಲೆಗೆ ಏಟು ಮಾಡಿಕೊಂಡ ಬಳಿಕ ಕನ್ಕಶನ್ ಸಬ್‌ಸ್ಟಿಟ್ಯೂಟ್ ನಿಯಮದ ಪ್ರಕಾರ ಯುಜುವೇಂದ್ರ ಚಾಹಲ್‌ಗೆ ಬೌಲಿಂಗ್ ಮಾಡುವ ಅವಕಾಶ ದೊರೆಯಿತು. ಚಾಹಲ್ ಬೌಲಿಂಗ್‌ನಲ್ಲಿ ಮಿಂಚಿ ಆಸ್ಟ್ರೇಲಿಯಾದ ಸೋಲಿಗೆ ಕಾರಣರಾದರು. ಆ ಬಳಿಕ ಈ ನಿಯಮ ಸಾಕಷ್ಟು ಚರ್ಚೆಗೆ ಕಾರಣವಾಗಿದೆ.

ಅನೇಕ ಮಾಜಿ ಆಟಗಾರರು ಈ ಬಗ್ಗೆ ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸುತ್ತಿದ್ದಾರೆ. ಈಗ ಮಾಜಿ ಟೀಮ್ ಇಂಡಿಯಾ ನಾಯಕ ಅನಿಲ್ ಕುಂಬ್ಳೆ ಕೂಡ ಪ್ರತಿಕ್ರಿಯಿಸಿದ್ದು ಟೀಮ್ ಇಂಡಿಯಾ ಈ ನಿಯಮವನ್ನು ಬಳಸಿಕೊಂಡಿರುವದರಲ್ಲಿ ತಪ್ಪೆಸಗಿಲ್ಲ ಎಂದು ಸಮರ್ಥನೆ ಮಾಡಿಕೊಂಡಿದ್ದಾರೆ.

'ಕನ್ಕಶನ್ ಸಬ್‌ಸ್ಟಿಟ್ಯೂಟ್' ದುರ್ಬಳಕೆ ಮಾಡದಂತೆ ಟೇಲರ್ ಎಚ್ಚರಿಕೆ!'ಕನ್ಕಶನ್ ಸಬ್‌ಸ್ಟಿಟ್ಯೂಟ್' ದುರ್ಬಳಕೆ ಮಾಡದಂತೆ ಟೇಲರ್ ಎಚ್ಚರಿಕೆ!

ಎರಡು ವರ್ಷಗಳಿಂದ ನಿಯಮ ಜಾರಿಯಲ್ಲಿದೆ

ಎರಡು ವರ್ಷಗಳಿಂದ ನಿಯಮ ಜಾರಿಯಲ್ಲಿದೆ

ಫಿಲಿಫ್ ಹ್ಯೂಸ್‌ ನಿಧನದ ನಂತರ ಕಳೆದ ಎರಡು ವರ್ಷಗಳಲ್ಲಿ ಈ ನಿಯಮವನ್ನು ಜಾರಿಗೆ ತರಲಾಗಿದೆ. ಯಾರಾದರೂ ತಲೆಗೆ ಏಟು ತಿಂದಾಗ ಕನ್ಕುಶನ್ ಅಗತ್ಯವಾದಾಗ ಇನ್ನೋರ್ವ ಆಟಗಾರನಿಗೆ ಬದಲಿಯಾಗಿ ಸೇರಿಕೊಳ್ಳುವ ಅವಕಾಶ ನೀಡಲಾಗಿತ್ತು. ರವೀಂದ್ರ ಜಡೇಜಾ ತಲೆಗೆ ಏಟು ತಿನ್ನುವ ಮೊದಲೇ ಮಂಡಿರಜ್ಜು ನೋವಿಗೆ ಒಳಗಾಗಿದ್ದರು ಎಂದು ತಿಳಿದಿದೆ. ಆದರೆ ಆಗ ಅವರು ಬದಲಿ ಆಟಗಾರನನ್ನು ಪಡೆದಿರಲಿಲ್ಲ ಎಂದು ಕುಂಬ್ಳೆ ಹೇಳಿದ್ದಾರೆ.

ಮೈದಾನದಲ್ಲೇ ಕನ್ಕಶನ್ ಪರೀಕ್ಷೆ ನಡೆಸಬೇಕೆಂದಿಲ್ಲ

ಮೈದಾನದಲ್ಲೇ ಕನ್ಕಶನ್ ಪರೀಕ್ಷೆ ನಡೆಸಬೇಕೆಂದಿಲ್ಲ

ತಲೆಗೆ ಏಟಿಗೆ ಒಳಗಾದಾಗ ಫಿಸಿಯೋ ಕರೆಯುವುದು ಜಡೇಜಾ ಅವರ ಕರೆಯೆಂದು ನಾನು ಭಾವಿಸುವುದಿಲ್ಲ. ಅದು ಅಂಪೈರ್ ಕರೆಯಾಗಿತ್ತು. ಆದರೆ ಅದು ಆಗಲಿಲ್ಲ. ಕಾರಣ ಜಡೇಜಾ ಒಂಟಿ ರನ್ ತೆಗೆಯಲು ಓಡಿದರು ಮತ್ತು ತಮ್ಮ ಆಟವನ್ನು ಮುಂದುವರಿಸಿದ್ದರು. ಆದರೆ ಕನ್ಕುಶನ್ ಮೈದಾನದಲ್ಲಿ ತಕ್ಷಣವೇ ನಡೆಸಬೇಕೆಂದಿಲ್ಲ. ಡ್ರೆಸ್ಸಿಂಗ್ ರೂಮ್‌ಗೆ ವಾಪಾಸಾದ ಬಳಿಕ ತಲೆ ನೋವಿ ಅಥವಾ ಕಣ್ಣುಮಂಜಾಗುವ ಅನುಭವವಾಗುತ್ತಿದ್ದರೆ ನಡೆಸಬಹುದು. ಬಹುಶಃ ಈ ಪ್ರಕರಣದಲ್ಲಿ ಆಗಿದ್ದು ಕೂಡ ಇದೇ" ಎಂದು ಅನಿಲ್ ಕುಂಬ್ಳೆ ಹೇಳಿದ್ದಾರೆ.

ಚಾಹಲ್ ಕಣಕ್ಕಿಳಿದಿದ್ದು ಸರಿಯಾಗಿದೆ

ಚಾಹಲ್ ಕಣಕ್ಕಿಳಿದಿದ್ದು ಸರಿಯಾಗಿದೆ

ಆದರೆ ಜಡೇಜಾ ಬ್ಯಾಟಿಂಗ್‌ನಲ್ಲಿ ತನ್ನ ಕರ್ತವ್ಯವನ್ನು ನಿರ್ವಹಿಸಿದ್ದರು. ಆಗ ನೀವು ಅವರ ಇನ್ನೊಂದು ಕೌಶಲ್ಯವನ್ನು ಗಮನಿಸಬೇಕು. ಆತನೋರ್ವ ಸ್ಪಿನ್ನರ್. ಹಾಗಾಗಿ ಆತನ ಸ್ಥಾನಕ್ಕೆ ಇನ್ನೋರ್ವ ಸ್ಪಿನ್ನರ್‌ನನ್ನು ಸೇರಿಸಿಕೊಳ್ಳಲಾಯಿತು ಎಂದು ಕುಂಬ್ಳೆ ವಿವರಿಸಿದ್ದಾರೆ.

Story first published: Sunday, December 6, 2020, 12:11 [IST]
Other articles published on Dec 6, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X