ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಆ್ಯಶಸ್ 4ನೇ ಟೆಸ್ಟ್‌: ಅಂತಿಮ ದಿನಕ್ಕೆ ಕೊಂಚ ಮಳೆ ಅಡ್ಡಿ ,ಇಂಗ್ಲೆಂಡ್ ಗೆಲುವಿಗೆ 266 ರನ್ ಬಾಕಿ LIVE SCORE

Ashes test

ಸಿಡ್ನಿ ಕ್ರಿಕೆಟ್ ಗ್ರೌಂಡ್‌ (ಎಸ್‌ಸಿಜಿ)ನಲ್ಲಿ ನಡೆಯುತ್ತಿರುವ ಆ್ಯಶಸ್ ನಾಲ್ಕನೇ ಟೆಸ್ಟ್ ಅಂತಿಮ ದಿನದಾಟದಲ್ಲಿ ಪಂದ್ಯಕ್ಕೆ ಕೊಂಚ ಮಳೆ ಅಡ್ಡಿಪಡಿಸಿದ್ದು, ಇಂಗ್ಲೆಂಡ್ ಗೆಲುವಿಗೆ 266 ರನ್‌ಗಳು ಬಾಕಿ ಉಳಿದಿದೆ. ಆಸ್ಟ್ರೇಲಿಯಾ ಗೆಲ್ಲಲು ಎರಡು ಸೆಷನ್‌ಗಳಲ್ಲಿ ಏಳು ವಿಕೆಟ್ ಕಬಳಿಸಬೇಕಿದೆ.

ನಾಲ್ಕನೇ ದಿನದಾಟದಂತ್ಯಕ್ಕೆ ವಿಕೆಟ್ ನಷ್ಟವಿಲ್ಲದೆ 30 ರನ್ ಕಲೆಹಾಕಿದ್ದ ಇಂಗ್ಲೆಂಡ್, ಮಳೆಯಿಂದಾಗಿ ಪಂದ್ಯ ಸ್ಥಗಿತಗೊಳ್ಳುವ ಮೊದಲ ಇಂಗ್ಲೆಂಡ್ 3 ವಿಕೆಟ್ ನಷ್ಟಕ್ಕೆ 122 ರನ್ ಕಲೆಹಾಕಿತು. ಇಂದು ಮೊದಲ ಸೆಷನ್‌ನಲ್ಲಿ ಓಪನಿಂಗ್ ಬ್ಯಾಟ್ಸ್‌ಮನ್ ಹಸೀಬ್ ಹಮೀದ್ 9 ರನ್‌ಗಳಿಸಿ ಸ್ಕಾಟ್ ಬೊಲ್ಯಾಂಡ್‌ಗೆ ವಿಕೆಟ್ ಒಪ್ಪಿಸಿದ್ರೆ, ಡೇವಿಡ್ ಮಲನ್ ಅನುಭವಿ ಸ್ಪಿನ್ನರ್ ನೇಥನ್ ಲ್ಯಾನ್‌ ಸ್ಪಿನ್ ದಾಳಿಯಲ್ಲಿ ಕ್ಲೀನ್ ಬೌಲ್ಡ್ ಆಗಿದ್ದಾರೆ.

ಭಾರತದ ಬೌಲರ್ಸ್ ನನ್ನ ಔಟ್ ಮಾಡಬೇಕಾದ್ರೆ, ನಂದು ಯಾವುದಾದ್ರೂ ಮೂಳೆ ಮುರೀಬೇಕು: ಡೀನ್ ಎಲ್ಗರ್ಭಾರತದ ಬೌಲರ್ಸ್ ನನ್ನ ಔಟ್ ಮಾಡಬೇಕಾದ್ರೆ, ನಂದು ಯಾವುದಾದ್ರೂ ಮೂಳೆ ಮುರೀಬೇಕು: ಡೀನ್ ಎಲ್ಗರ್

