ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಪ್ರೀಮಿಯರ್ ಲೀಗ್: ಕೋಚ್‌ಗೆ ಕೊರೊನಾ, ಸಂಪೂರ್ಣ ಮುಚ್ಚಿದ ಆರ್ಸೆನಲ್

Arsenal In Lockdown After Mikel Arteta Tests Positive For Coronavirus

ಪ್ರೀಮಿಯರ್ ಲೀಗ್ ಫೂಟ್ಬಾಲ್ ಟೂರ್ನಿಗೂ ಕೊರೊನಾ ಭೀತಿ ತಟ್ಟಿದೆ. ಫೂಟ್ಬಾಲ್ ತಂಡದ ಮುಖ್ಯ ಕೋಚ್ ಕೊರೊನಾ ವೈರಸ್‌ಗೆ ತುತ್ತಾಗಿರುವುದು ಮತ್ತಷ್ಟು ಆತಂಕಕ್ಕೆ ಕಾರಣವಾಗಿದೆ. ಫ್ರೀಮಿಯರ್ ಲೀಗ್‌ನ ಆರ್ಸೆನಲ್ ತಂಡದ ಆಟಗಾರ ಮೈಕೆಲ್ ಆರ್ಟೆಟಾ ಕೊರೊನಾ ವೈರಸ್‌ಗೆ ತುತ್ತಾಗಿರುವ ಫೂಟ್ಬಾಲ್ ತರಬೇತಿದಾರನಾಗಿದ್ದಾರೆ.

ಮೈಕೆಲ್ ಆರ್ಟೆಟಾ ಕೊರೊನಾ ವೈರಸ್‌ಗೆ ತುತ್ತಾಗಿರುವುದು ಗುರುವಾರ ರಾತ್ರಿ ಬೆಳಕಿಗೆ ಬಂದಿದೆ. ಅದಾದ ಬಳಿಕ ಆರ್ಸೆನಲ್ ತಂಡ ತರಬೇತಿ ಸೇರಿದಂತೆ ಎಲ್ಲಾ ಕೇಂದ್ರಗಳನ್ನು ಸ್ಥಗಿತಗೊಳಿಸಿದೆ. ಬ್ರೈಟನ್‌ನಲ್ಲಿ ಶನಿವಾರದವರೆಗಿನ ಪಂದ್ಯಗಳನ್ನು ರದ್ದುಗೊಳಿಸುವ ನಿರ್ಧಾರಕ್ಕೆ ಬರಲಾಗಿದೆ.

ಆರ್ಸೆನೆಲ್ ತಂಡದ ತರಬೇತಿದಾರ ಮೈಕೆಲ್ ಆರ್ಟೆನಾ ಅನಾರೋಗ್ಯದಿಂದ ಬಳಲುತ್ತಿದ್ದರು. ಕೊರೊನಾ ಶಂಕೆಯ ಹಿನ್ನೆಲೆಯಲ್ಲಿ ಆರ್ಟೆನಾರನ್ನು ಕೊರೊನಾ ಪರೀಕ್ಷೆಗೆ ಒಳಪಡಿಸಲಾಯಿತು. ಗುರುವಾರ ಸಂಜೆ 9 ಗಂಟೆಯ ಸುಮಾರಿಗೆ ಕೊರೊನಾ ಪಾಸಿಟಿವ್ ಎಂಬ ವರದಿ ಬಂದಿದೆ. ತಕ್ಷಣವೇ ಆರ್ಸೆನಲ್ ಕ್ಲಬ್ ತಂಡದ ಪರವಾಗಿ ಕೆಲ ಪ್ರಮುಖ ಕ್ರಮಗಳನ್ನು ಕೈಗೊಂಡಿದೆ.

ಆರ್ಸೆನಲ್ ತಂಡದ ಎಲ್ಲಾ ಆಟಗಾರರು ಮತ್ತು ಇತರ ಸಿಬ್ಬಂದಿಗಳು 14 ದಿನಗಳವರೆಗೆ ಪ್ರತ್ಯೇಕವಾಗುವ ನಿರ್ಧಾರಕ್ಕೆ ಬರಲಾಗಿದೆ. ಅದರಲ್ಲೂ ಆರ್ಟೆಟಾ ಜೊತೆಗೆ ನಿಕಟ ಸಂಪರ್ಕ ಹೊಂದಿದ್ದ ಎಲ್ಲಾ ಆಟಗಾರರ ಮೇಲು ನಿಗಾ ವಹಿಸಲಾಗಿದೆ.

ಕ್ಲಬ್‌ನ ಮ್ಯಾನೇಜಿಂಗ್ ಡೈರೆಕ್ಟರ್ ಈ ವಿಚಾರವಾಗಿ ಪ್ರತಿಕ್ರಿಯಿಸಿದ್ದಾರೆ. ಆಟಗಾರರ ಮತ್ತು ಸಾರ್ವಜನಿಕರ ಆರೋಗ್ಯ ನಮ್ಮ ಪ್ರಮುಖ ಆದ್ಯತೆಯಾಗಿದೆ ಮತ್ತು ಆ ಕಡೆಗೆ ಗಮನಹರಿಸಲಾಗುತ್ತದೆ. ಕೊರೊನಾ ವೈರಸ್‌ಗೆ ತುತ್ತಾಗಿರುವ ಮೈಕಲ್ ಆರ್ಟೆಟಾ ಆರೋಗ್ಯದ ಬಗ್ಗೆ ಚಿಂತಿತರಾಗಿದ್ದೇವೆ. ಆದರೆ ಅವರು ಸಾಕಷ್ಟು ಧೈರ್ಯಶಾಲಿಯಾಗಿದ್ದಾರೆ ಎಂದು ವಿನಯ್ ವೆಂಕಟೇಶಮ್ ಹೇಳಿಕೆ ನೀಡಿದ್ದಾರೆ.

Story first published: Friday, March 13, 2020, 22:41 [IST]
Other articles published on Mar 13, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X