ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಆ್ಯಶಸ್ 2021-22: ತನ್ನನ್ನು ನಿಂದಿಸಿದ ಅಭಿಮಾನಿಗೆ ಖಡಕ್ ಆಗಿ ಉತ್ತರ ಕೊಟ್ಟ ಜಾನಿ ಬೈಸ್ಟ್ರೋವ್

Ashes SCG

ಪ್ರತಿಷ್ಠಿತ ಆ್ಯಶಸ್ ಟೆಸ್ಟ್ ಸರಣಿಯ ನಾಲ್ಕನೇ ಪಂದ್ಯ ಸಿಡ್ನಿ ಕ್ರಿಕೆಟ್ ಗ್ರೌಂಡ್‌ನಲ್ಲಿ ನಡೆಯುತ್ತಿದ್ದು, ಪಂದ್ಯ ಕುತೂಹಲ ಘಟ್ಟಕ್ಕೆ ತಲುಪಿದೆ. ನಾಲ್ಕನೇ ದಿನದಾಟದಂತ್ಯಕ್ಕೆ ಇಂಗ್ಲೆಂಡ್ ಎರಡನೇ ಇನ್ನಿಂಗ್ಸ್‌ ವಿಕೆಟ್ ನಷ್ಟವಿಲ್ಲದೆ 30 ರನ್ ಕಲೆಹಾಕಿದೆ. ಆಸ್ಟ್ರೇಲಿಯಾ ನೀಡಿರುವ 388 ರನ್‌ಗಳ ಗುರಿ ಬೆನ್ನತ್ತಿರುವ ಇಂಗ್ಲೆಂಡ್‌ ಗೆಲುವಿಗೆ ಇನ್ನೂ 358ರನ್‌ಗಳು ಬಾಕಿ ಉಳಿದಿದೆ.

ಒಂದು ದಿನ ಬಾಕಿ ಇರುವಂತೆಯೇ ಪಂದ್ಯ ಕುತೂಹಲ ಘಟ್ಟವನ್ನ ಹೋಗಿ ತಲುಪಿದೆ. ಇದರ ನಡುವೆ ಆಟಗಾರರ ನಡುವಿನ ತೀವ್ರ ಸ್ಪರ್ಧೆಯ ಜೊತೆಗೆ ಅಭಿಮಾನಿಗಳು ಇಂಗ್ಲೆಂಡ್ ಆಟಗಾರರನ್ನ ನಿಂದಿಸಿದ ಘಟನೆ ಎಸ್‌ಸಿಜಿಯಲ್ಲಿ ನಡೆದಿದೆ.

ಮೂರನೇ ದಿನದಾಟದ ಮೂರನೇ ಸೆಷನ್ ಟೀ ವಿರಾಮಕ್ಕೆಂದು ಜಾನಿ ಬೈಸ್ಟ್ರೋವ್ ಮತ್ತು ಆಲ್‌ರೌಂಡರ್ ಬೆನ್‌ ಸ್ಟೋಕ್ಸ್‌ ಡ್ರೆಸ್ಸಿಂಗ್ ರೂಂಗೆ ತೆರಳುತ್ತಿದ್ದರು. ಈ ವೇಳೆ ಆಸೀಸ್ ಅಭಿಮಾನಿಗಳು ಇಬ್ಬರು ಆಟಗಾರರನ್ನ ನಿಂದಿಸಿದ ಘಟನೆ ವೀಡಿಯೋದಲ್ಲಿ ಸೆರೆಯಾಗಿದೆ. ಅಭಿಮಾನಿಗಳ ನಿಂದನೆಗೆ ಸರಿಯಾದ ಉತ್ತರವನ್ನೇ ನೀಡಿರುವ ಬೈಸ್ಟ್ರೋವ್ ಮತ್ತು ಬೆನ್‌ ಸ್ಟೋಕ್ಸ್‌ ಅವರ ಎದುರಲ್ಲೇ ನಿಂತು ಖಡಕ್ ಉತ್ತರ ನೀಡಿದ ಮೇಲೆ ಡ್ರೆಸ್ಸಿಂಗ್‌ ರೂಂಗೆ ತೆರಳಿದ್ದಾರೆ. ಈ ಕುರಿತಾದ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ವೈರಲ್ ಆಗಿದೆ.


