ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಸ್ವಚ್ಛತೆ ಬಗ್ಗೆ ಪಾಠ ಮಾಡಿದ ವಿರುಷ್ಕಾಗೆ ತಿರುಗೇಟು

By Mahesh
ಸ್ವಚ್ಛತೆ ಬಗ್ಗೆ ಪಾಠ ಹೇಳಿದ ವಿರುಷ್ಕಾಗೆ ಅಮ್ಮ-ಮಗನಿಂದ ತರಾಟೆ

ಬೆಂಗಳೂರು, ಜೂನ್ 18: ಟೀಮ್ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಅವರ ಪತ್ನಿ ಅನುಷ್ಕಾ ಶರ್ಮಾ ಅವರು ದಾರಿಹೋಕರಿಗೆ ಸ್ವಚ್ಛತೆ ಪಾಠ ಮಾಡಿದ ವಿಡಿಯೋ ವೈರಲ್ ಆಗಿರುವುದು ಗೊತ್ತಿರಬಹುದು. ಆದರೆ, ಈಗ ಸಾಮಾಜಕ ಜಾಲ ತಾಣಗಳಲ್ಲಿ ವಿರುಷ್ಕಾ ವಿರುದ್ಧ ದನಿಯೆತ್ತಿದ್ದಾರೆ.

ವಿರಾಟ್ ಕೊಹ್ಲಿ ಹಾಗೂ ಅನುಷ್ಕಾ ಶರ್ಮಾ ಕಾರಿನಲ್ಲಿ ಹೋಗುವ ವೇಳೆ ಐಷಾರಾಮಿ ಕಾರಿನಲ್ಲಿ ಸಾಗುತ್ತಿದ್ದವರೊಬ್ಬರು ರಸ್ತೆಯ ಮೇಲೆ ಕಸ ಎಸೆದಿದ್ದು, ಇದು ಅನುಷ್ಕಾ ಶರ್ಮಾರನ್ನು ಕೆರಳಿಸಿತ್ತಲ್ಲದೆ ಕಾರಿನ ಕಿಟಕಿಯಿಂದಲೇ ಅವರುಗಳನ್ನು ತರಾಟೆಗೆ ತೆಗೆದುಕೊಂಡಿದ್ದರು. ಇಡೀ ಘಟನೆಯನ್ನು ರೆಕಾರ್ಡ್ ಮಾಡಿದ್ದ ಕೊಹ್ಲಿ ವಿರುದ್ಧವೂ ತಿರುಗೇಟು, ಸಾಮಾಜಿಕ ಕಾರ್ಯಗಳನ್ನು ಮಾಡಲು ಕೆಲವರಿಗೆ ಧೈರ್ಯವಿಲ್ಲ. ಮಾಡಿದವರನ್ನೂ ಸಹಿಸುವ ಸಹನೆ ಇಲ್ಲವೆಂಬ ಅರ್ಥದ ಪೋಸ್ಟ್ ಹಾಕಿದ್ದರು.

ವಿಡಿಯೋದಲ್ಲಿ ಸೆರೆಯಾಗಿದ್ದ ಅರ್ಹಾನ್ ಸಿಂಗ್ ಪೋಸ್ಟ್ ಒಂದನ್ನು ಹಾಕಿದ್ದು, ರಸ್ತೆಯಲ್ಲಿ ಕಸ ಎಸೆದಿದ್ದ ತನ್ನ ತಪ್ಪಿಗೆ ಕ್ಷಮೆ ಯಾಚಿಸುತ್ತಲೇ, ಬೀದಿಯಲ್ಲಿ ನಿಂತು ಕೂಗುವಂತೆ ನೀವು ನನಗೆ ಹೇಳಿದ್ದು ಎಷ್ಟು ಸರಿ ಎಂದು ಅನುಷ್ಕಾ ಶರ್ಮಾರನ್ನು ಪ್ರಶ್ನಿಸಿದ್ದಾರೆ. ಆಕಸ್ಮಿಕವಾಗಿ ನನ್ನ ಕಾರಿನಿಂದ ಕಸ ಹಾರಿ ಹೋಗಿದೆ ಎಂದಿರುವ ಅರ್ಹಾನ್ ಸಿಂಗ್, ಅದಕ್ಕಿಂತ ಕೆಟ್ಟದಾಗಿತ್ತು ನಿಮ್ಮ ನಡತೆ ಎಂದಿದ್ದಾರೆ.

