ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ದೇಶೀಯ ಕ್ರಿಕೆಟ್ ಸೀಸನ್‌ ಹಿನ್ನಲೆ: ಗೋವಾದಲ್ಲಿ ಅಭ್ಯಾಸ ಆರಂಭಿಸಿದ ಅರ್ಜುನ್ ತೆಂಡೂಲ್ಕರ್‌

Arjun Tendulkar

ಕ್ರಿಕೆಟ್ ದಿಗ್ಗಜ ಸಚಿನ್ ತೆಂಡೂಲ್ಕರ್ ಪುತ್ರ ಅರ್ಜುನ್ ತೆಂಡೂಲ್ಕರ್‌ ಇತ್ತೀಚೆಗಷ್ಟೇ ಮುಂಬೈ ಕ್ರಿಕೆಟ್ ತಂಡವನ್ನ ತೊರೆದು ಗೋವಾವನ್ನ ಸೇರುವ ಮೂಲಕ ಸುದ್ದಿಯಾಗಿದ್ದರು. ಮುಂಬೈ ತಂಡದಲ್ಲಿ ತೀವ್ರ ಸ್ಪರ್ಧೆ ಹಿನ್ನಲೆಯಲ್ಲಿ ಅರ್ಜುನ್‌ಗೆ ಅವಕಾಶಗಳು ದೊರೆಯುತ್ತಿರಲಿಲ್ಲ. ಹೀಗಾಗಿ ಆತ ಗೋವಾ ಕ್ರಿಕೆಟ್‌ ತಂಡವನ್ನು ಈಗಾಗಲೇ ಸೇರಿಕೊಂಡಿದ್ದಾರೆ.

ಭಾನುವಾರ ತನ್ನ ಇನ್‌ಸ್ಟಾಗ್ರಾಮ್‌ ಸ್ಟೋರಿಯಲ್ಲಿ ಅಭ್ಯಾಸದ ವೀಡಿಯೋವನ್ನ ಪೋಸ್ಟ್ ಮಾಡಿರುವ ಅರ್ಜುನ್ ತೆಂಡೂಲ್ಕರ್ ಈಗಾಗಲೇ ಗೋವಾ ಕ್ರಿಕೆಟ್‌ ಅಸೋಸಿಯೇಷನ್‌ನ ಟ್ರೈನಿಂಗ್‌ ಕ್ಯಾಂಪ್‌ನಲ್ಲಿ ಅಭ್ಯಾಸ ಆರಂಭಿಸಿದ್ದಾರೆ. ಈ ಮೂಲಕ ಮುಂಬರುವ ದೇಶೀಯ ಕ್ರಿಕೆಟ್ ಟೂರ್ನಮೆಂಟ್‌ ಆಡಲು ಅರ್ಜುನ್‌ ಈಗಿನಿಂದಲೇ ತಯಾರಿ ನಡೆಸಿದ್ದಾರೆ.

ರಣಜಿ ಕ್ರಿಕೆಟ್ ಪದಾರ್ಪಣೆ ಮಾಡಲು ಎದುರು ನೋಡುತ್ತಿರುವ ಅರ್ಜುನ್

ಅರ್ಜುನ್ ತೆಂಡೂಲ್ಕರ್‌ ರಣಜಿ ಟೂರ್ನಮೆಂಟ್‌ನಲ್ಲಿ ಆಡಲು ಅವಕಾಶಕ್ಕಾಗಿ ಇನ್ನೂ ಎದುರು ನೋಡುತ್ತಿದ್ದಾರೆ. ಇದುವರೆಗೆ ಮುಂಬೈ ಪರ 2020/21ರ ಸೈಯದ್ ಮುಷ್ತಾಕ್ ಅಲಿ ಟಿ20 ಟೂರ್ನಮೆಂಟ್‌ನಲ್ಲಿ ಎರಡು ಟಿ20 ಪಂದ್ಯಗಳನ್ನ ಮಾತ್ರ ಆಡಿದ್ದಾರೆ.

