ತಮಿಳು ಮಾತನಾಡಿದ ಸ್ಪಿನ್ ಮಾಂತ್ರಿಕ ಅನಿಲ್ ಕುಂಬ್ಳೆ: ವೀಡಿಯೊ

ಬೆಂಗಳೂರು, ಜುಲೈ 31: ಕ್ರಿಕೆಟ್ ಮೂಲಕ ಕರ್ನಾಟಕದ ಹಿರಿಮೆಯನ್ನು ಜಗತ್ತಿಗೆ ಸಾರಿದವರು ಸ್ಪಿನ್ ಮಾಂತ್ರಿಕ ಅನಿಲ್ ಕುಂಬ್ಳೆ. ಟೀಮ್ ಇಂಡಿಯಾದಲ್ಲಿ ಪ್ರಮುಖ ಬೌಲರ್ ಆಗಿದ್ದ ಕುಂಬ್ಳೆ ಟೆಸ್ಟ್ ಕ್ರಿಕೆಟ್‌ನಲ್ಲಿ ಇನ್ನಿಂಗ್ಸ್‌ ಒಂದರಲ್ಲಿ 10ಕ್ಕೆ 10 ವಿಕೆಟ್ ಉರುಳಿಸಿದ ವಿಶ್ವ ದಾಖಲೆ ಹೊಂದಿದ್ದಾರೆ.

ಅದೇ ಕಣ್ಣು!: ಕ್ರಿಕೆಟಿಗ ಶುಭ್‌ಮನ್ ಗಿಲ್, ಸಚಿನ್ ಪುತ್ರಿ ಸಾರಾ 'ಕಣ್ಣಿಟ್ಟ' ಗುಟ್ಟೇನು?

ಟೆಸ್ಟ್ ಮತ್ತು ಏಕದಿನ ಕ್ರಿಕೆಟ್‌ನಲ್ಲಿ ಬೌಲಿಂಗ್ ದಾಖಲೆ ಹೊಂದಿರುವ ಕುಂಬ್ಳೆ, ಮತ್ತೊಬ್ಬ ಸ್ಪಿನ್ನರ್ ಆರ್ ಅಶ್ವಿನ್ ಜೊತೆಗೆ ತಮಿಳು ಮಾತನಾಡಿ ಗಮನ ಸೆಳೆದಿದ್ದಾರೆ. ಅಶ್ವಿನ್‌ ಚಾಟ್ ಶೋ ಎಪಿಸೋಡ್ ಒಂದರಲ್ಲಿ ಕುಂಬ್ಳೆ ತಮಿಳು ಮಾತನಾಡಿದ್ದಾರೆ (ಎಪಿಸೋಡ್‌ನ ಫುಲ್ ವೀಡಿಯೋಗೆ ಟ್ವೀಟ್‌ನಲ್ಲಿರುವ ಲಿಂಕ್ ಕ್ಲಿಕ್ ಮಾಡಬಹುದು).

ಈ 5 ಆಟಗಾರರ ಪಾಲಿಗೆ 2020ರ ಐಪಿಎಲ್ ಕೊನೇಯ ಸೀಸನ್ ಎನಿಸಲಿದೆ!

ರವಿಚಂದ್ರನ್ ಅಶ್ವಿನ್ ಅವರು ತನ್ನ ಯೂಟ್ಯೂಬ್ ಚಾನೆಲ್‌ನಲ್ಲಿ 'ಡಿಆರ್‌ಎಸ್ ವಿತ್ ಅಶ್' ಚಾಟ್ ಎಪಿಸೋಡ್ ನಡೆಸಿಕೊಡುತ್ತಾರೆ. ಇದರಲ್ಲಿ ಕ್ರಿಕೆಟ್ ಕ್ಷಣಗಳನ್ನು ಮೆಲುಕು ಹಾಕಲಾಗುತ್ತದೆ. ಅಭಿಪ್ರಾಯಗಳನ್ನು ತೆಗೆಯಲಾಗುತ್ತದೆ. ಮಾಹಿತಿಪೂರ್ಣ ಸಂವಾದ ನಡೆಸಲಾಗುತ್ತದೆ. ಈ ಬಾರಿ ಈ ಚಾಟ್‌ ಶೋನಲ್ಲಿ ಕುಂಬ್ಳೆ ಕಾಣಿಸಿಕೊಂಡಿದ್ದಾರೆ.

ವೀಡಿಯೋ ಆರಂಭದಲ್ಲಿ ಅಶ್ವಿನ್, 'ನಿಮಗೆ ತಮಿಳು ಮಾತನಾಡಲು ಬಾರದಿದ್ದರೂ ಪರವಾಗಿಲ್ಲ, ತಂಗ್ಳಿಶ್ ಮಾತಾಡಿ. ಆಟದ ವೇಳೆ ನೀವು ಮತ್ತು ಜಾವಗಲ್ ಶ್ರೀನಾಥ್ ಪದೇ ಪದೇ ಏನು ಮಾತನಾಡುತ್ತಿದ್ದಿರಿ? ಸುನಾಮಿಗೂ ನಿಮಗೂ ಏನು ಸಂಬಂಧ?,' ಎಂದು ಪ್ರಶ್ನಿಸಿದ್ದಾರೆ. ಇದಕ್ಕೆ ಕುಂಬ್ಳೆ ತಮಿಳಿನಲ್ಲೇ ಉತ್ತರಿಸಿದ್ದಾರೆ.

For Quick Alerts
ALLOW NOTIFICATIONS
For Daily Alerts

ಕ್ರಿಕೆಟನ್ನು ಪ್ರೀತಿಸುತ್ತೀರಾ? ಋಜುವಾತುಪಡಿಸಿ! ಮೈಖೇಲ್ ಫ್ಯಾಂಟಸಿ ಕ್ರಿಕೆಟ್ ಆಟವಾಡಿ

Story first published: Friday, July 31, 2020, 17:34 [IST]
Other articles published on Jul 31, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X