ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಚೈನೀಸ್ ಪ್ರಾಯೋಜಕತ್ವ ಕೊನೆಗೊಳಿಸುತ್ತಿಲ್ಲ: ಬಿಸಿಸಿಐ ಖಜಾಂಚಿ ಅರುಣ್

Arun Dhumal confirms BCCI has no plans to end association with Chinese company

ನವದೆಹಲಿ, ಜೂನ್ 19: ಮುಂದಿನ ಸೀಸನ್‌ನಿಂದ ಪ್ರಾಯೋಜಕತ್ವ ನಿಯಮವನ್ನು ಮರು ವಿಮರ್ಶಿಸುವ ಬಗ್ಗೆ ಬೋರ್ಡ್ ಫಾರ್ ಪಂಟ್ರೋಲ್ ಫಾರ್ ಕ್ರಿಕೆಟ್ ಇನ್ ಇಂಡಿಯಾ (ಬಿಸಿಸಿಐ) ಬಾಯ್ತೆರೆದಿದೆ. ಆದರೆ ಚೈನೀಸ್ ಮೊಬೈಲ್ ಕಂಪನಿ ವಿವೋದೊಂದಿಗಿನ ಐಪಿಎಲ್ ಟೈಟಲ್ ಸ್ಪಾನ್ಸರ್‌ ಕೊನೆಗೊಳಿಸುವ ಬಗ್ಗೆ ಯಾವುದೇ ಯೋಜನೆಯಿಲ್ಲ ಎಂದು ಬಿಸಿಸಿಐ ಖಜಾಂಚಿ ಅರುಣ್ ಧುಮಾಲ್ ಖಾತರಿಪಡಿಸಿದ್ದಾರೆ. ಭಾರತ-ಚೀನಾ ಗಡಿ ವಿವಾದದ ಸಂಬಂಧ ಚೀನಾ ಉತ್ಪನ್ನಗಳನ್ನು ಬಹಿಷ್ಕರಿಸಬೇಕು ಎಂಬ ಮಾತುಗಳು ಕೇಳಿಬರುತ್ತಿರುವುದಕ್ಕೆ ಧುಮಾಲ್ ಪ್ರತಿಕ್ರಿಯಿಸಿದ್ದಾರೆ.

ಪಂದ್ಯ ಆಡಿ 50 ವರ್ಷಗಳ ಬಳಿಕ ಟೆಸ್ಟ್ ಕ್ರಿಕೆಟಿಗನಾದ ಜೋನ್ಸ್: ಗಮ್ಮತ್ತಿನ ಕತೆ!ಪಂದ್ಯ ಆಡಿ 50 ವರ್ಷಗಳ ಬಳಿಕ ಟೆಸ್ಟ್ ಕ್ರಿಕೆಟಿಗನಾದ ಜೋನ್ಸ್: ಗಮ್ಮತ್ತಿನ ಕತೆ!

ಚೈನೀಸ್ ಕಂಪನಿಯೊಂದಿಗಿನ ಪ್ರಾಯೋಜಕತ್ವದ ಬಗ್ಗೆ ಮಾತನಾಡಿರುವ ಅರುಣ್ ಧುಮಾಲ್, ಐಪಿಎಲ್‌ಗೆ ಚೈನೀಸ್ ಕಂಪನಿ ನೀಡುತ್ತಿರುವ ಪ್ರಾಯೋಜಕತ್ವ ಭಾರತದ ಆರ್ಥಿಕತೆಗೆ ನೆರವು ನೀಡುತ್ತಿದೆ. ಭಾವನಾತ್ಮಕವಾಗಿ ನಾವು ಏನಾದರೊಂದು ಹೇಳೋದು ಸುಲಭ. ಆದರೆ ಅದರ ಪಾಲನೆ ಅಷ್ಟು ಸುಲಭವಿಲ್ಲ ಎಂದು ಧುಮಾಲ್ ಹೇಳಿದ್ದಾರೆ.

ರೋಹಿತ್ ಕಾಲೆಳೆಯಲು ಯುಜಿ ಬಳಸಿದ ಫೋಟೋ ನೋಡಿ ಅಭಿಮಾನಿಗಳು ದಂಗು!ರೋಹಿತ್ ಕಾಲೆಳೆಯಲು ಯುಜಿ ಬಳಸಿದ ಫೋಟೋ ನೋಡಿ ಅಭಿಮಾನಿಗಳು ದಂಗು!

ಭಾರತ-ಚೀನಾ ಗಡಿ ವಿವಾದ ತೀವ್ರಗೊಂಡಿದ್ದರೂ ಚೀನಾ ಪ್ರಾಯೋಜಕತ್ವವನ್ನು ಕೊನೆಗೊಳಿಸಲು ಯಾಕೆ ಸಾಧ್ಯವಿಲ್ಲ ಎಂಬುದಕ್ಕೆ ಧುಮಾಲ್ ಪ್ರಮುಖ ಮತ್ತು ಅರ್ಥಪೂರ್ಣ ಕಾರಣಗಳನ್ನು ಕೊಟ್ಟಿದ್ದಾರೆ.

