ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಆ್ಯಶಸ್ 4ನೇ ಟೆಸ್ಟ್‌ನ 4ನೇ ದಿನದಾಟ ಅಂತ್ಯ, ಇಂಗ್ಲೆಂಡ್ ಗೆಲುವಿಗೆ 358ರನ್ ಬಾಕಿ

Ashes test

ಸಿಡ್ನಿ ಕ್ರಿಕೆಟ್ ಗ್ರೌಂಡ್‌ (ಎಸ್‌ಸಿಜಿ)ನಲ್ಲಿ ನಡೆಯುತ್ತಿರುವ ನಾಲ್ಕನೇ ಟೆಸ್ಟ್ ಪಂದ್ಯದ ನಾಲ್ಕನೇ ದಿನದಾಟದಂತ್ಯಕ್ಕೆ ಇಂಗ್ಲೆಂಡ್ ಎರಡನೇ ಇನ್ನಿಂಗ್ಸ್‌ ವಿಕೆಟ್ ನಷ್ಟವಿಲ್ಲದೆ 30 ರನ್ ಕಲೆಹಾಕಿದೆ. ಆಸ್ಟ್ರೇಲಿಯಾ ಎರಡನೇ ಇನ್ನಿಂಗ್ಸ್‌ 5ವಿಕೆಟ್ ನಷ್ಟಕ್ಕೆ 265ರನ್‌ಗಳಿಗೆ ಡಿಕ್ಲೇರ್‌ ಮಾಡಿಕೊಂಡಿತು. ಈ ಮೂಲಕ 387 ರನ್‌ಗಳ ಭಾರೀ ಲೀಡ್ ಪಡೆಯುವುದರ ಜೊತೆಗೆ ಇಂಗ್ಲೆಂಡ್‌ಗೆ 388ರನ್‌ಗಳ ಗುರಿ ನೀಡಿದೆ.

ಮೊದಲ ಇನ್ನಿಂಗ್ಸ್‌ನಲ್ಲಿ ಆಸ್ಟ್ರೇಲಿಯಾದ 416 ರನ್‌ಗಳಿಗೆ ಉತ್ತರವಾಗಿ ಬ್ಯಾಟಿಂಗ್ ಮಾಡಿದ ಇಂಗ್ಲೆಂಡ್ ಆರಂಭದಲ್ಲಿಯೇ ಭಾರೀ ಕುಸಿತವನ್ನು ಕಂಡಿತು. ಆದರೆ ಜಾನಿ ಬೈರ್‌ಸ್ಟೀವ್ ಹಾಗೂ ಬೆನ್ ಸ್ಟೋಕ್ಸ್ ಬ್ಯಾಟಿಂಗ್‌ನಿಂದಾಗಿ ಇಂಗ್ಲೆಂಡ್ ತಂಡ ಹೋರಾಟದ ಪ್ರದರ್ಶನ ನೀಡಿತು. ಇದರಲ್ಲಿ ಬೈರ್‌ಸ್ಟೋವ್ ಅಜೇಯ ಶತಕ ಸಿಡಿಸಿ ನಾಲ್ಕನೇ ದಿನಕ್ಕೆ ಆಟವನ್ನು ಕಾಯ್ದಿರಿಸಿದ್ದರೆ ಬೆನ್ ಸ್ಟೋಕ್ಸ್ ಅರ್ಧ ಶತಕದ ಕೊಡಿಗೆ ನೀಡಿ ತಂಡಕ್ಕೆ ನೆರವಾದರು.

ಆದ್ರೆ 66ರನ್‌ಗಳಿಸಿದ್ದ ಬೆನ್ ಸ್ಟೋಕ್ಸ್ ವಿಕೆಟ್ ನೇಥನ್ ಲ್ಯಾನ್‌ಗೆ ವಿಕೆಟ್ ಒಪ್ಪಿಸಿದ್ರೆ, 113ರನ್‌ಗೆ ಬೇಸ್ಟ್ರೋವ್ ಔಟಾದ್ರು. ಅಂತಿಮವಾಗಿ ಇಂಗ್ಲೆಂಡ್ 294 ರನ್‌ಗಳಿಗೆ ಆಲೌಟ್ ಆಗುವ ಮೂಲಕ 122ರನ್‌ಗಳ ಹಿನ್ನಡೆ ಅನುಭವಿಸಿತ್ತು.

