ಕನಿಷ್ಠ ರನ್‌ಗೆ ಆಲೌಟ್ ಆಗಿ ದಾಖಲೆ ಬರೆದ ವಿಶ್ವ ಚಾಂಪಿಯನ್ ಇಂಗ್ಲೆಂಡ್!

ಆಸ್ಟ್ರೇಲಿಯಾ ವಿರುದ್ದ ಹೀನಾಯವಾಗಿ ಮುಖಭಂಗ ಅನುಭವಿಸಿದ ಇಂಗ್ಲೆಂಡ್..?

ಲೀಡ್ಸ್, ಆಗಸ್ಟ್ 24: ಕ್ರಿಕೆಟ್ ಜನಕರಾದ ಆಂಗ್ಲರು 2019ರ ಐಸಿಸಿ ವಿಶ್ವಕಪ್‌ ನಲ್ಲಿ ಟ್ರೋಫಿ ಜಯಿಸುವ ಮೂಲಕ ಚೊಚ್ಚಲ ಬಾರಿಗೆ ವಿಶ್ವಕಪ್‌ನಲ್ಲಿ ಚಾಂಪಿಯನ್‌ ಪಟ್ಟದ ಸಂಭ್ರಮವನ್ನು ಆರಿಸಿದ್ದರು. ಈ ಟೂರ್ನಿ ಇಂಗ್ಲೆಂಡ್‌ ಮತ್ತು ವೇಲ್ಸ್‌ನಲ್ಲಿ ನಡೆದಿತ್ತು. ಇದೇ ವಿಶ್ವ ಚಾಂಪಿಯನ್ ಇಂಗ್ಲೆಂಡ್, ಟೆಸ್ಟ್‌ನಲ್ಲಿ ಕೆಟ್ಟ ದಾಖಲೆಯೊಂದಕ್ಕೆ ಕಾರಣವಾಗಿದೆ.

ಟಿ20 ಕ್ರಿಕೆಟ್ ಇತಿಹಾಸದಲ್ಲಿ ವಿಶಿಷ್ಠ ದಾಖಲೆ ಬರೆದ ಕೃಷ್ಣಪ್ಪ ಗೌತಮ್!

ಲೀಡ್ಸ್‌ನ ಹೆಡ್ಡಿಂಗ್ಲಿಯಲ್ಲಿ ನಡೆಯುತ್ತಿರುವ ಇಂಗ್ಲೆಂಡ್-ಆಸ್ಟ್ರೇಲಿಯಾ ನಡುವಣ 3ನೇ ಆ್ಯಷಸ್ ಟೆಸ್ಟ್‌ನ ಮೊದಲ ಇನ್ನಿಂಗ್ಸ್‌ನಲ್ಲಿ ಜೋ ರೂಟ್ ನಾಯಕತ್ವದ ಇಂಗ್ಲೆಂಡ್ ತಂಡ ಕೇವಲ 67 ರನ್‌ಗೆ ಆಲೌಟ್‌ ಆಗಿದೆ. ಇದರೊಂದಿಗೆ ಬೇಡದ ದಾಖಲೆಗೂ ಕಾರಣವಾಗಿದೆ.

ಎಂಎಸ್ ಧೋನಿ ಜಾಗಕ್ಕೆ ಸೂಕ್ತ ಆಟಗಾರನ ಸೂಚಿಸಿದ ವೀರೇಂದ್ರ ಸೆಹ್ವಾಗ್

ಸುಮಾರು 73 ವರ್ಷಗಳಲ್ಲಿ ಆಸ್ಟ್ರೇಲಿಯಾ ವಿರುದ್ಧ ಟೆಸ್ಟ್ ಇನ್ನಿಂಗ್ಸ್ ಒಂದರಲ್ಲಿ ಇಂಗ್ಲೆಂಡ್ ದಾಖಲಿಸಿದ ಅತೀ ಕನಿಷ್ಠ ಒಟ್ಟು ರನ್‌ ಆಗಿ 67 ಟೋಟಲ್ ದಾಖಲಿಸಲ್ಪಟ್ಟಿದೆ.

ಆರ್ಚರ್‌ಗೆ 6 ವಿಕೆಟ್

ಆರ್ಚರ್‌ಗೆ 6 ವಿಕೆಟ್

ಟಾಸ್ ಸೋತು ಬ್ಯಾಟಿಂಗ್‌ಗೆ ಇಳಿಸಲ್ಪಟ್ಟ ಆಸ್ಟ್ರೇಲಿಯಾ, ಮೊದಲ ಇನ್ನಿಂಗ್ಸ್‌ನಲ್ಲಿ 52.1 ಓವರ್‌ಗೆ 179 ರನ್ ಮಾಡಿತು. ಆರಂಭಿಕ ಬ್ಯಾಟ್ಸ್ಮನ್ ಡೇವಿಡ್ ವಾರ್ನರ್ 61, ಮಾರ್ನಸ್ ಲ್ಯಾಬುಸ್ಚಾಗ್ನೆ 74 ರನ್ ಸೇರಿಸಿ ತಂಡವನ್ನು ರನ್ ಕುಸಿತದಿಂದ ಪಾರು ಮಾಡಿದರು. ಈ ಇನ್ನಿಂಗ್ಸ್‌ನಲ್ಲಿ ವೇಗಿ ಜೋಫ್ರಾ ಆರ್ಚರ್‌ಗೆ ಭರ್ಜರಿ 6 ವಿಕೆಟ್‌ಗಳು ಲಭಿಸಿದ್ದವು.

