ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

'ಏನಾಗ್ತಿದೆ ಎಂದು ನೀವು ನೋಡಲ್ವಾ': ವರ್ಣಬೇಧ ನೀತಿಯ ಬಗ್ಗೆ ಐಸಿಸಿಯನ್ನು ಪ್ರಶ್ನಿಸಿದ ಡ್ಯಾರನ್ ಸಮಿ

Are You Not Seeing What’s Happening: Daren Sammy Urges Icc

ವೆಸ್ಟ್ ಇಂಡೀಸ್‌ನ ದಿಗ್ಗಜ ಕ್ರಿಕೆಟಿಗ ಕ್ರಿಸ್ ಗೇಲ್ ಬಳಿಕ ಮತ್ತೋರ್ವ ವೆಸ್ಟ್ ಇಂಡೀಸ್‌ನ ಕ್ರಿಕೆಟಿಗ ವರ್ಣಬೇಧ ನೀತಿಯ ವಿರುದ್ಧ ಧ್ವನಿ ಎತ್ತಿದ್ದಾರೆ. ವೆಸ್ಟ್ ಇಂಡೀಸ್‌ನ ಮಾಜಿ ನಾಯಕ ಡ್ಯಾರನ್ ಸಮಿ ಕ್ರಿಸ್ ಗೇಲ್ ಬಳಿಕ ತಾವೂ ಕ್ರಿಕೆಟ್‌ನಲ್ಲಿ ವರ್ಣಬೇಧ ನೀತಿಗೆ ಒಳಗಾಗಿದ್ದೇನೆ ಎಂದು ಹೇಳಿಕೊಂಡಿರುವ ಆಟಗಾರನಾಗಿದ್ದಾರೆ.

ಅಮೆರಿಕಾದಲ್ಲಿ ಜಾರ್ಜ್ ಫ್ಲಾಯ್ಡ್ ಹತ್ಯೆಯ ಬಳಿಕ ವರ್ಣಬೇಧ ನೀತಿಯ ವಿರುದ್ಧ ದೊಡ್ಡ ಹೋರಾಟಗಳು ನಡೆಯುತ್ತಿದೆ. ಇದೇ ಹಿನ್ನೆಲೆಯಲ್ಲಿ ಕ್ರೀಡಾಪಟುಗಳು ಕೂಡ ತಾವು ಅನುಭವಿಸುತ್ತಿರುವ ಪರಿಸ್ಥಿತಿಗಳಬಗ್ಗೆ ಧ್ವನಿಯೆತ್ತಲು ಆರಂಭಿಸಿದ್ದಾರೆ. ಕ್ರಿಕೆಟ್‌ನಲ್ಲೂ ಇದು ನಡೆಯುತ್ತಿದೆ ಎಂದು ಮೊದಲಿಗೆ ಕ್ರಿಸ್ ಗೇಲ್ ಸಾಮಾಜಿಕ ಜಾಲತಾಣದಲ್ಲಿ ಹೇಳಿಕೊಂಡಿದ್ದರು.

ಜಾರ್ಜ್ ಫ್ಲಾಯ್ಡ್ ಹತ್ಯೆಗೆ ಒಂದಾದ ಕ್ರೀಡಾಲೋಕ : ಕ್ರಿಕೆಟ್‌ನ ವರ್ಣಭೇದ ನೀತಿ ಬಗ್ಗೆ ಗೇಲ್ ಪ್ರಸ್ತಾಪಜಾರ್ಜ್ ಫ್ಲಾಯ್ಡ್ ಹತ್ಯೆಗೆ ಒಂದಾದ ಕ್ರೀಡಾಲೋಕ : ಕ್ರಿಕೆಟ್‌ನ ವರ್ಣಭೇದ ನೀತಿ ಬಗ್ಗೆ ಗೇಲ್ ಪ್ರಸ್ತಾಪ

