ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಶೂಟಿಂಗ್ ಪ್ರಕರಣ: ಶ್ರೀಲಂಕಾ ಮಾಜಿ ನಾಯಕ ಅರ್ಜುನ ರಣತುಂಗ ಬಂಧನ

Arjuna Ranatunga arrested over shooting incident

ಕೊಲಂಬೋ, ಅಕ್ಟೋಬರ್ 29: ಶ್ರೀಲಂಕಾದ ಪೆಟ್ರೋಲಿಯಂ ಸಚಿವ, ವಿಶ್ವಕಪ್ ವಿಜೇತ ತಂಡದ ಮಾಜಿ ನಾಯಕ ಅರ್ಜುನ ರಣತುಂಗ ಅವರನ್ನು ಶೂಟಿಂಗ್ ಪ್ರಕರಣವೊಂದಕ್ಕೆ ಸಂಬಂಧಿಸಿ ಸೋಮವಾರ (ಅಕ್ಟೋಬರ್ 29) ಬಂಧಿಸಲಾಗಿದೆ.

'ಸ್ಮಿತ್, ವಾರ್ನರ್ ಚೆಂಡು ವಿರೂಪದ ತಪ್ಪಿಗೆ ಕ್ರಿಕೆಟ್ ಮಂಡಳಿಯ ಒತ್ತಡ ಕಾರಣ''ಸ್ಮಿತ್, ವಾರ್ನರ್ ಚೆಂಡು ವಿರೂಪದ ತಪ್ಪಿಗೆ ಕ್ರಿಕೆಟ್ ಮಂಡಳಿಯ ಒತ್ತಡ ಕಾರಣ'

ಕೊಲಂಬೋ ಕ್ರೈಂ ಡಿವಿಷನ್ (ಸಿಸಿಡಿ) ಮಾಜಿ ನಾಯಕ ರಣತುಂಗ ಅವರನ್ನು ಬಂಧಿಸಿದೆ. ಭಾನುವಾರ (ಅಕ್ಟೋಬರ್ 28) ಕೊಲಂಬೋದ ಸಿಲೋನ್ ಪೆಟ್ರೋಲಿಯಂ ಕಾರ್ಪೊರೇಶನ್ (ಸಿಪಿಸಿ) ಭಾಗದಲ್ಲಿ ರಾಜಕೀಯ ವಿಚಾರದ ತಿಕ್ಕಾಟದಲ್ಲಿ ರಣತುಂಗ ಅವರನ್ನು ಪಾರು ಮಾಡುವ ಸಲುವಾಗಿ ಅರ್ಜುನ್ ಅವರ ಅಂಗರಕ್ಷಕರು ಗುಂಡು ಹಾರಿಸಿದ್ದರು.

ಗುಂಡು ಹಾರಿಸಿದ್ದರಿಂದ ಮೂವರಲ್ಲಿ ಒಬ್ಬಾತ ತೀವ್ರ ಗಾಯಕ್ಕೊಳಗಾಗಿ ಭಾನುವಾರ ರಾತ್ರಿ ಆಸ್ಪತ್ರೆಯಲ್ಲಿ ಅಸುನೀಗಿದ್ದಾಗಿ ಶ್ರೀಲಂಕಾದ ಮಾಧ್ಯಮಗಳು ವರದಿ ಮಾಡಿದ್ದವು. ಹೀಗಾಗಿ ಪೆಟ್ರೋಲಿಯಂ ಕಾರ್ಮಿಕ ಸಂಘಟನೆಗಳು ಸಿಪಿಸಿ ಕಾರ್ಮಿಕನ ಸಾವಿಗೆ ಕಾರಣವಾದ ರಣತುಂಗ ಅವರನ್ನು ಬಂಧಿಸುವಂತೆ ಮುಷ್ಕರ ಹೂಡಿದ್ದವು.

ಭಾರತ-ವಿಂಡೀಸ್: 21ನೇ ಏಕದಿನ ಶತಕ, ಹೊಸ ದಾಖಲೆ ಬರೆದ ರೋ'ಹಿಟ್'!ಭಾರತ-ವಿಂಡೀಸ್: 21ನೇ ಏಕದಿನ ಶತಕ, ಹೊಸ ದಾಖಲೆ ಬರೆದ ರೋ'ಹಿಟ್'!

ಪ್ರಕರಣಕ್ಕೆ ಸಂಬಂಧಿಸಿ ಮಾತನಾಡಿದ ರಣತುಂಗ, 'ಅವರು ನನ್ನನ್ನು ಕೊಲ್ಲಲು ಬಂದಿದ್ದರು. ಬೇಕಾದರೆ ನೀವು ಸಿಸಿಟಿವಿ ಪರಿಶೀಲಿಸಬಹುದು. ಇದೇ ಮೊದಲಬಾರಿಗೆ ನಾನು ಅರೆಸ್ಟ್ ಆಗುತ್ತಿದ್ದೇನೆ. ನನ್ನ ಮಕ್ಕಳು, ಕುಟುಂಬವನ್ನು ನೆನೆದ ಬದುಕಿನ ಬಗ್ಗೆ ನನಗೆ ಭಯ ಶುರುವಾಗಿದೆ' ಎಂದಿದ್ದಾರೆ.

Story first published: Monday, October 29, 2018, 19:58 [IST]
Other articles published on Oct 29, 2018
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X