113 ವರ್ಷಗಳ ಹಿಂದಿನ ಕೆಟ್ಟ ದಾಖಲೆ ಮುರಿದ ಆಸ್ಟ್ರೇಲಿಯಾ-ಇಂಗ್ಲೆಂಡ್!

ಲಂಡನ್, ಸೆಪ್ಟೆಂಬರ್ 16: ಆಸ್ಟ್ರೇಲಿಯಾ ಮತ್ತು ಇಂಗ್ಲೆಂಡ್ ಎರಡೂ ತಂಡಗಳು ಟೆಸ್ಟ್ ಕ್ರಿಕೆಟ್‌ನಲ್ಲಿ ಕೆಟ್ಟ ದಾಖಲೆಯೊಂದನ್ನು ಮುರಿದಿವೆ. ಲಂಡನ್‌ನ ಕೆನ್ನಿಂಗ್ಟನ್ ಓವಲ್‌ನಲ್ಲಿ ಭಾನುವಾರ (ಸೆಪ್ಟೆಂಬರ್ 15) ಮುಕ್ತಾಯಗೊಂಡ ಇಂಗ್ಲೆಂಡ್‌-ಆಸ್ಟ್ರೇಲಿಯಾ ನಡುವಣ 5ನೇ ಆ್ಯಷಸ್ ಟೆಸ್ಟ್ ಪಂದ್ಯದಲ್ಲಿ ಈ ದಾಖಲೆ ನಿರ್ಮಾಣವಾಗಿದೆ.

7 ಎಸೆತಗಳಿಗೆ ಸತತ 7 ಸಿಕ್ಸ್‌ ಚಚ್ಚಿದ ನಬಿ, ಝದ್ರನ್: ವೈರಲ್ ವಿಡಿಯೋ

ಐದು ಅಥವಾ ಹೆಚ್ಚು ಪಂದ್ಯಗಳ ಟೆಸ್ಟ್ ಸರಣಿಯೊಂದರಲ್ಲಿ ಎರಡೂ ತಂಡಗಳ ಆರಂಭಿಕ ಬ್ಯಾಟ್ಸ್‌ಮನ್‌ಗಳು ಅತೀ ಕಡಿಮೆ ರನ್‌ ಸರಾಸರಿ ಗಳಿಸಿದ ಕೆಟ್ಟ ದಾಖಲೆಯೀಗ ಆಸ್ಟ್ರೇಲಿಯಾ ಮತ್ತು ಇಂಗ್ಲೆಂಡ್‌ ಹಣೆಗೇರಿದೆ.

ಬ್ಯಾಡ್ಮಿಂಟನ್ ಚಾಂಪಿಯನ್ ಸಿಂಧುಗೆ BMW ಕಾರು ಗಿಫ್ಟ್ ಕೊಟ್ಟ ನಾಗಾರ್ಜುನ

ಐದು ಪಂದ್ಯಗಳ ಈ ಟೆಸ್ಟ್‌ ಸರಣಿಯ 5ನೇ ಪಂದ್ಯದಲ್ಲಿ ಇಂಗ್ಲೆಂಡ್‌ 135 ರನ್‌ ಜಯ ಗಳಿಸಿದೆ. ಇದರೊಂದಿಗೆ (1 ಪಂದ್ಯ ಡ್ರಾ ಸೇರಿ) ಸರಣಿ 2-2ರಿಂದ ಸಮಬಲಗೊಂಡಿದೆ.

ಆಸ್ಟ್ರೇಲಿಯಾ ನೀರಸ ಬ್ಯಾಟಿಂಗ್

ಆಸ್ಟ್ರೇಲಿಯಾ ನೀರಸ ಬ್ಯಾಟಿಂಗ್

ಭಾನುವಾರ ನಡೆದ 5ನೇ ಟೆಸ್ಟ್ ಪಂದ್ಯದಲ್ಲಿ ಚೇಸಿಂಗ್‌ಗಿಳಿದಿದ್ದ ಆಸ್ಟ್ರೇಲಿಯಾದ ದ್ವಿತೀಯ ಇನ್ನಿಂಗ್ಸ್‌ನಲ್ಲಿ ಆರಂಭಿಕ ಬ್ಯಾಟ್ಸ್ಮನ್ ಮಾರ್ಕಸ್ ಹ್ಯಾರೀಸ್ ಮೊದಲ ವಿಕೆಟ್ ಒಪ್ಪಿಸುವಾಗ ಆಸೀಸ್ ಖಾತೆಯಲ್ಲಿದ್ದುದು ಬರೀ 18 ರನ್. ಈ ವಿಕೆಟ್‌ನೊಂದಿಗೆ ಕೆಟ್ಟ ದಾಖಲೆ ಸೃಷ್ಟಿಯಾಗಿದೆ.

