ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಪಾಕ್‌ ವಿರುದ್ಧ 10 ವಿಕೆಟ್ ಪಡೆದಾಗಿನ ಅಚ್ಚರಿಯ ಸಂಗತಿ ಬಿಚ್ಚಿಟ್ಟ ಅನಿಲ್ ಕುಂಬ್ಳೆ!

ಅಚ್ಚರಿಯ ಸಂಗತಿಯನ್ನು ಹಂಚಿಕೊಂಡ ಅನಿಲ್ ಕುಂಬ್ಳೆ | Oneindia Kannada
Anil Kumble reveals startling details of historic 10-wicket haul against Pakistan

ಬೆಂಗಳೂರು, ನವೆಂಬರ್ 19: ಪಾಕಿಸ್ತಾನ ವಿರುದ್ಧದ ಐತಿಹಾಸಿಕ 10 ವಿಕೆಟ್‌ಗಳ ಸಾಧನೆಯನ್ನು ಸಹ ಆಟಗಾರ ಸಡಗೋಪನ್ ರಮೇಶ್ ಹೇಗೆ ತಪ್ಪಿಸುವುದರಲ್ಲಿದ್ದರು ಎಂಬ ಅಚ್ಚರಿಯ ಸಂಗತಿಯನ್ನು ಟೀಮ್ ಇಂಡಿಯಾದ ಮಾಜಿ ಲೆಗ್ ಸ್ಪಿನ್ನರ್, ಕನ್ನಡಿಗ ಅನಿಲ್ ಕುಂಬ್ಳೆ ಹೇಳಿಕೊಂಡಿದ್ದಾರೆ.

ಐಪಿಎಲ್: ಆಟಗಾರರ ಹರಾಜಿಗೂ ಮುನ್ನ ಅರಿಯಬೇಕಾದ ಪ್ರಮುಖಾಂಶಗಳು!ಐಪಿಎಲ್: ಆಟಗಾರರ ಹರಾಜಿಗೂ ಮುನ್ನ ಅರಿಯಬೇಕಾದ ಪ್ರಮುಖಾಂಶಗಳು!

ನವದೆಹಲಿಯ ಫಿರೋಜ್‌ ಷಾ ಕೋಟ್ಲಾ (ಈಗಿನ ಅರುಣ್ ಜೇಟ್ಲಿ) ಸ್ಟೇಡಿಯಂನಲ್ಲಿ 1999ರಲ್ಲಿ ನಡೆದಿದ್ದ ಭಾರತ vs ಪಾಕಿಸ್ತಾನ ನಡುವಿನ ದ್ವಿತೀಯ ಟೆಸ್ಟ್‌ನ ದ್ವಿತೀಯ ಇನ್ನಿಂಗ್ಸ್‌ನಲ್ಲಿ ಕುಂಬ್ಳೆ ಅವರಿಂದ ಆಗಲಿದ್ದ 10 ವಿಕೆಟ್‌ಗಳ ವಿಶ್ವ ದಾಖಲೆ ಕೈ ತಪ್ಪುವುದರಲ್ಲಿತ್ತು. ಆದರೆ ಅದೃಷ್ಟ ಕೈ ಹಿಡಿದಿದ್ದರಿಂದ ಕುಂಬ್ಳೆ ಆವತ್ತು ಭಾರತ ಪರ ಇತಿಹಾಸ ನಿರ್ಮಿಸಿದ್ದರು.

ಧೋನಿ ಹೇಳಿದ ಆ ಮಾತಿನಿಂದ ಗಂಭೀರ್ ವಿಶ್ವಕಪ್ ಫೈನಲ್ ಶತಕ ಕೈತಪ್ಪಿತು!!ಧೋನಿ ಹೇಳಿದ ಆ ಮಾತಿನಿಂದ ಗಂಭೀರ್ ವಿಶ್ವಕಪ್ ಫೈನಲ್ ಶತಕ ಕೈತಪ್ಪಿತು!!

