ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಇಂಗ್ಲೆಂಡ್ ಕ್ರಿಕೆಟ್ ತಂಡದಲ್ಲಿ ಕೋವಿಡ್ ಪ್ರಕರಣ: ಭಾರತ ಶ್ರೀಲಂಕಾ ಸರಣಿಗೂ ಆತಂಕ!

Anxiety for the India-Sri Lanka series due to the Covid case in Englands cricket squad
ಶ್ರೀಲಂಕಾ ಆಟಗಾರರಿಗೆ ಕಾಡುತಿದೆ ಕೋವಿಡ್ ಚಿಂತೆ | Oneindia Kannada

ಭಾರತ ಹಾಗೂ ಶ್ರೀಲಂಕಾ ನಡುವಿನ ಸೀಮಿತ ಓವರ್‌ಗಳ ಸರಣಿಗೆ ಇನ್ನು ಒಂದು ವಾರವಷ್ಟೇ ಬಾಕಿಯಿದೆ. ಭಾರತೀಯ ಕ್ರಿಕೆಟ್ ತಂಡದ ಆಟಗಾರರು ಈ ಸರಣಿಗೆ ಭರ್ಜರಿ ಸಿದ್ಧತೆಯನ್ನು ನಡೆಸುತ್ತಿದ್ದಾರೆ. ಈ ಮಧ್ಯೆ ಹೊಸ ಆತಂಕ ಈ ಸರಣಿಗೆ ತಲೆದೂರಿದೆ. ಇಂಗ್ಲೆಂಡ್ ತಂಡದ ಸದಸ್ಯರಲ್ಲಿ ಕೊರೊನಾವೈರಸ್ ಕಾಣಿಸಿಕೊಂಡಿರುವುದು ಈ ಸರಣಿಯ ಮೇಲೂ ಆತಂಕದ ಛಾಯೆ ಮೂಡುವಂತೆ ಮಾಡಿದೆ.

ಇಂಗ್ಲೆಂಡ್ ಹಾಗೂ ಶ್ರೀಲಂಕಾ ಕ್ರಿಕೆಟ್ ತಂಡಗಳ ನಡುವಿನ ಸೀಮಿತ ಓವರ್‌ಗಳ ಸರಣಿ ಕಳೆದ ಭಾನುವಾರವಷ್ಟೇ ಅಂತ್ಯವಾಗಿತ್ತು. ಮಳೆಯಿಂದಾಗಿ ಫಲಿತಾಂಶವಿಲ್ಲದೆ ಆ ಪಂದ್ಯ ರದ್ದಾಗಿತ್ತು. ಈ ಮೂಲಕ ಮೂರು ಪಂದ್ಯಗಳ ಏಕದಿನ ಸರಣಿ 2-0 ಅಂತರದಿಂದ ಇಂಗ್ಲೆಂಡ್ ಪಾಲಾಗಿತ್ತು. ಆದರೆ ಈ ಸರಣಿಯ ಅಂತ್ಯದ ಬಳಿಕ ಕೊರೊನಾ ಪರೀಕ್ಷೆಗೆ ಒಳಗಾದ ಇಂಗ್ಲೆಂಡ್ ತಂಡಕ್ಕೆ ಆಘಾತ ಉಂಟಾಗಿತ್ತು. ಮೂವರು ಆಟಗಾರರು ಸಹಿತ ಇಂಗ್ಲೆಂಡ್ ಪಾಳಯದ ಏಳು ಮಂದಿ ಕೊರೊನಾವೈರಸ್‌ಗೆ ತುತ್ತಾಗಿದ್ದರು.

ಐಸೋಲೇಶನ್‌ನಲ್ಲಿ ಲಂಕಾ ತಂಡ

ಐಸೋಲೇಶನ್‌ನಲ್ಲಿ ಲಂಕಾ ತಂಡ

ಈ ಬೆಳವಣಿಗೆಯಿಂದಾಗಿ ಶ್ರಿಲಂಕಾ ತಂಡಕ್ಕೂ ಈಗ ಕೊರೊನಾವೈರಸ್‌ನ ಆತಂಕ ಉಂಟಾಗಿದೆ. ಹೀಗಾಗಿ ಇಂಗ್ಲೆಂಡ್‌ನಿಂದ ಮಂಗಳವಾರ ಕೊಲಂಬೋಗೆ ಬಂದಿಳಿದ ಶ್ರೀಲಂಕಾ ತಂಡದ ಆಟಗಾರರು ಹೋಟೆಲ್‌ನಲ್ಲಿ ಐಸೋಲೇಶನ್‌ಗೆ ಒಳಗಾಗಿದ್ದಾರೆ. ಎಲ್ಲಾ ಆಟಗಾರರನ್ನು ರ್ಯಾಪಿಡ್ ಆ್ಯಂಟಿಜನ್ ಟೆಸ್ಟ್‌ಗೆ ಒಳಪಡಿಸಲಾಗಿದೆ ಎಂದು ಶ್ರೀಲಂಕಾ ಕ್ರಿಕೆಟ್ ತಂಡದ ಕೋಚ್ ಮಿಕ್ಕಿ ಆರ್ಥರ್ ಸ್ಪಷ್ಟಪಡಿಸಿದ್ದಾರೆ.

