ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಆಜೀವ ನಿಷೇಧ ಮರು ಪರಿಶೀಲಿಸುವಂತೆ ಬಿಸಿಸಿಐ ಕೋರಿದ ಅಂಕಿತ್ ಚವಾಣ್

Ankeet Chavan requests BCCI to reconsider life ban

ನವದೆಹಲಿ, ಜುಲೈ 4: ಮುಂಬೈ ಮತ್ತು ರಾಜಸ್ಥಾನ ರಾಯಲ್ಸ್ ತಂಡದ ಮಾಜಿ ಆಟಗಾರ ಅಂಕಿತ್ ಚವಾಣ್, ತನ್ನ ಮೇಲಿರುವ ಆಜೀವ ನಿಷೇಧ ಶಿಕ್ಷೆಯನ್ನು ಮರು ಪರಿಶೀಲಿಸುವಂತೆ ಬೋರ್ಡ್ ಆಫ್ ಕಂಟ್ರೋಲ್ ಫಾರ್ ಕ್ರಿಕೆಟ್ ಇನ್ ಇಂಡಿಯಾ ಮತ್ತು ಮುಂಬೈ ಕ್ರಿಕೆಟ್ ಅಸೋಸಿಯೇಶನ್ (ಎಂಸಿಎ) ಅನ್ನು ವಿನಂತಿಸಿಕೊಂಡಿದ್ದಾರೆ.

ಸಚಿನ್, ವಿರಾಟ್ or ರೋಹಿತ್?: ಬೆಸ್ಟ್ ವೈಟ್‌ ಬಾಲ್ ಕ್ರಿಕೆಟರ್ ಹೆಸರಿಸಿದ ಜಾಫರ್ಸಚಿನ್, ವಿರಾಟ್ or ರೋಹಿತ್?: ಬೆಸ್ಟ್ ವೈಟ್‌ ಬಾಲ್ ಕ್ರಿಕೆಟರ್ ಹೆಸರಿಸಿದ ಜಾಫರ್

2013ರ ಇಂಡಿಯನ್ ಪ್ರೀಮಿಯರ್ ಲೀಗ್‌ನಲ್ಲಿ ರಾಜಸ್ಥಾನ ತಂಡದಲ್ಲಿದ್ದ ಎಸ್ ಶ್ರೀಶಾಂತ್, ಅಂಕಿತ್ ಚವಾಣ್ ಮತ್ತು ಅಜಿತ್ ಚಾಂಡಿಲ ಸ್ಪಾಟ್ ಫಿಕ್ಸಿಂಗ್‌ ಆರೋಪದಲ್ಲಿ ಬಿಸಿಸಿಐನಿಂದ ಆಜೀವ ನಿಷೇಧ ಶಿಕ್ಷೆಗೆ ಗುರಿಯಾಗಿದ್ದರು. ಆದರೆ 2015ರಲ್ಲಿ ಸಾಕ್ಷ್ಯಾಧಾರದ ಕೊರತೆಯಿಂದಾಗಿ ದೆಹಲಿ ನ್ಯಾಯಾಲಯ ಮೂವರೂ ಆಟಗಾರ ಮೇಲಿನ ಎಲ್ಲಾ ಆರೋಪಗಳನ್ನು ಕೈಬಿಟ್ಟಿತ್ತು.

ಐಪಿಎಲ್‌ನಲ್ಲಿ ಅತ್ಯಧಿಕ ಕ್ಯಾಚ್ ದಾಖಲೆ ಬರೆದಿರುವ ಟಾಪ್ 5 ಫೀಲ್ಡರ್‌ಗಳು!ಐಪಿಎಲ್‌ನಲ್ಲಿ ಅತ್ಯಧಿಕ ಕ್ಯಾಚ್ ದಾಖಲೆ ಬರೆದಿರುವ ಟಾಪ್ 5 ಫೀಲ್ಡರ್‌ಗಳು!

ಈ ಮೂವರು ಆಟಗಾರರಲ್ಲಿ ಶ್ರೀಶಾಂತ್ ಆಜೀವ ನಿಷೇಧವನ್ನು ಪ್ರಶ್ನಿಸಿ ಸುಪ್ರೀಮ್ ಕೋರ್ಟ್ ಮೆಟ್ಟಿಲೇರಿದ್ದರು. ಆ ಬಳಿಕ ಶ್ರೀಶಾಂತ್ ಮೇಲಿನ ಆಜೀವ ನಿಷೇಧವನ್ನು 7 ವರ್ಷಗಳಿಗೆ ಕಡಿತಗೊಳಿಸಲಾಗಿತ್ತು. ಶ್ರೀಶಾಂತ್ ನಿಷೇಧ ಇದೇ ಸೆಪ್ಟೆಂಬರ್‌ಗೆ ಕೊನೆಗೊಳ್ಳಲಿದೆ. ಹೀಗಾಗಿ ಅವರ ಹೆಸರನ್ನು ಕೇರಳ ರಣಜಿಯ ಸಂಭಾವ್ಯ ತಂಡದಲ್ಲಿ ಸೇರಿಸಿಕೊಳ್ಳಲಾಗಿದೆ.

2011ರ ವಿಶ್ವಕಪ್ ಫೈನಲ್ ಪಂದ್ಯದಲ್ಲಿ ಫಿಕ್ಸಿಂಗ್: ಆರೋಪಕ್ಕೆ ಸಾಕ್ಷ್ಯವೇ ಇಲ್ಲ ಎಂದ ತನಿಖಾ ತಂಡ2011ರ ವಿಶ್ವಕಪ್ ಫೈನಲ್ ಪಂದ್ಯದಲ್ಲಿ ಫಿಕ್ಸಿಂಗ್: ಆರೋಪಕ್ಕೆ ಸಾಕ್ಷ್ಯವೇ ಇಲ್ಲ ಎಂದ ತನಿಖಾ ತಂಡ

ಈಗ ಅಂಕಿತ್ ಕೂಡ ಆಜೀವ ನಿಷೇಧ ಕಡಿಮೆಗೊಳಿಸುವಂತೆ ಬಿಸಿಸಿಐ ಮತ್ತು ಮುಂಬೈ ಅಸೋಸಿಯೇಶನ್‌ ಅನ್ನು ಕೋರಿಕೊಂಡಿದ್ದಾರೆ. ಆಜೀವ ನಿಷೇಧ ಮರುಪರಿಶೀಲಿಸುವಂತೆ ಚವಾಣ್ ಎಂಸಿಎಯನ್ನು ಕೋರಿಕೊಳ್ಳುತ್ತಿರುವುದು ಇದು ಎರಡನೇ ಬಾರಿ. 2015ರಲ್ಲೂ ಚವಾಣ್ ಆಜೀವ ನಿಷೇಧ ಕಡಿಮೆಗೊಳಿಸಲು ಪ್ರಯತ್ನಿಸಿದ್ದರು.

Story first published: Saturday, July 4, 2020, 18:36 [IST]
Other articles published on Jul 4, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X