ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಸ್ಟೋಕ್ಸ್ ಸಾಹಸ, ಸೋಲೋ ಪಂದ್ಯವನ್ನು ಪವಾಡ ರೀತೀಲಿ ಗೆದ್ದ ಇಂಗ್ಲೆಂಡ್!

ಏಕಾಂಗಿಯಾಗಿ ಹೋರಾಡಿ ಪಂದ್ಯ ಗೆಲ್ಲಿಸಿದ ಬೆನ್ ಸ್ಟೋಕ್ಸ್ | Ashes 2019 | Oneindia Kannada
Ashes 2019: Ben Stokes Inspires England to Miraculous Win

ಲೀಡ್ಸ್, ಆಗಸ್ಟ್ 25: ಲೀಡ್ಸ್‌ನ ಹೆಡ್ಡಿಂಗ್ಲಿಯಲ್ಲಿ ಭಾನುವಾರ (ಆಗಸ್ಟ್ 25) ನಡೆದ ಇಂಗ್ಲೆಂಡ್-ಆಸ್ಟ್ರೇಲಿಯಾ ನಡುವಣ 3ನೇ ಆ್ಯಷಸ್ ಟೆಸ್ಟ್‌ನಲ್ಲಿ ವಿಶ್ವ ಚಾಂಪಿಯನ್ ಇಂಗ್ಲೆಂಡ್ ಪವಾಡ ರೀತಿಯಲ್ಲಿ ಕೇವಲ 1 ವಿಕೆಟ್ ಗೆಲುವನ್ನಾಚರಿಸಿದೆ. ಆಲ್ ರೌಂಡರ್ ಬೆನ್ ಸ್ಟೋಕ್ಸ್ ಸ್ಫೋಟಕ ಬ್ಯಾಟಿಂಗ್‌ನಿಂದಾಗಿ ಇಂಗ್ಲೆಂಡ್ ಅಚ್ಚರಿಯ ಗೆಲುವು ದಾಖಲಿಸಿದೆ.

ವರ್ಲ್ಡ್ ಚಾಂಪಿಯನ್‌ಷಿಪ್: ಬಂಗಾರ ಗೆದ್ದು ಇತಿಹಾಸ ಬರೆದ ಪಿವಿ ಸಿಂಧುವರ್ಲ್ಡ್ ಚಾಂಪಿಯನ್‌ಷಿಪ್: ಬಂಗಾರ ಗೆದ್ದು ಇತಿಹಾಸ ಬರೆದ ಪಿವಿ ಸಿಂಧು

ಆರಂಭಿಕ ಇನ್ನಿಂಗ್ಸ್‌ನಲ್ಲಿ ಇಂಗ್ಲೆಂಡ್ ದಾಖಲೆಯ ಕನಿಷ್ಠ ಒಟ್ಟು ರನ್ ಮಾಡಿದ್ದರಿಂದ ದ್ವಿತೀಯ ಇನ್ನಿಂಗ್ಸ್‌ನಲ್ಲಿ ಆಂಗ್ಲರಿಗೆ ಬೃಹತ್‌ ರನ್‌ ಗುರಿಯಿತ್ತು. ಆದರೆ ಇಂಗ್ಲೆಂಡ್‌ ಗೆಲುವಿನ ನೊಗ ಹೊತ್ತ ಸ್ಟೋಕ್ಸ್ ಅದ್ಭುತ ಆಟ ಪ್ರದರ್ಶಿಸಿದರು. 2019ರ ವಿಶ್ವಕಪ್‌ ವೇಳೆಯೂ ಸ್ಟೋಕ್ಸ್ ಸ್ಫೋಟಕ ಬ್ಯಾಟಿಂಗ್ ತೋರಿಸಿದ್ದರು.

"ಟೀಂ ಇಂಡಿಯಾಕ್ಕೆ ಸ್ಟಾರ್ ಆಟಗಾರರು ಸೇರಲು ಜೇಟ್ಲಿ ನೆರವು": ಸೆಹ್ವಾಗ್

ಇಂಗ್ಲೆಂಡ್‌ನ ದ್ವಿತೀಯ ಇನ್ನಿಂಗ್ಸ್‌ನಲ್ಲಿ ಬೆನ್ ಸ್ಟೋಕ್ಸ್ ಅಜೇಯ 135 ರನ್ ಗಮನಾರ್ಹ ಕೊಡುಗೆ ನೀಡಿದ್ದರಿಂದ ಇಂಗ್ಲೆಂಡ್, ಸೋಲಬೇಕಾದ ಪಂದ್ಯವನ್ನು ಗೆದ್ದುಕೊಂಡಿದೆ!

ಮಾರ್ನರ್-ಮಾರ್ನಸ್ ಅರ್ಧ ಶತಕ

ಮಾರ್ನರ್-ಮಾರ್ನಸ್ ಅರ್ಧ ಶತಕ

ಟಾಸ್ ಸೋತು ಬ್ಯಾಟಿಂಗ್‌ಗೆ ಇಳಿಸಲ್ಪಟ್ಟ ಆಸ್ಟ್ರೇಲಿಯಾ, ಡೇವಿಡ್ ವಾರ್ನರ್ 61, ಮಾರ್ನಸ್ ಲ್ಯಾಬುಸ್ಚಾಗ್ನೆ 74 ರನ್ ಕೊಡುಗೆಯೊಂದಿಗೆ 52.1 ಓವರ್‌ ಮುಕ್ತಾಯಕ್ಕೆ ಎಲ್ಲಾ ವಿಕೆಟ್ ಕಳೆದು 179 ರನ್ ಮಾಡಿತ್ತು. ಆಸೀಸ್ ಮೊದಲ ಇನ್ನಿಂಗ್ಸ್‌ನಲ್ಲಿ ಇಂಗ್ಲೆಂಡ್ ವೇಗಿ ಜೋಫ್ರಾ ಆರ್ಚರ್‌ಗೆ 6 ವಿಕೆಟ್‌ಗಳು ಲಭಿಸಿದ್ದವು.