ಒಂದೆಡೆ ವಿಕೆಟ್ ಉರುಳಿದ್ರು ಉತ್ತಮವಾಗಿ ಬ್ಯಾಟ್ ಬೀಸಿದ ಓಪನರ್ ಝಾಕ್ ಕ್ರಾಲಿ ಆಸೀಸ್ ಬೌಲರ್‌ಗಳನ್ನ ಸಮರ್ಥವಾಗಿ ಎದುರಿಸಿದ್ರು. 100 ಎಸೆತಗಳಲ್ಲಿ 77 ರನ್‌ ಕಲೆಹಾಕಿದ ಝಾಕ್ 13 ಬೌಂಡರಿಗಳನ್ನ ದಾಖಲಿಸಿದ್ರು. ಆದ್ರೆ ಊಟದ ವಿರಾಮಕ್ಕೂ ಮೊದಲು ಚೆನ್ನಾಗಿ ಬ್ಯಾಟ್ ಬೀಸುತ್ತಿದ್ದ ಝಾಕ್, ಕ್ಯಾಮರೂನ್ ಗ್ರೀನ್‌ ಬೌಲಿಂಗ್‌ನಲ್ಲಿ ಎಲ್‌ಬಿಡಬ್ಲ್ಯೂ ಬಲೆಗೆ ಸಿಲುಕಿದ್ರು.

ನಾಯಕ ಜೋ ರೂಟ್ ಅಜೇಯ 13 ರನ್‌ಗಳನ್ನ ಕಲೆಹಾಕಿದ್ದು, ಆಲ್‌ರೌಂಡರ್ ಬೆನ್‌ ಸ್ಟೋಕ್ಸ್ ಅಜೇಯ 16 ರನ್ ಸಿಡಿಸಿದ್ದಾರೆ. ಉಳಿದ ಎರಡು ಸೆಷನ್‌ಗಳಲ್ಲಿ ಇಂಗ್ಲೆಂಡ್ ಗೆಲುವಿಗೆ 266 ರನ್‌ಗಳನ್ನ ಕಲೆಹಾಕಬೇಕಿದ್ದು, ತುಂಬಾ ಕಠಿಣ ಸವಾಲಾಗಿದೆ. ಹೀಗಾಗಿ ಇಂಗ್ಲೆಂಡ್ ತಂಡ ಬಹುತೇಕ ಪಂದ್ಯವನ್ನ ಡ್ರಾನತ್ತ ಕೊಂಡೊಯ್ಯಲು ಪ್ರಯತ್ನಿಸಬಹುದು. ಆದ್ರೆ ಆತಿಥೇಯ ಆಸ್ಟ್ರೇಲಿಯಾ 7 ವಿಕೆಟ್ ಕಬಳಿಸಿ ಗೆಲುವಿಗೆ ಪ್ರಯತ್ನಿಸಲಿದೆ.

ಮೊದಲ ಇನ್ನಿಂಗ್ಸ್‌ನಲ್ಲಿ ಆಸ್ಟ್ರೇಲಿಯಾದ 416 ರನ್‌ಗಳಿಗೆ ಉತ್ತರವಾಗಿ ಬ್ಯಾಟಿಂಗ್ ಮಾಡಿದ ಇಂಗ್ಲೆಂಡ್ ಆರಂಭದಲ್ಲಿಯೇ ಭಾರೀ ಕುಸಿತವನ್ನು ಕಂಡಿತು. ಆದರೆ ಜಾನಿ ಬೈರ್‌ಸ್ಟೀವ್ ಹಾಗೂ ಬೆನ್ ಸ್ಟೋಕ್ಸ್ ಬ್ಯಾಟಿಂಗ್‌ನಿಂದಾಗಿ ಇಂಗ್ಲೆಂಡ್ ತಂಡ ಹೋರಾಟದ ಪ್ರದರ್ಶನ ನೀಡಿತು. ಇದರಲ್ಲಿ ಬೈರ್‌ಸ್ಟೋವ್ ಅಜೇಯ ಶತಕ ಸಿಡಿಸಿ ನಾಲ್ಕನೇ ದಿನಕ್ಕೆ ಆಟವನ್ನು ಕಾಯ್ದಿರಿಸಿದ್ದರೆ ಬೆನ್ ಸ್ಟೋಕ್ಸ್ ಅರ್ಧ ಶತಕದ ಕೊಡಿಗೆ ನೀಡಿ ತಂಡಕ್ಕೆ ನೆರವಾದರು. ಅಂತಿಮವಾಗಿ ಇಂಗ್ಲೆಂಡ್ 294 ರನ್‌ಗಳಿಗೆ ಆಲೌಟ್ ಆಗುವ ಮೂಲಕ 122ರನ್‌ಗಳ ಹಿನ್ನಡೆ ಅನುಭವಿಸಿತ್ತು.

