'ನಿಮ್ಮ ಸಂದೇಶ ಅಸಹ್ಯಕರವಾಗಿದೆ': ಗವಾಸ್ಕರ್ ವಿರುದ್ಧ ಸಿಡಿದ ಅನುಷ್ಕಾ

ನವದೆಹಲಿ: ಬಾಲಿವುಡ್ ನಟಿ, ಟೀಮ್ ಇಂಡಿಯಾ ನಾಯಕ ವಿರಾಟ್ ಕೊಹ್ಲಿಯ ಪತ್ನಿ ಅನುಷ್ಕಾ ಶರ್ಮಾ ಮಾಜಿ ಕ್ರಿಕೆಟರ್ ಸುನಿಲ್ ಗವಾಸ್ಕರ್ ವಿರುದ್ಧ ಕಿಡಿಕಾರಿದ್ದಾರೆ. ವಿರಾಟ್ ಮತ್ತು ಅನುಷ್ಕಾ ಬಗೆಗಿನ ಗವಾಸ್ಕರ್ ಕಾಮೆಂಟ್‌ಗೆ ಅನುಷ್ಕಾ ಖಾರವಾಗೇ ಪ್ರತಿಕ್ರಿಯಿಸಿದ್ದಾರೆ.

ಬಹುಭಾಷಾ ಗಾಯಕ ಎಸ್‌ಪಿ ಬಾಲಸುಬ್ರಮಣ್ಯಂ ಅಗಲಿಕೆಗೆ ಕ್ರೀಡಾಲೋಕದ ಕಂಬನಿ

ಗುರುವಾರ ಕಿಂಗ್ಸ್ ಇಲೆವೆನ್ ಪಂಜಾಬ್ ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು ನಡುವಿನ ಪಂದ್ಯದ ವೇಳೆ ಕಾಮೆಂಟರಿ ಮಾಡುತ್ತಿದ್ದ ಸುನಿಲ್ ಗವಾಸ್ಕರ್ ವಿವಾದಾತ್ಮಕ ಕಾಮೆಂಟ್ ಮಾಡಿದ್ದರು. ಕೊಹ್ಲಿ ಎರಡು ಬಾರಿ ಕ್ಯಾಚ್ ಡ್ರಾಪ್ ಮಾಡಿದ್ದು ಮತ್ತು ಕಳಪೆ ಬ್ಯಾಟಿಂಗ್ ಮಾಡಿದ್ದಕ್ಕೆ ಗವಾಸ್ಕರ್ ಟೀಕಿಸಿ ವಿವಾದ ಸೃಷ್ಟಿಸಿದ್ದರು.

'ಕಾಮೆಂಟರಿಯಿಂದ ಕಿತ್ತಾಕಿ': ಸುನಿಲ್ ಗವಾಸ್ಕರ್ ವಿರುದ್ಧ ಅಭಿಮಾನಿಗಳು ಕಿಡಿ

ಆರ್‌ಸಿಬಿ ಇನ್ನಿಂಗ್ಸ್‌ನಲ್ಲಿ ವಿರಾಟ್ ಕೊಹ್ಲಿ ಕೇವಲ 1 ರನ್‌ಗೆ ವಿಕೆಟ್ ಒಪ್ಪಿಸಿದರು. ಆಗ ಕಾಮೆಂಟರಿ ನೀಡುತ್ತಿದ್ದ ಸುನಿಲ್ ಗವಾಸ್ಕರ್ ಕೊಹ್ಲೀನ ಟೀಕಿಸುವ ಭರದಲ್ಲಿ 'Inhone lockdown me to bas Anushka ki gendon ki practice ki hai' (ಲಾಕ್‌ಡೌನ್‌ ಸಮಯದಲ್ಲಿ ವಿರಾಟ್ ಕೊಹ್ಲಿ ಅನುಷ್ಕಾ ಶರ್ಮಾ ಚೆಂಡುಗಳ ವಿರುದ್ಧ ಮಾತ್ರ ಅಭ್ಯಾಸ ಮಾಡಿದ್ದಾರೆ) ಎಂದಿದ್ದರು. ಇದು ವಿವಾದಕ್ಕೆ ಕಾರಣವಾಗಿದೆ.

ಗವಾಸ್ಕರ್ ಕಾಮೆಂಟ್‌ಗೆ ಅನುಷ್ಕಾ ಶರ್ಮಾ ಪ್ರತಿಕ್ರಿಯಿಸಿದ್ದಾರೆ. ಇನ್‌ಸ್ಟಾಗ್ರಾಮ್ ಸ್ಟೋರಿಯಲ್ಲಿ ಅನುಷ್ಕಾ, 'ಮಿಸ್ಟರ್ ಗವಾಸ್ಕರ್. ನಿಮ್ಮ ಸಂದೇಶ ಅಸಹ್ಯಕರವಾಗಿದೆ. ಗಂಡನ ಆಟಕ್ಕೆ ಹೆಂಡತಿಯನ್ನು ದೂಷಿಸಬೇಕೆನ್ನುವ ಆಲೋಚನೆ ನಿಮ್ಮಲ್ಲಿ ಬಂದಿದ್ದೇಕೆ ಎನ್ನೋದನ್ನು ನೀವು ವಿವರಿಸುವುದನ್ನು ಬಯಸುತ್ತೇನೆ,' ಎಂದು ಬರೆದಿದ್ದಾರೆ (ಮೇಲಿನ ವಿಡಿಯೋ ಗಮನಿಸಿ. ಗವಾಸ್ಕರ್ ಅವರು ಮೇಲಿನ ವಿಡಿಯೋಗೆ ಸಂಬಂಧಿಸಿ ಕಾಮೆಂಟರಿ ಮಾಡಿದ್ದಾರೆ ಎಂದು ಕೆಲವರು ಗವಾಸ್ಕರ್ ಹೇಳಿಕೆಯನ್ನು ಸಮರ್ಥಿಸಿಕೊಳ್ಳುತ್ತಿದ್ದಾರೆ).

ಅನುಷ್ಕಾರ ಮುಂದುವರೆದ ಮೆಸೇಜ್‌ನಲ್ಲಿ, 'ಕಳೆದ ಕೆಲವಾರು ವರ್ಷಗಳಿಂದ ನೀವು ಎಲ್ಲಾ ಕ್ರಿಕೆಟರ್‌ಗಳ ವೈಯಕ್ತಿಕ ಬದುಕನ್ನು ಗೌರವಿಸಿದ್ದೀರಿ ಎಂದು ನಾನು ಭಾವಿಸುತ್ತೇನೆ. ಅದೇ ರೀತಿ ಕಾಮೆಂಟರಿ ವೇಳೆ ನನಗೂ ಮತ್ತು ನಮಗೆ ಗೌರವ ಕೊಡಬೇಕು ಎಂದು ನಿಮಗೆ ಅನ್ನಿಸಲಿಲ್ಲವೆ?' ಎಂದು ಮರು ಪ್ರಶ್ನಿಸಿದ್ದಾರೆ (ಅನುಷ್ಕಾರ ಮೆಸೇಜ್ ಮೇಲಿದೆ).

For Quick Alerts
ALLOW NOTIFICATIONS
For Daily Alerts

ಕ್ರಿಕೆಟನ್ನು ಪ್ರೀತಿಸುತ್ತೀರಾ? ಋಜುವಾತುಪಡಿಸಿ! ಮೈಖೇಲ್ ಫ್ಯಾಂಟಸಿ ಕ್ರಿಕೆಟ್ ಆಟವಾಡಿ

Story first published: Friday, September 25, 2020, 16:59 [IST]
Other articles published on Sep 25, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X