ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಇಂಗ್ಲೆಂಡ್‌ಗೆ ಹೀನಾಯ ಸೋಲು: ''ತುಂಬಾ ಮುಜುಗರ ಆಗಿದೆ'' ಎಂದ ಮೈಕಲ್ ವಾನ್!

England Team

ಆ್ಯಷಸ್ ಟೆಸ್ಟ್ ಸರಣಿಯಲ್ಲಿ ಮತ್ತೊಮ್ಮೆ ಮುಗ್ಗರಿಸಿದ ಇಂಗ್ಲೆಂಡ್ ತಂಡ ಮೆಲ್ಬರ್ನ್‌ನಲ್ಲಿ ನಡೆದ ಮೂರನೇ ಟೆಸ್ಟ್ ಪಂದ್ಯದಲ್ಲಿ ಹೀನಾಯ ಸೋಲು ಕಂಡಿದೆ. ಎರಡನೇ ಇನ್ನಿಂಗ್ಸ್‌ನಲ್ಲಿ ಜೋ ರೂಟ್ ಬಳಗ ಕೇವಲ 68 ರನ್‌ಗಳಿಗೆ ಆಲೌಟ್ ಆಗುವ ಮೂಲಕ ಇನ್ನಿಂಗ್ಸ್ ಸೇರಿದಂತೆ 14ರನ್‌ಗಳ ಸೋಲನ್ನ ಕಂಡಿದೆ.

ಮೂರನೇ ಟೆಸ್ಟ್ ಪಂದ್ಯವನ್ನೂ ಗೆಲ್ಲುವ ಮೂಲಕ ಆಸ್ಟ್ರೇಲಿಯಾ ಈಗಾಗಲೇ ಐದು ಪಂದ್ಯಗಳ ಟೆಸ್ಟ್‌ ಸರಣಿಯಲ್ಲಿ 3-0 ಮುನ್ನಡೆ ಕಂಡಿದ್ದು, ಸರಣಿ ಕೈವಶ ಮಾಡಿಕೊಂಡಿದೆ. ಸತತ ಮೂರು ಟೆಸ್ಟ್ ಪಂದ್ಯಗಳನ್ನ ಕೈ ಚೆಲ್ಲಿದ ಪ್ರವಾಸಿ ಇಂಗ್ಲೆಂಡ್ ಭಾರೀ ನಿರಾಸೆ ಅನುಭವಿಸಿದೆ.

Ind vs SA ಮೊದಲ ಟೆಸ್ಟ್‌: 327 ರನ್‌ಗಳಿಗೆ ಟೀಂ ಇಂಡಿಯಾ ಆಲೌಟ್‌Ind vs SA ಮೊದಲ ಟೆಸ್ಟ್‌: 327 ರನ್‌ಗಳಿಗೆ ಟೀಂ ಇಂಡಿಯಾ ಆಲೌಟ್‌

ಎರಡನೇ ಇನ್ನಿಂಗ್ಸ್‌ನಲ್ಲಿ ಇಂಗ್ಲೆಂಡ್ ಪ್ರದರ್ಶನ ಗಮನಿಸಿ ತಂಡದಲ್ಲಿ ಕೆಲವು ದೊಡ್ಡ ಸಮಸ್ಯೆಗಳಿವೆ ಎಂದು ಇಂಗ್ಲೆಂಡ್ ಮಾಜಿ ಆಟಗಾರ ಮೈಕಲ್ ವಾನ್ ಅಭಿಪ್ರಾಯಪಟ್ಟಿದ್ದಾರೆ. ಆಸ್ಟ್ರೇಲಿಯಾ ವಿರುದ್ಧ 3ನೇ ಟೆಸ್ಟ್‌ನಲ್ಲಿ ಇನಿಂಗ್ಸ್ ಮತ್ತು 14 ರನ್‌ಗಳಿಂದ ಸೋತ ಇಂಗ್ಲೆಂಡ್, ಸರಣಿಯಲ್ಲಿ ಸತತ ಮೂರನೇ ಸೋಲನ್ನು ಎದುರಿಸಿದೆ.

