ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಮೊದಲ ಅಂತಾರಾಷ್ಟ್ರೀಯ ವಿಕೆಟ್ ಪಡೆದ ಅರ್ಜುನ್ ತೆಂಡೂಲ್ಕರ್

arjun tendulkar under 19 1st international wicket srilanka test

ಕೊಲಂಬೊ, ಜುಲೈ 17: ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್ ಅವರ ಮಗ ಅರ್ಜುನ್ ತೆಂಡೂಲ್ಕರ್ ತಮ್ಮ ಅಂತರರಾಷ್ಟ್ರೀಯ ಕ್ರಿಕೆಟ್‌ ಬದುಕಿನಲ್ಲಿ ಮೊದಲ ವಿಕೆಟ್ ಪಡೆದುಕೊಂಡಿದ್ದಾರೆ.

ಶ್ರೀಲಂಕಾದ ಕೊಲಂಬೊದಲ್ಲಿ ನಡೆಯುತ್ತಿರುವ ಅಂಡರ್ 19 ಟೆಸ್ಟ್ ಪಂದ್ಯದಲ್ಲಿ 18 ವರ್ಷದ ಅರ್ಜುನ್, ತಮ್ಮ ಎರಡನೆಯ ಓವರ್‌ನ ಕೊನೆಯ ಎಸೆತದಲ್ಲಿಯೇ ಅರ್ಜುನ್ ತೆಂಡೂಲ್ಕರ್ ತಮ್ಮ ಮೊದಲ ವಿಕೆಟ್ ಪಡೆದುಕೊಂಡರು.

ಧೋನಿಯ ಕೊಸರಾಟ ನನ್ನ ಪರದಾಟದ ಕ್ಷಣವನ್ನು ನೆನಪಿಸಿತು: ಗವಾಸ್ಕರ್ಧೋನಿಯ ಕೊಸರಾಟ ನನ್ನ ಪರದಾಟದ ಕ್ಷಣವನ್ನು ನೆನಪಿಸಿತು: ಗವಾಸ್ಕರ್

ಆದರೆ, ಒಟ್ಟು 11 ಓವರ್‌ ಬೌಲಿಂಗ್ ಮಾಡಿ 33 ರನ್ ನೀಡಿದ ಅವರಿಗೆ ಮತ್ತೊಂದು ವಿಕೆಟ್ ಪಡೆದುಕೊಳ್ಳಲು ಸಾಧ್ಯವಾಗಲಿಲ್ಲ.

ಭಾರತದ ಪರ ಹರ್ಷ್ ತ್ಯಾಗಿ ಮತ್ತು ಆಯುಷ್ ಬದೋನಿ ತಲಾ ನಾಲ್ಕು ವಿಕೆಟ್ ಪಡೆದು ಮಿಂಚಿದರು.

ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ಶ್ರೀಲಂಕಾ ಅಂಡರ್ 19 ತಂಡ 244 ರನ್‌ಗಳಿಗೆ ಆಲೌಟ್ ಆಯಿತು.

ಪಸಿಂಧು ಸೂರಿಯಾಭಂಡಾರ 69 ರನ್ ಗಳಿಸಿ ಶ್ರೀಲಂಕಾ ಪರ ಅತ್ಯಧಿಕ ಸ್ಕೋರರ್ ಎನಿಸಿದರು.

ಇದಕ್ಕೆ ಉತ್ತರವಾಗಿ ಮೊದಲ ಇನ್ನಿಂಗ್ಸ್ ಶುರುಮಾಡಿದ ಭಾರತ ಉತ್ತಮ ಆರಂಭ ಪಡೆದುಕೊಂಡಿತು. ಬಿರುಸಿನ ಆಟವಾಡಿದ ನಾಯಕ ಅನುಜ್ ರಾವತ್ ಕೇವಲ 59 ಎಸೆತಗಳಲ್ಲಿ 63 ರನ್ ಗಳಿಸಿ ದಿನದ ಕೊನೆಯಲ್ಲಿ ಔಟಾದರು.

ಶಮಿ ಒಬ್ಬ ಕಾಮುಕ, ಬಿಸಿಸಿಐ ಫಟಿಂಗರ ಕೂಟ: ಹಸಿನ್ ಜಹಾನ್ ಆರೋಪಶಮಿ ಒಬ್ಬ ಕಾಮುಕ, ಬಿಸಿಸಿಐ ಫಟಿಂಗರ ಕೂಟ: ಹಸಿನ್ ಜಹಾನ್ ಆರೋಪ

ಮತ್ತೊಬ್ಬ ಆರಂಭಿಕ ಅಥರ್ವ ತೈಡೆ 26 ರನ್‌ಗಳಿಸಿ ಅಜೇಯರಾಗಿ ಉಳಿದಿದ್ದಾರೆ.

ಶ್ರೀಲಂಕಾದಲ್ಲಿ ಕಿರಿಯರ ಎರಡು ಟೆಸ್ಟ್ ಪಂದ್ಯಗಳು ನಡೆಯಲಿದ್ದು, ಎರಡನೆಯ ಟೆಸ್ಟ್ ಜುಲೈ 24ರಿಂದ ನಡೆಯಲಿದೆ. ಬಳಿಕ ಜುಲೈ 30 ರಿಂದ ಐದು ಏಕದಿನದ ಪಂದ್ಯಗಳ ಸರಣಿ ನಡೆಯಲಿದೆ.

ಸಂಕ್ಷಿಪ್ತ ಸ್ಕೋರ್

ಶ್ರೀಲಂಕಾ: 244/10 (70.3) ಪಸಿಂಧು ಸೂರಿಯಾಭಂಡಾರ 69, ನಿಶಾನ್ ಮಧುಷ್ಕಾ 39, ನಿಪುಣ್ ಧನಂಜಯ 39, ಎಸ್‌.ಟಿ. ಮೆಂಡಿಸ್ 39, ಹರ್ಷ್ ತ್ಯಾಗಿ 24/4, ಆಯುಷ್ ಬದೋನಿ 92/4

ಭಾರತ: 92/1 (16.4) ಅನುಜ್ ರಾವತ್ 63, ಅಥರ್ವ ತೈಡೆ 26, ಸೇನರತ್ನೆ 20/1.

Story first published: Tuesday, July 17, 2018, 21:00 [IST]
Other articles published on Jul 17, 2018
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X