ಆ್ಯಶಸ್ 2021-22: ತನ್ನನ್ನು ನಿಂದಿಸಿದ ಅಭಿಮಾನಿಗೆ ಖಡಕ್ ಆಗಿ ಉತ್ತರ ಕೊಟ್ಟ ಜಾನಿ ಬೈಸ್ಟ್ರೋವ್ಆ್ಯಶಸ್ 2021-22: ತನ್ನನ್ನು ನಿಂದಿಸಿದ ಅಭಿಮಾನಿಗೆ ಖಡಕ್ ಆಗಿ ಉತ್ತರ ಕೊಟ್ಟ ಜಾನಿ ಬೈಸ್ಟ್ರೋವ್

ಎರಡನೇ ಇನ್ನಿಂಗ್ಸ್‌ನಲ್ಲಿ ಆಸ್ಟ್ರೇಲಿಯಾ 265ರನ್‌ಗಳಿಗೆ ಎರಡನೇ ಬಾರಿಗೆ ಪಂದ್ಯದಲ್ಲಿ ಡಿಕ್ಲೇರ್ ಮಾಡಿಕೊಂಡಿತು. ಇಂಗ್ಲೆಂಡ್‌ಗೆ 388ರನ್‌ಗಳ ಗುರಿ ನೀಡಿತು

ಈಗಾಗಲೇ ಪಿಚ್‌ನ ಕವರ್ಸ್ ತೆಗೆಯಲಾಗಿದ್ದು, ಪಂದ್ಯ ಪುನಾರಂಭಗೊಂಡಿದೆ. ನಾಲ್ಕನೇ ಟೆಸ್ಟ್ ಪಂದ್ಯದ ಅಂತಿಮ ದಿನದ ಲೈವ್ ಸ್ಕೋರ್ ಈ ಕೆಳಗಿದೆ.

1
51146

ಆಸ್ಟ್ರೇಲಿಯಾ ಪ್ಲೇಯಿಂಗ್ XI: ಮಾರ್ಕಸ್ ಹ್ಯಾರಿಸ್, ಡೇವಿಡ್ ವಾರ್ನರ್, ಮಾರ್ನಸ್ ಲ್ಯಾಬುಶೈನ್, ಸ್ಟೀವನ್ ಸ್ಮಿತ್, ಉಸ್ಮಾನ್ ಖವಾಜಾ, ಕ್ಯಾಮೆರಾನ್ ಗ್ರೀನ್, ಅಲೆಕ್ಸ್ ಕ್ಯಾರಿ (ವಿಕೆಟ್ ಕೀಪರ್), ಪ್ಯಾಟ್ ಕಮಿನ್ಸ್ (ನಾಯಕ), ಮಿಚೆಲ್ ಸ್ಟಾರ್ಕ್, ನಾಥನ್ ಲಿಯಾನ್, ಸ್ಕಾಟ್ ಬೋಲ್ಯಾಂಡ್
ಬೆಂಚ್: ಝೈ ರಿಚರ್ಡ್ಸನ್, ಮಿಚೆಲ್ ಸ್ವೆಪ್ಸನ್, ಮೈಕೆಲ್ ನೆಸರ್

ಇಂಗ್ಲೆಂಡ್ ತಂಡ ಪ್ಲೇಯಿಂಗ್ XI: ಹಸೀಬ್ ಹಮೀದ್, ಝಾಕ್ ಕ್ರಾಲಿ, ಡೇವಿಡ್ ಮಲನ್, ಜೋ ರೂಟ್ (ನಾಯಕ), ಬೆನ್ ಸ್ಟೋಕ್ಸ್, ಜಾನಿ ಬೈರ್‌ಸ್ಟೋ, ಜೋಸ್ ಬಟ್ಲರ್ (ವಿಕೆಟ್ ಕೀಪರ್), ಮಾರ್ಕ್ ವುಡ್, ಜ್ಯಾಕ್ ಲೀಚ್, ಸ್ಟುವರ್ಟ್ ಬ್ರಾಡ್, ಜೇಮ್ಸ್ ಆಂಡರ್ಸನ್ ಬೆಂಚ್: ರೋರಿ ಬರ್ನ್ಸ್, ಕ್ರಿಸ್ ವೋಕ್ಸ್, ಡೇನಿಯಲ್ ಲಾರೆನ್ಸ್

Story first published: Sunday, January 9, 2022, 8:56 [IST]
Other articles published on Jan 9, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X