ಅರ್ಹಾನ್ ಸಿಂಗ್ ಅವರ ತಾಯಿ ಗೀತಾಂಜಲಿ

ಅರ್ಹಾನ್ ಸಿಂಗ್ ಅವರ ತಾಯಿ ಗೀತಾಂಜಲಿ

ಅರ್ಹಾನ್ ಸಿಂಗ್ ಅವರ ತಾಯಿ ಗೀತಾಂಜಲಿ, ಅನುಷ್ಕಾ ಶರ್ಮಾ ಹಾಗೂ ವಿರಾಟ್ ಕೊಹ್ಲಿ ಅವರನ್ನು ಕಟು ಶಬ್ದಗಳಲ್ಲಿ ಟೀಕಿಸಿದ್ದು, ಪ್ರಚಾರ ಪಡೆಯಲು ನನ್ನ ಮಗನನ್ನು ಬಲಿಪಶು ಮಾಡಿದ್ದೀರಿ ಎಂದು ಆರೋಪಿಸಿದ್ದಾರೆ.

ಮಗನ ಮುಖವನ್ನು ಮರೆಮಾಚದೆ ಹಾಕಿದ್ದು ಸರಿಯಲ್ಲ

ಸಾಮಾಜಿಕ ಜಾಲತಾಣಗಳಲ್ಲಿ ನೀವು ಶೇರ್ ಮಾಡಿರೋ ವಿಡಿಯೋದಲ್ಲಿ ನನ್ನ ಮಗನ ಮುಖವನ್ನು ಮರೆಮಾಚದೆ ಹಾಕಲು ನಿಮಗೆ ಎಷ್ಟು ಧೈರ್ಯ ಎಂದಿರುವ ಗೀತಾಂಜಲಿ, ಪರಿಸರದ ಬಗ್ಗೆ ನಿಮಗೆ ಅಷ್ಟು ಕಾಳಜಿ ಇದ್ದರೆ ಮೊದಲು ನಿಮ್ಮ ಸುತ್ತಮುತ್ತಲಿನ ಪ್ರದೇಶದ ಬಗ್ಗೆ ನಿಗಾ ವಹಿಸಿ ಎಂದು ಗುಡುಗಿದ್ದಾರೆ.

ಇಂಥ ಸಮಯದಲ್ಲಿ ವಿಡಿಯೋ ಶೂಟ್?

ದಾರಿ ಹೋಕರಿಗೆ ಪಾಠ ಮಾಡುವ ಸಂದರ್ಭದಲ್ಲಿ ವಿಡಿಯೋ ಮಾಡಬೇಕು ಎಂಬ ನಿಮಗೆ (ವಿರಾಟ್ ಕೊಹ್ಲಿ) ಅನ್ನಿಸಿದ್ದಾದರೂ ಹೇಗೆ?

ಪತ್ನಿಯ ಹೀರೋಯಿಸಂ ಪ್ರದರ್ಶನ ಮುಖ್ಯವೇ?

ನಿಮ್ಮ ಪತ್ನಿ ಅನುಷ್ಕಾ ಅವರ ಹೀರೋಯಿಸಂ ಪ್ರದರ್ಶನ ಅಗತ್ಯವಿದೆಯೇ? ಪ್ರಚಾರ ಪಡೆಯುವುದು ನಿಮ್ಮ ಉದ್ದೇಶವೇ? ಸ್ವಚ್ಛತೆ ಬಗ್ಗೆ ಪಾಠ ಮಾಡಲು ಹೀಗೆಲ್ಲ ಮಾಡಬೇಕೆ?

ಒಳ್ಳೆ ಕಾರ್ಯ ಮಾಡಿದರೆ ತಪ್ಪೇ?

ಸಾಮಾಜಿಕ ಕಾರ್ಯಗಳನ್ನು ಮಾಡಲು ಕೆಲವರಿಗೆ ಧೈರ್ಯವಿಲ್ಲ. ಮಾಡಿದವರನ್ನೂ ಸಹಿಸುವ ಸಹನೆ ಇಲ್ಲವೆಂಬ ಎಂಬ ಅರ್ಥದಲ್ಲಿ ಕೊಹ್ಲಿ ಪೋಸ್ಟ್ ಮಾಡಿದ್ದಾರೆ.

ಅರ್ಹಾನ್ ಸಿಂಗ್ ಅವರ ಪ್ರತಿಕ್ರಿಯೆ

ಬೀದಿಯಲ್ಲಿ ನಿಂತು ಕೂಗುವಂತೆ ನೀವು ನನಗೆ ಹೇಳಿದ್ದು ಎಷ್ಟು ಸರಿ ಎಂದು ಅನುಷ್ಕಾ ಶರ್ಮಾರನ್ನು ಪ್ರಶ್ನಿಸಿದ್ದಾರೆ. ಆಕಸ್ಮಿಕವಾಗಿ ನನ್ನ ಕಾರಿನಿಂದ ಕಸ ಹಾರಿ ಹೋಗಿದೆ ಎಂದಿರುವ ಅರ್ಹಾನ್ ಸಿಂಗ್, ಅದಕ್ಕಿಂತ ಕೆಟ್ಟದಾಗಿತ್ತು ನಿಮ್ಮ ನಡತೆ ಎಂದಿದ್ದಾರೆ.

Story first published: Monday, June 18, 2018, 13:49 [IST]
Other articles published on Jun 18, 2018
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X