ಇಂಗ್ಲೆಂಡ್ ಮೊದಲ ಇನ್ನಿಂಗ್ಸ್ 185 ರನ್‌ಗಳಿಗೆ ಆಲೌಟ್‌ ಆಗಿತ್ತು, ನಾಯಕ ಜೋ ರೂಟ್ 50ರನ್‌ಗಳಿಸಿದ್ದೇ ಗರಿಷ್ಠ ಸ್ಕೋರ್ ಆಗಿದ್ದು, ಇದಕ್ಕೆ ಉತ್ತರವಾಗಿ ಆಸ್ಟ್ರೇಲಿಯಾ 267 ರನ್ ಕಲೆಹಾಕಿ 82 ರನ್‌ಗಳ ಲೀಡ್ ಪಡೆಯಿತು. ಆದ್ರೆ ಇಂಗ್ಲೆಂಡ್ ಎರಡನೇ ಇನ್ನಿಂಗ್ಸ್‌ನಲ್ಲಿ ನಾಟಕೀಯ ಕುಸಿತ ಕಂಡು 68 ರನ್‌ಗಳಿಗೆ ಆಲೌಟ್ ಆಗುವ ಮೂಲಕ ಭಾರೀ ಮುಖಭಂಗ ಎದುರಿಸಿತು.

Michal vaughe

ಇಂಗ್ಲೆಂಡ್‌ನ ಹೀನಾಯ ಸೋಲು ಮುಜುಗರ ತಂದಿದೆ: ಮೈಕಲ್ ವಾನ್
ಫಾಕ್ಸ್ ಕ್ರಿಕೆಟ್‌ನೊಂದಿಗೆ ಮಾತನಾಡುವಾಗ, ಮೈಕೆಲ್ ವಾನ್ 3 ನೇ ಟೆಸ್ಟ್‌ನಲ್ಲಿ ಇಂಗ್ಲೆಂಡ್‌ನ ಪ್ರದರ್ಶನವನ್ನು ಮುಜುಗರಕ್ಕೊಳಗಾಗುವಂತೆ ಮಾಡಿದೆ ಎಂದು ಹೇಳಿದ್ದಾರೆ. ಟೆಸ್ಟ್‌ನಲ್ಲಿ ಯಾವುದೇ ರೀತಿಯ ಸ್ಥಿರತೆ ಅಥವಾ ಕೌಶಲ್ಯವನ್ನು ಕಂಡುಕೊಳ್ಳುವಲ್ಲಿ ಇಂಗ್ಲೆಂಡ್ ಯಶಸ್ವಿಯಾಗಲಿಲ್ಲ ಎಂದು ಅವರು ಹೇಳಿದರು.

"ಇಂಗ್ಲೆಂಡ್ ಅವರಿಗೆ ಕೆಲವು ದೊಡ್ಡ ಸಮಸ್ಯೆಗಳಿವೆ. ಅವರ ಪ್ರದರ್ಶನ ನಿಜಕ್ಕೂ ಮುಜುಗರವಾಗಿತ್ತು. ಅವರು ಸ್ಪರ್ಧಿಸುವ ಬಗ್ಗೆ ಹೆಮ್ಮೆಪಡುವ ಆಟಗಾರರ ಗುಂಪಾಗಿದೆ, ಆದ್ರೆ ಅವರು ಯಾವುದೇ ರೀತಿಯ ಸ್ಥಿರತೆ ಅಥವಾ ಕೌಶಲ್ಯವನ್ನು ಕಂಡುಕೊಳ್ಳುವಲ್ಲಿ ಯಶಸ್ವಿಯಾಗಲಿಲ್ಲ'' ಎಂದು ಮೈಕಲ್ ವಾನ್ ಹೇಳಿದ್ದಾರೆ.

