Proud of my son, whose article has been featured in NIF. Tadoba Through My Lens https://t.co/Dxh3xSf9Ee
— Anil Kumble (@anilkumble1074) July 14, 2020
ಫೋಟೋಗ್ರಾಫಿಯಲ್ಲಿ ಮಾಯಾಸ್ ಸಾಧನೆ
ಮಾಯಾಸ್ ಫೋಟೋಗ್ರಫಿ ಬಗ್ಗೆ ಹೆಚ್ಚಿನ ಆಸಕ್ತಿ ಹೊಂದಿದ್ದು ಅದರಲ್ಲೇ ಸಾಧಿಸುವ ಛಲಹೊಂದಿದ್ದಾರೆ. ಅದಕ್ಕೆ ಪೂರಕವಾಗಿ ಅಂತಾರಾಷ್ಟ್ರೀಯ ಫೋಟೋಗ್ರಫಿ ನಿಯತಕಾಲಿಕೆಯಲ್ಲಿ ಸಚಿತ್ರ ಲೇಖನ ಪ್ರಕಟಗೊಂಡಿದೆ. "ನೇಚರ್ ಇನ್ ಫೋಕಸ್" ನಿಯತಕಾಲಿಕೆಯಲ್ಲಿ 16 ವರ್ಷದ ಮಾಯಾಸ್ ಕುಂಬ್ಳೆ ಛಾಯಾಚಿತ್ರಗಳು ಹಾಗೂ ಲೇಖನ ಪ್ರಕಟವಾಗಿದೆ. 2014ರಿಂದ ದಕ್ಷಿಣ ಏಷ್ಯಾದ ಹವ್ಯಾಸಿ ಛಾಯಾಗ್ರಾಹಕರಿಗೆ 'ನೇಚರ್ ಇನ್ ಫೋಕಸ್' ವಿಶೇಷ ವೇದಿಕೆಯನ್ನು ಒದಗಸುತ್ತಿದೆ.
"ನೇಚರ್ ಇನ್ ಫೋಕಸ್"
ಮಹಾರಾಷ್ಟ್ರದ ನಾಗ್ಪುರದಿಂದ 150 ಕಿಲೋ ಮೀಟರ್ ದೂರದಲ್ಲಿರುವ 'ತಡೋಬಾ ಅಂಧೇರಿ ಟೈಗರ್ ರಿಸರ್ವ್'ನಲ್ಲಿ ಮಾಯಾಸ್ ಕುಂಬ್ಳೆ ಕ್ಲಿಕ್ಕಿಸಿದ ಫೋಟೋಗಳನ್ನು 'ನೇಚರ್ ಇನ್ ಫೋಕಸ್' ನಿಯತಕಾಲಿಕೆ ಪ್ರಕಟಿಸಿದೆ. ಕಳೆದ ವರ್ಷ ಪ್ರಯಾಣಿಸಿದ್ದ ವೇಳೆಯ ಫೋಟೋಗಳು ಹಾಗೂ ಆ ಬಗ್ಗೆ ವಿಶೇಷ ಲೇಖನವನ್ನು ಮಾಯಾಸ್ ಕುಂಭ್ಳೆ ವಿವರವಾಗಿ ಬರೆದುಕೊಂಡಿದ್ದಾರೆ.
ಫೋಟೊಗ್ರಾಫಿ ಅನಿಲ್ ಕುಂಬ್ಳೆಯ ಹವ್ಯಾಸ
ಟೀಮ್ ಇಂಡಿಯಾದ ಮಾಜಿ ನಾಯಕ ಅನಿಲ್ ಕುಂಬ್ಳೆಗೆ ಫೋಟೋಗ್ರಾಫಿ ಹವ್ಯಾಸ ಎನ್ನುವುದು ಕ್ರಿಕೆಟ್ ಅಭಿಮಾನಿಗಳಿಗೆ ಗೊತ್ತಿಲ್ಲದ ವಿಚಾರವಲ್ಲ. ಕ್ರಿಕೆಟ್ ಆಡುತ್ತಿದ್ದ ಸಂದರ್ಭಗಳಲ್ಲಿ ಅನಿಲ್ ಕುಂಬ್ಳೆ ವಿಶೇಷ ಕ್ಷಣಗಳನ್ನು ತಮ್ಮ ಕ್ಯಾಮರಾದಲ್ಲಿ ಫೆವಿಲಿಯನ್ನಿಂದಲೇ ಕ್ಲಿಕ್ಕಿಸಿಕೊಳ್ಳುತ್ತಿದ್ದರು. ಬಳಿಕ ವೈಲ್ಡ್ ಲೈಫ್ ಫೋಟೋಗ್ರಫಿಯನ್ನು ಕೂಡ ಹವ್ಯಾಸವನ್ನಾಗಿ ಅನಿಲ್ ಕುಂಬ್ಳೆ ಮುಂದುವರಿಸಿದ್ದರು. ಫೋಟೋಗ್ರಫಿಯ ಬಗ್ಗೆ ಕುಂಬ್ಳೆ 'ವೈಡ್ ಆ್ಯಂಗಲ್' ಎಂಬ ಪುಸ್ತಕವನ್ನೂ ಹೊರತಂದಿದ್ದರು. ಈಗ ಪುತ್ರನೂ ಈ ಹವ್ಯಾಸವನ್ನು ಗಂಭೀರವಾಗಿ ಪರಿಗಣಿಸಿದ್ದಾರೆ.
ಸುಂದರ ಛಾಯಾಚಿತ್ರಗಳು
ಮಯಾಸ್ ಕುಂಬ್ಳೆ ತಮ್ಮ ಛಾಯಾಗ್ರಹಣ ಕಲೆಯನ್ನು ಸುಂದರವಾಗಿ ನಿಯತಕಾಲಿಕೆಯಲ್ಲಿ ವ್ಯಕ್ತಪಡಿಸಿದ್ದಾರೆ. ತಡೋಬಾ ರಾಷ್ಟ್ರೀಯ ಉದ್ಯಾನದಲ್ಲಿನ ಹುಲಿಗಳ ಚಿತ್ರ ಮಾಯಾಸ್ ಕ್ಯಾಮರಾ ಕಣ್ಣಲ್ಲಿ ಅದ್ಭುತವಾಗಿ ಮೂಡಿಬಂದಿದೆ. ಹುಲಿಗಳ ಜೊತೆಗೆ ಜಿಂಕೆ, ಕಾಡುಕೋಣ, ತೋಳ, ಕರಡಿ, ಚಿಗರೆ ಹದ್ದು ಸೇರಿದಂತೆ ಒಟ್ಟು 13 ಫೋಟೋಗಳು ಪ್ರಕಟವಾಗಿದೆ.