ಆರಂಭಿಕ ಸರಾಸರಿ ರನ್

ಆರಂಭಿಕ ಸರಾಸರಿ ರನ್

5ನೇ ಪಂದ್ಯದಲ್ಲಿ ಆಸ್ಟ್ರೇಲಿಯಾದ ದ್ವಿತೀಯ ಇನ್ನಿಂಗ್ಸ್‌ ಮುಕ್ತಾಯದ ಬಳಿಕ, ಈ ಆ್ಯಷಸ್ ಸೀರೀಸ್‌ನಲ್ಲಿ ಎರಡೂ ತಂಡಗಳ ಆರಂಭಿಕ ಬ್ಯಾಟ್ಸ್ಮನ್‌ಗಳ ಸರಾಸರಿ ರನ್ 12.55 ಆಗಿದೆ. ಇದರಲ್ಲಿ ಅತೀ ಹೆಚ್ಚು ಕಳೆಪೆ ಆರಂಭಿಕ ಬ್ಯಾಟಿಂಗ್ ಪ್ರದರ್ಶಿಸಿದ್ದು ಆಸ್ಟ್ರೇಲಿಯಾ ತಂಡ.

113 ವರ್ಷಗಳ ಹಿಂದಿನ ದಾಖಲೆ

113 ವರ್ಷಗಳ ಹಿಂದಿನ ದಾಖಲೆ

5 ಅಥವಾ ಹೆಚ್ಚು ಪಂದ್ಯಗಳಿರುವ ಟೆಸ್ಟ್ ಸರಣಿಯೊಂದರಲ್ಲಿ ಎರಡೂ ತಂಡಗಳ ಆರಂಭಿಕ ಬ್ಯಾಟ್ಸ್ಮನ್‌ಗಳು ಮೊದಲ ವಿಕೆಟ್ ಮುರಿಯುವುದಕ್ಕೂ ಮುನ್ನ ಬಾರಿಸಿದ ಅತೀ ಕಡಿಮೆ ರನ್ ಸರಾಸರಿ 14.16 ಆಗಿತ್ತು. ಅಂದ್ಹಾಗೆ ಈ ದಾಖಲೆ ಸೃಷ್ಟಿಯಾಗಿದ್ದು 1906ರಲ್ಲಿ, ದಕ್ಷಿಣ ಆಫ್ರಿಕಾ-ಇಂಗ್ಲೆಂಡ್ ನಡುವಿನ ಪಂದ್ಯದಲ್ಲಿ!

ವಾರ್ನರ್‌ಗೆ ಮುಖಭಂಗ

ವಾರ್ನರ್‌ಗೆ ಮುಖಭಂಗ

ಆ್ಯಷಸ್ 2019ರ ಟೆಸ್ಟ್ ಸರಣಿಯುದ್ದಕ್ಕೂ ಅತೀ ಕೆಟ್ಟ ಬ್ಯಾಟಿಂಗ್ ಪ್ರದರ್ಶಿಸಿದ್ದ ಆಸೀಸ್ ಆರಂಭಿಕ ಬ್ಯಾಟ್ಸ್ಮನ್ ಡೇವಿಡ್ ವಾರ್ನರ್, 6ಕ್ಕೂ ಹೆಚ್ಚು ಇನ್ನಿಂಗ್ಸ್‌ಗಳಲ್ಲಿ 10ರೊಳಗಿನ ರನ್‌ಗೆ ವಿಕೆಟ್ ಒಪ್ಪಿಸಿದ್ದರು. ಅಷ್ಟೇ ಅಲ್ಲ, ಈ ಸರಣಿಯ ಹಿಂದಿನ 9 ಇನ್ನಿಂಗ್ಸ್‌ಗಳಲ್ಲಿ ವಾರ್ನರ್ 6 ಸಾರಿ ಇಂಗ್ಲೆಂಡ್‌ ವೇಗಿ ಸ್ಟುವರ್ಟ್ ಬ್ರಾಡ್‌ಗೆ ವಿಕೆಟ್‌ ನೀಡಿದ ಅನಗತ್ಯ ದಾಖಲೆಗಾಗಿಯೂ ಗುರುತಿಸಿಕೊಂಡಿದ್ದಾರೆ.

For Quick Alerts
ALLOW NOTIFICATIONS
For Daily Alerts
 

ಕ್ರಿಕೆಟನ್ನು ಪ್ರೀತಿಸುತ್ತೀರಾ? ಋಜುವಾತುಪಡಿಸಿ! ಮೈಖೇಲ್ ಫ್ಯಾಂಟಸಿ ಕ್ರಿಕೆಟ್ ಆಟವಾಡಿ

Story first published: Monday, September 16, 2019, 0:15 [IST]
Other articles published on Sep 16, 2019
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X