ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

12ರ ಹರೆಯದ ಬಾಲಕನ ಬಂಧನಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ ಜೋಫ್ರಾ ಆರ್ಚರ್

Arrest of 12-year-old should deter keyboard warriors: Jofra Archer

ಲಂಡನ್: ಜೂನ್ 17ರಂದು (ಇಂಗ್ಲಿಷ್) ಪ್ರೀಮಿಯರ್ ಲೀಗ್ ಫುಟ್ಬಾಲ್ ಟೂರ್ನಿ ಪುನರಾರಂಭವಾದಾಗ ಎಲ್ಲಾ ಆಟಗಾರರು ತಮ್ಮ ಹೆಸರುಗಳಿರುವ ಎಂದಿನ ಜೆರ್ಸಿಯ ಬದಲು 'ಬ್ಲ್ಯಾಕ್ ಲೈವ್ಸ್ ಮ್ಯಾಟರ್' ಲೋಗೋವಿದ್ದ ಟಿ ಶರ್ಟ್ ಧರಿಸಿ ಮೈದಾನಕ್ಕಿಳಿದಿದ್ದರು. ಯುಎಸ್‌ಎಯಲ್ಲಿ ಆಫ್ರಿಕನ್-ಅಮೆರಿಕನ್ ಕರಿಯ ವ್ಯಕ್ತಿ ಜಾರ್ಜ್ ಫ್ಲಾಯ್ಡ್ ಕುತ್ತಿಗೆಯನ್ನು ಬಿಳಿಯ ಪೊಲೀಸ್ ಒಬ್ಬ ಕುತ್ತಿಗೆ ಬಳಿ ಕಾಲಲ್ಲಿ ಒತ್ತಿ ಹಿಡಿದು ಆತನ ಸಾವಿಗೆ ಕಾರಣವಾಗಿದ್ದ.

ಸ್ಟಂಪ್‌ಗೆ ಚೆಂಡು ಬಡಿದಿದ್ದು ಡಿಆರ್‌ಎಸ್‌ನಲ್ಲಿ ಕಂಡರೆ ಔಟ್ ಕೊಡಬೇಕು: ಸಚಿನ್ಸ್ಟಂಪ್‌ಗೆ ಚೆಂಡು ಬಡಿದಿದ್ದು ಡಿಆರ್‌ಎಸ್‌ನಲ್ಲಿ ಕಂಡರೆ ಔಟ್ ಕೊಡಬೇಕು: ಸಚಿನ್

ಜಾರ್ಜ್ ಫ್ಲಾಯ್ಡ್ ಕುತಿಗೆ ಮೇಲೆ ಪೊಲೀಸ್ ಕಾಲಿರಿಸಿದ್ದ ಚಿತ್ರ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಲೇ ವರ್ಣಬೇಧ ನೀತಿಯ ವಿರುದ್ಧ ಜಗತ್ತಿನಾದ್ಯಂತ ಎಲ್ಲೆಡೆ ಆಕ್ರೋಶ ವ್ಯಕ್ತವಾಗಿತ್ತು. ಬಹುತೇಕ ಎಲ್ಲಾ ಕ್ರೀಡಾಪಟುಗಳು ವರ್ಣಬೇಧದ ವಿರುದ್ಧದ ಪ್ರತಿಭಟನೆಗೆ ಬೆಂಬಲ ಸೂಚಿಸಿದ್ದರು.

ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಅತ್ಯಧಿಕ ರನ್ ದಾಖಲೆಯ 5 ಬ್ಯಾಟ್ಸ್‌ಮನ್‌ಗಳುಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಅತ್ಯಧಿಕ ರನ್ ದಾಖಲೆಯ 5 ಬ್ಯಾಟ್ಸ್‌ಮನ್‌ಗಳು

ವರ್ಣಬೇಧ ವಿರುದ್ಧದ ಪ್ರತಿಭಟನೆಗೆ ಇಂಗ್ಲಿಷ್ ಪ್ರೀಮಿಯರ್ ಲೀಗ್ (ಇಪಿಎಲ್) ಫುಟ್ಬಾಲ್ ಆಟಗಾರರೂ ಬ್ಲ್ಯಾಕ್ ಲೈವ್ಸ್ ಮ್ಯಾಟರ್ ಲೋಗೋವಿದ್ದ ಜೆರ್ಸಿಯ ಮೂಲಕ ಬೆಂಬಲ ವ್ಯಕ್ತಪಡಿಸಿದ್ದರು.