ಈಗ ಡ್ಯಾರನ್ ಸಮಿ ಕೂಡ ಇದೇ ವಿಚಾರವಾಗಿ ಸಾಮಾಜಿಕ ಜಾಲತಾಣದಲ್ಲಿ ಮಾತನಾಡಿದ್ದಾರೆ. ಐಸಿಸಿ ಮತ್ತು ಇತರೆ ಕ್ರಿಕೆಟ್ ಮಂಡಳಿಗಳು ಒಗ್ಗೂಡಿ ವರ್ಣಬೇಧ ಮಾಡುವ ದುಷ್ಟರ ವಿರುದ್ಧ ಹೋರಾಟವನ್ನು ಮಾಡಬೇಕು ಎಂದು ಸಮಿ ಒತ್ತಾಯವನ್ನು ಮಾಡಿದ್ದಾರೆ.

ಬಹಳ ಕಾಲದಿಂದ ಕಪ್ಪು ಜನರು ಈ ಸಂಕಷ್ಟವನ್ನು ಅನುಭವಿಸುತ್ತಿದ್ದಾರೆ. ನಾನು ಸೇಂಟ್ ಲೂಸಿಯಾದಲ್ಲಿದ್ದೇನೆ ಮತ್ತು ನಾನು ನಿರಾಶೆಗೊಂಡಿದ್ದೇನೆ. ನೀವು ನನ್ನನ್ನು ತಂಡದ ಸಹ ಆಟಗಾರನಾಗಿ ನೋಡಿದರೆ ನೀವು ನನ್ನಲ್ಲಿ ಜಾರ್ಜ್ ಫ್ಲಾಯ್ಡ್ ಅನ್ನು ನೋಡುತ್ತೀರಿ. ನಿಮ್ಮ ಬೆಂಬಲವನ್ನು ತೋರಿಸುವ ಮೂಲಕ ನೀವು ಬದಲಾವಣೆಯ ಭಾಗವಾಗಬಹುದೇ? ಬ್ಲ್ಯಾಕ್ ಲೈವ್ಸ್ ಮ್ಯಾಟರ್ ಎಂದು ಸ್ಯಾಮಿ ಬರೆದಿದ್ದಾರೆ.

ವರ್ಣಬೇಧ ನೀತಿ ಬರೀ ಫುಟ್ಬಾಲ್‌ನಲ್ಲಲ್ಲ, ಕ್ರಿಕೆಟ್‌ನಲ್ಲೂ ಇದೆ: ಕ್ರಿಸ್ ಗೇಲ್ವರ್ಣಬೇಧ ನೀತಿ ಬರೀ ಫುಟ್ಬಾಲ್‌ನಲ್ಲಲ್ಲ, ಕ್ರಿಕೆಟ್‌ನಲ್ಲೂ ಇದೆ: ಕ್ರಿಸ್ ಗೇಲ್

ಐಸಿಸಿ ಮತ್ತು ಇತರ ಎಲ್ಲ ಬೋರ್ಡ್‌ಗಳು ನನ್ನಂತಾ ಜನರಿಗೆ ಏನಾಗುತ್ತಿದೆ ಎಂದು ನೀವು ನೋಡುತ್ತಿಲ್ಲವೇ? ನಾನು ಅನುಭವಿಸುತ್ತಿರುವ ರೀತಿಯ ಸಾಮಾಜಿಕ ಅನ್ಯಾಯದ ವಿರುದ್ಧ ನೀವು ಧ್ವನಿಎತ್ತುವುದಿಲ್ಲವೇ? ಇದು ಮೌನವಿರುವ ಸಮಯವಲ್ಲ. ಇದು ಪ್ರತಿ ದಿನವೂ ಸಂಭವಿಸುತ್ತದೆ ಎಂದು ಮತ್ತೊಂದು ಟ್ವೀಟ್ ಮಾಡಿದ್ದಾರೆ ವೆಸ್ಟ್ ಇಂಡೀಸ್ ಕ್ರಿಕೆಟರ್ ಸಮಿ.

Story first published: Tuesday, June 2, 2020, 14:57 [IST]
Other articles published on Jun 2, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X