ಇನ್‌ಸ್ಟಾಗ್ರಾಮ್‌ನಲ್ಲಿ ಪೋಸ್ಟ್‌ ಮಾಡಿರುವ ವೀಡಿಯೋದಲ್ಲಿ ಅರ್ಜುನ್ ತೆಂಡೂಲ್ಕರ್ ಗೋವಾ ಕ್ರಿಕೆಟ್ ಅಸೋಸಿಯೇಷನ್‌ನ ಅಭ್ಯಾಸದ ಸ್ಥಳದಲ್ಲಿ ನೆಟ್ ಪ್ರಾಕ್ಟೀಸ್‌ ಮಾಡುವ ಮೂಲಕ ಮುಂದಿನ ದೇಶೀಯ ಟೂರ್ನಮೆಂಟ್‌ಗೆ ತಯಾರಿ ನಡೆಸಿದ್ದಾರೆ.

ಅಂತರಾಷ್ಟ್ರೀಯ ಕ್ರಿಕೆಟ್‌ಗೆ ಧೋನಿ ನಿವೃತ್ತಿ ಘೋಷಿಸಿ ಇಂದಿಗೆ 2 ವರ್ಷ: ವೀಡಿಯೋ ಮೂಲಕ ಗೌರವ ಸೂಚಿಸಿದ ಐಸಿಸಿ

ಐಪಿಎಲ್‌ನಲ್ಲಿ ಮುಂಬೈ ಇಂಡಿಯನ್ಸ್ ತಂಡದ ಭಾಗವಾಗಿದ್ದರು!

ಐಪಿಎಲ್‌ನಲ್ಲಿ ಮುಂಬೈ ಇಂಡಿಯನ್ಸ್ ತಂಡದ ಭಾಗವಾಗಿದ್ದರು!

ಐಪಿಎಲ್ 2022ರ ಋತುವಿನಲ್ಲಿ ಮುಂಬೈ ಇಂಡಿಯನ್ಸ್ ತಂಡವು ದಯನೀಯವಾಗಿ ಸೋತಿದ್ದು, ಸತತ ಎಂಟು ಪಂದ್ಯಗಳಲ್ಲಿ ಸೋಲನುಭವಿಸಿತು. ಈ ಸಂದರ್ಭದಲ್ಲಿ ಅರ್ಜುನ್‌ಗೆ ಅವಕಾಶ ನೀಡಬಹುದೆಂದು ನಿರೀಕ್ಷಿಸಲಾಗಿತ್ತು. ಆದರೆ ಮುಂಬೈ ಮ್ಯಾನೇಜ್‌ಮೆಂಟ್ ಒಂದೇ ಒಂದು ಪಂದ್ಯದಲ್ಲಿ ಅವರನ್ನು ಖುಷಿಪಡಿಸಲಿಲ್ಲ. ಇದರ ಬಳಿಕ ಮುಂಬೈ ರಣಜಿ ತಂಡದಲ್ಲಿ ಸರ್ಫರಾಜ್ ಖಾನ್ ಮತ್ತು ಅವರ ಸಹೋದರ ಮುಶೀರ್ ಸ್ಥಾನ ಪಡೆದರು. ಕೂಚ್ ಬೆಹರ್ ಟ್ರೋಫಿಯಲ್ಲಿ ಮುಶೀರ್ ಮಿಂಚಿದ್ದರು. ವಾಸಿಂ ಜಾಫರ್ ಅವರ ಅಳಿಯ ಅರ್ಮಾನ್ ಜಾಫರ್ ಅವರಿಗೂ ಅವಕಾಶ ಸಿಕ್ಕಿತು. ಆದ್ರೆ ಅರ್ಜುನ್‌ಗೆ ಮಾತ್ರ ಮುಂಬೈ ತಂಡದಲ್ಲಿ ಅವಕಾಶ ಸಿಗದ ಕಾರಣ ಗೋವಾದತ್ತ ಮುಖಮಾಡಿದರು.

ಕುಮಾರ ಸಂಗಕ್ಕಾರ ದಾಖಲೆಯನ್ನ ಮುರಿದ ಚೇತೇಶ್ವರ ಪೂಜಾರ: ಗರಿಷ್ಠ ರನ್ ಕಲೆಹಾಕಿದ ಏಷ್ಯಾದ ಕ್ರಿಕೆಟರ್‌

