ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

'ಬೌಂಡರಿ ಬದಲು 2ನೇ ಸೂಪರ್ ಓವರ್‌ ವಿಶ್ವಕಪ್ ವಿಜೇತರ ನಿರ್ಧರಿಸಲಿ'

ಎಲ್ಲರೂ ಇಷ್ಟ ಪಡುವಂತಹ ರೂಲ್ಸ್ ಹೇಳಿಕೊಟ್ಟ ಕ್ರಿಕೆಟ್ ದೇವರು..? | Oneindia Kannada
Another Super Over should decide the winner instead of boundaries, says Sachin Tendulkar

ಲಂಡನ್, ಜುಲೈ 17: ಅಪರೂಪದ ಸಂದರ್ಭಗಳಿದ್ದಾಗ ವಿಶ್ವಕಪ್ ಫೈನಲ್‌ನಲ್ಲಿ ಬೌಂಡರಿ ಸಂಖ್ಯೆಗಳ ಬದಲು 2ನೇ ಸೂಪರ್ ಓವರ್ ಮೂಲಕ ವಿಜೇತರನ್ನು ನಿರ್ಧರಿಸುವಂತಾಗಬೇಕು ಎಂದು ಭಾರತದ ಕ್ರಿಕೆಟ್ ದಂತಕತೆ ಸಚಿನ್ ತೆಂಡೂಲ್ಕರ್ ಹೇಳಿದ್ದಾರೆ.

4ನೇ ಕ್ರಮಾಂಕಕ್ಕೆ ಆಟಗಾರನ ಸೂಚಿಸಿದ ಭಾರತ ಯು-19 ಮಾಜಿ ಕೋಚ್4ನೇ ಕ್ರಮಾಂಕಕ್ಕೆ ಆಟಗಾರನ ಸೂಚಿಸಿದ ಭಾರತ ಯು-19 ಮಾಜಿ ಕೋಚ್

ಕಳೆದು ಭಾನುವಾರ (ಜುಲೈ 14) ಲಂಡನ್‌ನ ಲಾರ್ಡ್ಸ್‌ನಲ್ಲಿ ನಡೆದಿದ್ದ ವಿಶ್ವಕಪ್ ಫೈನಲ್ ಪಂದ್ಯದಲ್ಲಿ ಇಂಗ್ಲೆಂಡ್ ತಂಡವನ್ನು ಬೌಂಡರಿ ಕೌಂಟ್ ಆಧಾರದಲ್ಲಿ ವಿಜಯಿ ಎಂದು ಘೋಷಿಸಲಾಯ್ತು. ಅಸಲಿಗೆ ನ್ಯೂಜಿಲೆಂಡ್-ಇಂಗ್ಲೆಂಡ್ ನಡುವಿನ ಈ ಫೈನಲ್ ಪಂದ್ಯ ಸಮಬಲಗೊಂಡಿತ್ತು. ಸೂಪರ್ ಓವರ್‌ನಲ್ಲೂ ಇತ್ತಂಡಗಳು ಸಮಬಲ ಸಾಧಿಸಿದ್ದವು.

ವಿಶ್ವಕಪ್‌ ಫೈನಲ್‌ ಸೋಲಿನ ದುಖಃ ತೋಡಿಕೊಂಡ ವಿಲಿಯಮ್ಸನ್‌ವಿಶ್ವಕಪ್‌ ಫೈನಲ್‌ ಸೋಲಿನ ದುಖಃ ತೋಡಿಕೊಂಡ ವಿಲಿಯಮ್ಸನ್‌

ವಿಶ್ವಕಪ್ ಇತಿಹಾಸದಲ್ಲೇ ಅತೀ ಅಪರೂಪದ ಫೈನಲ್ ಪಂದ್ಯವಾಗಿ ಕಾಣಿಸಿಕೊಂಡಿದ್ದ ಈ ಬಾರಿಯ ವಿಶ್ವಕಪ್‌ನಲ್ಲಿ ಆತಿಥೇಯ ಇಂಗ್ಲೆಂಡ್ ಚಾಂಪಿಯನ್‌ ಆಗಿ ಹೊರಹೊಮ್ಮಿದ್ದು ಕ್ರಿಕೆಟ್ ವಲಯದಲ್ಲಿ ಒಂದಿಷ್ಟು ಟೀಕೆಗಳನ್ನೂ ಹುಟ್ಟುಹಾಕಿತ್ತು. ಈ ಬಗ್ಗೆ ಸಚಿನ್ ಅಭಿಪ್ರಾಯ ಹಂಚಿಕೊಂಡಿದ್ದಾರೆ.