ಮತ್ತೊಂದು ಪರೀಕ್ಷೆಗೆ ಒಳಗಾಗಲಿದ್ದಾರೆ ಲಂಕಾ ಆಟಗಾರರು

ಮತ್ತೊಂದು ಪರೀಕ್ಷೆಗೆ ಒಳಗಾಗಲಿದ್ದಾರೆ ಲಂಕಾ ಆಟಗಾರರು

ಭಾರತದ ವಿರುದ್ಧ ಏಕದಿನ ಸರಣಿಯ ಹಿನ್ನೆಲೆಯಲ್ಲಿ ಶ್ರಿಲಂಕಾ ತಂಡ ಬಯೋಬಬಲ್‌ಅನ್ನು ಮತ್ತಷ್ಟು ಕಠಿಣಗೊಳಿಸಲು ನಿರ್ಧರಿಸಿದೆ. ಶ್ರೀಲಂಕಾ ತಂಡದ ಎಲ್ಲಾ ಆಟಗಾರರು ಬುಧವಾರ ಮತ್ತೊಂದು ಸುತ್ತಿನ ಕೊರೊನಾ ಪರೀಕ್ಷೆಗೆ ಒಳಗಾಗಲಿದ್ದು ಅದರ ಫಲಿತಾಂಶ ಪಡೆದ ನಂತರವೇ ಅಭ್ಯಾಸಕ್ಕೆ ಇಳಿಯಲಿದ್ದಾರೆ.

ಲಂಕಾ ತಂಡದ ಬೆಳವಣಿಗೆ ಮೇಲೆ ಬಿಸಿಸಿಐ ಚಿತ್ತ

ಲಂಕಾ ತಂಡದ ಬೆಳವಣಿಗೆ ಮೇಲೆ ಬಿಸಿಸಿಐ ಚಿತ್ತ

ಈ ಮಧ್ಯೆ ಭಾರತೀಯ ಕ್ರಿಕೆಟ್ ತಂಡದ ಆಟಗಾರರ ಅಭ್ಯಾಸ ಶ್ರೀಲಂಕಾದಲ್ಲಿ ಮುಂದುವರಿದಿದೆ. ಇಂಗ್ಲೆಂಡ್ ತಂಡದ ಏಳು ಸದಸ್ಯರಲ್ಲಿ ಕೊರೊನಾವೈರಸ್ ಪತ್ತೆಯಾಗಿರುವ ಕಾರಣದಿಂದಾಗಿ ಶ್ರೀಲಂಕಾ ತಂಡದಲ್ಲಿ ನಡೆಯುವ ಬೆಳವಣಿಗೆಯ ಬಗ್ಗೆ ಬಿಸಿಸಿಐ ದೃಷ್ಟಿಯಿಟ್ಟಿದೆ. ಈ ಬಗ್ಗೆ ಬಿಸಿಸಿಐ ಕಾರ್ಯದರ್ಶಿ ಅರುಣ್ ಧುಮಲ್ ಮಾತನಾಡಿದ್ದು ತಂಡದ ಮ್ಯಾನೇಜ್‌ಮೆಂಟ್‌ಗೆ ಹೆಚ್ಚಿನ ಎಚ್ಚರಿಕೆ ವಹಿಸಲು ಸೂಚಿಸಲಾಗಿದೆ ಎಂದಿದ್ದಾರೆ.

ಜುಲೈ 13ರಿಂದ ಸರಣಿ ಆರಂಭ

ಜುಲೈ 13ರಿಂದ ಸರಣಿ ಆರಂಭ

ಭಾರತ ಹಾಗೂ ಶ್ರೀಲಂಕಾ ತಂಡಗಳ ನಡುವಿನ ಸೀಮಿತ ಓವರ್‌ಗಳಲ್ಲಿ ಮೊದಲಿಗೆ ಏಕದಿನ ಸರಣಿ ನಡೆಯಲಿದೆ. ಜುಲೈ 13ರಂದು ಮೊದಲ ಪಂದ್ಯ ಕೊಲಂಬೋದ ಪ್ರೇಮದಾಸ ಸ್ಟೇಡಿಯಂನಲ್ಲಿ ನಡೆಯಲಿದೆ. ಭಾರತ ತಂಡವನ್ನು ಶಿಖರ್ ಧವನ್ ಮುನ್ನಡೆಸಲಿದ್ದು ಯುವ ಆಟಗಾರರ ಪ್ರದರ್ಶನ ಹೇಗಿರಲಿದೆ ಎಂಬುದು ಕುತೂಹಲ ಮೂಡಿಸಿದೆ.

Story first published: Wednesday, July 7, 2021, 16:16 [IST]
Other articles published on Jul 7, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X