ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಟಿ20 ಮುಂಬೈ ಲೀಗ್: ಆಲ್ ರೌಂಡರ್‌ ಆಗಿ ಮಿಂಚಿದ ಅರ್ಜುನ್ ತೆಂಡೂಲ್ಕರ್

Arjun Tendulkar shines with all-round show in T20 Mumbai League opener

ಮುಂಬೈ, ಮೇ 15: ಟಿ20 ಮುಂಬೈ ಲೀಗ್ ಆಟಗಾರರ ಹರಾಜಿನ ವೇಳೆ ದುಬಾರಿ ಬೆಲೆಗೆ ಹರಾಜಾಗಿದ್ದ ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್ ಪುತ್ರ ಅರ್ಜುನ್ ತೆಂಡೂಲ್ಕರ್ ಟೂರ್ನಿಯ ಆರಂಭಿಕ ಪಂದ್ಯದಲ್ಲಿ ಆಲ್ ರೌಂಡರ್ ಆಗಿ ಮಿಂಚಿದ್ದಾರೆ. ಆಕಾಶ್ ಟೈಗರ್ಸ್ ಎಂಡಬ್ಲ್ಯೂಎಸ್ ಮತ್ತು ಟ್ರಯಂಫ್ಸ್ ನೈಟ್ ಎಂಎನ್‌ಇ ನಡುವಿನ ಪಂದ್ಯದಲ್ಲಿ ಅರ್ಜುನ್ ಉತ್ತಮ ಪ್ರದರ್ಶನಕ್ಕಾಗಿ ಗಮನ ಸೆಳೆದಿದ್ದಾರೆ.

ಟಿ20 ಮುಂಬೈ ಲೀಗ್: ಅರ್ಜುನ್ ತೆಂಡೂಲ್ಕರ್ ಅತ್ಯಧಿಕ ಬೆಲೆಗೆ ಮಾರಾಟಟಿ20 ಮುಂಬೈ ಲೀಗ್: ಅರ್ಜುನ್ ತೆಂಡೂಲ್ಕರ್ ಅತ್ಯಧಿಕ ಬೆಲೆಗೆ ಮಾರಾಟ

ಮಂಗಳವಾರ (ಮೇ 14) ಆಕಾಶ್ ಟೈಗರ್ಸ್ ಎಂಡಬ್ಲ್ಯೂಎಸ್ ಮತ್ತು ಟ್ರಯಂಫ್ಸ್ ನೈಟ್ ಎಂಎನ್‌ಇ ತಂಡಗಳು ಟಿ20 ಮುಂಬೈ ಲೀಗ್ ಮೊದಲ ಪಂದ್ಯದಲ್ಲಿ ಕಾದಾಡಿದ್ದವು. ಇದರಲ್ಲಿ ಆಕಾಶ್ ಟೈಗರ್ಸ್ 5 ವಿಕೆಟ್‌ಗಳ ಜಯ ಗಳಿಸಿದೆ. ಲೀಗ್‌ಗಾಗಿ ಆಟಗಾರರ ಹರಾಜಿನ ವೇಳೆ ಅರ್ಜುನ್ 5 ಲಕ್ಷ ರೂ ಬೆಲೆಗೆ ಆಕಾಶ್ ಟೈಗರ್ಸ್ ಮುಂಬೈ ವೆಸ್ಟರ್ನ್ ಸಬರ್ಬ್ ಪಾಲಾಗಿದ್ದರು.

ಆಕಾಶ್ ಟೈಗರ್ಸ್ ಎಂಡಬ್ಲ್ಯೂಎಸ್ ಪರ ಕಣಕ್ಕಿಳಿದಿದ್ದ ಅರ್ಜುನ್ ತೆಂಡೂಲ್ಕರ್, ಟ್ರಯಂಫ್ಸ್ ನೈಟ್ ಎಂಎನ್‌ಇ ಇನ್ನಿಂಗ್ಸ್‌ ವೇಳೆ 3 ಓವರ್‌ ಎಸೆದು, 21 ರನ್ನಿಗೆ 1 ವಿಕೆಟ್ ಕೆಡವಿದ್ದರು. ಅಲ್ಲದೆ ಆಕಾಶ್ ಟೈಗರ್ಸ್ ಇನ್ನಿಂಗ್ಸ್‌ನಲ್ಲಿ 3ನೇ ಕ್ರಮಾಂಕದಲ್ಲಿ ಬ್ಯಾಟಿಂಗ್‌ಗೆ ಇಳಿದು 19 ಎಸೆತಗಳಿಗೆ 23 ರನ್ ಬಾರಿಸಿದ್ದರು.

ವಿಶ್ವಕಪ್‌ನಲ್ಲಿ ಭಾರತದ ಭವಿಷ್ಯ ನುಡಿದ ಮೊಹಮ್ಮದ್‌ ಅಝರುದ್ದೀನ್‌!ವಿಶ್ವಕಪ್‌ನಲ್ಲಿ ಭಾರತದ ಭವಿಷ್ಯ ನುಡಿದ ಮೊಹಮ್ಮದ್‌ ಅಝರುದ್ದೀನ್‌!

ಟಾಸ್ ಗೆದ್ದು ಬ್ಯಾಟಿಂಗ್‌ಗೆ ಇಳಿದ ಟ್ರಯಂಫ್ಸ್ ನೈಟ್ ಎಂಎನ್‌ಇ ತಂಡ, ನಾಯಕ ಸೂರ್ಯಕುಮಾರ್ ಯಾದವ್ ಅವರ 90 ರನ್ ಕೊಡುಗೆಯೊಂದಿಗೆ 20 ಓವರ್‌ಗೆ 6 ವಿಕೆಟ್ ಕಳೆದು 147 ರನ್ ಬಾರಿಸಿತ್ತು. ಗುರಿ ಬೆನ್ನಟ್ಟಿದ ಆಕಾಶ್ ಟೈಗರ್ಸ್ ಎಂಡಬ್ಲ್ಯೂಎಸ್ ಕೌಸ್ತುಭ್ ಪವಾರ್ 34, ಆಕರ್ಷಿತ್ ಗೋಮಲ್ 41, ಅರ್ಜುನ್ 23 ರನ್‌ ನೆರವಿನೊಂದಿಗೆ 19.3 ಓವರ್‌ನಲ್ಲಿ 5 ವಿಕೆಟ್ ಕಳೆದು 148 ರನ್ ಬಾರಿಸಿತು.

Story first published: Wednesday, May 15, 2019, 12:44 [IST]
Other articles published on May 15, 2019
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X