ತೀವ್ರ ಮುಖಭಂಗ

ತೀವ್ರ ಮುಖಭಂಗ

ಗುರಿ ಬೆನ್ನತ್ತಿದ ಇಂಗ್ಲೆಂಡ್‌ ಬ್ಯಾಟಿಂಗ್‌ ವೈಫಲ್ಯದಿಂದಾಗಿ ಪ್ರಥಮ ಇನ್ನಿಂಗ್ಸ್‌ನಲ್ಲಿ ತೀವ್ರ ಮುಖಭಂಗಕ್ಕೀಡಾಯಿತು. ಯಾಕೆಂದರೆ ಇಂಗ್ಲೆಂಡ್ ಮೊದಲ ಇನ್ನಿಂಗ್ಸ್‌ನಲ್ಲಿ ಕೇವಲ 67 ರನ್‌ಗೆ ಆಲ್ ಔಟ್ ಆಗಿತ್ತು. ಇದು 1948ರ ಬಳಿಕ ಇಂಗ್ಲೆಂಡ್‌ ತಂಡ ಆಸ್ಟ್ರೇಲಿಯಾ ವಿರುದ್ಧ ಟೆಸ್ಟ್‌ನಲ್ಲಿ ಬಾರಿಸಿದ ಅತೀ ಕನಿಷ್ಠ ಒಟ್ಟು ರನ್.

ಸ್ಟೋಕ್ಸ್‌ಗೆ 3 ವಿಕೆಟ್

ಸ್ಟೋಕ್ಸ್‌ಗೆ 3 ವಿಕೆಟ್

ದ್ವಿತೀಯ ಇನ್ನಿಂಗ್ಸ್‌ನಲ್ಲಿ ಆಸ್ಟ್ರೇಲಿಯಾ, ಮಾರ್ನಸ್ ಲ್ಯಾಬುಸ್ಚಾಗ್ನೆ 80 ರನ್‌ ಕೊಡುಗೆಯೊಂದಿಗೆ 75.2 ಓವರ್‌ಗೆ 246 ರನ್ ಗಳಿಸಿತು. ಈ ವೇಳೆ ಬೆನ್ ಸ್ಟೋಕ್ಸ್ 56 ರನ್‌ಗೆ 3 ವಿಕೆಟ್ ಪಡೆದು ಆಸೀಸ್ ರನ್ ಕದಿಯುವಿಕೆಟ್ ಕಡಿವಾಣ ಹಾಕಿದ್ದರು.

ಬೃಹತ್ ರನ್ ಗುರಿ

ಬೃಹತ್ ರನ್ ಗುರಿ

ಅಂತೂ ಅಂತಿಮ ಇನ್ನಿಂಗ್ಸ್‌ನಲ್ಲಿ ಇಂಗ್ಲೆಂಡ್‌ ಗೆಲ್ಲಲು ಸುಮಾರು 358 ರನ್‌ಗಳ ಅಗತ್ಯವಿತ್ತು. ನಾಯಕ ಜೋ ರೂಟ್ 77, ಜೋ ಡೆನ್ಲಿ 50 ರನ್ ಸೇರಿಸಿ ತಂಡವನ್ನು ಕೊಂಚ ಬೆಂಬಲಿಸಿದರು. ಆದರೆ ಅನಂತರ ಇಂಗ್ಲೆಂಡ್ ತಂಡ ಬ್ಯಾಟಿಂಗ್ ಕಾವಲು ಕಾಯಲಿಲ್ಲ. ವಿಕೆಟ್ ಉರುಳುತ್ತಾ ಬಂದವು. ತಂಡದ ಗೆಲುವಿನ ಹಠಹೊತ್ತಂತೆ ಕ್ರೀಸಿಗಂಟಿ ನಿಂತಿದ್ದ ಸ್ಟೋಕ್ಸ್ ಅಜೇಯ 135 ರನ್ ಸೇರಿಸಿದರು. ಇದರಲ್ಲಿ 8 ಸಿಕ್ಸರ್, 11 ಬೌಂಡರಿಗಳು ಸೇರಿವೆ. ಇಂಗ್ಲೆಂಡ್ 125.4 ಓವರ್‌ಗೆ 9 ವಿಕೆಟ್ ನಷ್ಟದಲ್ಲಿ 362 ರನ್ ಪೇರಿಸಿ ರೋಚಕ ಗೆಲುವನ್ನಾಚರಿಸಿತು. ಐದು ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ಇತ್ತಂಡಗಳು ಈಗ 1-1ರ ಸಮಬಲ ಸಾಧಿಸಿವೆ.

Story first published: Sunday, August 25, 2019, 22:20 [IST]
Other articles published on Aug 25, 2019
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X