ನಾವು ಎಡಗೈ ಬೌಲಿಂಗ್ ಆಲ್‌ರೌಂಡರ್ ಹುಡುಕಾಟದಲ್ಲಿದ್ದೆವು: ಗೋವಾ ಕ್ರಿಕೆಟ್ ಅಸೋಸಿಯೇಷನ್

ನಾವು ಎಡಗೈ ಬೌಲಿಂಗ್ ಆಲ್‌ರೌಂಡರ್ ಹುಡುಕಾಟದಲ್ಲಿದ್ದೆವು: ಗೋವಾ ಕ್ರಿಕೆಟ್ ಅಸೋಸಿಯೇಷನ್

"ನಾವು ಎಡಗೈ ಬೌಲಿಂಗ್ ಪ್ರತಿಭೆಗಾಗಿ ಮತ್ತು ಮಧ್ಯಮ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡಬಲ್ಲ ಆಟಗಾರರನ್ನು ಸೇರಿಸಲು ಹುಡುಕುತ್ತಿದ್ದೇವೆ. ಈ ಹಿನ್ನೆಲೆಯಲ್ಲಿ ನಾವು ಅರ್ಜುನ್ ತೆಂಡೂಲ್ಕರ್ ಅವರನ್ನು ಗೋವಾ ತಂಡಕ್ಕೆ ಸೇರಲು ಆಹ್ವಾನಿಸಿದ್ದೇವೆ.

ನಾವು ಪೂರ್ವ-ಋತುವಿನ ಅಭ್ಯಾಸ ಪಂದ್ಯಗಳನ್ನು (ಬಿಳಿ ಚೆಂಡು) ಆಡಿಸುತ್ತೇವೆ, ಇದರಲ್ಲಿ ಅರ್ಜುನ್ ಆಡಲಿದ್ದಾರೆ. ಅವರ ಪ್ರದರ್ಶನದ ಆಧಾರದ ಮೇಲೆ ಆಯ್ಕೆದಾರರು ಸೆಲೆಕ್ಟ್ ಮಾಡುತ್ತಾರೆ" ಎಂದು ಗೋವಾ ಕ್ರಿಕೆಟ್ ಸಂಸ್ಥೆ (ಜಿಸಿಎ) ಅಧ್ಯಕ್ಷ ಸೂರಜ್ ಲೋಟ್ಲಿಕರ್ ಹೇಳಿದ್ದಾರೆ.

ಇನ್ನು ಅರ್ಜುನ್ ಪ್ರದರ್ಶನ ಕುರಿತು ಮಾತನಾಡಿರುವ ಸಚಿನ್ '' ಅರ್ಜುನ್ ತನ್ನ ಆಟದ ಕುರಿತು ಹೆಚ್ಚು ಗಮನ ಹರಿಸಬೇಕೆ ಹೊರತು, ಆಯ್ಕೆಯಾಗುತ್ತೇನೆಯೇ ಅಥವಾ ಇಲ್ಲವೋ ಎಂಬುದರ ಕುರಿತು ಅಲ್ಲ. ನಾನು ಸೆಲೆಕ್ಷನ್ ವಿಚಾರದಲ್ಲಿ ಎಂಟ್ರಿಯಾಗುವುದಿಲ್ಲ, ಅದು ಸಂಪೂರ್ಣ ಮ್ಯಾನೇಜ್‌ಮೆಂಟ್‌ಗೆ ಬಿಟ್ಟ ವಿಚಾರ'' ಎಂದು ಸಚಿನ್ ತೆಂಡೂಲ್ಕರ್ ಹೇಳಿದ್ದಾರೆ.

ಒಟ್ಟಿನಲ್ಲಿ ಅವಕಾಶಕ್ಕಾಗಿ ಎದುರು ನೋಡುತ್ತಿರುವ ಅರ್ಜುನ್ ತೆಂಡೂಲ್ಕರ್ ದೇಶೀಯ ಕ್ರಿಕೆಟ್ ಆರಂಭಕ್ಕೂ ಮುನ್ನ ನಡೆಯಲಿರುವ ಅಭ್ಯಾಸ ಪಂದ್ಯಗಳಲ್ಲಿ ಮಿಂಚುವ ಅನಿವಾರ್ಯತೆಯಿದ್ದು, ಗೋವಾ ಪರ ರಣಜಿ ಕ್ರಿಕೆಟ್‌ಗೆ ಪದಾರ್ಪಣೆ ಮಾಡುವ ಕನಸು ಕಟ್ಟಿಕೊಂಡಿದ್ದಾರೆ.

Story first published: Monday, August 15, 2022, 19:23 [IST]
Other articles published on Aug 15, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X