ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಆ್ಯಶಸ್ ಸರಣಿ: ಇಂಗ್ಲೆಂಡ್ ತಂಡಕ್ಕೆ ವಾಪಸ್ಸಾದ ಸ್ಟುವರ್ಟ್ ಬ್ರಾಡ್‌, ಪ್ಲೇಯಿಂಗ್ 11 ಘೋಷಣೆ

Stuart broad

ಸಿಡ್ನಿ ಕ್ರಿಕೆಟ್ ಗ್ರೌಂಡ್‌ನಲ್ಲಿ ನಾಳೆಯಿಂದ ಪ್ರಾರಂಭಗೊಳ್ಳಲಿರುವ ಆಸ್ಟ್ರೇಲಿಯಾ - ಇಂಗ್ಲೆಂಡ್ ನಡುವಿನ ನಾಲ್ಕನೇ ಆ್ಷಸ್ ಟೆಸ್ಟ್ ಪಂದ್ಯದಲ್ಲಿ ಇಂಗ್ಲೆಂಡ್ ತನ್ನ ಮರ್ಯಾದೆ ಉಳಿಸಿಕೊಳ್ಳಲು ಪಂದ್ಯ ಗೆಲ್ಲಲೇ ಬೇಕಾದ ಒತ್ತಡದಲ್ಲಿ ಕಣಕ್ಕಿಳಿಯಲಿದ್ದು, ಪ್ಲೇಯಿಂಗ್ 11 ಘೋಷಿಸಿದೆ.

ತಂಡದಲ್ಲಿ ಜೇಮ್ಸ್ ಆಂಡರ್ಸನ್ ಮತ್ತು ಸ್ಟುವರ್ಟ್ ಬ್ರಾಡ್ ಅವರಂತಹ ಅನುಭವಿ ಬೌಲರ್‌ಗಳನ್ನು ಹೊಂದಿದ್ದರೂ, ಪ್ಯಾಟ್ ಕಮಿನ್ಸ್ ಮತ್ತು ಮಿಚೆಲ್ ಸ್ಟಾರ್ಕ್ ಅವರಂತಹ ಫೈರ್‌ಪವರ್‌ನಷ್ಟು ಪರಿಣಾಮಕಾರಿಯಾಗಿಲ್ಲ. ಇಬ್ಬರೂ ಬೌಲರ್‌ಗಳು 500ಕ್ಕೂ ಹೆಚ್ಚು ಟೆಸ್ಟ್ ವಿಕೆಟ್ ಪಡೆದಿದ್ದರೂ ಕಾಂಗರೂಗಳನ್ನ ಕಟ್ಟಿ ಹಾಕುವಲ್ಲಿ ಹಿಂದೆ ಬಿದ್ದಿದ್ದಾರೆ.

ಕುಂತಲ್ಲಿ ಕೂರಂಗಿಲ್ಲ! ಡ್ರೆಸ್ಸಿಂಗ್ ರೂಂನಲ್ಲಿ ಬುಮ್ರಾ ಬೌಲಿಂಗ್ ಅಣಕಿಸಿದ ಕೊಹ್ಲಿಕುಂತಲ್ಲಿ ಕೂರಂಗಿಲ್ಲ! ಡ್ರೆಸ್ಸಿಂಗ್ ರೂಂನಲ್ಲಿ ಬುಮ್ರಾ ಬೌಲಿಂಗ್ ಅಣಕಿಸಿದ ಕೊಹ್ಲಿ

ಟೆಸ್ಟ್ ಕ್ರಿಕೆಟ್ ಇತಿಹಾಸದಲ್ಲಿ ಇಂಗ್ಲೆಂಡ್ ಪರ ಅತಿ ಹೆಚ್ಚು ವಿಕೆಟ್ ಪಡೆದಿರುವ ಈ ಅವಳಿ ಬೌಲರ್‌ಗಳು ಸಿಡ್ನಿ ಟೆಸ್ಟ್‌ನಲ್ಲಿ ತಂಡಕ್ಕೆ ಬೆನ್ನಲುಬಾಗಿ ನಿಲ್ಲಬೇಕಿದೆ. ಈಗಾಗಲೇ ಕೋವಿಡ್ ಸಾಂಕ್ರಾಮಿಕದಿಂದಾಗಿ ಇಂಗ್ಲೆಂಡ್ ಸ್ಕ್ವಾಡ್ ಪತರುಗುಟ್ಟಿದ್ದು, ಗಾಯದಿಂದ ಸ್ಟುವರ್ಟ್ ಬ್ರಾಡ್ ಚೇತರಿಸಿಕೊಂಡು ತಂಡಕ್ಕೆ ವಾಪಸ್ಸಾಗಿದ್ದಾರೆ.