ಅದಾಗಲೇ ಉತ್ತಮ ಲೀಡ್ ಪಡೆದಿದ್ದ ಆಸ್ಟ್ರೇಲಿಯಾ ಆರಂಭದಲ್ಲಿ ನಾಲ್ಕು ವಿಕೆಟ್ ಬೇಗನೆ ಕಳೆದುಕೊಂಡಿತು. ಮಾರ್ಕಸ್ ಹ್ಯಾರಿಸ್ 27 ರನ್, ಡೇವಿಡ್ ವಾರ್ನರ್ 3, ಮಾರ್ನಸ್ ಲ್ಯಾಬುಶೈನ್ 29, ಸ್ಟೀವನ್ ಸ್ಮಿತ್ 23 ರನ್‌ಗಳಿಗೆ ವಿಕೆಟ್ ಒಪ್ಪಿಸಿದ್ರು. ಆದ್ರೆ ಮೊದಲ ಇನ್ನಿಂಗ್ಸ್‌ನಲ್ಲಿ ಶತಕದ ಸರದಾರ ಉಸ್ಮಾನ್ ಖವಾಜ ಎರಡನೇ ಇನ್ನಿಂಗ್ಸ್‌ನಲ್ಲೂ ತಂಡದ ಪರ ಭರ್ಜರಿ ಆಟವಾಡಿ ಅಜೇಯ 101ರನ್ ಕಲೆಹಾಕಿದ್ದಾರೆ.

ಆ್ಯಶಸ್ ಟೆಸ್ಟ್‌: ಎರಡೂ ಇನ್ನಿಂಗ್ಸ್‌ನಲ್ಲಿ ಸೆಂಚುರಿ ಸಿಡಿಸಿದ ಉಸ್ಮಾನ್ ಖವಾಜ, ಭರ್ಜರಿ ಕಂಬ್ಯಾಕ್ಆ್ಯಶಸ್ ಟೆಸ್ಟ್‌: ಎರಡೂ ಇನ್ನಿಂಗ್ಸ್‌ನಲ್ಲಿ ಸೆಂಚುರಿ ಸಿಡಿಸಿದ ಉಸ್ಮಾನ್ ಖವಾಜ, ಭರ್ಜರಿ ಕಂಬ್ಯಾಕ್

ಒಂದೆಡೆ ಉಸ್ಮಾನ್ ಬೊಂಬಾಟ್ ಆಟವಾಡಿ ಅಜೇಯವಾಗಿ ಉಳಿದ್ರೆ, ಕ್ಯಾಮರೂನ್ ಗ್ರೀನ್ 74ರನ್‌ಗಳ ಕೊಡುಗೆ ನೀಡಿದ್ರು. ವಿಕೆಟ್ ಕೀಪರ್ ಅಲೆಕ್ಸ್ ಕ್ಯಾರಿ ಜ್ಯಾಕ್‌ ಲೀಚ್‌ ಬೌಲಿಂಗ್‌ನಲ್ಲಿ ಗೋಲ್ಡನ್ ಡಕೌಟ್ ಆಗುತ್ತಿದ್ದಂತೆ ಅದಾಗಲೇ ಸುಸ್ಥಿತಿಯಲ್ಲಿದ್ದ ಆಸ್ಟ್ರೇಲಿಯಾ 265ರನ್‌ಗಳಿಗೆ ಎರಡನೇ ಬಾರಿಗೆ ಪಂದ್ಯದಲ್ಲಿ ಡಿಕ್ಲೇರ್ ಮಾಡಿಕೊಂಡಿತು. ಇಂಗ್ಲೆಂಡ್‌ಗೆ 388ರನ್‌ಗಳ ಗುರಿ ನೀಡಿತು. ಇಂಗ್ಲೆಂಡ್ ಪರ ಜ್ಯಾಕ್ ಲೀಚ್ 4, ಮಾರ್ಕ್ ವುಡ್ 2 ವಿಕೆಟ್ ಕಬಳಿಸಿದ್ರು.