ಫುಟ್ಬಾಲ್ ವಿಧಾನ ಬರಲಿ

ಫುಟ್ಬಾಲ್ ವಿಧಾನ ಬರಲಿ

'ಎರಡೂ ತಂಡಗಳು ಗಳಿಸಿದ ಬೌಂಡರಿ ಸಂಖ್ಯೆಗಳಿಗೆ ಬದಲಾಗಿ ಮತ್ತೊಂದು ಸೂಪರ್ ಓವರ್ ನಡೆಸಿ, ಆ ಮೂಲಕ ವಿಶ್ವಕಪ್ ವಿಜೇತರನ್ನು ಆರಿಸಬೇಕು ಎಂದು ನನಗನ್ನಿಸುತ್ತಿದೆ. ಇದು ವಿಶ್ವಕಪ್‌ಗೆ ಮಾತ್ರವೆಂದಲ್ಲ. ಪ್ರಮುಖ ಎಲ್ಲಾ ಪಂದ್ಯಗಳಲ್ಲೂ ಈ ವಿಧಾನ ಪಾಲಿಸುವಂತಾಗಬೇಕು. ಫುಟ್ಬಾಲ್‌ನಲ್ಲಿ ತಂಡಗಳು ಸಮಬಲ ಸಾಧಿಸಿದಾಗ ಹೆಚ್ಚುವರಿ ಕಾಲಾವಕಾಶ ನೀಡಿ ವಿಜೇತರನ್ನು ನಿರ್ಧರಿಸಲಾಗುತ್ತದೆ. ಇದರಿಂದ ಹೆಚ್ಚಿನ ಸಮಸ್ಯೆಗಳೇನೂ ಆಗೋಲ್ಲ' ಎಂದು 100 ಎಂಬಿ ಜೊತೆ ಮಾತನಾಡುತ್ತ ತೆಂಡೂಲ್ಕರ್ ಹೇಳಿಕೊಂಡಿದ್ದಾರೆ.

ಪಂದ್ಯಗಳು ಸಮಬಲ

ಪಂದ್ಯಗಳು ಸಮಬಲ

ಪ್ರಶಸ್ತಿ ಸುತ್ತಿನ ಪಂದ್ಯದಲ್ಲಿ ಮುಖಾಮುಖಿಯಾಗಿದ್ದ ಇಯಾನ್ ಮಾರ್ಗನ್ ನಾಯಕತ್ವದ ಇಂಗ್ಲೆಂಡ್ ಮತ್ತು ಕೇನ್ ವಿಲಿಯಮ್ಸನ್ ಮುಂದಾಳತ್ವದ ನ್ಯೂಜಿಲೆಂಡ್ ಇರಡೂ 241 ರನ್ ಬಾರಿಸಿದ್ದವು. ಕಿವೀಸ್ 50 ಓವರ್‌ಗೆ 8 ವಿಕೆಟ್ ಕಳೆದು 241 ರನ್ ಬಾರಿಸಿದ್ದರೆ, ಇಂಗ್ಲೆಂಡ್ ಎಲ್ಲಾ ವಿಕೆಟ್ ಕಳೆದು 241 ರನ್ ಬಾರಿಸಿತ್ತು. ಸೂಪರ್ ಓವರ್‌ನಲ್ಲೂ ಇತ್ತಂಡಗಳು ತಲಾ 15 ರನ್ ಬಾರಿಸಿದ್ದವು. ಆದರೆ ನ್ಯೂಜಿಲೆಂಡ್‌ನ 17 ಬೌಂಡರಿಗಳಿಗೆ ಬದಲಾಗಿ ಇಂಗ್ಲೆಂಡ್ 26 ಬೌಂಡರಿಗಳನ್ನು ಪರಿಗಣಿಸಿ ಆಂಗ್ಲರಿಗೆ ಚಾಂಪಿಯನ್ ಪಟ್ಟ ನೀಡಲಾಗಿತ್ತು.