ಈಗಾಗಲೇ 3-0ಯಿಂದ ಸರಣಿಯನ್ನ ಕೈ ಬಿಟ್ಟಿರುವ ಇಂಗ್ಲೆಂಡ್ ಬಾಕ್ಸಿಂಗ್ ಡೇ ಟೆಸ್ಟ್‌ನಲ್ಲಿ ಕೇವಲ 68 ರನ್‌ಗಳಿಗೆ ಆಲೌಟ್ ಆಗುವ ಮೂಲಕ ಭಾರೀ ಮುಖಭಂಗ ಎದುರಿಸಿತು. ಇದರ ಜೊತೆಗೆ ಈಗ ಸರಣಿಯನ್ನು 5-0 ಅಂತರದಲ್ಲಿ ಕಳೆದುಕೊಳ್ಳುವ ನಿರೀಕ್ಷೆಯಿದೆ. ಇಂಗ್ಲಿಷ್ ಶಿಬಿರವು ಕೋವಿಡ್‌ನ ಕಾಟದೊಂದಿಗೆ ಹೋರಾಡುತ್ತಿರುವುದರಿಂದ ಅವರಿಗೆ ಮುಖ್ಯ ಕೋಚ್ ಸಿಲ್ವರ್‌ವುಡ್ ಕೂಡ ಲಭ್ಯವಿಲ್ಲ.

ಇನ್ನು ಭುಜದ ಗಾಯಗಳಿಂದಾಗಿ ಆಲಿ ರಾಬಿನ್ಸನ್ ಮತ್ತು ಕ್ರಿಸ್ ವೋಕ್ಸ್ ಆಯ್ಕೆಗೆ ಅಲಭ್ಯರಾಗಿದ್ದಾರೆ ಎಂದು ಖಚಿತಪಡಿಸಿದ ಸಹಾಯಕ ಕೋಚ್ ಗ್ರಹಾಂ ಥೋರ್ಪ್ ಅವರ ಮೇಲೆ ಮಹತ್ತರ ಜವಾಬ್ದಾರಿ ಇದೆ.

ಸದ್ಯ ಆ್ಯಂಡರ್ಸನ್ ಮತ್ತು ಸ್ಟುವರ್ಟ್ ಬ್ರಾಡ್ ಜೊತೆಗೆ, ಇಂಗ್ಲೆಂಡ್‌ನಲ್ಲಿ ಮಾರ್ಕ್ ವುಡ್ ಮತ್ತು ಜ್ಯಾಕ್ ಲೀಚ್ ಕೂಡ ಇರಲಿದ್ದಾರೆ. ಬ್ರಾಡ್, ಆಂಡರ್ಸನ್ ಸೀಮ್ ಬೌಲಿಂಗ್ ದಾಳಿಗೆ ಜವಾಬ್ದಾರರಾಗಿರುತ್ತಾರೆ. ಸ್ಟೋಕ್ಸ್ ಬೌಲಿಂಗ್‌ನಲ್ಲಿ ಎಲ್ಲರಿಗೂ ಬೆಂಬಲ ನೀಡಲಿದ್ದಾರೆ. ಇಂಗ್ಲೆಂಡ್ ತಂಡವು ಪ್ಲೇಯಿಂಗ್ 11 ಘೋಷಣೆಗೂ ಮುನ್ನವೇ ಆಸ್ಟ್ರೇಲಿಯಾ ತಂಡ ತನ್ನ ಪ್ಲೇಯಿಂಗ್ ಇಲೆವೆನ್ ಅನ್ನು ಕೂಡ ಘೋಷಿಸಿದೆ. ಉಭಯ ತಂಡಗಳ ಆಡುವ ಪ್ಲೇಯಿಂಗ್ ಇಲೆವೆನ್ ಈ ಕೆಳಗಿನಂತಿದೆ.

ಇಂಗ್ಲೆಂಡ್ ಪ್ಲೇಯಿಂಗ್ 11 : ಹಸೀಬ್ ಹಮೀದ್, ಜಾಕ್ವೆಸ್ ಕ್ರೌಲಿ, ಡೇವಿಡ್ ಮಲನ್, ಜೋ ರೂಟ್ (ಸಿ), ಬೆನ್ ಸ್ಟೋಕ್ಸ್, ಜಾನಿ ಬೈರ್‌ಸ್ಟೋವ್, ಜೋಸ್ ಬಟ್ಲರ್, ಮಾರ್ಕ್ ವುಡ್, ಜ್ಯಾಕ್ ಲೀಚ್, ಸ್ಟುವರ್ಟ್ ಬ್ರಾಡ್, ಜೇಮ್ಸ್‌ ಆಂಡರ್ಸನ್

ಆಸ್ಟ್ರೇಲಿಯಾ ಪ್ಲೇಯಿಂಗ್ 11 : ಡೇವಿಡ್ ವಾರ್ನರ್, ಮಾರ್ಕಸ್ ಹ್ಯಾರಿಸ್, ಮಾರ್ನಸ್ ಲ್ಯಾಬುಸ್ಚಾಗ್ನೆ, ಸ್ಟೀವ್ ಸ್ಮಿತ್, ಉಸ್ಮಾನ್ ಖವಾಜಾ, ಕ್ಯಾಮೆರಾನ್ ಗ್ರೀನ್, ಅಲೆಕ್ಸ್ ಕ್ಯಾರಿ (WK), ಪ್ಯಾಟ್ ಕಮಿನ್ಸ್ (ನಾಯಕ), ಮಿಚೆಲ್ ಸ್ಟಾರ್ಕ್, ನೇಥನ್ ಲಿಯಾನ್, ಸ್ಕಾಟ್ ಬೋಲ್ಯಾಂಡ್.

Story first published: Tuesday, January 4, 2022, 17:15 [IST]
Other articles published on Jan 4, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X