ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಆ್ಯಶಸ್: ನಾಲ್ಕನೇ ಟೆಸ್ಟ್ ಪಂದ್ಯ ಡ್ರಾನಲ್ಲಿ ಅಂತ್ಯ, 1 ವಿಕೆಟ್‌ನಿಂದ ಸೋಲು ತಪ್ಪಿಸಿಕೊಂಡ ಇಂಗ್ಲೆಂಡ್

Ashes Test

ಸಿಡ್ನಿಯಲ್ಲಿ ನಡೆದ ಆ್ಯಶಸ್ ನಾಲ್ಕನೇ ಟೆಸ್ಟ್ ಪಂದ್ಯದಲ್ಲಿ ಇಂಗ್ಲೆಂಡ್ ಸ್ವಲ್ಪದರಲ್ಲೇ ಸೋಲನ್ನ ತಪ್ಪಿಸಿಕೊಂಡಿದ್ದು, ಪಂದ್ಯ ಡ್ರಾನಲ್ಲಿ ಅಂತ್ಯಗೊಂಡಿದೆ. 388ರನ್‌ಗಳ ಗುರಿ ಬೆನ್ನತ್ತಿದ ಇಂಗ್ಲೆಂಡ್ 9 ವಿಕೆಟ್ ನಷ್ಟಕ್ಕೆ 270 ರನ್‌ ಕಲೆಹಾಕಿದ್ದು, ಅಂತಿಮ ವಿಕೆಟ್ ಉಳಿಸಿಕೊಂಡು ಸೋಲಿನಿಂದ ಪಾರಾಗಿದೆ.

ಅಂತಿಮ ದಿನದಾಟದಲ್ಲಿ ಮಳೆ ಅಡ್ಡಿಪಡಿಸಿದ ಸಂದರ್ಭದಲ್ಲಿ ಇಂಗ್ಲೆಂಡ್ ಗೆಲುವಿಗೆ 266 ರನ್‌ಗಳು ಬಾಕಿ ಉಳಿದಿತ್ತು. ಎರಡು ಸೆಷನ್‌ಗಳಲ್ಲಿ ಇಂಗ್ಲೆಂಡ್ ಮೊತ್ತ ಕಲೆಹಾಕುವುದು ಅಸಾಧ್ಯದ ಮಾತಾಗಿತ್ತು. ಹೀಗಾಗಿ ಇಂಗ್ಲೆಂಡ್ ಪಂದ್ಯ ಡ್ರಾನತ್ತ ಸಾಗಿಸುವ ಪ್ರಯತ್ನ ನಡೆಸಿತು. ಆದ್ರೆ ಆಸ್ಟ್ರೇಲಿಯಾ ಒಂದೊಂದೇ ವಿಕೆಟ್ ಬೇಟೆಯಾಡುತ್ತ, ಗೆಲುವಿನ ಸಮೀಪಕ್ಕೆ ಕೊಂಡೊಯ್ದಿತು.

ನಾಲ್ಕನೇ ದಿನದಾಟದಂತ್ಯಕ್ಕೆ ವಿಕೆಟ್ ನಷ್ಟವಿಲ್ಲದೆ 30 ರನ್ ಕಲೆಹಾಕಿದ್ದ ಇಂಗ್ಲೆಂಡ್, ಅಂತಿಮ ದಿನದಾಟದ ಮೊದಲ ಸೆಷನ್‌ನಲ್ಲಿ 3 ವಿಕೆಟ್ ನಷ್ಟಕ್ಕೆ 122 ರನ್ ಕಲೆಹಾಕಿತು. ಓಪನಿಂಗ್ ಬ್ಯಾಟ್ಸ್‌ಮನ್ ಹಸೀಬ್ ಹಮೀದ್ 9 ರನ್‌ಗಳಿಸಿ ಸ್ಕಾಟ್ ಬೊಲ್ಯಾಂಡ್‌ಗೆ ವಿಕೆಟ್ ಒಪ್ಪಿಸಿದ್ರೆ, ಡೇವಿಡ್ ಮಲನ್ ಅನುಭವಿ ಸ್ಪಿನ್ನರ್ ನೇಥನ್ ಲ್ಯಾನ್‌ ಸ್ಪಿನ್ ದಾಳಿಯಲ್ಲಿ ಕ್ಲೀನ್ ಬೌಲ್ಡ್ ಆಗಿದ್ದಾರೆ.

ಸಚಿನ್ ಮಗಳು ಸಾರಾ ಮತ್ತು ಶುಭ್ಮನ್ ಗಿಲ್‌ ಡೇಟಿಂಗ್? ಫೋಟೊಗಳಿಂದ ನೆಟಿಜನ್‌ಗಳ ಕೈಗೆ ಸಿಕ್ಕಿಬಿದ್ದರು!ಸಚಿನ್ ಮಗಳು ಸಾರಾ ಮತ್ತು ಶುಭ್ಮನ್ ಗಿಲ್‌ ಡೇಟಿಂಗ್? ಫೋಟೊಗಳಿಂದ ನೆಟಿಜನ್‌ಗಳ ಕೈಗೆ ಸಿಕ್ಕಿಬಿದ್ದರು!

