ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಪಂದ್ಯದ ಮಧ್ಯೆ ಮಗಳ ಗಮನಸೆಳೆಯಲು ಯತ್ನಿಸಿದ ರೋಹಿತ್; ವೀಡಿಯೋ ವೈರಲ್

Animated Rohit Sharma talking to daughter from dressing room

ಟೀಮ್ ಇಂಡಿಯಾ ಉಪ ನಾಯಕ ರೋಹಿತ್ ಶರ್ಮಾ ಮುದ್ದಾದ ಮಗಳ ಜೊತೆಗೆ ಮಗಳ ಜೊತೆಗೆ ಮೈದಾನದಲ್ಲಿ ಮೈದಾನದಾಚೆ ಕಾಣಿಸಿಕೊಂಡಾಗಿನ ಅನೇಕ ಫೋಟೋಗಳು ಅಭಿಮಾನಿಗಳ ವಲಯದಲ್ಲಿ ಸಾಕಷ್ಟು ವೈರಲ್ ಆಗಿದೆ. ಇದೀಗ ಮುಂಬೈನಲ್ಲಿ ನಡೆದ ಪಂದ್ಯದಲ್ಲಿ ರೋಹಿತ್ ಶರ್ಮಾ ಸ್ಟ್ಯಾಂಡ್‌ನಲ್ಲಿ ಪತ್ನಿಯ ಜೊತೆಗಿದ್ದ ಮಗಳ ಜೊತೆಗೆ ಸಂಭಾಷಣೆಗೆ ನಡೆಸಿದ ಪ್ರಯತ್ನ ವೀಡಿಯೋ ಎಲ್ಲರ ಹೃದಯ ಗೆದ್ದಿದೆ.

ವೆಸ್ಟ್ ಇಂಡೀಸ್‌ನ ವಿರುದ್ಧ ಕೊನೆಯ ಪಂದ್ಯದಲ್ಲಿ ಟೀಮ್ ಇಂಡಿಯಾ ಉಪನಾಯಕ ರೋಹಿತ್ ಶರ್ಮಾ ಕೇವಲ 34 ಎಸೆತಗಳಲ್ಲಿ 71 ರನ್ ಸಿಡಿಸಿ ಆರಂಭದಿಂದಲೇ ಪಂದ್ಯವನ್ನು ಟೀಮ್ ಇಂಡಿಯಾ ತನ್ನ ಹಿಡಿತಕ್ಕೆ ತೆಗೆದುಕೊಳ್ಳುವಂತೆ ಮಾಡುವಲ್ಲಿ ಯಶಸ್ವಿಯಾಗಿದ್ದರು. ಗೆಲ್ಲಲೇ ಬೇಕಾಗಿದ್ದ ಪಂದ್ಯದಲ್ಲಿ ಆರಂಭಿಕ ಆಟಗಾರರ ಕೆಎಲ್ ರಾಹುಲ್ ಜೊತೆ ಸೇರಿಕೊಂಡ ರೋಹಿತ್ ಶರ್ಮಾ ಕಿರಾನ್ ಪೊಲಾರ್ಡ್ ಬಳಗವನ್ನು ಅಕ್ಷರಶಃ ಬೆಂಡೆತ್ತಿದ್ದರು.

ವಿಶ್ವದಾಖಲೆಗಾಗಿ ಅಫ್ರಿದಿ, ಗೇಲ್ ಸಾಲು ಸೇರಿದ ಹಿಟ್‌ಮ್ಯಾನ್ ರೋಹಿತ್!ವಿಶ್ವದಾಖಲೆಗಾಗಿ ಅಫ್ರಿದಿ, ಗೇಲ್ ಸಾಲು ಸೇರಿದ ಹಿಟ್‌ಮ್ಯಾನ್ ರೋಹಿತ್!