ಆಸೀಸ್ ಮಾರಕ ಬೌಲಿಂಗ್

ಆಸೀಸ್ ಮಾರಕ ಬೌಲಿಂಗ್

ಮೊದಲ ಇನ್ನಿಂಗ್ಸ್‌ಗೆ ಇಳಿದ ಇಂಗ್ಲೆಂಡ್ ತಂಡವನ್ನು ಆಸೀಸ್ ಬೌಲರ್‌ಗಳು ಕಾಡಲಾರಂಭಿಸಿದರು. ಜೋ ಡೆನ್ಲಿ 12 ರನ್ ಬಿಟ್ಟರೆ ಇನ್ಯಾರೂ 10 ರನ್‌ಗೂ ಹೆಚ್ಚಿನ ವೈಯಕ್ತಿಕ ರನ್ ಗಳಿಸಲಿಲ್ಲ. ಕೇವಲ 27.5 ಓವರ್‌ಗೆ ಇಂಗ್ಲೆಂಡ್ ಸರ್ವ ಪತನ ಕಂಡು 67 ರನ್ ಮಾಡಿತು. ಜೋಷ್ ಹ್ಯಾಝಲ್‌ವುಡ್ 5, ಪ್ಯಾಟ್‌ ಕಮಿನ್ಸ್ 3, ಜೇಮ್ಸ್ ಪ್ಯಾಟಿನ್ಸನ್ 2 ವಿಕೆಟ್‌ ಪಡೆದು ಬೌಲಿಂಗ್ ಪಾರಮ್ಯ ಮೆರೆದರು.

ಕೇವಲ 52 ರನ್‌

ಕೇವಲ 52 ರನ್‌

ಟೆಸ್ಟ್ ಕ್ರಿಕೆಟ್‌ನಲ್ಲಿ ಇಂಗ್ಲೆಂಡ್ ತಂಡ ಆಸ್ಟ್ರೇಲಿಯಾ ವಿರುದ್ಧ ಅತೀ ಕಡಿಮೆ ರನ್ ದಾಖಲಿಸಿದ್ದು 73 ವರ್ಷಗಳ ಹಿಂದೆ ಅಂದರೆ 1948ರಲ್ಲಿ. ಲಂಡನ್‌ ಕೆನ್ನಿಂಗ್ಟನ್ ಓವಲ್‌ನಲ್ಲಿ ನಡೆದಿದ್ದ 5ನೇ ಮತ್ತು ಕೊನೆಯ ಟೆಸ್ಟ್‌ನಲ್ಲಿ ಇಂಗ್ಲೆಂಡ್‌ ಮೊದಲ ಇನ್ನಿಂಗ್ಸ್‌ನಲ್ಲಿ ಕೇವಲ 52 ರನ್ ಮಾಡಿತ್ತು. ಈ ಪಂದ್ಯದಲ್ಲಿ ಆಸೀಸ್ ಇನ್ನಿಂಗ್ಸ್ ಸಹಿತ 149 ರನ್ ಜಯ ಗಳಿಸಿತ್ತಲ್ಲದೆ, ಸರಣಿಯನ್ನು 4-0ಯಿಂದ ಜಯಿಸಿತ್ತು.

ಆಸೀಸ್ ಮುನ್ನಡೆ

ಆಸೀಸ್ ಮುನ್ನಡೆ

ಆಸ್ಟ್ರೇಲಿಯಾ ಈಗ ದ್ವಿತೀಯ ಇನ್ನಿಂಗ್ಸ್ ಆಡುತ್ತಿದ್ದು, 57 ಓವರ್‌ಗೆ 6 ವಿಕೆಟ್ ಕಳೆದು 171 ರನ್‌ನೊಂದಿಗೆ 283 ರನ್ ಮುನ್ನಡೆಯಲ್ಲಿದೆ. ಮಾರ್ನಸ್ ಲ್ಯಾಬುಸ್ಚಾಗ್ನೆ (53), ಜೇಮ್ಸ್ ಪ್ಯಾಟಿನ್ಸನ್ (2) ಕ್ರೀಸ್‌ನಲ್ಲಿದ್ದಾರೆ. 5 ಪಂದ್ಯಗಳ ಈ ಟೆಸ್ಟ್ ಸರಣಿಯಲ್ಲಿ ಆಸೀಸ್ 1-0ಯ ಮುನ್ನಡೆಯಲ್ಲಿದೆ.

For Quick Alerts
ALLOW NOTIFICATIONS
For Daily Alerts

ಕ್ರಿಕೆಟನ್ನು ಪ್ರೀತಿಸುತ್ತೀರಾ? ಋಜುವಾತುಪಡಿಸಿ! ಮೈಖೇಲ್ ಫ್ಯಾಂಟಸಿ ಕ್ರಿಕೆಟ್ ಆಟವಾಡಿ

Story first published: Saturday, August 24, 2019, 2:41 [IST]
Other articles published on Aug 24, 2019
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X