ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಆತ 23ನೇ ವಯಸ್ಸಿಗೆ ವಿಶ್ವದ ಬೆಸ್ಟ್ ಡೆತ್ ಓವರ್‌ ಬೌಲರ್‌ಗಳಲ್ಲಿ ಒಬ್ಬಾತ: ವೆಂಕಟೇಶ್‌ ಪ್ರಸಾದ್

Arshdeep singh

ಭಾರತದ ಯುವ ಬೌಲಿಂಗ್ ಸೆನ್ಷೇಷನ್ ಅರ್ಷ್‌ದೀಪ್ ಸಿಂಗ್ ಕುರಿತಾಗಿ ಭಾರತದ ಮಾಜಿ ಬೌಲರ್‌ ವೆಂಕಟೇಶ್ ಪ್ರಸಾದ್ ಸಾಕಷ್ಟು ಹೊಗಳಿಕೆಯ ಮಾತನಾಡಿದ್ದಾರೆ. ಆತನ ಡೆತ್ ಓವರ್ ಬೌಲಿಂಗ್‌ ಕೌಶಲ್ಯದ ಕುರಿತು ಮೆಚ್ಚುಗೆ ವ್ಯಕ್ತಪಡಿಸಿರುವ ವೆಂಕಿ, ಅರ್ಷ್‌ದೀಪ್‌ ಭವಿಷ್ಯದ ಸೂಪರ್‌ಸ್ಟಾರ್ ಎಂದು ಅಭಿಪ್ರಾಯ ಪಟ್ಟಿದ್ದಾರೆ.

ವೆಸ್ಟ್ ಇಂಡೀಸ್ ವಿರುದ್ಧದ ನಾಲ್ಕನೇ ಟಿ20 ಪಂದ್ಯದಲ್ಲಿ ಬೊಂಬಾಟ್ ಬೌಲಿಂಗ್ ಪ್ರದರ್ಶಿಸಿದ ಅರ್ಷ್‌ದೀಪ್ ಸಿಂಗ್ ಮೂರು ವಿಕೆಟ್‌ಗಳನ್ನ ಉರುಳಿಸಿದ್ರು. ಅದ್ರಲ್ಲೂ ಡೆತ್ ಓವರ್‌ಗಳಲ್ಲಿ ಅದ್ಭುತ ಬೌಲಿಂಗ್ ಮಾಡುವ ಮೂಲಕ ಆಯ್ಕೆಗಾರರನ್ನು ಸಹ ಮೆಚ್ಚಿಸಿದ್ದಾರೆ.

ಹರ್ಷಲ್‌ ಪಟೇಲ್ ಬದಲು ಆಡುವ ಅವಕಾಶ ಪಡೆದ ಅರ್ಷ್‌ದೀಪ್

ಹರ್ಷಲ್‌ ಪಟೇಲ್ ಬದಲು ಆಡುವ ಅವಕಾಶ ಪಡೆದ ಅರ್ಷ್‌ದೀಪ್

ಭಾರತದ ಬೆಸ್ಟ್ ಡೆತ್ ಓವರ್ ಬೌಲರ್‌ಗಳಲ್ಲಿ ಒಬ್ಬರಾಗಿರುವ ಹರ್ಷಲ್ ಪಟೇಲ್ ಪಂದ್ಯಕ್ಕೂ ಮೊದಲು ಫಿಟ್ನೆಸ್‌ ಇಲ್ಲದೆ ಹಿನ್ನಲೆಯಲ್ಲಿ ಆಡುವ ಹನ್ನೊಂದರ ಬಳಗದಲ್ಲಿ ಆಡುವ ಅವಕಾಶವನ್ನ ಅರ್ಷ್‌ದೀಪ್ ಪಡೆದರು. ಈಗಾಗಲೇ ಚುಟುಕು ಫಾರ್ಮೆಟ್‌ನಲ್ಲಿ ತನ್ನ ಡೆತ್‌ ಓವರ್ ಕೌಶಲ್ಯದಿಂದ ಮಿಂಚಿರುವ ಅರ್ಷ್‌ದೀಪ್ ಸದ್ಯ ನಾಯಕ ರೋಹಿತ್ ಶರ್ಮಾಗೆ ಗೋ ಟು ಬೌಲರ್‌ ಆಗಿ ರೂಪುಗೊಂಡಿದ್ದಾರೆ.

ಮುಂದಿನ ಎರಡು, ಮೂರು ವರ್ಷದಲ್ಲಿ ಒಡಿಐ ಕ್ರಿಕೆಟ್ ಯಾರು ಆಡಲ್ಲ: ಮೊಯಿನ್ ಅಲಿ

23ನೇ ವಯಸ್ಸಿಗೆ ವಿಶ್ವದ ಉತ್ತಮ ಡೆತ್ ಓವರ್‌ ಆಗಿದ್ದಾರೆ!

23ನೇ ವಯಸ್ಸಿಗೆ ವಿಶ್ವದ ಉತ್ತಮ ಡೆತ್ ಓವರ್‌ ಆಗಿದ್ದಾರೆ!