ಒಂದೆಡೆ ವಿಕೆಟ್ ಉರುಳಿದ್ರು ಉತ್ತಮವಾಗಿ ಬ್ಯಾಟ್ ಬೀಸಿದ ಓಪನರ್ ಝಾಕ್ ಕ್ರಾಲಿ ಆಸೀಸ್ ಬೌಲರ್‌ಗಳನ್ನ ಸಮರ್ಥವಾಗಿ ಎದುರಿಸಿದ್ರು. 100 ಎಸೆತಗಳಲ್ಲಿ 77 ರನ್‌ ಕಲೆಹಾಕಿದ ಝಾಕ್ 13 ಬೌಂಡರಿಗಳನ್ನ ದಾಖಲಿಸಿದ್ರು. ಆದ್ರೆ ಊಟದ ವಿರಾಮಕ್ಕೂ ಮೊದಲು ಚೆನ್ನಾಗಿ ಬ್ಯಾಟ್ ಬೀಸುತ್ತಿದ್ದ ಝಾಕ್, ಕ್ಯಾಮರೂನ್ ಗ್ರೀನ್‌ ಬೌಲಿಂಗ್‌ನಲ್ಲಿ ಎಲ್‌ಬಿಡಬ್ಲ್ಯೂ ಬಲೆಗೆ ಸಿಲುಕಿದ್ರು.

ಊಟದ ವಿರಾಮದ ಬಳಿಕ ನಾಯಕ ಜೋ ರೂಟ್ 24 ರನ್‌ಗಳಿಸಿದ್ದಾಗ ಸ್ಕಾಟ್ ಬೋಲ್ಯಾಂಡ್ ಬೌಲಿಂಗ್‌ನಲ್ಲಿ ಔಟಾದ್ರು. ಆದ್ರೆ ಇಂಗ್ಲೆಂಡ್ ಬೌಲರ್‌ಗಳನ್ನ ಮತ್ತೊಮ್ಮೆ ಉತ್ತಮವಾಗಿ ಎದುರಿಸಿದ ಆಲ್‌ರೌಂಡರ್ ಬೆನ್‌ ಸ್ಟೋಕ್ಸ್ ಅರ್ಧಶತಕ ದಾಖಲಿಸಿದ್ರು. ಆದ್ರೆ 60 ರನ್‌ಗಳಿಸಿದ್ದ ವೇಳೆ ನೇಥನ್ ಲ್ಯಾನ್ ಸ್ಪಿನ್‌ ಮೋಡಿಯನ್ನ ಅರಿಯದೆ ಸ್ಲಿಪ್‌ನಲ್ಲಿದ್ದ ಸ್ಮಿತ್‌ಗೆ ಕ್ಯಾಚಿತ್ತು ಭಾರೀ ನಿರಾಸೆಯಿಂದ ಪೆವಿಲಿಯನ್‌ನತ್ತ ಹೆಜ್ಜೆ ಹಾಕಿದ್ರು.

ಈ ಇಬ್ಬರು ಆಟಗಾರರು ಔಟಾದ ಬಳಿಕ ಕೆಳಕ್ರಮಾಂಕದ ಬ್ಯಾಟ್ಸ್‌ಮನ್‌ಗಳು ಕೂಡ ಹೆಚ್ಚು ಹೊತ್ತು ನೆರವಾಗಲಿಲ್ಲ. ವಿಕೆಟ್ ಕೀಪರ್ ಬ್ಯಾಟ್ಸ್‌ಮನ್ ಜಾಸ್ ಬಟ್ಲರ್ ಮತ್ತು ಮಾರ್ಕ್‌ವುಡ್‌ರನ್ನ ಆಸ್ಟ್ರೇಲಿಯಾ ನಾಯಕ ಪ್ಯಾಟ್ ಕಮಿನ್ಸ್‌ ಒಂದೇ ಓವರ್‌ನಲ್ಲಿ ಎಲ್‌ಬಿಡಬ್ಲ್ಯೂ ಬಲೆಗೆ ಕೆಡವಿದ್ರು. ಮೊದಲಿಗೆ ಬಟ್ಲರ್ 11ರನ್‌ಗೆ ಔಟಾದ್ರೆ, ಓವರ್‌ನ ಕೊನೆಯ ಎಸೆತದಲ್ಲಿ ಕಮಿನ್ಸ್ ಯಾರ್ಕರ್‌ಗೆ ಪತರುಗುಟ್ಟಿದ ಮಾರ್ಕ್ ವುಡ್‌ ಡಕೌಟ್ ಆದ್ರು.