ಆಸ್ಟ್ರೇಲಿಯಾ ನೀಡಿದ ಮೊದಲ ಇನ್ನಿಂಗ್ಸ್ 416 ರನ್‌ಗಳಿಗೆ ಉತ್ತರವಾಗಿ ಬ್ಯಾಟಿಂಗ್ ಮಾಡಿದ ಇಂಗ್ಲೆಂಡ್ ಆರಂಭದಲ್ಲಿಯೇ ಭಾರೀ ಕುಸಿತವನ್ನು ಕಂಡಿತು. ಆದರೆ ಜಾನಿ ಬೈರ್‌ಸ್ಟೀವ್ ಹಾಗೂ ಬೆನ್ ಸ್ಟೋಕ್ಸ್ ಬ್ಯಾಟಿಂಗ್‌ನಿಂದಾಗಿ ಇಂಗ್ಲೆಂಡ್ ತಂಡ ಹೋರಾಟದ ಪ್ರದರ್ಶನ ನೀಡಿತು. 66ರನ್‌ಗಳಿಸಿದ್ದ ಬೆನ್ ಸ್ಟೋಕ್ಸ್ ವಿಕೆಟ್ ನೇಥನ್ ಲ್ಯಾನ್‌ಗೆ ವಿಕೆಟ್ ಒಪ್ಪಿಸಿದ್ರೆ, 113ರನ್‌ಗೆ ಬೇಸ್ಟ್ರೋವ್ ಔಟಾದ್ರು.

ಈ ಇಬ್ಬರು ಆಟಗಾರರು ಔಟಾಗುವುದಕ್ಕೂ ಮುನ್ನ ಟೀ ವಿರಾಮದ ವೇಳೆಯಲ್ಲಿ ನಿಂದನೆಗೆ ಒಳಗಾದ ಘಟನೆ ನಡೆದಿದೆ. ಟೀ ವಿರಾಮಕ್ಕೆಂದು ಡ್ರೆಸ್ಸಿಂಗ್ ರೂಮ್ ಕಡೆ ಸ್ಟೋಕ್ಸ್- ಬೈರ್​ಸ್ಟೋ ತೆರಳುವಾಗ ಅಭಿಮಾನಿಯೋರ್ವ ನಿಂದಿಸಿದ್ದಾರೆ. "ಹೇ ಸ್ಟೋಕ್ಸ್ ನೀನು ತುಂಬಾ ದಪ್ಪ ಇದ್ದೀಯ. ಬೈರ್​ಸ್ಟೋ ನೀನು ನಿನ್ನ ಬಟ್ಟೆ ತೆಗೆದು ನೋಡು, ಸ್ವಲ್ಪ ತೂಕ ಕಡಿಮೆ ಮಾಡಿಕೊಳ್ಳು" ಎಂದು ಅಭಿಮಾನಿ ಹೇಳಿದ್ದಾನೆ.

ಇದಕ್ಕೆ ಅಲ್ಲೇ ಎದುರು ನಿಂತು ಖಡಕ್ ಆಗಿ ಉತ್ತರಿಸಿರುವ ಬೈರ್​ಸ್ಟೋ, "ಅದು ಸರಿ, ನೀನು ಇಲ್ಲಿಂದ ತಿರುಗಿ ನೋಡದೆ ಮೊದಲು ಹೊರನಡೆ" ಎಂದು ಕೋಪದಲ್ಲಿ ಹೇಳಿದ್ದಾರೆ. ಈ ವಿಡಿಯೋ ಸದ್ಯ ಎಲ್ಲೆಡೆ ವೈರಲ್ ಆಗುತ್ತಿದೆ.

