ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಅಂಶುಲ ಹಣೆಗೆ ಡೋಪ್‌ನಲ್ಲಿ ಸಿಕ್ಕಿಬಿದ್ದ ಮೊದಲ ಮಹಿಳಾ ಕ್ರಿಕೆಟರ್ ಹಣೆಪಟ್ಟಿ

Anshula Rao becomes first woman cricketer in India to fail dope test

ನವದೆಹಲಿ, ಆಗ್ಟ್ 12: ಮಧ್ಯಪ್ರದೇಶದ ಆಲ್ ರೌಂಡರ್ ಅಂಶುಲ ರಾವ್ ಅವರು ಡೋಪಿಂಗ್‌ನಲ್ಲಿ ಸಿಕ್ಕುಬಿದ್ದ ಭಾರತದ ಮೊದಲ ಮಹಿಳಾ ಕ್ರಿಕೆಟರ್ ಆಗಿ ಗುರುತಿಸಿಕೊಂಡಿದ್ದಾರೆ. ಪರೀಕ್ಷೆಯ ವೇಳೆ ಅಂಶುಲ ಉದ್ದೀಪನ ಮದ್ದು ಸೇವಿಸಿರುವುದು ಕಂಡುಬಂದಿದೆ.

ಐಪಿಎಲ್ ನಡೆಸಲು ಬಿಸಿಸಿಐಯ ಅಧಿಕೃತ ಅನುಮೋದನೆ ಪಡೆದ ಇಸಿಬಿಐಪಿಎಲ್ ನಡೆಸಲು ಬಿಸಿಸಿಐಯ ಅಧಿಕೃತ ಅನುಮೋದನೆ ಪಡೆದ ಇಸಿಬಿ

ಅಲ್ಲದೆ ಕಳೆದ ಆಗಸ್ಟ್‌ನಲ್ಲಿ ನ್ಯಾಷನಲ್ ಆ್ಂಟಿ ಡೋಪಿಂಗ್ ಏಜೆನ್ಸಿಯನ್ನು ಬೋರ್ಡ್ ಆಫ್ ಕಂಟ್ರೋಲ್ ಫಾರ್ ಕ್ರಿಕೆಟ್ ಇನ್ ಇಂಡಿಯಾದಲ್ಲಿ ತಂದ ಬಳಿಕ ಮಹಿಳಾ ಅಥವಾ ಪುರುಷ, ಜೂನಿಯರ್ ಅಥವಾ ಸೀನಿಯರ್ ಗಳಲ್ಲಿ ಉದ್ದೀಪನ ಮದ್ದು ಸೇವಿಸಿ ಸಿಕ್ಕಿಬಿದ್ದ ಭಾರತದ ಮೊದಲ ಕ್ರಿಕೆಟರ್ ಆಗಿಯೂ ಅಂಶುಲ ಗುರುತಿಸಿಕೊಂಡಿದ್ದಾರೆ.

ಐಪಿಎಲ್‌ಗೆ ಪತಂಜಲಿ ಪ್ರಾಯೋಜಕತ್ವ: ತಮಾಷೆಯ ಮೀಮ್ಸ್ ಇಲ್ಲಿವೆ ನೋಡಿಐಪಿಎಲ್‌ಗೆ ಪತಂಜಲಿ ಪ್ರಾಯೋಜಕತ್ವ: ತಮಾಷೆಯ ಮೀಮ್ಸ್ ಇಲ್ಲಿವೆ ನೋಡಿ

ಟೀಮ್ ಇಂಡಿಯಾದ ಆರಂಭಿಕ ಬ್ಯಾಟ್ಸ್‌ಮನ್ ಪೃಥ್ವಿ ಶಾ ಕೂಡ ಕಳೆದ ಜೂನ್‌ನಲ್ಲಿ ಕೆಮ್ಮಿಗೆ ಸೇವಿಸುವ ಮದ್ದು ವಿಪರೀತವಾಗಿ ಸೇವಿಸಿ ಡೋಪಿಂಗ್ ಆರೋಪ ಎದುರಿಸಿದ್ದರು. ನಿಷೇಧಕ್ಕೂ ಗುರಿಯಾಗಿದ್ದರು. ಆದರೆ ಆಗ ಬಿಸಿಸಿಐ ನಾಡಾದ ಜೊತೆ ಸೇರಿರಲಿಲ್ಲ.

'ಆತ ಎಲ್ಲಾ ಮಾದರಿಗಳಲ್ಲಿ ಆಡಲಾರ': ಭಾರತದ ಆಟಗಾರನಿಗೆ ಅಖ್ತರ್ ಎಚ್ಚರಿಕೆ!'ಆತ ಎಲ್ಲಾ ಮಾದರಿಗಳಲ್ಲಿ ಆಡಲಾರ': ಭಾರತದ ಆಟಗಾರನಿಗೆ ಅಖ್ತರ್ ಎಚ್ಚರಿಕೆ!

ಮೂಲವೊಂದರ ಪ್ರಕಾರ ಕಳೆದ ಮಾರ್ಚ್‌ನಲ್ಲಿ ಬರೋಡಾದಲ್ಲಿ ನಡೆದ ಪರೀಕ್ಷೆಯ ವೇಳೆ ಉದ್ದೀಪನ ಸೇವಿಸಿದ್ದು ಕಂಡು ಬಂದಿತ್ತು. ಆದರೆ ಪರೀಕ್ಷೆ ನಡೆದಿದ್ದು ಮನೆಯಲ್ಲೋ ಅಥವಾ ತರಬೇತಿಯ ವೇಳೆಯೋ ಅನ್ನೋದು ಸ್ಪಷ್ಟವಾಗಿಲ್ಲ.

Story first published: Wednesday, August 12, 2020, 23:03 [IST]
Other articles published on Aug 12, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X