ಮಾಜಿ ಕ್ರಿಕೆಟಿಗ ವಿವಿಎಸ್ ಲಕ್ಷ್ಮಣ್ ಅವರ ಜೊತೆ ಸಂವಾದವೊಂದರಲ್ಲಿ ಮಾತನಾಡಿದ ಕುಂಬ್ಳೆ ಆ ಅವಿಸ್ಮರಣೀಯ ಟೆಸ್ಟ್ ಪಂದ್ಯದ ಕ್ಷಣಗಳನ್ನು ಹರವಿಕೊಂಡರು. ಜಾವಗಲ್ ಶ್ರೀನಾಥ್ ಓವರ್‌ನಲ್ಲಿ ವಾಕರ್ ಯೂನಿಸ್ ಟಾಪ್ ಎಡ್ಜ್ ತಾಗಿದ ಚೆಂಡನ್ನು ರಮೇಶ್ ಡ್ರಾಪ್ ಮಾಡಿದ ವಿಚಾರ ಹಂಚಿಕೊಂಡರು.

ಐಪಿಎಲ್ 2020: ಯಾವ ತಂಡದಲ್ಲಿ ಯಾರಿದ್ದಾರೆ? ಸಂಬಳ ಎಷ್ಟು?ಐಪಿಎಲ್ 2020: ಯಾವ ತಂಡದಲ್ಲಿ ಯಾರಿದ್ದಾರೆ? ಸಂಬಳ ಎಷ್ಟು?

'ಆತ (ರಮೇಶ್) ಕ್ಯಾಚ್ ಡ್ರಾಪ್‌ ಮಾಡುವುದರಲ್ಲಿದ್ದರು. ಅದೇ ಅವರ ಯೋಜನೆಯಾಗಿತ್ತು. 9 ವಿಕೆಟ್ ಪಡೆದಿದ್ದ ನನಗೆ 10 ವಿಕೆಟ್‌ ದೊರೆಯಲು ನೆರವು ನೀಡೋದು ತಂಡದ ಯೋಜನೆಯಾಗಿತ್ತು. ರಮೇಶ್‌ಗೆ ಈ ವಿಚಾರ ಗೊತ್ತಿತ್ತೋ ಇಲ್ಲವೋ ಗೊತ್ತಿಲ್ಲ. ಶ್ರೀನಾಥ್ ಓವರ್‌ನಲ್ಲಿ ಯೂನಿಸ್ ಕ್ಯಾಚ್‌ಗೆ ಮುಂದಾಗಿದ್ದ ರಮೇಶ್ ಪುಣ್ಯಕ್ಕೆ ಆ ಕ್ಯಾಚ್ ಅನ್ನು ಡ್ರಾಪ್ ಮಾಡಿದರು,' ಎಂದು ಕುಂಬ್ಳೆ ಹೇಳಿದ್ದಾರೆ.

ಶ್ರೀಲಂಕಾ ಸ್ಪಿನ್ನರ್‌ನ ವಿಚಿತ್ರ ಬೌಲಿಂಗ್ ಶೈಲಿ ನೋಡಿ: ವೈರಲ್ ವಿಡಿಯೋಶ್ರೀಲಂಕಾ ಸ್ಪಿನ್ನರ್‌ನ ವಿಚಿತ್ರ ಬೌಲಿಂಗ್ ಶೈಲಿ ನೋಡಿ: ವೈರಲ್ ವಿಡಿಯೋ

ಸಡಗೋಪನ್ ರಮೇಶ್ ಆ ಕ್ಯಾಚ್ ಬಿಟ್ಟ ಕೆಲವೇ ನಿಮಿಷದಲ್ಲಿ ಕುಂಬ್ಳೆಗೆ ವಾಸಿಂ ಅಕ್ರಮ್ ವಿಕೆಟ್ ಲಭಿಸಿತು. ಆ ದಿನ ಕುಂಬ್ಳೆ ಟೆಸ್ಟ್ ಕ್ರಿಕೆಟ್ ಇನ್ನಿಂಗ್ಸ್‌ ಒಂದರಲ್ಲಿ 10 ವಿಕೆಟ್ ಪಡೆದ ಭಾರತದ ಮೊದಲ ಆಟಗಾರನಾಗಿ ಗುರುತಿಸಿಕೊಂಡಿದ್ದರು. ಈ ಪಂದ್ಯವನ್ನು ಭಾರತ 212 ರನ್‌ಗಳಿಂದ ಗೆದ್ದಿತ್ತು. ಕುಂಬ್ಳೆಗಿಂತ ಮೊದಲು ಇಂಗ್ಲೆಂಡ್‌ನ ಜಿಮ್ ಲ್ಯಾಕರ್ ಇದೇ ಸಾಧನೆಗಾಗಿ ವಿಶ್ವ ದಾಖಲೆ ಬರೆದಿದ್ದರು.

Story first published: Tuesday, November 19, 2019, 13:36 [IST]
Other articles published on Nov 19, 2019
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X