ಈಗಾಗಲೇ ಐದು ಪಂದ್ಯ ಟೆಸ್ಟ್ ಸರಣಿಯಲ್ಲಿ ಆಸ್ಟ್ರೇಲಿಯಾ 3-0 ಅಂತರದಲ್ಲಿ ಸರಣಿ ಜಯಿಸಿದ್ದು, ಪ್ರವಾಸಿ ಇಂಗ್ಲೆಂಡ್ ತಂಡವನ್ನ ವೈಟ್‌ ವಾಶ್ ಮಾಡು ಗುರಿ ಹೊಂದಿದೆ. ಆಸ್ಟ್ರೇಲಿಯಾ ಮೊದಲ ಇನ್ನಿಂಗ್ಸ್‌ನಲ್ಲಿ ಶತಕ ಸಿಡಿಸಿದ್ದ ಉಸ್ಮಾನ್ ಖವಾಜ ಎರಡನೇ ಇನ್ನಿಂಗ್ಸ್‌ನಲ್ಲೂ ತಂಡದ ಪರ ಭರ್ಜರಿ ಆಟವಾಡಿ ಅಜೇಯ 101ರನ್ ಕಲೆಹಾಕಿದ್ದಾರೆ. ಉಸ್ಮಾನ್ 2019ರಲ್ಲಿ ಕೊನೆಯ ಬಾರಿಗೆ ಆಸ್ಟ್ರೇಲಿಯಾ ಪರ ಆಡಿದ್ರು, ಆದ್ರೀಗ ಕಂಬ್ಯಾಕ್ ಪಂದ್ಯದಲ್ಲಿ ಅಮೋಘ ಆಟ ಪ್ರದರ್ಶಿಸಿದರು.

ಆ್ಯಶಸ್ 4ನೇ ಟೆಸ್ಟ್‌ನ 4ನೇ ದಿನದಾಟ ಅಂತ್ಯ, ಇಂಗ್ಲೆಂಡ್ ಗೆಲುವಿಗೆ 358ರನ್ ಬಾಕಿಆ್ಯಶಸ್ 4ನೇ ಟೆಸ್ಟ್‌ನ 4ನೇ ದಿನದಾಟ ಅಂತ್ಯ, ಇಂಗ್ಲೆಂಡ್ ಗೆಲುವಿಗೆ 358ರನ್ ಬಾಕಿ

ಆಸ್ಟ್ರೇಲಿಯಾ ದ್ವಿತೀಯ ಇನ್ನಿಂಗ್ಸ್ 265ರನ್‌ಗಳಿಗೆ ಎರಡನೇ ಬಾರಿಗೆ ಪಂದ್ಯದಲ್ಲಿ ಡಿಕ್ಲೇರ್ ಮಾಡಿಕೊಂಡಿತು. ಇಂಗ್ಲೆಂಡ್‌ಗೆ 388 ರನ್‌ಗಳ ಗುರಿ ನೀಡಿದೆ.

ಟೀಂ ಇಂಡಿಯಾ ಆಟಗಾರರನ್ನು SCG ಮೈದಾನದಲ್ಲಿ ನಿಂದಿಸಿದ್ದ ಫ್ಯಾನ್ಸ್‌:
ಎಸ್‌ಸಿಜಿ ಮೈದಾನದಲ್ಲಿ ಈ ರೀತಿ ಆಟಗಾರರು ನಿಂದನೆಗೊಳಗಾಗಿದ್ದು ಮೊದಲೇನಲ್ಲ. ಈ ವರ್ಷ ಟೀಂ ಇಂಡಿಯಾ ಆಸ್ಟ್ರೇಲಿಯಾ ಪ್ರವಾಸದ ವೇಳೆಯಲ್ಲಿ ಜಸ್ಪ್ರೀತ್ ಬುಮ್ರಾ ಮತ್ತು ಮೊಹಮ್ಮದ್ ಸಿರಾಜ್‌ಗೆ ಜನಾಂಗೀಯ ನಿಂದನೆ ಮಾಡಲಾಗಿತ್ತು. ಈ ಕುರಿತಾಗಿ ಪ್ರತಿಷ್ಠಿತ 'ಸಿಡ್ನಿ ಮಾರ್ನಿಗ್ ಹೆರಾಲ್ಡ್' ವರದಿ ಮಾಡಿತ್ತು.

ಎಸ್‌ಸಿಜಿ ಮೈದಾನದ ಸ್ಟಾೃಂಡ್‌ನಿಂದ ಕುಡುಕ ಪ್ರೇಕ್ಷಕನೊಬ್ಬ, ಸಿರಾಜ್ ಅವರನ್ನು 'ಮಂಗ' ಎಂದು ನಿಂದಿಸಿದ್ದನು. ಭಾರತದ ಒಟ್ಟಾರೆ ನಾಲ್ವರು ಆಟಗಾರರು ನಿಂದನೆಗೆ ಗುರಿಯಾಗಿದ್ದಾರೆ ಎಂದೂ ಹೇಳಲಾಗಿದೆ.

Story first published: Saturday, January 8, 2022, 17:47 [IST]
Other articles published on Jan 8, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X