12ರ ಹರೆಯದ ಹುಡುಗನ ಬಂಧನ

12ರ ಹರೆಯದ ಹುಡುಗನ ಬಂಧನ

ವರ್ಣಬೇಧ ನೀತಿಯ ವಿರುದ್ಧ ವಿಶ್ವದೆಲ್ಲೆಡೆ ವಿರೋಧ ವ್ಯಕ್ತವಾಗುತ್ತಿರುವ ಮಧ್ಯೆಯೇ ಇತ್ತೀಚೆಗೆ ಇಂಗ್ಲೆಂಡ್ ಪೊಲೀಸರು 12 ವರ್ಷದ ಹುಡುಗನನ್ನು ಬಂಧಿಸಿದ್ದರು. ಬಂಧಿತ ಹುಡುಗ ಇಪಿಎಲ್ ತಂಡವಾದ ಕ್ರಿಸ್ಟಲ್ ಪ್ಯಾಲೇಸ್‌ನ ಫಾರ್ವರ್ಡ್ ಆಟಗಾರ ವಿಲ್ಫ್ರೈಡ್ ಜಹಾ ಅವರಿಗೆ ಜನಾಂಗೀಯ ನಿಂದನೆಯ ಸಂದೇಶ ಕಳುಹಿಸಿದ್ದ.

ಮೆಸೇಜ್‌ನ ಸ್ಕ್ರೀನ್‌ ಶಾಟ್

ಮೆಸೇಜ್‌ನ ಸ್ಕ್ರೀನ್‌ ಶಾಟ್

ತನ್ನ ಮೊಬೈಲ್‌ಗೆ ಬಂದಿದ್ದ ಜನಾಂಗೀಯ ನಿಂದನೆಯ ಮೆಸೇಜ್‌ನ ಸ್ಕ್ರೀನ್ ಶಾಟ್ ಅನ್ನು ವಿಲ್ಫ್ರೈಡ್ ಜಹಾ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದರು. 'ಇದು ನೋಡಿ ಇವತ್ತು ಎಚ್ಚರಗೊಂಡೆ' ಎಂದು ಜಹಾ ಟ್ವಿಟರ್‌ನಲ್ಲಿ ಬರೆದುಕೊಂಡಿದ್ದರು. ಈ ಪೋಸ್ಟ್‌ನ ಬೆನ್ನಲ್ಲೇ ವೆಸ್ಟ್ ಮಿಡ್‌ಲ್ಯಾಂಡ್ಸ್‌ ಪೊಲೀಸರು ತನಿಖೆ ನಡೆಸಿ ಬಾಲಕನನ್ನು ಬಂಧಿಸಿದ್ದರು.

ಕೀಬೋರ್ಡ್ ವಾರಿಯರ್‌ಗಳಿಗೆ ತಡೆ

ಕೀಬೋರ್ಡ್ ವಾರಿಯರ್‌ಗಳಿಗೆ ತಡೆ

ಜನಾಂಗೀಯವಾಗಿ ನಿಂದಿಸಿದ ಕಿಡಿಗೇಡಿ ಬಾಲಕನನ್ನು ಬಂಧಿಸಿದ್ದಕ್ಕಾಗಿ ಇಂಗ್ಲೆಂಡ್ ವೇಗಿ ಜೋಫ್ರಾ ಆರ್ಚರ್ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಟ್ವೀಟ್ ಮಾಡಿರುವ ಆರ್ಚರ್, 'ಈ ನಡೆಯು ಕೀಬೋರ್ಡ್ ವಾರಿಯರ್‌ಗಳನ್ನು ತಡೆಯುತ್ತದೆ ಎಂದು ನಾನು ಭಾವಿಸಿದ್ದೇನೆ' ಎಂದು ಬರೆದುಕೊಂಡಿದ್ದಾರೆ.

ವೆಸ್ಟ್ ಇಂಡೀಸ್‌ಗೆ ಜಯ

ವೆಸ್ಟ್ ಇಂಡೀಸ್‌ಗೆ ಜಯ

ಇತ್ತೀಚೆಗೆ ಮುಕ್ತಾಯಗೊಂಡಿರುವ ಇಂಗ್ಲೆಂಡ್ vs ವೆಸ್ಟ್ ಇಂಡೀಸ್ ಮೊದಲನೇ ಟೆಸ್ಟ್ ಪಂದ್ಯದಲ್ಲಿ ಇಂಗ್ಲೆಂಡ್ ಆಟಗಾರ ಆರ್ಚರ್ 3 ವಿಕೆಟ್ ಪಡೆದಿದ್ದರು. ಆದರೆ ದಿಟ್ಟ ಬ್ಯಾಟಿಂಗ್, ಚತುರ ಬೌಲಿಂಗ್ ನಡೆಸಿದ ಜೇಸನ್ ಹೋಲ್ಡರ್ ಪಡೆ ಪಂದ್ಯದಲ್ಲಿ 4 ವಿಕೆಟ್ ಜಯ ಸಾಧಿಸಿದೆ. ಮೂರು ಪಂದ್ಯಗಳ ಏಕದಿನ ಸರಣಿಯಲ್ಲಿ ವೆಸ್ಟ್ ಇಂಡೀಸ್ 1-0ಯ ಮುನ್ನಡೆಯಲ್ಲಿದೆ.

Story first published: Monday, July 13, 2020, 15:47 [IST]
Other articles published on Jul 13, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X