ದುಬಾರಿ ಶುಲ್ಕ ಪಾವತಿಸಲು ನೆರವು

ದುಬಾರಿ ಶುಲ್ಕ ಪಾವತಿಸಲು ನೆರವು

ಬಿಸಿಸಿಐ ಸದ್ಯ ವಿವೋದಿಂದ ವಾರ್ಷಿಕವಾಗಿ 440 ಕೋ.ರೂ. ಗಳಿಸುತ್ತಿದೆ. ಈ ಗಳಿಕೆಯಿಂದಲೇ ಭಾರತದಲ್ಲಿ ಸರ್ಕಾರದ ದುಬಾರಿ ತೆರಿಗೆ ಪಾವತಿಸಿ ಐಪಿಎಲ್‌ನಂತ ಕ್ರೀಡಾಕೂಟಗಳನ್ನು ಆಯೋಜಿಸಲು ಸಾಧ್ಯವಾಗುತ್ತಿದೆ ಎಂದು ಧುಮಾಲ್ ಹೇಳಿದ್ದಾರೆ. ಬಿಸಿಸಿಐ ಮತ್ತು ವಿವೊದೊಂದಿಗಿನ ಐದು ವರ್ಷಗಳ ಈ ಒಪ್ಪಂದ 2022ಕ್ಕೆ ಕೊನೆಗೊಳ್ಳಲಿದೆ.

20 ಭಾರತೀಯ ಯೋಧರು ಹುತಾತ್ಮ

20 ಭಾರತೀಯ ಯೋಧರು ಹುತಾತ್ಮ

ಗಾಲ್ವಾನ್‌ನಲ್ಲಿ ಭಾರತ-ಚೀನಾ ಗಡಿ ಸಂಘರ್ಷ ತೀವ್ರಗೊಂಡಿದ್ದು, ಘಟನೆಯಲ್ಲಿ ಭಾರತದ ಸುಮಾರು 20 ಯೋಧರು ಹುತಾತ್ಮರಾಗಿದ್ದಾರೆ. ಹೀಗಾಗಿ ಚೀನಾ ಉತ್ಪನ್ನಗಳನ್ನು ಬಹಿಷ್ಕರಿಸಬೇಕು ಎಂಬ ಮಾತುಗಳು ಎಲ್ಲೆಡೆ ಕೇಳಿಬರುತ್ತಿವೆ. ಇದೇ ವಿಚಾರವಾಗಿ ಧುಮಾಲ್ ಪ್ರತಿಕ್ರಿಯಿಸಿದ್ದಾರೆ.

ವ್ಯತ್ಯಾಸವನ್ನು ಅರ್ಥಮಾಡಿಕೊಳ್ಳಬೇಕು

ವ್ಯತ್ಯಾಸವನ್ನು ಅರ್ಥಮಾಡಿಕೊಳ್ಳಬೇಕು

'ನೀವು ಭಾವನಾತ್ಮಕವಾಗಿ ಮಾತನಾಡುವಾಗ, ನೀವು ತಾರ್ಕಿಕತೆಯನ್ನು ಬಿಟ್ಟುಬಿಡುತ್ತೀರಿ. ಚೀನಾದ ಕಾರಣಕ್ಕಾಗಿ ಚೀನೀ ಕಂಪನಿಯನ್ನು ಬೆಂಬಲಿಸುವುದು ಅಥವಾ ಭಾರತದ ಕಾರಣವನ್ನು ಬೆಂಬಲಿಸಲು ಚೀನೀ ಕಂಪನಿಯಿಂದ ಸಹಾಯ ಪಡೆಯುವುದು ನಡುವಿನ ವ್ಯತ್ಯಾಸವನ್ನು ನಾವು ಅರ್ಥಮಾಡಿಕೊಳ್ಳಬೇಕು,' ಎಂದು ಪಿಟಿಐ ಜೊತೆಗೆ ಮಾತನಾಡುತ್ತ ಧುಮಾಲ್ ಹೇಳಿದ್ದಾರೆ.

ಭಾರತದ ಒಳಿತಿಗೆ ಚೀನಾ ಬೆಂಬಲಿಸಬೇಕು

ಭಾರತದ ಒಳಿತಿಗೆ ಚೀನಾ ಬೆಂಬಲಿಸಬೇಕು

'ಚೀನಾದ ಕಂಪೆನಿಗಳು ತಮ್ಮ ಉತ್ಪನ್ನಗಳನ್ನು ಭಾರತದಲ್ಲಿ ಮಾರಾಟ ಮಾಡಲು ನಾವು ಅನುಮತಿಸುವಾಗ, ಅವರು ಭಾರತೀಯ ಗ್ರಾಹಕರಿಂದ ಯಾವುದೇ ಹಣವನ್ನು ತೆಗೆದುಕೊಳ್ಳುತ್ತಾರೋ, ಅವರು ಅದರ ಒಂದು ಭಾಗವನ್ನು ಬಿಸಿಸಿಐಗೆ (ಬ್ರಾಂಡ್ ಪ್ರಚಾರವಾಗಿ) ಪಾವತಿಸುತ್ತಿದ್ದಾರೆ. ಬೋರ್ಡ್ ಆ ಹಣದ ಮೇಲೆ ಶೇಕಡಾ 42ರಷ್ಟು ತೆರಿಗೆಯನ್ನು ಭಾರತೀಯ ಸರ್ಕಾರಕ್ಕೆ ಪಾವತಿಸುತ್ತಿದೆ. ಹೀಗಾಗಿ ನಾವಿಲ್ಲಿ ಭಾರತದ ಕಾರಣಕ್ಕೆ ಚೀನಾ ಬೆಂಬಲಿಸಬೇಕಾಗುತ್ತದೆ, ಚೀನಾಕ್ಕೋಸ್ಕರ ಅಲ್ಲ,' ಎಂದು ಅರುಣ್ ವಾಸ್ತವ ವಿವರಿಸಿದರು.

Story first published: Friday, June 19, 2020, 10:40 [IST]
Other articles published on Jun 19, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X