ಇದಾದ ಬಳಿಕ ಮೊದಲ ಇನ್ನಿಂಗ್ಸ್ ಇಂಗ್ಲೆಂಡ್ ಪರ ಏಕಾಂಗಿ ಹೋರಾಟ ನಡೆಸಿ ಶತಕ ಸಿಡಿಸಿದ್ದ ಜಾನಿ ಬೈಸ್ಟ್ರೋವ್ 41ರನ್‌ಗೆ ಸ್ಕಾಟ್ ಬೋಲ್ಯಾಂಡ್‌ಗೆ ವಿಕೆಟ್ ಒಪ್ಪಿಸಿದ ತಕ್ಷಣ ಇಂಗ್ಲೆಂಡ್ ಕಥೆ ಮುಗಿಯಿತು ಎಂದೇ ಅಂದಾಜಿಸಲಾಗಿತ್ತು. ಆದ್ರೆ ಕೊನೆಯಲ್ಲಿ ಜ್ಯಾಕ್‌ ಲೀಚ್ 34 ಎಸೆತಗಳಲ್ಲಿ 26 ರನ್ ಕಲೆಹಾಕಿ ಹೋರಾಟದ ಪ್ರದರ್ಶನ ನೀಡಿ ವಿಕೆಟ್ ಒಪ್ಪಿಸಿದ್ರು.

ಪಂದ್ಯ ಮುಕ್ತಾಯಕ್ಕೆ ಇನ್ನೇನು ಕೆಲವೇ ಓವರ್‌ಗಳು ಬಾಕಿ ಇರುವಂತೆ ಇಂಗ್ಲೆಂಡ್‌ನ 9ನೇ ವಿಕೆಟ್ ಪತನಗೊಂಡಿತು. ಆದ್ರೆ ಇಂಗ್ಲೆಂಡ್‌ನ ಅನುಭವಿ ಬೌಲರ್‌ಗಳಾದ ಸ್ಟುವರ್ಟ್ ಬ್ರಾಡ್ ಮತ್ತು ಜೇಮ್ಸ್ ಆ್ಯಂಡರ್ಸನ್ ತಮ್ಮ ಅನುಭವವನ್ನೆಲ್ಲಾ ಧಾರೆ ಎರೆದು 10ನೇ ವಿಕೆಟ್ ಕಾಪಾಡಿಕೊಂಡ್ರು. 35 ಎಸೆತಗಳನ್ನ ಎದುರಿಸಿದ ಬ್ರಾಡ್ ಅಜೇಯ 8 ರನ್ ಕಲೆಹಾಕಿ ತಂಡವನ್ನ ಸೋಲಿನಿಂದ ಕಾಪಾಡಿದ್ರು. ಇಂಗ್ಲೆಂಡ್ ಕೇವಲ ಒಂದು ವಿಕೆಟ್‌ನಿಂದ ಮತ್ತೊಂದು ಸೋಲಿನಿಂದ ಪಾರಾಯಿತು, ಪಂದ್ಯ ಡ್ರಾನಲ್ಲಿ ಕೊನೆಗೊಂಡಿತು.

ಆಸ್ಟ್ರೇಲಿಯಾ ಪರ ಸ್ಕಾಟ್ ಬೋಲ್ಯಾಂಡ್ 3, ನೇಥನ್ ಲ್ಯಾನ್ 2, ಪ್ಯಾಟ್ ಕಮಿನ್ಸ್ 2, ಕ್ಯಾಮರೂನ್ ಗ್ರೀನ್ ಮತ್ತು ಸ್ಟೀವನ್ ಸ್ಮಿತ್ ತಲಾ 1 ವಿಕೆಟ್ ಪಡೆದು ಮಿಂಚಿದರು.

ಉತ್ತಮ ನಾಯಕನಾಗಲು Virat ಬಳಿ ಸಲಹೆ ಕೇಳ್ತಾರಾ Rahul? | Oneindia Kannada

ಆಸೀಸ್ ಪರ ಎರಡು ಇನ್ನಿಂಗ್ಸ್‌ಗಳಲ್ಲಿ ಶತಕ ದಾಖಲಿಸಿದ ಉಸ್ಮಾನ್ ಖವಾಜ ಪಂದ್ಯ ಪುರುಷೋತ್ತಮ ಪ್ರಶಸ್ತಿಗೆ ಭಾಜನರಾದ್ರು. ಐದು ಟೆಸ್ಟ್ ಪಂದ್ಯಗಳ ಟೆಸ್ಟ್‌ ಸರಣಿಯಲ್ಲಿ ಈಗಾಗಲೇ ಕಾಂಗರೂಗಳು 3-0ಯಲ್ಲಿ ಮುನ್ನಡೆ ಪಡೆದಿದ್ದಾರೆ.

Story first published: Sunday, January 9, 2022, 14:16 [IST]
Other articles published on Jan 9, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X