ಸರಣಿಯ ಮೊದಲೆರಡು ಪಂದ್ಯಗಳಲ್ಲಿ ರೋಹಿತ್ ಶರ್ಮಾ ಮಿಂಚಲು ವಿಫಲರಾಗಿದ್ದರು. ಮೊದಲೆರಡು ಪಂದ್ಯಗಳಲ್ಲಿ ರೋಹಿತ್ ಕ್ರಮವಾಗಿ 8 ಮತ್ತು 15 ರನ್ ಬಾರಿಸಿದ್ದರು. ಮುಂಬೈನ ವಾಂಖೆಡೆ ಕ್ರೀಡಾಂಗಣದಲ್ಲಿ ನಡೆದ ಅಂತಿಮ ಪಂದ್ಯದಲ್ಲಿ ರೋಹಿತ್ ಶರ್ಮಾ ಭರ್ಜರಿ ಅರ್ಧ ಶತಕವನ್ನು ಬಾರಿಸಿ ದೊಡ್ಡ ಮೊತ್ತ ಪೇರಿಸಲು ಕಾರಣರಾದರು.

ಮೊದಲ ವಿಕೆಟ್‌ಗೆ ಶತಕದ ಜೊತೆಯಾಟವನ್ನು ನೀಡಿದ ರೋಹಿತ್ ರಾಹುಲ್ ಜೋಡಿ ರೋಹಿತ್ ಔಟಾಗುವುದರೊಂದಿಗೆ ಬೇರ್ಪಟ್ಟಿತು. ರೋಹಿತ್ ಔಟಾದ ಬಳಿಕ ರೋಹಿತ್ ತನ್ನ ಒಂದು ವರ್ಷದ ಮಗಳು ಸಮೈರಾ ನಡೆಸಿದ ಮುದ್ದಾದ ಸಂಭಾಷಣೆಯ ವೀಡಿಯೋ ಬಹಿರಂಗವಾಗಿದೆ. ಈ ವೀಡಿಯೋದಲ್ಲಿ ಮಗಳ ಗಮನವನ್ನು ದೂರದಿಂದಲೇ ಸೆಳೆಯುವ ಪ್ರಯತ್ನವನ್ನು ರೋಹಿತ್ ಶರ್ಮಾ ಮಾಡಿದ್ದರು. ಈ ಪ್ರಯತ್ನ ಅಭಿಮಾನಿಗಳ ಮನಗೆದ್ದಿಗೆ. ಈ ವೀಡಿಯೋವನ್ನು ಮುಂಬೈ ಇಂಡಿಯನ್ಸ್ ತನ್ನ ಇನ್ಸ್ಟಾಗ್ರಾಂ ಖಾತೆಯಲ್ಲಿ ಹಂಚಿಕೊಂಡಿದೆ.

ಈ ಪಂದ್ಯದ ಮೂಲಕ ರೊಹಿತ್ ಶರ್ಮಾ 400 ಸಿಕ್ಸರ್ ಸಿಡಿಸಿದ ಮೊದಲ ಭಾರತೀಯ ಹಾಗೂ ಒಟ್ಟಾರೆ ಮೂರನೇ ಆಟಗಾರ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಟಾಸ್ ಗೆದ್ದ ವಿಂಡೀಸ್ ಭಾರತವನ್ನು ಮೊದಲು ಬ್ಯಾಟಿಂಗ್‌ಗೆ ಆಹ್ವಾನಿಸಿತು. ಬಳಿಕ ರೋಹಿತ್ ಶರ್ಮಾ ಹೆಚ್ಚು ಕಾಯಿಸದೆ ವಿಂಡಿಸ್ ಪ್ರಮುಖ ವೇಗಿ ಶೆಲ್ಡನ್ ಕಾಟ್ರೆಲ್ ಎಸೆತವನ್ನು ಲಾಂಗ್ ಆನ್ ಕಡೆಗೆ ಸಿಕ್ಸರ್ ಬಾರಿಸುವ ಮೂಲಕ ಈ ದಾಖಲೆಗೆ ಪಾತ್ರರಾದರು.

Story first published: Friday, December 13, 2019, 11:25 [IST]
Other articles published on Dec 13, 2019
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X