ಡೆತ್ ಓವರ್‌ನಲ್ಲಿ 23ರ ಹರೆಯದ ಅರ್ಷ್‌ದೀಪ್ ಸಿಂಗ್ ವಿಶ್ವ ಕ್ರಿಕೆಟ್‌ನಲ್ಲಿ ಎಲ್ಲರಿಗಿಂತ ಉತ್ತಮವಾಗಿದ್ದಾರೆ. ತನ್ನ ವೃತ್ತಿಜೀವನದ ಆರಂಭದಲ್ಲಿ ಉತ್ತಮ ಕೌಶಲ್ಯಗಳ ಜೊತೆಗೆ ಅವನ ಭುಜದ ಮೇಲೆ ಸಾಕಷ್ಟು ಜವಾಬ್ದಾರಿ ಹೊತ್ತಿರುವಂತೆ ತೋರುತ್ತದೆ. ಭಾರತ ವರ್ಸಸ್ ವೆಸ್ಟ್ ಇಂಡೀಸ್ ಸರಣಿಯಲ್ಲಿ ಗಮನಹರಿಸಬೇಕಾದ ವ್ಯಕ್ತಿ ಇವರಾಗಿದ್ದಾರೆ " ಎಂದು ವೆಂಕಟೇಶ್‌ ಪ್ರಸಾದ್ ಟ್ವೀಟ್ ಮಾಡಿದ್ದಾರೆ.

ಯಾರ್ಕರ್‌ ಅನ್ನು ಸ್ಥಿರವಾಗಿ ಹಾಕುವ ಸಾಮರ್ಥ್ಯ ಹೊಂದಿರುವ ಅರ್ಷ್‌ದೀಪ್ ಸಿಂಗ್ ಇದುವರೆಗೆ ಐದು ಟಿ20 ಪಂದ್ಯಗಳಲ್ಲಿ 6.05 ಎಕಾನಮಿಯಲ್ಲಿ 9 ವಿಕೆಟ್ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ.

IND vs WI: ವಿರಾಟ್ ಕೊಹ್ಲಿ ಕನಿಷ್ಠ ಏಕದಿನ or ಟಿ20 ಆಡಬೇಕಿತ್ತು ಎಂದ ಮಾಜಿ ಕ್ರಿಕೆಟಿಗ

Virat Kohli ತಮ್ಮ ನೂರನೇ ಪಂದ್ಯವನ್ನು Pakistan ವಿರುದ್ಧ ಆಡಲಿದ್ದಾರೆ | *Cricket | OneIndia Kannada
ಭಾರತದ ಬೌಲಿಂಗ್ ಅಟ್ಯಾಕ್‌ನಲ್ಲಿ ಅರ್ಷ್‌ದೀಪ್ ಇದ್ದರೆ ಉತ್ತಮ: ರವಿಶಾಸ್ತ್ರಿ

ಭಾರತದ ಬೌಲಿಂಗ್ ಅಟ್ಯಾಕ್‌ನಲ್ಲಿ ಅರ್ಷ್‌ದೀಪ್ ಇದ್ದರೆ ಉತ್ತಮ: ರವಿಶಾಸ್ತ್ರಿ

ಟೀಂ ಇಂಡಿಯಾ ಬೌಲಿಂಗ್ ಅಟ್ಯಾಕ್‌ನಲ್ಲಿ ಏಕೈಕ ಎಡಗೈ ವೇಗಿಯಾಗಿರುವ ಅರ್ಷದೀಪ್ ಅವರ ವೈವಿಧ್ಯತೆಯನ್ನು ಭಾರತೀಯ ವೇಗದ ದಾಳಿಯು ಬಳಸಿಕೊಳ್ಳಬಹುದು ಎಂದು
ಟೀಂ ಇಂಡಿಯಾ ಮಾಜಿ ಕೋಚ್‌ ರವಿಶಾಸ್ತ್ರಿ ಅಭಿಪ್ರಾಯಪಟ್ಟಿದ್ದಾರೆ.

ಎಡಗೈ ಬೌಲರ್‌ ಆಗಿರುವುದರಿಂದ ಆಸ್ಟ್ರೇಲಿಯಾದಲ್ಲಿಯೂ ಸಹ ಇದು ಸಹಾಯವಾಗುತ್ತದೆ. ಏಕೆಂದರೆ ಅಲ್ಲಿಯ ಪಿಚ್‌ಗಳು , ಅಂಕಿ ಅಂಶಗಳು ಎಡಗೈ ಬೌಲರ್‌ಗಳಿಗೆ ಉತ್ತಮವಾಗಿ ಕಾರ್ಯನಿರ್ವಹಿಸುತ್ತವೆ ಎಂದು ಶಾಸ್ತ್ರಿ ಹೇಳಿದ್ದಾರೆ.

ಭಾರತದ ಬೌಲಿಂಗ್‌ ಅಟ್ಯಾಕ್‌ನಲ್ಲಿ ಭುವಿ, ಜಸ್ಪ್ರೀತ್, ಶಮಿ ಇರಬೇಕು ಮತ್ತು ನೀವು ಅವರನ್ನು ಮಿಶ್ರಣದಲ್ಲಿ ಸೇರಿಸಿದರೆ, ಅವಕಾಶ ನೀಡಿದ ಪಂದ್ಯಗಳಲ್ಲಿ ಒಂದರಲ್ಲಿ ಆಡಬಹುದು ಎಂದು ಶಾಸ್ತ್ರಿ ಅಂದಾಜಿಸಿದ್ದಾರೆ.

ವೆಸ್ಟ್ ಇಂಡೀಸ್ ವಿರುದ್ಧದ ನಾಲ್ಕನೇ ಟಿ20 ಪಂದ್ಯದಲ್ಲಿ ಅರ್ಷ್‌ದೀಪ್ ಸಿಂಗ್ 3.1 ಓವರ್‌ಗಳಲ್ಲಿ ಕೇವಲ 12 ರನ್ ನೀಡಿ 3 ವಿಕೆಟ್ ಕಬಳಿಸಿದರು.

Story first published: Sunday, August 7, 2022, 20:50 [IST]
Other articles published on Aug 7, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X