"ಅವರು ಟೆಸ್ಟ್ ಪಂದ್ಯದ ತಂಡದ ಮೇಲೆ ಸಾಕಷ್ಟು ಗಮನಹರಿಸಿಲ್ಲ, ವೈಟ್ ಬಾಲ್ (ಏಕದಿನ , ಓಡಿಐ) ತಂಡದ ಮೇಲೆ ಗಮನ ಕೇಂದ್ರೀಕರಿಸಲಾಗಿದೆ. ಹೀಗಾಗಿಯೇ ಅದು ವಿಶ್ವ ಕಪ್ ಅನ್ನು ಗುರಿಯನ್ನ ತಲುಪಿತು, ಆದ್ರೆ ಟೆಸ್ಟ್ ಫಾರ್ಮೆಟ್‌ನಲ್ಲಿ ನಿಮ್ಮ ಗಮನ ಉತ್ತಮವಾಗಿಲ್ಲ'' ಎಂದು ವಾನ್ ಇಂಗ್ಲೆಂಡ್ ತಂಡವನ್ನ ಟೀಕಿಸಿದ್ದಾರೆ.

ಇದಲ್ಲದೆ ಈ ತಂಡವು ಇದೇ ರೀತಿಯ ಪ್ರದರ್ಶನ ನೀಡುತ್ತಾ ಬಂದರೆ, 2023ರಲ್ಲಿ ಇಂಗ್ಲೆಂಡ್‌ನಲ್ಲಿ ನಡೆಯಲಿರುವ ಆ್ಯಷಸ್ ಟೆಸ್ಟ್ ಸರಣಿಯಲ್ಲೂ ಸೋಲುವುದು ಖಚಿತ ಎಂದಿದ್ದಾರೆ.

ಇಂಗ್ಲೆಂಡ್ ಮೊದಲ ಟೆಸ್ಟ್‌ನಲ್ಲಿ 9 ವಿಕೆಟ್‌ಗಳಿಂದ ಮತ್ತು 2 ನೇ ಟೆಸ್ಟ್‌ನಲ್ಲಿ 275 ರನ್‌ಗಳಿಂದ ಸೋತಿದೆ. ಇದೀಗ ಮೂರನೇ ಟೆಸ್ಟ್ ಪಂದ್ಯದಲ್ಲಿ ಇನ್ನಿಂಗ್ಸ್ ಸೇರಿದಂತೆ 14ರನ್‌ಗಳ ಸೋಲನ್ನ ಕಂಡಿದೆ. ಈ ಪಂದ್ಯದಲ್ಲಿ ಸೋತ ಬಳಿಕ ಇಂಗ್ಲೆಂಡ್ ಪ್ರಸ್ತುತ ವರ್ಷದಲ್ಲಿ 9ನೇ ಪಂದ್ಯದಲ್ಲಿ ಸೋಲನ್ನ ಕಂಡಿದೆ. ಇದು ಟೆಸ್ಟ್ ಕ್ರಿಕೆಟ್ ಇತಿಹಾಸದಲ್ಲೇ ಇಂಗ್ಲೆಂಡ್‌ನ ಅತ್ಯಂತ ಕಳಪೆ ಸಾಧನೆಯಾಗಿದೆ.

ಹೀಗಾಗಿ ಇನ್ನುಳಿದ ಎರಡು ಪಂದ್ಯಗಳಲ್ಲಿ ಗೆದ್ದು ಮರ್ಯಾದೆ ಉಳಿಸುವ ಜವಾಬ್ದಾರಿ ಇಂಗ್ಲೆಂಡ್ ನಾಯಕ ಜೋ ರೂಟ್ ಹೆಗಲೇರಿದೆ. ನಾಲ್ಕನೇ ಟೆಸ್ಟ್ ಪಂದ್ಯವು ಜನವರಿ 5, 2022 ರಂದು ಸಿಡ್ನಿ ಕ್ರಿಕೆಟ್ ಮೈದಾನದಲ್ಲಿ ಪ್ರಾರಂಭವಾಗಲಿದೆ.

Story first published: Tuesday, December 28, 2021, 20:07 [IST]
Other articles published on Dec 28, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X