ಈ ಕಠಿಣ ಗುರಿ ಬೆನ್ನತ್ತಿರುವ ಇಂಗ್ಲೆಂಡ್ ನಾಲ್ಕನೇ ದಿನದಾಟದಂತ್ಯಕ್ಕೆ ವಿಕೆಟ್ ನಷ್ಟವಿಲ್ಲದೆ 30 ರನ್ ಕಲೆಹಾಕಿದೆ. ಅಂತಿಮ ದಿನದಾಟದಲ್ಲಿ ಗೆಲುವಿಗೆ 358 ರನ್‌ಗಳ ಅವಶ್ಯಕತೆಯಿದೆ. ಇನ್ನೂ ಆಸೀಸ್ ಪಡೆ ಗೆಲ್ಲಲು ಇಂಗ್ಲೆಂಡ್‌ನ 10 ವಿಕೆಟ್ ಉರುಳಿಸಬೇಕಾಗಿದೆ. ಹೀಗಾಗಿ ಪಂದ್ಯ ಕೊನೆಯ ದಿನದ ಡಿಸೈಡರ್ ಆಗಿ ಪರಿಣಮಿಸಿದೆ.

ಈಗಾಗಲೇ ಐದು ಪಂದ್ಯ ಟೆಸ್ಟ್ ಸರಣಿಯಲ್ಲಿ ಆಸ್ಟ್ರೇಲಿಯಾ 3-0 ಅಂತರದಲ್ಲಿ ಸರಣಿ ಜಯಿಸಿದ್ದು, ಪ್ರವಾಸಿ ಇಂಗ್ಲೆಂಡ್ ತಂಡವನ್ನ ವೈಟ್‌ ವಾಶ್ ಮಾಡು ಗುರಿ ಹೊಂದಿದೆ.

ಆಸ್ಟ್ರೇಲಿಯಾ ಪ್ಲೇಯಿಂಗ್ XI: ಮಾರ್ಕಸ್ ಹ್ಯಾರಿಸ್, ಡೇವಿಡ್ ವಾರ್ನರ್, ಮಾರ್ನಸ್ ಲ್ಯಾಬುಶೈನ್, ಸ್ಟೀವನ್ ಸ್ಮಿತ್, ಉಸ್ಮಾನ್ ಖವಾಜಾ, ಕ್ಯಾಮೆರಾನ್ ಗ್ರೀನ್, ಅಲೆಕ್ಸ್ ಕ್ಯಾರಿ (ವಿಕೆಟ್ ಕೀಪರ್), ಪ್ಯಾಟ್ ಕಮಿನ್ಸ್ (ನಾಯಕ), ಮಿಚೆಲ್ ಸ್ಟಾರ್ಕ್, ನಾಥನ್ ಲಿಯಾನ್, ಸ್ಕಾಟ್ ಬೋಲ್ಯಾಂಡ್
ಬೆಂಚ್: ಝೈ ರಿಚರ್ಡ್ಸನ್, ಮಿಚೆಲ್ ಸ್ವೆಪ್ಸನ್, ಮೈಕೆಲ್ ನೆಸರ್

ಇಂಗ್ಲೆಂಡ್ ತಂಡ ಪ್ಲೇಯಿಂಗ್ XI: ಹಸೀಬ್ ಹಮೀದ್, ಝಾಕ್ ಕ್ರಾಲಿ, ಡೇವಿಡ್ ಮಲನ್, ಜೋ ರೂಟ್ (ನಾಯಕ), ಬೆನ್ ಸ್ಟೋಕ್ಸ್, ಜಾನಿ ಬೈರ್‌ಸ್ಟೋ, ಜೋಸ್ ಬಟ್ಲರ್ (ವಿಕೆಟ್ ಕೀಪರ್), ಮಾರ್ಕ್ ವುಡ್, ಜ್ಯಾಕ್ ಲೀಚ್, ಸ್ಟುವರ್ಟ್ ಬ್ರಾಡ್, ಜೇಮ್ಸ್ ಆಂಡರ್ಸನ್ ಬೆಂಚ್: ರೋರಿ ಬರ್ನ್ಸ್, ಕ್ರಿಸ್ ವೋಕ್ಸ್, ಡೇನಿಯಲ್ ಲಾರೆನ್ಸ್

Story first published: Saturday, January 8, 2022, 14:48 [IST]
Other articles published on Jan 8, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X