ಕ್ರಿಕೆಟಿಗರಿಂದ ಟೀಕೆ

ಕ್ರಿಕೆಟಿಗರಿಂದ ಟೀಕೆ

ಇಂಗ್ಲೆಂಡ್ ಮತ್ತು ವೇಲ್ಸ್‌ನಲ್ಲಿ ಮುಕ್ತಾಯಗೊಂಡ ವಿಶ್ವಕಪ್ ಫೈನಲ್ ಬಳಿಕ ಈಗಿನ ಮತ್ತು ಮಾಜಿ ಕ್ರಿಕೆಟಿಗರೆಲ್ಲ ಫೈನಲ್‌ನಲ್ಲಿನ ನಿಯಮದ ಬಗ್ಗೆ ಟೀಕೆ ವ್ಯಕ್ತಪಡಿಸಿದ್ದರು. ರೋಹಿತ್ ಶರ್ಮಾ, ಯುವರಾಜ್ ಸಿಂಗ್, ಗೌತಮ್ ಗಂಭೀರ್, ಚೇತೇಶ್ವರ್ ಪೂಜಾರ ಇವರೆಲ್ಲ ಫೈನಲ್ ನಿಯಮದ ಬಗ್ಗೆ ಅಸಮಾಧಾನ ತೋರಿಕೊಂಡಿದ್ದರು. ಟೂರ್ನಿಯುದ್ದಕ್ಕೂ ಜಂಟಲ್‌ಮನ್ ಆಟ ತೋರಿದ್ದ ನ್ಯೂಜಿಲೆಂಡ್ ತಂಡ ಟ್ರೋಫಿಯಿಂದ ವಂಚಿಲ್ಪಟ್ಟಿದ್ದು ಅಪಾರ ಕ್ರಿಕೆಟ್ ಅಭಿಮಾನಿಗಳ ಬೇಸರಕ್ಕೂ ಕಾರಣವಾಗಿತ್ತು.

ನಾಕೌಟ್‌ನಲ್ಲಿ ಬದಲಾವಣೆಬೇಕು

ನಾಕೌಟ್‌ನಲ್ಲಿ ಬದಲಾವಣೆಬೇಕು

ವಿಶ್ವಕಪ್ ನಾಕೌಟ್ ಹಂತಗಳಲ್ಲಿ ಬದಲಾವಣೆಗಳಾಗಬೇಕಿದೆಯಾ ಎಂಬ ಪ್ರಶ್ನೆಗೆ ಉತ್ತರಿಸಿದ ತೆಂಡೂಲ್ಕರ್, 'ಟೂರ್ನಿಯುದ್ದಕ್ಕೂ ಅದ್ಭುತ ಆಟ ನೀಡಿದ, ಅಗ್ರ ಸ್ಥಾನದಲ್ಲಿ ಕಾಣಿಸಿಕೊಂಡ ಎರಡು ತಂಡಗಳನ್ನು ನಾಕೌಟ್ ಹಂತಗಳಲ್ಲಿ ಪರಿಗಣಿಸುವಂತಾಗಬೇಕು,' ಎಂದರು. ವಿರಾಟ್ ಕೊಹ್ಲಿ ಕೂಡ ವಿಶ್ವಕಪ್‌ನಲ್ಲಿ ನಾಕೌಟ್ ಬದಲು ಐಪಿಎಲ್ ಮಾದರಿಯ ಪ್ಲೇ ಆಫ್ ಪಂದ್ಯಗಳು ನಡೆಯಬೇಕು ಎಂದು ಹೇಳಿಕೊಂಡಿದ್ದರು.

Story first published: Wednesday, July 17, 2019, 13:40 [IST]
Other articles published on Jul 17, 2019
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X